ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಬಿಕೆಯೇ ಎಲ್ಲಾ ಅಲ್ಲ...

By ಶೇಷಾದ್ರಿ, ಸೌತ್‌ ಬ್ರನ್ಸ್‌ವಿಕ್‌, ಎನ್‌.ಜೆ., ಯು.ಎಸ್‌.ಎ.
|
Google Oneindia Kannada News

ವಿನಿವಿಂಕ್‌ನಂತಹ ಬ್ಲೇಡ್‌ ಕಂಪನಿಗಳ ಮಧ್ಯೆ ಕುಳಿತು 'ನಂಬಿ ಕೆಟ್ಟವರಿಲ್ಲವೋ...' ಎನ್ನುವಂತಿಲ್ಲ . ನಂಬಿಕೆಯ ಅಪಾಯಗಳು ನಿಮಗೆ ಗೊತ್ತೆ?

ಮಾನ್ಯರೇ,

ಪ್ರಶಾಂತ್‌ ಬೀಚಿಯವರ 'ನಂಬಿ ಕೆಟ್ಟವರಿಲ್ಲವೋ..' ಲೇಖನವನ್ನೋದಿದೆ. ಯಶ ಸಂಪಾದನೆಯಲ್ಲಿ ನಂಬಿಕೆ ಅತ್ಯಗತ್ಯವಾದರೂ, ಬೀಚಿಯವರ ಲೇಖನ ಓದಿದಾಗ 'ನಂಬಿಕೆಯಾಂದಿದ್ದರೆ ಸಾಕು, ಉಳಿದಾವ ಗುಣಗಳೂ ಬೇಡ'ವೆಂಬ ಅಭಿಪ್ರಾಯ ಬರುತ್ತದೆ.

ಬೀಚಿಯವರು ಉದಾಹರಿಸಿರುವ ರವಿ ಬೆಳಗೆರೆಯವರಲ್ಲಾಗಲೀ, ಸ್ಟೀಫನ್‌ ಹಾಕಿಂಗನಲ್ಲಾಗಲೀ, ಆತ್ಮ ನಂಬಿಕೆಯಾಂದಿಗೆ ಪ್ರತಿಭೆ ಸಹ ಇದೆ. ಅವರು ಕಂಡಿರುವ-ಕಾಣುತ್ತಿರುವ ಯಶಸ್ಸಿಗೆ ಅವರಲ್ಲಿರುವ ಆತ್ಮ-ನಂಬಿಕೆಯಷ್ಟೇ ಅವರಲ್ಲಿರುವ ಪ್ರತಿಭೆಯೂ ಅಷ್ಟೇ ಕಾರಣ.

'ಯಾವಾಗ ನಮ್ಮಲ್ಲಿ ಪ್ರತಿ ಶತ ನೂರರಷ್ಟು ನಂಬಿಕೆ ಇರುತ್ತದೋ, ಅಲ್ಲಿ ಗೆಲವು ಸಿದ್ಧ' ಎಂದು ಬರೆಯುವಾಗ, ತನ್ನ ಸಂಗೀತ ಪರಿಣತಿಯ ಮೇಲೆ, ಕಂಠದ ಮೇಲೆ ಅತೀವ ವಿಶ್ವಾಸವಿರುವ ಕೆಲವು ' ಸಂಗೀತಗಾರರು' ಹಾಡಿ-ಹಾಡೀ ಉಳಿದವರ ಜೀವ ಹಿಂಡುವ ಪ್ರಸಂಗಗಳನ್ನು ನೋಡಿಲ್ಲವೆನ್ನಿಸುತ್ತದೆ. ಹಾಗೆಯೇ, 'ನಾನು ಪಕ್ಷಿಯಂತೆ ಹಾರಬಲ್ಲೆ' ಎಂಬ ಶೇ.100ರಷ್ಟು ನಂಬಿಕೆಯಿಂದ ಬೆಟ್ಟದ ಮೇಲಿನಿಂದಲೋ ಅಥವಾ ಮಹಡಿಯಿಂದಲೋ ಧುಮುಕಿ ಕೆಳಗೆ ಬೀಳುವವರನ್ನು ನಾವು ಹುಚ್ಚರೆನ್ನುತ್ತೇವೆ.

ಅನಾರೋಗ್ಯವಿದ್ದಾಗ ಅದರಲ್ಲೂ ಕ್ಯಾನ್ಸರ್‌ ಇತ್ಯಾದಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ, positive attitude ನನಗೆ ಗುಣವಾಗುತ್ತದೆ ಎಂಬ ನಂಬಿಕೆ ಸಹಾಯ ಮಾಡುವುದಾದರೂ, ಬರೀ ಈ ನಂಬಿಕೆಯಾಂದರಿಂದಲೇ ದೈಹಿಕ ಅನಾರೋಗ್ಯ ಗುಣವಾಗಿದ್ದಕ್ಕೆ ವೈದ್ಯಕೀಯ-ವೈಜ್ನಾನಿಕ ಆಧಾರಗಳೇನೂ ಇಲ್ಲ. ಜೊತೆಗೆ, ಕಾಯಿಲೆ ಗುಣವಾಗದೇ ಉಲ್ಬಣವಾಗುತ್ತಿದ್ದರೆ, ಇಂತಹ ವಿಚಾರಗಳಿಂದ, ರೋಗದಿಂದ ಮೊದಲೇ ಜರ್ಜರಿತನಾದ ರೋಗಿ, ಇದಕ್ಕೆ ತಾನೇ ಹೊಣೆಯಿರಬಹುದೆಂದು ಕೊರಗುವ ಅಪಾಯವೂ ಇದೆ.

'ಎಲ್ಲಿ ನಂಬಿಕೆ ಕಳೆದುಕೊಳ್ಳುತ್ತೇವೆಯೋ ಅಲ್ಲಿ ಸೋಲಿಗೆ ಹತ್ತಿರವಾಗುತ್ತೇವೆ' ಎಂಬ ಬೀಚಿಯವರ ಮಾತು, ಸೋಲಿಗೆ ಸೋತವನೇ ಹೊಣೆ ಎಂದು ಅರ್ಥೈಸಿದರೆ, ಕೆಲವೊಮ್ಮೆ ಬಲಿಪಶುವನ್ನೇ ದೂಷಿಸಿದಂತಾಗುತ್ತದೆ. ಕೆಲ ನಕಲಿ ವೈದ್ಯರುಗಳಂತೂ ಇದನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡಿದ್ದಾರೆ. ಮಾರಾಣಾಂತಿಕ ಕ್ಯಾನ್ಸರ್‌ ಅಂತಹ ರೋಗಗಳಿಂದ ಹತಾಷರಾಗಿ ಬಳಲುತ್ತಿರುವ ರೋಗಿಗಳಿಗೆ ಅಳಲೇಕಾಯಿ ಔಷಧ ನೀಡಿ, ಗುಣವಾಗ ಬೇಕಾದರೇ ಎಲ್ಲಕ್ಕಿಂತ ಮುಖ್ಯವಾದದ್ದು 'ನಂಬಿಕೆ' ಎಂದು, ಕಾಯಿಲೆ ಗುಣವಾಗದಿದ್ದಾಗ 'ನಂಬಿಕೆಯಿಲ್ಲದ್ದೇ ಅದಕ್ಕೆ ಕಾರಣ' ಎನ್ನುವ ಕ್ರೂರಿಗಳೂ ಇದ್ದಾರೆ.

ಬೀಚಿಯವರು ಬರೆಯುತ್ತಾರೆ : '..ಇರುವ ಜನರಲ್ಲಿ..', '..ಪಾಲುದಾರರಲ್ಲಿ..' '..ನಮ್ಮನಮ್ಮಲ್ಲಿ..' 'ನಂಬಿಕೆ ಎನ್ನುವುದು ಎಲ್ಲ ಕಡೆ ಬೇಕಾಗುತ್ತದೆ'. ಹೀಗೆ ಬರೆದಾಗ, ಬೀಚಿಯವರು ನಂಬಿಸಿ ಮೋಸಮಾಡಿದ 'ವಿನಿವಿಂಕ್‌' ಸಂಸ್ಥೆಯವರನ್ನೂ, ಇಡೀ ಭಾರತವನ್ನೇ ಯಾಮಾರಿಸಿದ ರಾಮರ್‌ ಪಿಳ್ಳೆಯನ್ನು ಮರೆತಿದ್ದಾರೆನ್ನಿಸುತ್ತದೆ.

ಒಟ್ಟಿನಲ್ಲಿ ನಂಬಿಕೆಯಷ್ಟೇ, ಆರೋಗ್ಯಕರ ಸಂದೇಹ ಕೂಡ ಅಷ್ಟೇ ಮಹತ್ವದ್ದೆನ್ನುವುದರಲ್ಲಿ ಸಂದೇಹವಿಲ್ಲವೆಂದೇ ನನ್ನ ಅಚಲವಾದ ನಂಬಿಕೆ. ನನ್ನ ಈ ನಂಬಿಕೆಯನ್ನು ನೀವೂ ಸಹ ಪೂರ್ಣವಾಗಿ ನಂಬುವಿರೆಂದು ನಂಬುತ್ತಾ ವಿರಮಿಸುತ್ತೇನೆ.

English summary
Having complete faith in oneself not enough to be successful. Vinivinc is the best example ahead of us. Sheshadri comments on article written by Prashanth Beechi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X