ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಸಿಡಿ ಲಕ್ಷಣಗಳೇನು? ಒಸಿಡಿಗೆ ಔಷಧ ಹಾಗು ಮನೋಚಿಕಿತ್ಸೆ ಏನಿದೆ?

By ರೇಖಾ ಬೆಳವಾಡಿ, ಆಪ್ತಸಲಹೆಗಾರರು
|
Google Oneindia Kannada News

ಪ್ರತಿಮಾ ಒಬ್ಬ ಗೃಹಿಣಿ . ದಿನವಿಡೀ ಮನೆ ಗುಡಿಸುತ್ತಾ, ಒರೆಸುತ್ತಲೇ ಇರುತ್ತಾಳೆ. ಕೈ ತೊಳೆದುಕೊಳ್ಳುತ್ತಲೇ ಇರುತ್ತಾಳೆ. ಎಷ್ಟರ ಮಟ್ಟಿಗೆ ಎಂದರೆ ಕೈ ಸಿಪ್ಪೆಯು ಕಿತ್ತು ಬರುತ್ತದೆ. ಪ್ರತಿಮಾಳ ಈ ನಡವಳಿಕೆಯಿಂದ ಮನೆಯವರಿಗೂ ಮುಜುಗರ. ತನ್ನಿಂದ ಮನೆಯವರಿಗೆ ತೊಂದರೆ ಎಂದು ಸದಾ ಯೋಚಿಸುತ್ತಿರುತ್ತಾಳೆ. ಆದರೆ ತಾನು ಏಕೆ ಹೀಗೆ ಮಾಡುತ್ತೇನೆ ಎಂದು ಅವಳಿಗೆ ಗೊತ್ತಿಲ್ಲ.

ಜನಾರ್ದನ್ ಸರ್ಕಾರಿ ನೌಕರ. ಪ್ರತಿ ಫೈಲ್‌ಗಳಲ್ಲೂ ಸರಿಯಾಗಿ ಸಹಿ ಹಾಕಿರುವೆನೋ ಇಲ್ಲವೋ ಎಂದು ಪದೇ ಪದೇ ತೆಗೆದು ನೋಡುತ್ತಾನೆ. ಕೆಲಸದ ನಂತರ ಫೈಲ್‌ಗಳನ್ನು ಕಪಾಟಿನಲ್ಲಿ ಸರಿಯಾಗಿ ಇಟ್ಟೆನೋ ಇಲ್ಲವೋ!! ಎಂಬ ಆತಂಕ ಯಾವಾಗಲೂ. ಕಪಾಟಿಗೆ ಬೀಗ ಹಾಕಿದ್ದರೂ, ಆಫೀಸಿನ ಗೇಟಿನ ತನಕ ಹೋಗಿದ್ದರೂ ಮತ್ತೆ ಬಂದು ಪದೇ ಪದೇ ಬೀಗ ಜಗ್ಗಿ ಪರಿಶೀಲಿಸುವುದನ್ನು ನೋಡಿ ಆಫೀಸಿನಲ್ಲಿ ಎಲ್ಲರೂ ನಗುತ್ತಾರೆ.

ರಾಹುಲ್ ತನ್ನ ಬ್ಯಾಗಿನಲ್ಲಿರುವ ಪುಸ್ತಕಗಳನ್ನು ಸದಾ ಎಣಿಸುತ್ತಿರುತ್ತಾನೆ. ಶಾಲೆಯಲ್ಲಿ ಮೆಟ್ಟಿಲು ಹತ್ತುವಾಗ, ಇಳಿಯುವಾಗ ಕೂಡ ಮೆಟ್ಟಿಲುಗಳನ್ನು ಎಣಿಸುತ್ತಾನೆ. ಮಧ್ಯೆ ಯಾರಾದರೂ ಮಾತನಾಡಿಸಿದರೆ ಕೋಪ. ಮತ್ತೆ ಎಣಿಸಲು ಶುರುಮಾಡುತ್ತಾನೆ. ಯಾಕೆ ಹೀಗೆ ಎಣಿಸುತ್ತೀಯ ಎಂದು ಕೇಳಿದರೆ ಅವನ ಬಳಿ ಉತ್ತರವಿಲ್ಲ.

Body shaming ಭಯಬಿಡಿ; ಭಿನ್ನತೆಗಳನ್ನು ಸಹಜವಾಗಿ ಒಪ್ಪಿಕೊಳ್ಳಿBody shaming ಭಯಬಿಡಿ; ಭಿನ್ನತೆಗಳನ್ನು ಸಹಜವಾಗಿ ಒಪ್ಪಿಕೊಳ್ಳಿ

ಕನಿಷ್ಟ ಪಕ್ಷ ಅರ್ಧ ಗಂಟೆ ಸ್ನಾನ ಮಾಡುತ್ತಾರೆ ದಿನೇಶ್. ಆಫೀಸಿಗೆ ಲೇಟಾಗುತ್ತಿದೆ ಎಂದು ತಿಳಿದಿದ್ದರೂ ಸಹ ಬೇಗ ಬೇಗ ಸ್ನಾನ ಮಾಡಿ ಹೊರಡಲು ದಿನೇಶ್‌ಗೆ ಸಾಧ್ಯವೇ ಇಲ್ಲ.

ಇದೊಂದು ಮಾನಸಿಕ ಅಸ್ವಸ್ಥತೆ

ಇದೊಂದು ಮಾನಸಿಕ ಅಸ್ವಸ್ಥತೆ

ಗೀಳು ,ಇದೊಂದು ಮಾನಸಿಕ ಅಸ್ವಸ್ಥತೆ. ಇದನ್ನು OCD (Obsessive compulsive disorder) ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುತ್ತಾರೆ. ವ್ಯಕ್ತಿಯು ತನ್ನ ನಿಯಂತ್ರಣಕ್ಕೂ ಮೀರಿ ಕೆಲವು ಕೆಲಸಗಳನ್ನು ಪದೇ ಪದೇ ಪುನರಾವರ್ತಿಸುತ್ತಾನೆ. ಬೇಡದ ಯೋಚನೆಗಳು ಮತ್ತೆ ಮತ್ತೆ ತಲೆಗೆ ಹೊಕ್ಕುತ್ತದೆ. ಇದೊಂದು ಗೀಳು.

ಯಾವುದೋ ಅಹಿತಕರ ಘಟನೆಗಳು, ವಿಚಾರಗಳು, ಅನುಮಾನವು, ನಂಬಿಕೆಗಳು ಪದೇ ಪದೇ ಮನಸ್ಸಿಗೆ ಬರುತ್ತದೆ. ಇವು ವ್ಯಕ್ತಿಯ ಇಚ್ಛೆಗೆ ಅಥವಾ ಹತೋಟಿಗೆ ಹೊರತಾಗಿರುತ್ತವೆ. ಇದು ಅಸಂಬದ್ಧ ಎಂದು ತಿಳಿದಿದ್ದರೂ, ಹತೋಟಿಗೆ ಬಾರದ ಕಾರಣ ಭಯ, ಹಿಂಸೆ, ಬೇಸರ, ಆತಂಕ ಹೆಚ್ಚುತ್ತದೆ.

ತಮ್ಮ ಬಗ್ಗೆ ತಮಗೆ ಮುಜುಗರ

ತಮ್ಮ ಬಗ್ಗೆ ತಮಗೆ ಮುಜುಗರ

ದಿನನಿತ್ಯ ನಾವು, ಪದೇ ಪದೇ ದೇವರಿಗೆ ನಮಸ್ಕಾರ ಮಾಡುವವರು, ಕೈ ತೊಳೆದುಕೊಳ್ಳುವವರನ್ನು, ಹೇಳಿದ ಮಾತನ್ನೇ ಮತ್ತೆ ಮತ್ತೆ ಹೇಳುವವರನ್ನು, ಬಾಗಿಲು ಹಾಕಿದೆಯೋ ಇಲ್ಲವೋ ಎಂದು ಆತಂಕ ಪಡುವವರನ್ನು, ಬ್ಯಾಂಕಿನಲ್ಲಿ ನೋಟನ್ನು ಮತ್ತೆ ಮತ್ತೆ ಎಣಿಸುವವರನ್ನೂ ನೋಡಿರುತ್ತೇವೆ. ಇನ್ನೂ ಕೆಲವರಿಗೆ ದೇವರನ್ನು ಅಥವಾ ಪ್ರೀತಿ ಪಾತ್ರರನ್ನು ನೋಡಿದ ಕೂಡಲೇ ಮನಸ್ಸಿನಲ್ಲಿ ಅವಾಚ್ಯ ಶಬ್ದಗಳು ಮೂಡುತ್ತದೆ. ಆದ ಕಾರಣ ತಪ್ಪಾಯಿತು ತಪ್ಪಾಯಿತು ಎಂದು ಅನೇಕ ಬಾರಿ ಕೈ ಮುಗಿಯುತ್ತಾರೆ. ಪ್ರೀತಿ ಪಾತ್ರರ ಬಗ್ಗೆಯೇ ಬೇಡದಿದ್ದರೂ ನಕಾರಾತ್ಮಕ ಭಾವನೆಗಳು ಮೂಡುವುದಲ್ಲಾ ಎಂದು ಗೊಂದಲ ಕಾಡುತ್ತದೆ.

ತಮ್ಮ ಬಗ್ಗೆ ತಮಗೇ ಮುಜುಗರ. ತಮ್ಮ ಈ ವರ್ತನೆ ಕಂಡು ಇತರರು ನಗುತ್ತಾರೆ ಹೀಗೆ ಮಾಡಬಾರದು, ಎಂದು ಎಷ್ಟು ಪ್ರಯತ್ನಿಸಿದರೂ ಕೂಡ, ಅವರ ಮೇಲಿನ ವರ್ತನೆಗಳು ಹತೋಟಿಯಲ್ಲಿರುವುದಿಲ್ಲ. ಭಯ, ಆತಂಕ, ತಮ್ಮ ಈ ವರ್ತನೆಗೆ ಕಾರಣ ತಿಳಿಯದೆ ಗೊಂದಲದಲ್ಲರುತ್ತಾರೆ. ಇದಕ್ಕೆ ಪರಿಹಾರ ಹಾಗು ಸಮಾಧಾನ ಹುಡುಕುತಿರುತ್ತಾರೆ.

 ಸೋಂಕಿನ ಬಗ್ಗೆ ನಿರಂತರ ಭಯ

ಸೋಂಕಿನ ಬಗ್ಗೆ ನಿರಂತರ ಭಯ

ಲಕ್ಷಣಗಳು:
ಸೋಂಕಿನ ಬಗ್ಗೆ ನಿರಂತರ ಭಯ
* ಪದೇ ಪದೇ ಕೈ ಕಾಲು ತೊಳೆದುಕೊಳ್ಳುವುದು,
* ದೀರ್ಘಕಾಲದ ತನಕ ಸ್ನಾನ ಮಾಡುವುದು
* ಮನೆ ಸ್ವಛ್ಛತೆಯ ಬಗ್ಗೆ ಆತಂಕ. ದಿನವಿಡಿ ಗುಡಿಸುತ್ತಿರುವುದು, ಒರೆಸುವುದು.

ಹಾನಿಯ ಬಗೆಗಿನ ಆತಂಕ:
* ಮನೆಯ ಬಾಗಿಲಿಗೆ ಬೀಗ ಹಾಕಿದ್ದೇನೋ ಇಲ್ಲವೋ ಎಂದು ಮತ್ತೆ ಮತ್ತೆ ಪರಿಶೀಲಿಸುವುದು.
* ಗ್ಯಾಸ್ ಆಫ್ ಮಾಡಿದ್ದೇನೋ ಇಲ್ಲವೋ ಎಂದು ಪರಿಶೀಲಿಸುವುದು.
* ಇತರರಿಗೆ ಹಾನಿ ಮಾಡುವ ಆಲೋಚನೆಗಳು.
* ಯಾವುದೇ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹೆದರಿಕೆ.

ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...

ಸಮರೂಪತೆ, ಸಂಗ್ರಹಣ

ಸಮರೂಪತೆ, ಸಂಗ್ರಹಣ

ಸಮರೂಪತೆ:
* ಪದೇ ಪದೇ ಬಟ್ಟೆ ಮಡಚುವುದು.
* ಕಾರ್ಪೆಟ್ ಮಡಿಸಿಕೊಂಡಿದ್ದರೆ ಮತ್ತೆ ಮತ್ತೆ ಸರಿಪಡಿಸುವುದು.
* ವಸ್ತುಗಳು ಇಲ್ಲಿಯೇ ಇದೇ ಸ್ಥಳದಲ್ಲಿಯೇ ಹೀಗೆಯೇ ಇರಬೇಕು ಎಂದು ಪದೇ ಪದೇ ಜೋಡಿಸುವುದು.
* ಪದೇ ಪದೇ ವಸ್ತುಗಳನ್ನು ಎಣಿಸುವುದು. ( ನಡೆಯುವಾಗ ಮೆಟ್ಟಿಲು ಲೆಕ್ಕ ಹಾಕುವುದು, ಗೋಡೆಯ ಟೈಲ್ಸ್ ಲೆಕ್ಕ ಹಾಕುವುದು, ಕೊಠಡಿಯಲ್ಲಿನ ದೀಪಗಳನ್ನು ಎಣಿಸುವುದು) ಎಣಿಕೆ ತಪ್ಪಿದರೆ ಏನೋ ತಳಮಳ. ಮತ್ತೆ ವಸ್ತುಗಳನ್ನು ಎಣಿಸುತ್ತಾರೆ.
* ಒಂದು ಕೈ ಒದ್ದೆಯಾಗಿದ್ದರೆ, ಮತ್ತೊಂದು ಕೈಯನ್ನೂ ಒದ್ದೆ ಮಾಡಿಕೊಳ್ಳುವುದು.

ಸಂಗ್ರಹಣ:
* ವಸ್ತುಗಳನ್ನು ಸಂಗ್ರಹಿಸುವುದು. ಬೇಡವಾದ ವಸ್ತುಗಳ ಸಂಗ್ರಹಣೆಯೇ ಹೆಚ್ಚು.
ಈ ರೀತಿಯ ಪುನರಾವರ್ತಿತ ನಡವಳಿಕೆಗಳು, ಅವರಿಗೆ ಪದೇ ಪದೇ ಕಾಡುವ ಆಲೋಚನೆಗಳಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು. ಆದರೆ ಸಕಾಲದಲ್ಲಿ ,ಸರಿಯಾದ ಚಿಕಿತ್ಸೆ ಪಡೆಯಬೇಕು.

ಕಾರಣಗಳು, ಚಿಕಿತ್ಸೆಗಳು?

ಕಾರಣಗಳು, ಚಿಕಿತ್ಸೆಗಳು?

ಕಾರಣಗಳು:
* ಅನುವಂಶೀಯತೆ
* ಮೆದುಳಿನಲ್ಲಿನ ರಾಸಾಯನಿಕ ಅಸಮತೋಲನ
* ಸಣ್ಣ ವಯಸ್ಸಿನಿಂದಲೂ ಕೆಲಸದಲ್ಲಿ ಬೆಳಸಿಕೊಂಡ ಅತಿಯಾದ ಅಚ್ಚುಕಟ್ಟುತನ, ಸ್ವಚ್ಛತೆ, ಬೆಳೆಯುತ್ತಾ ಒಸಿಡಿಗೆ ಕಾರಣವಾಗಬಹುದು.
* ಜೀವನದ ಹಲವು ಪ್ರಮುಖ ಬದಲಾವಣೆಗಳು ಉದಾಹರಣೆಗೆ ಹೊಸ ಕೆಲಸ, ಹೆಚ್ಚಿದ ಜವಾಬ್ದಾರಿ ಕಾಳಜಿ.
* ಕೆಲವು ಅನಿರೀಕ್ಷಿತ ಘಟನೆಗಳು : ಉದಾಹರಣೆಗೆ : ತಿಳಿಯದೆ ಜಿರಳೆ ಔಷಧ ಮುಟ್ಟಿದ ನಂತರ... ಅಸಹ್ಯ ಹಾಗು ವಿಷ ಎಂಬ ಭಯದಿಂದ ಪದೇ ಪದೇ ಕೈ ತೊಳೆದುಕೊಳ್ಳುವುದು.

ಚಿಕಿತ್ಸೆಗಳು?:
* ಒಸಿಡಿಯ ತೀವ್ರತೆಗೆ ಅನುಗುಣವಾಗಿ ಔಷಧ, ಚಿಕಿತ್ಸೆ ನೀಡಲಾಗುತ್ತದೆ.
* ಸಿಬಿಟಿ (CBT) cognitive behavioral therapy- ಇದರಿಂದ ಮನಸ್ಸಿಗೆ ಬೇಡದ ಆಲೋಚನೆಗಳು ಬಾರದಂತೆ, ಮೈ ಮನಸ್ಸು ಹತೋಟಿಗೆ ತರಬಹುದು.
* ಆಪ್ತಸಲಹೆ ಸಹಕಾರಿ.
* ಧ್ಯಾನ, ಸಂಗೀತ ಕೂಡ ಆತಂಕ, ಒತ್ತಡ ನಿವಾರಿಸುವಲ್ಲಿ ಪರಿಣಾಮಕಾರಿ.

ಹತೋಟಿಗೆ ಮೀರಿದ್ದು ಎಂದು ಅರಿಯಬೇಕು

ಹತೋಟಿಗೆ ಮೀರಿದ್ದು ಎಂದು ಅರಿಯಬೇಕು

ಒಸಿಡಿ ಇಂದ ಬಳಲುತ್ತಿರುವವರನ್ನು ನೋಡಿಕೊಳ್ಳುವಲ್ಲಿ ಸಹಕಾರಿಯಾಗುವ ಅಂಶಗಳು

* ಒಸಿಡಿ ಬಗ್ಗೆ ಒಸಿಡಿಇರುವವರಿಗೆ ಹಾಗು ಕುಟುಂಬವರಿಗೆ ಅಸ್ವಸ್ಥತೆಯ ಸ್ವರೂಪ ಹಾಗು ತೀವ್ರತೆಯ ಬಗ್ಗೆ ಅರಿವು ಇರಬೇಕು.
* ಒಸಿಡಿ ಇಂದ ಬಳಲುತ್ತಿರುವವರು ತಮ್ಮ ಸಮಸ್ಯೆ ಇಂದ ಇತರರಿಗೆ ಹೊರೆಯಾಗಿದ್ದೇವೆ ಎಂದು ಅವಮಾನ, ಖಿನ್ನತೆಗೆ ಒಳಗಾಗಿರುತ್ತಾರೆ.
* ಬೇಕೆಂದೇ ಹೀಗೆ ಮಾಡುತ್ತಾರೆ, ಎಷ್ಟು ಹೇಳಿದರೂ ಕೇಳುವುದಿಲ್ಲ ಎಂದುಕೊಳ್ಳುವುದಕ್ಕಿಂತ. ಪುನರಾವರ್ತಿತ ಕೆಲಸಗಳು ಅವರ ಹತೋಟಿಗೆ ಮೀರಿದ್ದು ಎಂದು ಅರಿಯಬೇಕು.
* ಹಾಗಾಗಿ ಓಸಿಡಿಯ ಬಗೆಗಿನ ತಪ್ಪು ಕಲ್ಪನೆ ಹೋಗಲಾಡಿಸಲು ,ಓಸಿಡಿ ಇರುವವರಿಗೆ ಹಾಗು ಕುಟುಂಬದವರಿಗೆ ಮಾನಸಿಕ ಶಿಕ್ಷಣ ಅಗತ್ಯ.
* ತಾಳ್ಮೆ ಖಂಡಿತ ಅಗತ್ಯ.
* ವೃತ್ತಿಪರರ, ನೆರವು ಪಡೆಯಿರಿ.
* ಔಷಧ ಹಾಗು ಚಿಕಿತ್ಸೆ ಗಳನ್ನು ಸರಿಯಾಗಿ ತೆಗೆದುಕೊಳ್ಳುವಂತೆ ನಿಗಾ ವಹಿಸಬಹುದು.
* ಅವರ ಧನಾತ್ಮಕ ಹಾಗು ಸಾಮರ್ಥ್ಯ ಅಂಶಗಳ ಬಗ್ಗೆ ಮಾತನಾಡುವುದು.
* ಔಷಧ ಹಾಗು ಮನೋಚಿಕಿತ್ಸೆ ಇಂದ ಒಸಿಡಿಯನ್ನು ಹತೋಟಿಗೆ ತರಬಹುದು.

English summary
What is obsessive-compulsive disorder (OCD) in Men-women and how to overcome it, health tips by Rekha Belvaadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X