ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ್ಯಾಕೆ ಹೀಗೆ? ಅವರಿರೋದೆ ಹಾಗೆ!

By ರಾಜಾರಾಮ್‌ ಕಾವಳೆ, ಹ್ಯಾಂಪ್‌ ಶೈರ್‌, ಯುಕೆ.
|
Google Oneindia Kannada News

ಕನ್ನಡಿಗರ್ಯಾಕೆ ಹೀಗೆ? ಅವರಿರೋದೆ ಹಾಗೆ! ಹತ್ತಿದಮೇಲೆ ಏಣಿಯನ್ನೇ ಒದಯಬಾರದು. ಮಾತೃ ಭಾಷೆ ಕನ್ನಡವನ್ನು ಮರೆಯಬಾರದು. ಯಾರಿಗೆ ಗೊತ್ತು ಈ ಯುವ ಕನ್ನಡಿಗರು, ತಾವುದೊಡ್ಡವರಾದಮೇಲೆ ಅದರಲ್ಲೂ ಅವರು ಹೊರದೇಶದಲ್ಲಿ ವಾಸಿಸಿದ ಮೇಲೆ ಅವರಿಗೆ ಕನ್ನಡ ಪ್ರೇಮ ಹೆಚ್ಚಾಗಬಹುದು! ನಮ್ಮಂತಹವರಿಗೆ ಆಗಿಲ್ಲವೇ?

ಪ್ರಶಾಂತ ಬೀಚಿ ಯವರ 'ನಿಮ್ಮ ಗಡ್ಡ ಬೆಳ್ಳಗಾಗುವುದರೊಳಗೆ ಎದ್ದೇಳಿ' ಎಂಬ ಕನ್ನಡ ಜಾಗೃತಿ ಲೇಖನವು ಎಲ್ಲ ಕನ್ನಡಿಗರಿಗೂ ಅದರಲ್ಲೂ ಕನ್ನಡ ನಾಡಿನಲ್ಲೇ ಇರುವ ಕನ್ನಡಿಗರಿಗೆ ಹೆಚ್ಚಾಗಿ ಅನ್ವಹಿಸುವುದು. ನಮಗೆಲ್ಲರಿಗೂ ತಿಳಿದಿರುವ ಹಾಗೆ, ಹೊರದೇಶದಲ್ಲಿರುವ ನಮ್ಮಗಳಂತಹ ಕನ್ನಡಿಗರಿಗೆ ಆಶ್ಚರ್ಯವಾಗುದೇನೆಂದರೆ, ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕನ್ನಡ ಯುವಜನರು ಕನ್ನಡವೇ ಗೊತ್ತಿಲ್ಲವೆಂಬುವ ಹಾಗೆ ನಟಿಸುವುದು. ಈ ಯುವಜನರಿಗೆ ಕನ್ನಡದ ಬಗ್ಗೆ ಆಲಸ್ಯ ಮತ್ತು ಅಸಡ್ಡೆ.

ಕರ್ನಾಟಕವು ಅದರಲ್ಲೂ ಬೆಂಗಳೂರು ವಿಶ್ವದಲ್ಲೇ ಅತಿಮುಖ್ಯ ಗಣಕತಂತ್ರಾಂಶ ಕೇಂದ್ರವಾಗಿರುವುದರಿಂದ ಪ್ರಪಂಚದ ಎಲ್ಲಾ ದೇಶದ ಜನಗಳೊಂದಿಗೆ ನೇರವಾಗಿಒಂದಲ್ಲಾ ಒಂದು ವಿಧದಲ್ಲಿ ವಿಚಾರಸಂಪರ್ಕದಲ್ಲಿ ಭಾಗವಹಿಸಬೇಕಾಗುವುದು. ಆದುದರಿಂದ ಪ್ರಪಂಚದ ಸಾಮಾನ್ಯ ಭಾಷೆಯಾದ ಆಂಗ್ಲಭಾಷೆಯನ್ನೇ ತಮ್ಮ ವಿದ್ಯಾಭ್ಯಾಸ ಮತ್ತು ಕಾರ್ಯಗಳಲ್ಲಿ ಉಪಯೋಗಿಸಬೇಕಾಗುವುದು ಅನಿವಾರ್ಯವಾಗುವುದು.

When you go away from Kannada land...

ಅದೂ ಅಲ್ಲದೆ ಭಾರತದಲ್ಲೇ ಇರುವ ಇತರ ಭಾಗಗಳ ಯುವಜನರಿಗೆ ಕರ್ನಾಟಕದಲ್ಲಿ ಈ ಆಧುನಿಕ ಉದ್ಯಮಗಳಲ್ಲಿ ಅಧಿಕವಾಗಿ ಅವಕಾಶಗಳು ಒದಗಿರುವುದರಿಂದ, ಎಲ್ಲರಿಗೂ ತಿಳಿದಿರುವ ಸಾಮಾನ್ಯವಾದ ಆಂಗ್ಲ ಭಾಷೆಯನ್ನೇ ಉಪಯೋಗಿಸಬೇಕಾಗುವುದು. ಆದರೆ ಪ್ರಶಾಂತ ಬೀಚಿಯವರು ಹೇಳಿದಹಾಗೆ ಎಲ್ಲರೂ ಅಂದರೆ ಮಾತೃಭಾಷೆ ಆಂಗ್ಲಭಾಷೆಯಾಗಿಲ್ಲದವರೂ, ಆಂಗ್ಲಭಾಷೆಯನ್ನಾಡುವಾಗ ತಮ್ಮತಮ್ಮ ಮನಸ್ಸಿನಲ್ಲಿ ತಮ್ಮ ತಮ್ಮ ಮಾತೃಭಾಷೆಯನ್ನೇ ಮೊದಲು ಸೃಷ್ಟಿಸಿರುತ್ತಾರೆ. ಉದಾಹರಣೆಗೆ ಕನ್ನಡಿಗರು ಕನ್ನಡವನ್ನೂ, ತಮಿಳರು ತಮಿಳನ್ನೂ, ಮರಾಠಿಗರು ಮರಾಠಿಯನ್ನೇ ಮೊದಲು ಸೃಷ್ಟಿಸಿರುತ್ತಾರೆ. ಆ ನಂತರ ಅವರು ಆಂಗ್ಲಭಾಷೆಯಲ್ಲಿ ಉಚ್ಚರಿಸುತ್ತಾರೆ.

ಅವರು ಆಂಗ್ಲಭಾಷೆಯಲ್ಲಿ ನಿಪುಣರಾದಮೇಲೆ ಆಂಗ್ಲಭಾಷೆಯಲ್ಲಿ ಮಾತಾಡುವಾಗ ಅವರ ಮನಸ್ಸಿನ ತಳಹದಿಯಲ್ಲಿ ಚಲಿಸುತ್ತಿರುವ ಕನ್ನಡವು ಅಜ್ಞಾತವಾಗುತ್ತದೆ. ಆದುದರಿಂದ ಈ ನವೀನಕಾಲದ ಯುವಕರು ಒಂದು ಸಂದಿಗ್ಧತೆ ಅಂದರೆ ಒಂದು ಪೀಕಲಾಟದಲ್ಲಿ ಸಿಲುಕಿರುತ್ತಾರೆ. ಅಧಿಕವಾಗಿ ಆಂಗ್ಲಭಾಷೆಯನ್ನೇ ಇಡೀ ದಿನವೂ ಉಚ್ಚರಿಸಿತ್ತಿರುವಾಗ ಅವರ ಕನ್ನಡವು ಸಂಪೂರ್ಣವಾಗಿ ಅಜ್ಞಾತವಾಗುತ್ತದೆ.

ಪ್ರಶಾಂತ ಬೀಚಿಯವರು ಹೇಳುವಹಾಗೆ ಹತ್ತಿದಮೇಲೆ ಏಣಿಯನ್ನೇ ಒದಯಬಾರದು. ಯಾರಿಗೆ ಗೊತ್ತು ಈ ಯುವ ಕನ್ನಡಿಗರು, ತಾವುದೊಡ್ಡವರಾದಮೇಲೆ ಅದರಲ್ಲೂ ಅವರು ಹೊರದೇಶದಲ್ಲಿ ವಾಸಿಸಿದಮೇಲೆ ಅವರಿಗೆ ಕನ್ನಡ ಪ್ರೇಮ ಹೆಚ್ಚಾಗಬಹುದು. ಸ್ವದೇಶದಲ್ಲಿರುವರಿಗೆ ಕನ್ನಡದಲ್ಲಿ ಆಲಸ್ಯವಿದ್ದಾಗ ವಿದೇಶದಲ್ಲಿರುವರಿಗೆ ಕನ್ನಡದ ಅಭಿಮಾನ ಹೆಚ್ಚಾಗುವುದು. ನಮ್ಮಂತಹವರಿಗೆ ಆಗಿಲ್ಲವೇ?

ಈ ಯೋಚನೆಯಲ್ಲಿದ್ದ ನನಗೆ, ನಾನು ಬರೆದ 'ವಿದೇಶೀ ಕನ್ನಡಿಗನ ಕೊರಗು' ಎಂಬ ಒಂದು ಪದ್ಯ ಜ್ಞಾಪಕಕ್ಕೆ ಬಂದಿತು. ಈ ಪದ್ಯವನ್ನು 1988ರಲ್ಲಿ ಮ್ಯಾಂಚೆಸ್ಟರಲ್ಲಿ ನಡೆದ ಮೊದಲನೆಯ ವಿಶ್ವಕನ್ನಡಿಗರ ಸಮ್ಮೇಳನದಲ್ಲಿ ನಾನು ಓದಿದ್ದೆನು. ಅದು 'ಅಪರಂಜಿ' ಯಲ್ಲೂ ಪ್ರಕಟವಾಗಿದೆ.

ವಿದೇಶೀಕನ್ನಡಿಗನ ಕೊರಗು

ಆಂಗ್ಲ ಮಾಧ್ಯಮವೇ ಬೇಕೆಂದ
ಆಂಗ್ಲಭಾಷೆಯು ಬಲುಚಂದ
ಆಂಗ್ಲನಾಡಲಿ ಬಂದು ನೆಲಸಿ
ಕನ್ನಡ ಕನ್ನಡ ಎಂದು ಕೊರಗಿದನಾ ವಿದೇಶೀ ಕನ್ನಡಿಗ.

ದುಡಿದು ಗಳಿಸಿದ ಹಣವ ಕಸಿವನಾ ಕಂದಾಯದಾರ
ಕೊಡುವನಾ ಹಣವ ದುಡಿಯದವಗೆ
ದುಡಿದವನು ಸೋತ ದುಡಿಯದವ ಗೆದ್ದ
ಇದಾವನ್ಯಾಯವೆಂದು ಕೊರಗಿದನಾ ವಿದೇಶೀ ಕನ್ನಡಿಗ.

ಕೈಯಲ್ಲಿ ಕಾಸಿದ್ದರೇನು? ಮನೆಗೆರಡು ಕಾರಿದ್ದರೇನು?
ದುಡಿದು ದಣಿವಿ ಮನೆಗೆ ಬರಲ್‌
ಪೋಗಿರವಳಾಸತಿ ಕೆಲಸಕೆ
ಎನಗಿನ್ನು ತಂಗಳೇಗತಿಯೆಂದು ಕೊರಗಿದನಾ ವಿದೇಶೀ ಕನ್ನಡಿಗ.

ಮೈಕ್ರೋವೇವ್‌ ಬೇಕೆಂದ ಕಂಪ್ಯೂಟರ್‌ ಬಲು ಚೆಂದ
ಕಾರ್ಡಿನಲಿವುಗಳನ್‌ ಕೊಳ್ಳಲ್‌
ಕಾರ್ಡಿಗನು ಬಂದೆಳೆದಾಗ
ಕೀಲು ಮುರಿದಂತೆ ಕೊರಗಿದನಾ ವಿದೇಶೀ ಕನ್ನಡಿಗ.

ಅಪ್ಪ ಅರಸಗೆ ಮಂತ್ರಿ ಮಾವ ಪಾಳೆಯಗಾರ
ಬೀದಿಯಲಿ ಹೆಮ್ಮೆಯಿಂ ಪೋಗುತಿರಲ್‌
ಪಾಕಿ ನೀನೆಂಬುವರು. ನಾನೇಕೆ ಇಲ್ಲಿರುವೆ?
ಎಂದು ಕೊರಗಿದನಾ ಕೊರಗಿದನಾ ವಿದೇಶೀ ಕನ್ನಡಿಗ.

English summary
Rajaram Cavale, Hampshire, writes about Responsibilities of Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X