keyboard_backspace

ರೆಪೋ ಏರಿಕೆ: ಭಾರತದಲ್ಲಿ ಉಳ್ಳವರಿಗೆ ಲಾಭವೆಷ್ಟು, ಇಲ್ಲದವರಿಗೆ ನಷ್ಟವೆಷ್ಟು?

Google Oneindia Kannada News

ನವದೆಹಲಿ, ಜೂನ್ 8: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ರೆಪೋ ದರವನ್ನು ಶೇಕಡಾ 4.9ಕ್ಕೆ ಏರಿಕೆ ಮಾಡಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಕ್ಷೇಪಣವನ್ನು ಶೇಕಡಾ 6.7ಕ್ಕೆ ಹೆಚ್ಚಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (MPC) ತನ್ನ ಎಲ್ಲಾ ಆರು ಸದಸ್ಯರ ಮೂಲಕ ಇತ್ತೀಚಿನ ದರ ಏರಿಕೆಗೆ ಸರ್ವಾನುಮತದಿಂದ ಮತ ಚಲಾಯಿಸಿತು. ಇದರಿಂದ ರೆಪೋ ದರವನ್ನು ಶೇಕಡಾ 4.9ಕ್ಕೆ ಏರಿಕೆ ಆಗಿದೆ.

Breaking: ಭಾರತೀಯ ನೋಟಿನಲ್ಲಿ ಗಾಂಧಿ ಜೊತೆ ಟ್ಯಾಗೋರ್, ಕಲಾಂ ಫೋಟೋ ಹಾಕಲ್ಲ Breaking: ಭಾರತೀಯ ನೋಟಿನಲ್ಲಿ ಗಾಂಧಿ ಜೊತೆ ಟ್ಯಾಗೋರ್, ಕಲಾಂ ಫೋಟೋ ಹಾಕಲ್ಲ

ಸೆಂಟ್ರಲ್ ಬ್ಯಾಂಕ್ ತನ್ನ ಆಗಸ್ಟ್ ಸಭೆಯಲ್ಲಿ ಮತ್ತೆ ದರಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಆ ಮೂಲಕ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿಗೂ ಪೂರ್ವದಲ್ಲಿದ್ದ ಮಟ್ಟಕ್ಕೆ ರೆಪೋ ದರವನ್ನು ತೆಗೆದುಕೊಂಡು ಹೋಗುವ ನಿರೀಕ್ಷೆಗಳಿವೆ. ರೆಪೋ ದರದ ವ್ಯತ್ಯಾಸ ದೇಶದ ಆರ್ಥಿಕತೆ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು?, ಹಣದುಬ್ಬರ ನಿಯಂತ್ರಣಕ್ಕೆ ಇದು ಸಹಕಾರಿ ಆಗಲಿದೆಯೇ?, ಬಡ್ಡಿದರದಲ್ಲಿ ಯಾವ ರೀತಿ ವ್ಯತ್ಯಾಸ ಆಗಲಿದೆ?, ಅಸಲಿಗೆ ಈ ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಎಂದರೇನು ಎನ್ನುವುದರ ಕುರಿತು ವಿಸ್ತೃತ ವರದಿ ಇಲ್ಲಿದೆ ಓದಿ.

ರೆಪೋ ದರ ಎಂದರೇನು?

ರೆಪೋ ದರ ಎಂದರೇನು?

'REPO' ಎಂದರೆ 'ಮರುಖರೀದಿ ಆಯ್ಕೆ' ಅಥವಾ 'ಮರುಖರೀದಿ ಒಪ್ಪಂದ'. ರೆಪೋ ದರವು ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುವ ದರವನ್ನು ಸೂಚಿಸುತ್ತದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಆರ್‌ಬಿಐ ಪ್ರಮುಖ ಸಾಧನಗಳಲ್ಲಿ ರೆಪೋ ದರವೂ ಒಂದು ಎಂದು ಪರಿಗಣಿಸಲಾಗುತ್ತದೆ. ದೇಶದ ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಪಡೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿದರವನ್ನೇ ರೆಪೋ ದರ ಎಂದು ಕರೆಯಲಾಗುತ್ತದೆ.

ರಿವರ್ಸ್ ರೆಪೋ ಎಂದರೇನು?

ರಿವರ್ಸ್ ರೆಪೋ ಎಂದರೇನು?

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ವಾಣಿಜ್ಯ ಹಾಗೂ ಇತರೆ ಬ್ಯಾಂಕುಗಳು ತಾವು ಇರಿಸುವ ಹಣದ ಮೇಲೆ ಪಡೆಯುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ಈ ರಿವರ್ಸ್ ರೆಪೋ ದರವನ್ನು ಆಧರಿಸಿಯೇ ಬ್ಯಾಂಕುಗಳಿಗೆ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ.

ಭಾರತದಲ್ಲಿ ಗರಿಷ್ಠ ಮಟ್ಟ ತಲುಪಿದ ಹಣದುಬ್ಬರ

ಭಾರತದಲ್ಲಿ ಗರಿಷ್ಠ ಮಟ್ಟ ತಲುಪಿದ ಹಣದುಬ್ಬರ

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರದ ಮೇಲೆ ಆರ್‌ಬಿಐ ತನ್ನ ವಿತ್ತೀಯ ನೀತಿಯನ್ನು ರೂಪಿಸುತ್ತದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಹಣದುಬ್ಬರದ ಪ್ರಮಾಣವು ಶೇ.7.79ರಷ್ಟಾಗಿದ್ದು, 8 ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ತಲುಪಿದೆ. ಚಿಲ್ಲರೆ ಹಣದುಬ್ಬರವು ಈ ವರ್ಷದ ಆರಂಭದಿಂದಲೂ ಆರ್‌ಬಿಐನ ಶೇಕಡಾ 2-6 ಗುರಿ ಬ್ಯಾಂಡ್‌ಗಿಂತ ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರೀಯ ಬ್ಯಾಂಕ್ ಹಣದುಬ್ಬರವನ್ನು ಏಪ್ರಿಲ್‌ನಲ್ಲಿ ಶೇ. 5.7 ರಿಂದ ಶೇ.6.7 ಏರಿಕೆಯಾಗಿದೆ.

ಗೃಹ, ಕಾಲು ಸಾಲದ ಮೇಲಿನ ಇಎಂಐ ಹೆಚ್ಚಳ

ಗೃಹ, ಕಾಲು ಸಾಲದ ಮೇಲಿನ ಇಎಂಐ ಹೆಚ್ಚಳ

ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದ ಸಂದರ್ಭಗಳಲ್ಲಿ, ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲದ ವೆಚ್ಚವು ಕಡಿಮೆ ಇರುತ್ತದೆ. ಆದ್ದರಿಂದ, ರೆಪೋ ದರವನ್ನು ಕಡಿಮೆಗೊಳಿಸಿದಾಗ ಬ್ಯಾಂಕುಗಳು ಸಾಮಾನ್ಯವಾಗಿ ಗ್ರಾಹಕರಿಂದ ಸಾಲಗಳಿಗೆ ಕಡಿಮೆ ಬಡ್ಡಿದರವನ್ನು ಹಾಕುತ್ತವೆ. ಆದರೆ, ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿರುವುದರಿಂದ ಬ್ಯಾಂಕ್‌ಗಳು ಗೃಹ ಸಾಲ, ಕಾರು ಸಾಲ ಮತ್ತಿತರ ಬಡ್ಡಿದರವನ್ನು ಹೆಚ್ಚಿಸುತ್ತವೆ. ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿದರೆ, ಸಮಾನ ಮಾಸಿಕ ಕಂತುಗಳು (ಇಎಂಐಗಳು) ಸಹ ಹೆಚ್ಚಾಗುತ್ತವೆ, ಇದು ಸಾಲ ಪಡೆದಿರುವ ಗ್ರಾಹಕರಿಗೆ ಹೊರೆಯಾಗುತ್ತದೆ.

ಹೂಡಿಕೆಯ ಮೇಲಿನ ಬಡ್ಡಿದರ ಏರಿಕೆ ಸಾಧ್ಯತೆ

ಹೂಡಿಕೆಯ ಮೇಲಿನ ಬಡ್ಡಿದರ ಏರಿಕೆ ಸಾಧ್ಯತೆ

ರೆಪೋ ದರವನ್ನು ಹೆಚ್ಚಿಸುವ ಆರ್‌ಬಿಐ ಕ್ರಮವು ಉಳಿತಾಯ ಖಾತೆಗಳಲ್ಲಿ ಮತ್ತು ಸ್ಥಿರ ಠೇವಣಿಗಳ ಮೂಲಕ (ಎಫ್‌ಡಿ) ಹಣವನ್ನು ಇಡುವ ಠೇವಣಿದಾರರಿಗೆ ಉತ್ತಮವಾಗಿರಲಿದೆ. ಬ್ಯಾಂಕುಗಳು ಎಫ್‌ಡಿಗಳಿಗೆ ಹೆಚ್ಚಿನ ಬಡ್ಡಿಯನ್ನು ನೀಡುವ ಸಾಧ್ಯತೆ ಇರುತ್ತದೆ.

ರೆಪೋ ದರದ ಬಗ್ಗೆ ಶಕ್ತಿಕಾಂತ್ ದಾಸ್ ಮಾಹಿತಿ

ರೆಪೋ ದರದ ಬಗ್ಗೆ ಶಕ್ತಿಕಾಂತ್ ದಾಸ್ ಮಾಹಿತಿ

ಭಾರತದಲ್ಲಿ "ಹಣದುಬ್ಬರದ ಅಪಾಯವಿದೆ. ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೊ ಏರಿಕೆ, ಕಚ್ಚಾ ಬೆಲೆಯು ಹಣದುಬ್ಬರವನ್ನು ಉತ್ತೇಜಿಸುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. "ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರವು ಶೇಕಡಾ 6ಕ್ಕಿಂತ ಹೆಚ್ಚಿರುತ್ತದೆ. ನಮ್ಮ ಹಂತಗಳನ್ನು ಮಾಪನಾಂಕ ನಿರ್ಣಯಿಸಲಾಗುತ್ತದೆ, ಹಣದುಬ್ಬರವನ್ನು ನಿಗದಿಪಡಿಸಿರುವ ಗುರಿಗೆ ತಂದು ನಿಲ್ಲಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುತ್ತದೆ," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.

ಈ ರೆಪೋ ದರ ಏರಿಕೆಯ ಬೆಳವಣಿಗೆಯ ಮೇಲೆ, ಭಾರತೀಯ ಆರ್ಥಿಕತೆಯು ಈ ವರ್ಷದಲ್ಲಿ ಹಿಂದಿನ ಮುನ್ಸೂಚನೆಯಂತೆ ಶೇ.7.2ರಷ್ಟು ವಿಸ್ತರಣೆ ಆಗುವ ಬಗ್ಗೆ ಆರ್‌ಬಿಐ ನಿರೀಕ್ಷಿಸಿದೆ. ಆರ್‌ಬಿಐ ಗವರ್ನರ್ ಡಿಜಿಟಲ್ ಪಾವತಿ ವ್ಯವಸ್ಥೆಯ ಒಳಹೊಕ್ಕು ಹೆಚ್ಚಿಸಲು ಕ್ರಮಗಳನ್ನು ಘೋಷಿಸಿದ್ದು, ಯುಪಿಐ ಪ್ಲಾಟ್‌ಫಾರ್ಮ್‌ಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

English summary
RBI Hikes Repo Rate on June 8th: Car Loan, Home loan and Personal Loan interest rate rise; Readers need to know this points.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X