ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೆಲ್ಲಿಯ ಬ್ಯಾಟಾ! ಕನ್ನಡ ಸಂಸ್ಕೃತಿಗೆ ಟಾಟಾ ಹೇಳಿದ ಬಾಟಾ!

By ಸಂಪಿಗೆ ಶ್ರೀನಿವಾಸ, ಬೆಂಗಳೂರು
|
Google Oneindia Kannada News

ಪೊಂಗಲ್‌ಗೆ ಹಾಯ್‌! ಸಂಕ್ರಾಂತಿಗೆ ಬೈಬೈ! -ಇದು ರಾಜಧಾನಿ ನಗರದ ಒಂದು ಚಿತ್ರಣ! ಕನ್ನಡ ಸಂಸ್ಕೃತಿ ಮೇಲೆ ವಲಸಿಗರು ಮಾಡುತ್ತಿರುವ ಪ್ರಹಾರಕ್ಕೆ ಪುಟ್ಟ ನಿದರ್ಶನ. ಇಂತಹ ಪರಿಸ್ಥಿತಿ ಪದೇಪದೇ ನಿರ್ಮಾಣವಾಗದಂತೆ ತಡೆಯಲು ಉಪಾಯಗಳಿವೆಯೇ? ನಿಜಕ್ಕೂ ಕನ್ನಡಿಗರಿಗೆ ಉಳಿಗಾಲವಿದೆಯೇ?

ಪರಭಾಷಿಕರ ಅನಿಯಂತ್ರಿತ ವಲಸೆಯಿಂದ ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿಯ ಮೇಲೆ ಆಗಿರುವ ದುಷ್ಪರಿಣಾಮಕ್ಕೊಂದು ಉದಾಹರಣೆ ಇಲ್ಲಿದೆ.

ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬ ಅಚರಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಬೆಂಗಳೂರಿನ ಬಾಟಾ ಚಪ್ಪಲಿ ಅಂಗಡಿಗಳಲ್ಲಿ 'ಹ್ಯಾಪಿ ಪೊಂಗಲ್‌' ಎಂದು ಆಂಗ್ಲ ಭಾಷೆಯಲ್ಲಿ ಬರೆದ ಶುಭಾಶಯಗಳು ಕಾಣಿಸುತ್ತಿವೆ. ಇದೇ ರೀತಿ ಬಹಳಷ್ಟು ಅಂಗಡಿಮುಂಗಟ್ಟುಗಳಲ್ಲಿ, ಆಂಗ್ಲ ಪತ್ರಿಕೆಗಳ ಜಾಹೀರಾತುಗಳಲ್ಲಿ ಪೊಂಗಲ್‌ ಶುಭಾಶಯಗಳು ರಾರಾಜಿಸುತ್ತಿವೆ.

ಸಂಕ್ರಾಂತಿ ಹಬ್ಬಕ್ಕೆ ಕನ್ನಡಿಗರಿಗೆ ಶುಭಾಶಯ ಕೋರುವ ಸೌಜನ್ಯ ಕನ್ನಡನಾಡಿನಲ್ಲಿ ವ್ಯಾಪಾರ ಮಾಡುವವರಿಗೆ ಇಲ್ಲದಿರುವುದು ನಿಜಕ್ಕೂ ಖಂಡನೀಯ. ಇದಕ್ಕಾಗಿ ನಾವು ಯಾರನ್ನು ದೂಷಿಸಬೇಕು. ಕನ್ನಡಿಗರಿಗೆ ಬೆಲೆ ಕೊಡದಿರುವ ವ್ಯಾಪಾರಿಗಳನ್ನೋ, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರುವ ನಿರಭಿಮಾನಿ ಕನ್ನಡಿಗರನ್ನೋ, ಇಲ್ಲಾ ಪರಭಾಷಿಕರನ್ನು ವೋಟುಗಳಿಗಾಗಿ ಓಲೈಸುವ ಕನ್ನಡ ದ್ರೋಹಿ ರಾಜಕಾರಣಿಗಳನ್ನೋ?

ಕನ್ನಡನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಒದಗಿರುವ ದುರ್ಗತಿ ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ.

(ಸ್ವಾಭಿಮಾನಿ ಕನ್ನಡಿಗರು ತಮ್ಮ ಅನಿಸಿಕೆಗಳನ್ನು ಈ ಕೆಳಕಂಡ ಈ-ವಿಳಾಸಕ್ಕೆ ಬರೆದು ತಿಳಿಸಬಹುದು.)

[email protected]
[email protected]
[email protected]

Post your views

ವಲಸೆ ಬಗ್ಗೆ ಇನ್ನಷ್ಟು :
ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಮತ್ತು ಕನ್ನಡದ ಸಮಸ್ಯೆಗಳು
ವಲಸಿಗರೆಂಬ ಅತಿಥಿಗಳ ರೂಪದಲ್ಲಿ ಅಪಾಯ ಬರುತ್ತಿದೆ!?
ವಲಸಿಗರು ಮತ್ತು ನಾವು...
ವಲಸೆಯ ಅಧ್ವಾನಗಳು : ನಿಜವಾದ ಕನ್ನಡಿಗ ಯಾರು?

English summary
Insult to kannada and Kannadigas by BATA Showroom in Bangalore. Sampige Srinivas writes about Effects of Emigration on Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X