keyboard_backspace

ಉದ್ಯಮಿ ರಾಜ್ ಕುಂದ್ರ ಬಂಧನ ಹಿಂದಿದೆ, ಜನರ ಪೋರ್ನೋಗ್ರಫಿ ಡೆಪೆಂಡೆನ್ಸಿಯ ಅಂಕಿಅಂಶಗಳು!

Google Oneindia Kannada News

ಬೆಂಗಳೂರು, ಜು. 22: ಕೊರೊನಾ ಸೋಂಕಿಗೆ ತತ್ತರಿಸಿ ಸಂಕಷ್ಟಕ್ಕೆ ಎದುರಾಗದೇ ಇರುವ ಉದ್ಯಮ, ಕ್ಷೇತ್ರ ಹುಡುಕುವುದೇ ಕಷ್ಟ. ಹೌದಲ್ಲವೇ ಎಂದು ತಲೆಯಾಡಿಸಬೇಡಿ. ಕೊರೊನಾ ಸೋಂಕು ಜಗತ್ತನ್ನು ಅಲುಗಾಡಿಸಿದೆ. ಆದರೆ "ಪೋರ್ನ್ ಮಾರ್ಕೆಟ್ " ಮಾತ್ರ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಹೆಚ್ಚು ಲಾಭ ಗಳಿಸಿದೆ. ಅದರಲ್ಲೂ ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ಮಂದಿ ಪೋರ್ನೋಗ್ರಫಿ ನೋಡುವುದರಲ್ಲಿ ಭಾರತೀಯರು ಮೂರನೇ ಸ್ಥಾನ ಗಳಿಸಿದ್ದಾರೆ!

ಪೋರ್ನೋದ್ಯಮಿ ರಾಜ್ ಕುಂದ್ರಾ ಸೆರೆ: ನಟಿ ಶಿಲ್ಪಾಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ "ಪೋರ್ನೋಗ್ರಫಿ' ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾನೆ. ರಾಜ್ ಕುಂದ್ರಾ ತನ್ನ ಬಂಗಲೆಯಲ್ಲಿ ಪೋರ್ನ್ ವಿಡಿಯೋ ಶೂಟ್ ಮಾಡಿ ತಯಾರಿಸುತ್ತಿದ್ದ ಆರೋಪದ ಮೇಲೆ ಮುಂಬಯಿ ಪೊಲೀಸರು ದಾಳಿ ಮಾಡಿದ್ದಾರೆ. ಇದೀಗ ವಿಶ್ವದಲ್ಲಿ ಎರಡನೇ ಅತಿದೊಡ್ಡ ವೀಕ್ಷಕರನ್ನು ಹೊಂದಿರುವ ಬ್ರಿಟನ್‌ನ ಕಂಪನಿ ಜತೆ ರಾಜ್ ಕುಂದ್ರಾ ವಹಿವಾಟು ನಡೆಸಿರುವ ಸಂಗತಿಯನ್ನು ಮುಂಬಯಿ ಪೊಲೀಸರು ಹೊರ ಹಾಕಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೇ ಇರುವ ಉದ್ಯಮ, ಕ್ಷೇತ್ರವೇ ಇಲ್ಲ. ಆದರೆ ವಿಶ್ವದಲ್ಲಿಯೇ ಪೋರ್ನೋಗ್ರಫಿ ಉದ್ಯಮ ಕೊರೊನಾ ಸಂಕಷ್ಟ ಕಾಲದಲ್ಲಿ ಅತಿ ಹೆಚ್ಚು ಲಾಭದಾಯಕವಾಗಿ ಮುನ್ನೆಡೆದಿದೆ. ಮಾತ್ರವಲ್ಲ ನಿರೀಕ್ಷೆಗೂ ಮೀರಿ ಪೋರ್ನೋಗ್ರಫಿ ವೆಬ್ ತಾಣಗಳ ಮೊರೆ ಹೋಗಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ವೀಕ್ಷಕ ವರ್ಗ ಹೆಚ್ಚಳ

ಲಾಕ್ ಡೌನ್ ಸಮಯದಲ್ಲಿ ವೀಕ್ಷಕ ವರ್ಗ ಹೆಚ್ಚಳ

ಬಾಲಿವುಡ್ ನಟಿಯೊಬ್ಬಳ ಗಂಡ ಇಂತಹ ಅಸಹ್ಯಕರ ಉದ್ಯಮದಲ್ಲಿ ಬಂಧನವಾಗಿದ್ದು ಕೆಲವರಿಗೆ ಬೇಸರದ ಸಂಗತಿಯಾಗಿರಬಹುದು. ಎಂದಿಗೂ ನಷ್ಟ ನೋಡದ ಉದ್ಯಮ ಪೋರ್ನೋಗ್ರಫಿ. ಪೋನೋಗ್ರಫಿಗೆ ವಿಶ್ವದಲ್ಲಿ ಅತಿದೊಡ್ಡ ಮಾರ್ಕೆಟ್ ಇದೆ. ಈ ಮೊದಲು ಕೇವಲ ಮ್ಯಾಗ್‌ಜಿನ್ ಹಾಗೂ ಸಿಡಿ, ಬರಹಗಳಿಗೆ ಸೀಮಿತವಾಗಿದ್ದ "ಅಶ್ಲೀಲ ಉದ್ಯಮ"ವನ್ನು ದೆಸೆಯನ್ನು ಬದಲಾಯಿಸಿದ್ದು ಮಾತ್ರ ಸ್ಮಾರ್ಟ್ ಪೋನ್ ಹಾಗೂ ಇಂಟರ್‌ನೆಟ್ ಬೆಸೆದ ಮೇಲೆ. ಇಡೀ ವಿಶ್ವದಲ್ಲಿಯೇ ಅತಿದೊಡ್ಡ ಲಾಭದಾಯಕ ಉದ್ಯಮವಾಗಿ ಪೋರ್ನೋಗ್ರಫಿ ರೂಪಗೊಂಡಿದೆ.

ಕೊರೊನಾದಂತಹ ಹೊಡೆತದ ಕಾಲದಲ್ಲಿಯೇ ಉದ್ಯಮ ಶೇ. 20 ರಿಂದ 30 ರಷ್ಟು ವೀಕ್ಷಕ ಬಳಗವನ್ನು ಹೆಚ್ಚಿಸಿಕೊಂಡಿದೆ ಎಂದರೆ ಇದರ ಶಕ್ತಿಯ ಬಗ್ಗೆ ಆಲೋಚಿಸಬೇಕು. ಇದನ್ನು ಅರಿತಿದ್ದ ರಾಜ್ ಕುಂದ್ರಾ ನಷ್ಟ ವಿಲ್ಲದ ಅತಿ ಲಾಭ ತರುವ ಪೋರ್ನೋಗ್ರಫಿ ಉದ್ಯಮ ಕ್ಷೇತ್ರದಲ್ಲಿ ಸದ್ದಿಲ್ಲದೇ ಯಶಸ್ಸು ಸಾಧಿಸಿದನೇ ಎಂಬ ಅನುಮಾನ ಮೂಡುತ್ತದೆ. ಲಾಕ್ ಡೌನ್ ಸಮಯದಲ್ಲಿ ಕೆಲಸ ಕಾರ್ಯವಿಲ್ಲ, ಹೀಗಾಗಿ ಸ್ಮಾರ್ಟ್ ಪೋನ್ ಇದ್ದವರು ಪೋರ್ನೋಗ್ರಫಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಕಾಲ ಕಳೆದಿದ್ದಾರೆ!

ಭಾರತ ಮತ್ತು ಪೋರ್ನೋಗ್ರಫಿ

ಭಾರತ ಮತ್ತು ಪೋರ್ನೋಗ್ರಫಿ

ವಿಡಿಯೋ ಪಾರ್ಲರ್, ಪೋರ್ನೋಗ್ರಪಿ ವಿಡಿಯೋ ಡೌನ್ ಲೋಡ್, ಸ್ಟೋರೇಜ್ ಮಾಹಿತಿ ಆಧರಿಸಿ ನಡೆಸಿರುವ ಸಮೀಕ್ಷೆಗಳ ಅಂಕಿ ಅಂಶ ಆಧರಿಸಿ ಹೇಳುವುದಾದರೆ ಪೋನೋಗ್ರಫಿ ವೆಬ್ ತಾಣಗಳಿಗೆ ಭೇಟಿ ನೀಡುವರ ಪ್ರಮಾಣ ಶೇ. 30 ರಿಂದ 70 ರಷ್ಟು ಪಾಲು ಭಾರತೀಯರದ್ದು. ಅದರಲ್ಲಿ ಶೇ. 49 ರಷ್ಟು ಮಂದಿ ಕದ್ದು ಮುಚ್ಚಿ ನೋಡುವ ಬಳಗ ಜಾಸ್ತಿ. ನಗರ ಪ್ರದೇಶದ ಶೇ. 64 ರಷ್ಟು ಯುವಕರು ಈ ಅಶ್ಲೀಲ ವೆಬ್ ತಾಣಗಳ ಖಾಯಂ ವೀಕ್ಷಕರು. ಅದರಲ್ಲೂ ಭಾರತದ ರಾಷ್ಟ್ರಧಾನಿ ದೆಹಲಿ ಶೇ. 40 ರಷ್ಟು ಪೋನೋಗ್ರಫಿ ವೆಬ್ ತಾಣ ನೀಡುವ ವೀಕ್ಷಕ ವರ್ಗವನ್ನು ಹೊಂದಿದೆ. ವಿಡಿಯೋ ಪಾರ್ಲರ್, ಕಂಪ್ಯೂಟರ್ , ಮ್ಯಾಗಜಿನ್‌ನಲ್ಲಿ ನೋಡುತ್ತಿದ್ದ ವರ್ಗ ಇದೀಗ ಸ್ಮಾರ್ಟ್ ಪೋನ್ ನಲ್ಲೇ ಅತಿ ಹೆಚ್ಚು ಮಂದಿ ಪೋರ್ನೋಗ್ರಫಿ ನೋಡುತ್ತಿದ್ದಾರೆ. ಪೋರ್ನೋಗ್ರಫಿ ಉದ್ಯಮ ಭಾರತದ ಮಟ್ಟಿಗೆ ನಷ್ಟವಿಲ್ಲದ, ಹೆಚ್ಚು ಲಾಭ ಗಳಿಸುವ ಅತಿದೊಡ್ಡ ಉದ್ಯಮ ಎನ್ನುತ್ತವೆ ಅಧ್ಯಯನಗಳು.

ಭಾರತದಲ್ಲಿ ಶೇ. 20 ರಷ್ಟು ಹೆಚ್ಚಳ

ಭಾರತದಲ್ಲಿ ಶೇ. 20 ರಷ್ಟು ಹೆಚ್ಚಳ

2019 ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಭಾರತಕ್ಕೆ ಅಪ್ಪಳಿಸಿದ್ದು ಮಾರ್ಚ್ 2020 ರಲ್ಲಿ. ಹೀಗಾಗಿ ಮಾರ್ಚ್‌ನಿಂದ ಭಾರತದ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ನಿಯಯ ಜಾರಿಗೆ ಬಂತು. ಉದ್ಯಮಗಳು ಸ್ಥಗಿತಗೊಂಡವು. ಕೆಲವು ಕ್ಷೇತ್ರಗಳಷ್ಟೇ ಮನೆಯಲ್ಲಿಯೇ ಕೆಲಸಕ್ಕೆ ಅವಕಾಶ ಕೊಟ್ಟವು. ಮೂರು ವಾರದ ಲಾಕ್‌ಡೌನ್ ಸಮಯದಲ್ಲಿ ರಾಷ್ಟ್ರದಲ್ಲಿ ವಯಸ್ಕರ ವೀಕ್ಷಣೆ "A" ವೆಬ್ ತಾಣಗಳ ವೀಕ್ಷಕರ ಸಂಖ್ಯೆಯಲ್ಲಿ ಶೇ. 95 ರಷ್ಟು ಹೆಚ್ಚಳಗೊಂಡಿದೆ. ಸರಾಸರಿ ಶೇ. 20 ರಷ್ಟು ವೀಕ್ಷಕ ವರ್ಗವನ್ನು ಪೋರ್ನೋಗ್ರಫಿ ಸೈಟ್ ಗಳು ಹೆಚ್ಚಿಸಿಕೊಂಡಿವೆ. ಪೋರ್ನೋಗ್ರಫಿ ಸೈಟ್‌ಗಳನ್ನು ಕೆಲವು ಮೊಬೈಲ್ ಸೇವಾ ಕಂಪನಿಗಳು ರದ್ದು ಮಾಡಿದ್ರೂ ತಂತ್ರಜ್ಞಾನ ಸದುಪಯೋಗದಿಂದ ಆ ಪೋರ್ನೋಗ್ರಫಿ ಸೈಟ್‌ಗಳನ್ನು ಭಾರತೀಯರು ವೀಕ್ಷಣೆ ಮಾಡಿರುವಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತದಲ್ಲಿ ಕಾನೂನು ಏನು ಹೇಳುತ್ತೆ

ಭಾರತದಲ್ಲಿ ಕಾನೂನು ಏನು ಹೇಳುತ್ತೆ

ಭಾರತದಲ್ಲಿ ಪೋರ್ನೋಗ್ರಫಿ ಮಾಡುವುದು, ತಯಾರಿಸುವುದು, ಅದನ್ನು ಬಿತ್ತರಿಸುವುದು ಕಾನೂನು ಅಡಿಯಲ್ಲಿ ಅಪರಾಧ. ಆದರೆ ಇವತ್ತು ವಿಶ್ವದಲ್ಲಿ ಮೂರನೇ ಅತಿದೊಡ್ಡ ವೀಕ್ಷಕ ವರ್ಗವನ್ನು ಹೊಂದಿರುವುದು ಭಾರತ ಎಂಬುದು ವಿಪರ್ಯಾಸ. ಭಾರತದಲ್ಲಿ ಪೋರ್ನೋಗ್ರಫಿ ವೀಕ್ಷಣೆ ನಿಷೇಧ ಮಾಡುವಂತೆ ಕೋರಿ 2013 ರಲ್ಲಿ ಕಮಲೇಶ್ ಒಸ್ವಾನಿ ಎಂಬುವರು ಸುಪ್ರಿಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ಪೋರ್ನೋಗ್ರಫಿ , ಅದರ ನಿರ್ಬಂಧ ಕುರಿತು ಸಲಹಾ ಸಮಿತಿ ರಚನೆ ಮಾಡಿ ಕ್ರಮ ಜರುಗಿಸುವುದಾಗಿ ಕೇಂದ್ರ ಸರ್ಕಾರ ಕೋರ್ಟ್ ಗೆ ತಿಳಿಸಿತ್ತು. 2016 ರಲ್ಲಿ ಭಾರತದಲ್ಲಿ ಪೋರ್ನೋಗ್ರಫಿ ವೆಬ್ ತಾಣಗಳಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

 ವೆಬ್ ತಾಣ ನಿಷೇಧಿಸಲು ನಿರ್ದೇಶನ

ವೆಬ್ ತಾಣ ನಿಷೇಧಿಸಲು ನಿರ್ದೇಶನ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಕ್ಷೇತ್ರಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಅಶ್ಲೀಲ ಉದ್ಯಮವನ್ನು ಸಂಪೂರ್ಣ ನಿರ್ನಾಮ ಮಾಡುವಂತೆ ಸೂಚನೆ ನೀಡಿತ್ತು. ಪೋರ್ನೋಗ್ರಫಿ ವಿಡಿಯೋ ನೋಡಿದ್ದ ಕಾಮುಕರು ಹತ್ತನೇ ತರಗತಿ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಮಾಡಿದ್ದರು. ಈ ಪ್ರಕರಣದ ಸಂಬಂಧ ಉತ್ತರಾಖಂಡ ಹೈಕೋರ್ಟ್ ತೀರ್ಪು ಪ್ರಕಟಿಸಿ, ಅಶ್ಲೀಲ ವೆಬ್ ತಾಣಗಳನ್ನು ನಿಷೇಧಿಸುವಂತೆ ಸೂಚಿಸಿತ್ತು. ಉತ್ತರಾಖಂಡ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ 2018 ರಲ್ಲಿ 827 ಅಶ್ಲೀಲ ವಿಡಿಯೋವುಳ್ಳ ವೆಬ್ ತಾಣ ನಿಷೇಧಿಸಲು ನಿರ್ದೇಶನ ನೀಡಿತ್ತು. ಅದರಂತೆ ವೆಬ್‌ತಾಣಗಳನ್ನು ನಿಷೇಧ ಮಾಡಿತ್ತು. ನಿಷೇಧಕ್ಕೆ ಒಳಗಾದ ವೆಬ್ ತಾಣಗಳು ಬೇರೆಯದ್ದೇ ರೂಪದಲ್ಲಿ ಇದೀಗ ತಲೆಯೆತ್ತಿವೆ. ಎರಡು ವರ್ಷದಲ್ಲಿ ಪೋರ್ನೋಗ್ರಫಿ ನೋಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಶ್ರೇಯಾಂಕ ಗಳಿಸಿದೆ.

ಕೊರೊನಾ ಬಗ್ಗೆ ಹುಡುಕಿದ್ದಕ್ಕಿಂತಲೂ ಪೋರ್ನ್ ಹುಡುಕಿದವರೇ ಜಾಸ್ತಿ

ಕೊರೊನಾ ಬಗ್ಗೆ ಹುಡುಕಿದ್ದಕ್ಕಿಂತಲೂ ಪೋರ್ನ್ ಹುಡುಕಿದವರೇ ಜಾಸ್ತಿ

2018 ರಲ್ಲಿ ಪೋರ್ನೋಗ್ರಫಿ ನೋಡಿದವರ ಸಂಖ್ಯೆ 33 .5 ಬಿಲಿಯನ್ ಮಂದಿ. 2019 ರ ವೇಳೆಗೆ ಹತ್ತು ಬಿಲಿಯನ್ ಹೆಚ್ಚಳಗೊಂಡು 42 ಬಿಲಿಯನ್ ಮಂದಿ ವೀಕ್ಷಿಸಿದ್ದರು. ವಿಶೇಷ ಅಂದ್ರೆ ಏಳು ಮಿಲಿಯನ್ ಕಮೆಂಟ್ಸ್ ಅಶ್ಲೀಲ ದೃಶ್ಯಗಳಿಗೆ ಜನರಿಂದ ಹಾಕಲ್ಪಟ್ಟಿರುವ ಕಮೆಂಟ್ ಗಳು. ಪೋರ್ನೋಗ್ರಫಿ ನೋಡುವುದರಲ್ಲಿ ಅಮೆರಿಕನ್ನರು ಮೊದಲಿಗರು, ಬ್ರಿಟನ್‌ನವರಿಗೆ ಎರಡನೇ ಸ್ಥಾನ. ಮೂರನೇ ಸ್ಥಾನ ಭಾರತೀಯರದ್ದು. ಲನಾ ಎಂಬ ಪೋರ್ನ್ ಸ್ಟಾರ್‌ನ್ನು 2019 ರಲ್ಲಿ ಹುಡುಕಿರುವ ಮಂದಿ ಬರೋಬ್ಬರಿ 345 ಮಿಲಿಯನ್ ಮಂದಿ. 2020 ರಲ್ಲಿ ಕೊರೊನಾ ಬಗ್ಗೆ ಹುಡುಕಿದ್ದು ಕೇವಲ 17 ಮಿಲಿಯನ್ ಎನ್ನುತ್ತದೆ ಅಂಕಿ ಅಂಶಗಳು.

English summary
Raj Kundra Arrest: What is the adult film racket in which Raj Kundra is arrested? and how this business become such a lucrative business in india and in the world. Explained in kannada.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X