ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಜನರ ತೀರ್ಥಯಾತ್ರೆ ಮಾದಕ-ಮೋಹಕ ಜಗತ್ತಿನತ್ತ ಹೋಗುತ್ತಿರುವುದೆ?

By ಡಾ. ಎ. ಶ್ರೀಧರ, ಮನೋವಿಜ್ಞಾನಿ
|
Google Oneindia Kannada News

ಕಳೆದ ಕೆಲವು ದಿನಗಳ ಹಿಂದಷ್ಟೇ ಸಣ್ಣವಯಸ್ಸಿನ ಹುಡುಗ, ಇನ್ನೂ ಹದಿಹರೆಯದವ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಜೀವ ತೊರೆದ. ಅವನನ್ನು ಹೆತ್ತು, ಸಾಕಿ ಸಲುಹುತ್ತಿದ್ದ ಪೋಷಕರ ಕನಸುಗಳು, ತಮ್ಮಲ್ಲಿದ್ದಂತಹ ಪಾಲನೆ, ಪೋಷಣೆಯ ಬಗ್ಗೆಯ ನಂಬಿಕೆಗಳು ಮತ್ತು ಮಕ್ಕಳ ನಡೆನುಡಿಗಳಲ್ಲಿ ಕಾಣಿಸುತ್ತಿದ್ದ ಸಜ್ಜನಿಕೆ, ಸೌಜನ್ಯ, ಆತ್ಮವಿಶ್ವಾಸದಂತಹ ಮಾನಸಿಕತೆಯ ಬಗ್ಗೆಯೇ ಭಾರೀ ಪ್ರಶ್ನೆಗಳು ಮೂಡದಿರುವುದು ಅಪರೂಪ. ಇದೊಂದು ಕುಟುಂಬದ ಕತೆಯಲ್ಲ.

ನಮ್ಮ ನಾಡಿನಲ್ಲಿ ಕಳೆದ ಎರಡು ವರ್ಷಗಳಿಂದೀಚೆಗೆ ಎದ್ದುಕಾಣಿಸಿಕೊಳ್ಳುತ್ತಿರುವಂತಹ ಅಪರೂಪವಲ್ಲದ ಪ್ರಸಂಗಗಳು. ಸಾವನ್ನು ಬಯಸುವಂತಹ ಮಕ್ಕಳ ಮನದ ಸ್ಥಿತಿಗಳ ಬಗ್ಗೆ ಏನೆಂದು ಊಹಿಸಬೇಕು? ಇದೇನು ಊಹಿಸಲು ಸಾಧ್ಯವೇ ಆಗಿದಿರುವಂತಹ ಮನೋರೀತಿಯೇ? ಹಾಗೆಯೇ ಇಂತಹದೊಂದು ಪರಿಸ್ಥಿತಿಯು ಹೀಗೆಯೇ ಮುಂದುವರೆದು ಹೆಚ್ಚು ಮಕ್ಕಳು ಇದರತ್ತ ಹೋಗಬಹುದೆ ಎನ್ನುವಂತಹ ಪ್ರಶ್ನೆಗಳನ್ನು ಈಗಲಾದರೂ ಗಂಭೀರವಾಗಿ ಗಮನಿಸುವ ಅಗತ್ಯವಿದೆ.

ಅದಕ್ಕೆಲ್ಲಕ್ಕಿಂತಲೂ ಮುಂಚೆ, ಕೊರೊನ ರೋಗದ ಕಾಲಘಟ್ಟದಲ್ಲಿಯೇ ಇದ್ದು ಹೆಚ್ಚಾಗಿರಬಹುದೇ ಎನ್ನುವುದರ ಬಗ್ಗೆಯೂ ಸಹ ಒಳನೋಟದ ಅಗ್ಯವಿದೆ. ಜೊತೆಯಲ್ಲಿ ಹೀಗೆ ಅಕಾಲಿಕ, ದುರಂತದ ಸಾವಿನತ್ತ ನುಗ್ಗಿ ಹೋಗುವವರ ಸಂಗಡಿಗರು, ಸಹಪಾಠಿಗಳು (ಆನ್ಲೈನ್‌ ಸಹಪಾಠಿತನ) ಸಹಜ ಸಾಮಾಜಿಕ ಸಂಪರ್ಕದ ಸೊಗಡು ಹೀನತೆಯಿಂದಾಗಿ ಅತಿರೇಕದ ನಡೆನುಡಿಗಳನ್ನು ಪ್ರದರ್ಶಿಸುವರೇ ಎನ್ನುವ ಪ್ರಶ್ನೆಗಳೂ ಸಾರ್ವಜನಕರಲ್ಲಿದೆ.

ನನಗೆ ತಿಳಿದಂತೆ ಕಳೆದೆರಡು ವರ್ಷಗಳಿಂದೀಚೆಗೆ ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳ ಮಾನಸಿಕ ಸ್ಥಿತಿಗತಿಗಳು ಕೊರೊನಾ ಆರಂಭಕ್ಕೂ ಹಿಂದಿನ ದಶಕಗಳಲ್ಲಿ ಇದ್ದಂತಿಲ್ಲ, ಹದಗೆಟ್ಟಿದೆ. ಹಿಂದೆಯೂ ಹದೆಗಟ್ಟಿರುವ ಸ್ಥಿತಿಗಳು ಇದ್ದವೂ ಆದರೆ ಈಗನಂತದ್ದಲ್ಲ. ಈ ಅಭಿಪ್ರಾಯವು ಕೇವಲ ನೆನಪಿನಿಂದ ಹೊರಬಂದ ಭಾವನೆಯಂತೂ ಅಲ್ಲವೆನ್ನುವುದನ್ನು ವಿವರಿಸುವ ಪ್ರಯತ್ನ ಇಲ್ಲದೆ..

Why todays youth attracted to drugs and fantasy world; Psychiatrist Dr Sridhar Explains

ಕೋವಿಡ್‌ ಕಾಲಘಟ್ಟ
ಸಾಮಾಜಿಕ ಸಂಪರ್ಕಗಳು ಸಂಪೂರ್ಣವಾಗಿ ಕುಸಿದು ಮಕ್ಕಳ ಶಾರೀರಿಕ ಲವಲವಿಕೆ, ಸಾಮಾಜಿಕ ಚಟುವಟಿಕೆಗಳಾದ, ಆಟ, ಕೂಟ, ಕೀಟಲೆ, ಕುಚೋದ್ಯ ಮತ್ತು ಪರಸ್ಪರ ಸಂಪರ್ಕ, ಸಂಬಂಧಗಳೆಲ್ಲವೂ ಎಡವಟ್ಟಿಗೆ ಸಿಕ್ಕಿಕೊಂಡಿರುವುದರ ಲಕ್ಷಣಗಳು ಆಗ ಮೊಳಕೆಯೊಡೆದಿದ್ದು ಈಗ ಚಿಗುರಿದೆ, ಇಲ್ಲವೇ ದೊಡ್ಡದಾದ ಗಿಡವೇ ಆಗಿದೆ. ಹದಿಹರೆಯದ ಅನೇಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಮನೋಭಾವಗಳದೆಷ್ಟೋ ವಯಸ್ಕರ ರೀತಿಯದ್ದೇ ಎನಿಸುತ್ತದೆ. ಇಂದಿನ ಹದಿಹರೆಯದ ಮಕ್ಕಳು, ಅದರಲ್ಲಿಯೂ ನಗರ ಪ್ರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲಿ, ನಶೆ ಏರಿಸುವ ಪದಾರ್ಥಗಳ ಬಗ್ಗೆ ಸಾಕಷ್ಟು ಆಸಕ್ತಿ, ಬಳಕೆಯ ಬಯಕೆ ಮತ್ತು ಅದೇನು ತಪ್ಪಲ್ಲ ಎನ್ನುವಂತಹ ಪ್ರಜ್ಞೆ ಇದೆ.

ಜೊತೆಯಲ್ಲಿ ವಯಸ್ಸಿಗೆ ತಕ್ಕಂತಹ ಲೈಂಗಿಕ ಕುತೂಹಲಕ್ಕಿಂತಲೂ ಹೆಚ್ಚಿನ ಮಟ್ಟದ ಬಯಕೆ, ಭಾವನೆಗಳು ವ್ಯಕ್ತಗೊಳ್ಳುತ್ತಿರುವ ರೀತಿಯೇ ಬೇರೆ. ಗೆಳೆತನ, ಆತ್ಮೀಯತೆ, ಅವಲಂಬನೆ ಮತ್ತು ಆಕ್ರೋಶದ ಭಾವಗಳ ಸ್ವರೂಪವೇ ಬದಲಾಗಿರುವುದು ಸ್ಪಷ್ಟ. ನನಗೆ ತಿಳಿದ ಒಂದು ಪ್ರಕರಣವಿದು. ಬೆಂಗಳೂರಿನ ಪ್ರತಿಷ್ಠಿತ ವಸತಿ ಸಮುಚ್ಚಯೊಂದರಲ್ಲಿ ಬೆಳೆಯುತ್ತಿರುವ ಹದಿಹರೆಯದ ಮಕ್ಕಳ ಮನಸಿನಲ್ಲಿ ಗೆಳೆತನ, ಲೈಂಗಿಕ ಸಂಬಂಧ ಮತ್ತು ಮಾದಕ ವಸ್ತುಗಳನ್ನು ರುಚಿನೋಡುವುದು ತೀರ ಸಾಮಾನ್ಯ.

Why todays youth attracted to drugs and fantasy world; Psychiatrist Dr Sridhar Explains

ಈ ಮಕ್ಕಳು ಶಾರೀರಿಕವಾಗಿಯೂ ಸಬಲರು, ಎದ್ದು ಕಾಣಿಸುವಷ್ಟು ಅಂದಚೆಂದದವರು, ಮೋಹಕ ನಡೆನುಡಿಗಳೂ ಅಪರೂಪವಲ್ಲ. ಇವರ ನಡುವೆಯೇ ಅಲ್ಲೊಬ್ಬ, ಇಲ್ಲೊಬ್ಬಳು ಮಗ್ಧತೆಯ ಸಂಕೇತ ಎನ್ನುವುಂತೆ ಇರುವುದು ಅಪರೂಪವಲ್ಲ. ಗೆಳೆತನ ಬೇಕೆಂದಲ್ಲಿ, ಈ ನಡೆನುಡಿಗಳೊಂದಿಗೆ ಸೇರಿ ಬರುವ ಭಯ, ಎಚ್ಚರಿಕೆಗಳೇ ಗೆಳೆತನ ಸಿಗದಂತೆ ಮಾಡುವುದು ಎನ್ನುವ ಆತಂಕ ಅನೇಕ ಹೊಸ ಹದಿಹರೆಯದವರಿಗೆ ತಿಳಿದುಬಿಡುತ್ತದೆ.

ಮಾನಸಿಕ ಶಕ್ತಿಯನ್ನು ಕುಸಿಯುವಂತೆ ಮಾಡಿಬಿಡುತ್ತದೆ:
ಒಂದು ನಮೂನೆಯ ಹದಿಹರೆಯದವರು ಗುಂಪು ಕೂಡುವ ಜಾಗ, ಉದ್ದೇಶ, ಮೂಡುವ ಪರಸ್ಪರತೆ, ಮತ್ತೆ ಪೀಡನೆಯ ವರ್ತನೆಗಳು ಸಾಧು ಸ್ವಭಾವದ ಮಕ್ಕಳ ಮಾನಸಿಕ ಶಕ್ತಿಯನ್ನು ಕುಸಿಯುವಂತೆ ಮಾಡಿಬಿಡುತ್ತದೆ. ಅನೇಕ ಮಕ್ಕಳಿಗೆ ಇದೊಂದು ನಿರ್ವಹಿಸಲಾಗದ ಒತ್ತಡ. ಇದನ್ನು ಹಂಚಿಕೊಳ್ಳುವುಂತಹ ಮಾನಸಿಕ ದೃಢತೆ, ಅರ್ಥಮಾಡಿಕೊಳ್ಳುವಂತಹ ಮನೆಯ ವಾತಾವರಣ ಸಿಗದಿರುವುದೇ ಹೆಚ್ಚು. ಪೋಷಕರಿಗೆ ತಮ್ಮ ಮಕ್ಕಳು ಇಂಥದೊಂದು ಮಾನಸಿಕ ಗೊಂದಲದಲ್ಲಿದ್ದಾರೆಂದು ಗ್ರಹಿಸುವುದಕ್ಕೂ ಅಸಾಧ್ಯ. ತಮ್ಮ ಮಕ್ಕಳು ಆರೋಗ್ಯಕರವಾಗಿ ಬೆಳೆದು ಬಂದ ರೀತಿ, ಅವರ ನಡೆನುಡಿಗಳಲ್ಲಿ ಇದ್ದಂತಹ ಸೌಜನ್ಯತೆ, ದೇವರು, ಹಿರಿಯರಲ್ಲಿರುವ ಭಯಭಕ್ತಿಗಳೆಲ್ಲವು ತಮ್ಮ ಕುಡಿಗಳು ಚೆನ್ನಾಗಿಯೇ ಬೆಳೆಯುತ್ತಿದ್ದಾರೆ ಎನ್ನುವಂತಹ ಅಚಲ ನಂಬಿಕೆ ಇದ್ದುಬಿಟ್ಟಿರುತ್ತದೆ.

Why todays youth attracted to drugs and fantasy world; Psychiatrist Dr Sridhar Explains

ಹೀಗಾಗಿ ಯಾವುದೇ ರೀತಿಯಲ್ಲಿ ಮಕ್ಕಳ ಸೂಕ್ಷ್ಮವರ್ತನೆಗಳತ್ತ ಗಮನ ಹರಿಯುವುದಿಲ್ಲ. ಈ ವಿಷಯಕ್ಕೆ ಅನ್ವಯಿಸಿದಂತೆ ಹೆಣ್ಣು-ಗಂಡು ಮಕ್ಕಳ ನಡೆನುಡಿಗಳಲ್ಲಿ ಹೆಚ್ಚಿನ ವ್ಯತ್ಯಾಸವೇನು ಇರದು. ಗೆಳೆತನದ ರಗಳೆಗಳು, ಅದು ಕಚ್ಚಿಕೊಳ್ಳವುದು- ಕಿತ್ತುಕೊಳ್ಳುವುದೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಬೆಳೆದು ಪಕ್ವಗೊಳ್ಳಬೇಕಿರುವ ವ್ಯಕ್ತಿತ್ವದ ಹಾದಿಯ ಹದವನ್ನು ಕೆಡಿಸುತ್ತದೆ. ಹೀಗೆ ಕೆಡುವುದರ ಸೂಚನೆಗಳು ಗೌಪ್ಯವಾಗಿರುವುದಿಲ್ಲ. ನಿದ್ದೆ, ಊಟ ತಿಂಡಿ, ಹಿರಿಯರೊಂದಿಗಿನ ನಡೆನುಡಿ, ಆಸಕ್ತಿ-ಅಬಿರುಚಿಗಳಲ್ಲಿರದ ಹುಮ್ಮಸ್ಸು, ನಿದ್ದೆ, ಸ್ವಚ್ಚತೆಗಳ ಬಗ್ಗೆ ಉದಾಸೀನತೆ, ಕೃತಕವೆನ್ನುವಂತಹ ನಂಬಿಕೆಗಳು ಮನೆಮಂದಿಯ ಗಮನಕ್ಕೆ ಬಾರದಿರುವುದು ಅಪರೂಪ.

Why todays youth attracted to drugs and fantasy world; Psychiatrist Dr Sridhar Explains

ಹದಿಹರೆಯ ದಾಟುವ ಹಂತದಲ್ಲಿ ಅವಾಂತರಗಳು
ಗೆಳೆತನದ ಸಂಬಂಧಗಳು ಸರಾಗವಾಗಿ ಸಾಗದಿದ್ದಂಥ ಪ್ರಕರಣಗಳಲ್ಲಿ ತಳಮಳ, ಅಶಾಂತಿ, ನಿರಾಶೆ, ಅಪನಂಬಿಕೆಗಳಿಂದ ಕೂಡಿದ ವರ್ತನೆಗಳು ಅತಿಯಾಗಿಯೇ ಇರುವುದು. ಮನಸಿಗಿದು ಹಿಂಸೆಯನ್ನು ಸದಾ ಉಂಟುಮಾಡುತ್ತಿರುವುದರಿಂದಾಗಿ ಅವುಗಳ ಹಿಡಿತದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ನೆರವಿಗೆ ಬರುತ್ತಾರೆ, ಬರುತ್ತದೆ ನಶೆ ಏರಿಸುವ ವಸ್ತುಗಳು, ಹಿತೈಷಿ ಸರಬರಾಜುದಾರರು. ನಶೆಯತ್ತ ಮನಸು ಹೊಗುವಂತೆ ಮಾಡುವವರು, ಅದರ ಬಗ್ಗೆ ಮಾಹಿತಿಕೊಡುವವರೆಲ್ಲರು ಒಂದಿಲ್ಲೊಂದು ರೀತಿಯಲ್ಲಿ ಪರಿಚಿತರೇ, ಆದರೇ ಆತ್ಮೀಯರಾಗಿರುವುದು ಅಪರೂಪ.|

Why todays youth attracted to drugs and fantasy world; Psychiatrist Dr Sridhar Explains

ಒಂದು ದೃಷ್ಟಿಯಲ್ಲಿ ಸಮಸ್ಯೆಯಿಂದ ದೂರಸರಿಯುವುದಕ್ಕೆ ಬೇಕಾಗುವ "ಡಿಸ್ಟ್ರಾಕ್ಷನ್‌" ಒದಗಿಸಿಕೊಡುವವರು. ಈ ಸಮಯದಲ್ಲಿಯೇ ರೇವ್‌ಪಾರ್ಟಿಗಳು, ಆಫ್ಟರ್‌ ಪಾರ್ಟಿಗಳು, ಪ್ರೈವೆಟ್ ಪಾರ್ಟಿಗಳ ಬಗ್ಗೆ ಮಾಹಿತಿ ದೊರಕುವುದು. ಹಣವಂತರು, ಉಳ್ಳವರು, ರಾಜಕೀಯ, ತೋಳ್ಬಲ, ಜನಪ್ರಿಯತೆ ಇರುವಂತಹವರ ಸಾನಿಧ್ಯ, ಸಾರಥ್ಯದಲ್ಲಿ ಇವು ನಡೆಯುತ್ತದೆ. ಭಾಗವಹಿಸುವ ಅನೇಕರಲ್ಲಿ ತಮಲ್ಲಿ ಕಾಣಿಸಿಕೊಂಡಿರುವಂತಹ ಬಯಕೆಗೂ, ಮನದೊಳಗಿನ ಗೊಂದಲಕ್ಕೂ ಸಂಬಂಧವಿಲ್ಲ ಎನ್ನುವ ಅರಿವೂ ಮೂಡುವುದಿಲ್ಲ.
English summary
Here are the reasons why today's youth attracted to drugs and fantasy world; Psychiatrist Dr A Sridhar Explains. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X