• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏನಿದು ಇಳಿವಯಸ್ಸಿನಲ್ಲಿ ಕಾಡುವ Empty Nest Syndrome?

By ರೇಖಾ ಬೆಳವಾಡಿ, ಆಪ್ತಸಲಹೆಗಾರರು
|
Google Oneindia Kannada News

ಮಗ ಹೊರದೇಶದಲ್ಲಿ ಕೆಲಸಕ್ಕೆ ಸೇರಿದ್ದಾನೆ ಎಂಬ ಖುಷಿ ಒಂದು ಕಡೆ ತಾಯಿ ಶ್ಯಾಮಲಗೆ. ಆದರೆ ಏರ್ಪೋರ್ಟಿಗೆ ಹೋಗಿ ಬೀಳ್ಕೊಡುಗೆ ಕೊಟ್ಟು ಬಂದಾಗಿನಿಂದ ಮನಸ್ಸಿನಲ್ಲಿ ಏನೋ ತಳಮಳ. ಇಷ್ಟು ವರ್ಷ ಸಾಕಿ ಸಲುಹಿದ ಮಗ ಒಂದು ದಿನವೂ ತಮ್ಮನ್ನು ಬಿಟ್ಟಿರಲಿಲ್ಲ. ಈಗ ಮಗನನ್ನು ನೋಡಲು ಎಷ್ಟು ವರುಷಗಳು ಕಾಯಬೇಕೋ ಎಂಬ ಮನಸ್ಥಿತಿ. ಮಗ ಊಟ ತಿಂಡಿಯಲ್ಲಿ ಬಹಳ ನಾಜೂಕು, ಹೇಗಿರುತ್ತಾನೋ ಏನೋ ಅಲ್ಲಿ ಎಂಬ ಆತಂಕ ಇನ್ನೊಂದು ಕಡೆ. ದಿನನಿತ್ಯದ ಕೆಲಸದಲ್ಲಿ ಆಸಕ್ತಿ ಇಲ್ಲ. ಮೈ ಕೈ ಸೋಲು ಸುಸ್ತು ಶ್ಯಾಮಲಾಗೆ . ಶ್ಯಾಮಲ ದೇಹ ಪರಿಸ್ಥಿತಿ ಬಹಳ ಸೂಕ್ಷವಾಗಿ, ಮಗ ಒಂದೆರಡು ತಿಂಗಳಲ್ಲೇ ವಿದೇಶದಿಂದ ಹಿಂತಿರುಗಿ ಬರಬೇಕಾಯಿತು. ಮಗ ಇಲ್ಲೇ ಕೆಲಸಕ್ಕೆ ಸೇರಿದಾಗ ಶ್ಯಾಮಲಾ ಮತ್ತೆ ಮೊದಲಿನಂತೆ ಲವಲವಿಕೆಯಿಂದ ಇರುವಂತಾಯಿತು.

ಅಷ್ಟು ಮುದ್ದಾಗಿ ಬೆಳೆಸಿದ್ದ ಒಬ್ಬಳೇ ಮಗಳ ಮದುವೆ ಸಂಭ್ರಮ ತಂದೆತಾಯಿಗೆ. ಮದುವೆಯಾಗಿ ಬೇರೆ ಮನೆ ಸೇರಿದ ಮೇಲೆ , ಅಪ್ಪ ಚಂದ್ರು ಮಗಳ ಕೋಣೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಬಿ ಪಿ ಹೆಚ್ಚಾಗಿದೆ ಮಗಳನ್ನು ನೋಡಬೇಕು ಎಂಬ ತುಡಿತ. ಊರಿಂದ ಊರಿಗೆ ಪ್ರತಿ ವಾರ ಬರಲು ಹೇಗೆ ಸಾಧ್ಯ? ರಜೆ ಇತ್ತು ಆದರೂ ಮಗಳು ಏಕೋ ಈ ವಾರ ಮನೆಗೆ ಬರಲಿಲ್ಲ. ಏಕೋ ಏನೋ ಎಂಬ ಆತಂಕ. ಪದೇ ಪದೇ ಫೋನು ಮಾಡುವುದು, ಮಗಳ ಫೋನಿಗಾಗಿಯೇ ಕಾಯುತ್ತಾ ಕುಳಿತಿರುವುದು, ತಮ್ಮ ದಿನನಿತ್ಯದ ಕೆಲಸಗಳ ಕಡೆ ಅಷ್ಟಾಗಿ ಗಮನವಿರದಂತಾಯಿತು. ಆರೋಗ್ಯ ಕ್ಷೀಣಿಸುತ್ತಾ ಬಂದಿತು. ವೈದ್ಯಕೀಯ ಪರೀಕ್ಷೆಗಳಾಯಿತು. ಯಾವುದೇ ಮಾತ್ರೆಗಳು ದೇಹ ಪರಿಸ್ಥಿತಿಯನ್ನು ಸುಧಾರಿಸಲಾಗಲಿಲ್ಲ. ಸದಾ ಮಗಳ ಯೋಚನೆ. ಮಗಳು ಬಂದಾಗ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಆದರೆ ಮಗಳು ತವರಿನಲ್ಲಿಯೇ ಉಳಿದುಕೊಳ್ಳಲು ಸಾಧ್ಯವೇ?

ಈ ಈ "ಮೌನ" ಬಲು ಭಾರ; ಇಳಿಸಂಜೆಯಲಿ ಒಂಟಿತನ ಕೊಟ್ಟಿತೇ ಕೊರೊನಾ...

ಬಹಳ ಶಿಸ್ತಿನ ಜೀವನದಲ್ಲಿ ನಂಬಿದ್ದ ಶಾಂತಿ, ಯಾವಾಗಲೂ ಮಗನಿಗೆ ಮನೆ ಕೊಠಡಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಹೇಳುತ್ತಿದ್ದಳು. ಅಲ್ಲಲ್ಲೇ ಬಿದ್ದ ಆಟಿಕೆಗಳು, ಪುಸ್ತಕಗಳು, ಬಟ್ಟೆಗಳು ಕೋಪ ತರಿಸುತ್ತಿದ್ದವು. ತನಗಾಗಿ ಸಮಯವೇ ಕೊಡಲಾಗುವುದಿಲ್ಲ, ದಿನವಿಡೀ ಮನೆ ಮಗನ ಕೆಲಸವೇ ಆಗುತ್ತದೆ ಎಂಬ ಅಸಹನೆ. ಮಗ ಹತ್ತನೇ ತರಗತಿಯ ನಂತರ ಹಾಸ್ಟೆಲ್ ಸೇರಿದಾಗ, ಮನೆಯಲ್ಲಿ ಎಲ್ಲಾ ವಸ್ತುಗಳು ಅದರದರ ಜಾಗದಲ್ಲಿಯೇ ಸ್ವಚ್ಛವಾಗಿ ಒಪ್ಪ ಓರಣವಾಗಿದ್ದರೂ ಶಾಂತಿಯ ಮನಸ್ಸು ಗೊಂದಲದ ಗೂಡಾಗಿತ್ತು. ತನಗಾಗಿ ಬಹಳಷ್ಟು ಸಮಯ ಸಿಗುತ್ತಿದ್ದರೂ ಏನು ಮಾಡುವುದು ತೋಚುತ್ತಿಲ್ಲ. ಮಗನ ನೆನಪುಗಳೇ ಆವರಿಸಿತ್ತು. ಕೊಠಡಿ ಸ್ವಚ್ಛವಾಗಿದ್ದರೂ ನೆಮ್ಮದಿ ಇಲ್ಲ. ಕಾರಣರಹಿತ ಕೋಪ. ಮಗ ಎಂದಿಗೆ ಮನೆ ಬರುವನೋ ಎಂಬ ಅತಿಯಾದ ಕಾತುರ.

ಮೇಲಿನ ಉದಾಹರಣೆಗಳನ್ನು ಓದಿ

ಮೇಲಿನ ಉದಾಹರಣೆಗಳನ್ನು ಓದಿ

ಅನೇಕ ತಂದೆ ತಾಯಿಯರು ಮೇಲಿನ ಉದಾಹರಣೆಗಳನ್ನು ಓದಿ, ಶ್ಯಾಮಲಾ, ಚಂದ್ರು ಹಾಗು ಶಾಂತಿ ಅವರುಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬಹುದು. ಮಕ್ಕಳೂ ಸಹ ಅವರ ತಂದೆ ತಾಯಿಗಳನ್ನು ಈ ಸ್ಥಿತಿಯಲ್ಲಿ ಗುರುತಿಸಬಹುದು. ಈ ಸ್ಥಿತಿಗೆ "Empty Nest Syndrome?" ಅಥವಾ "ಖಾಲಿ ಗೂಡಿನ ಸಿಂಡ್ರೋಮ್" ಎನ್ನುತ್ತಾರೆ.

ಹಕ್ಕಿಗಳು ಕಷ್ಟ ಪಟ್ಟು ಒಂದೊಂದೇ ಹುಲ್ಲು ಕಡ್ಡಿ ಆರಿಸಿ , ಹೆಕ್ಕಿ ಅನೇಕ ದಿನಗಳ ಕಾಲ ಸುಭದ್ರವಾದ ಗೂಡುಕಟ್ಟುತ್ತವೆ. ಮೊಟ್ಟೆ ಇಟ್ಟು ಕಾವು ಕೊಟ್ಟು, ಜಾಗರೂಕತೆಯಿಂದ ತಮ್ಮ ಮೊಟ್ಟೆಗಳನ್ನು ಕಾಪಾಡುತ್ತವೆ. ಹಾವು, ಹದ್ದಿನ ಕಣ್ಣಿಗೆ ಬೀಳದಂತೆ ನಿಗಾ ವಹಿಸುತ್ತವೆ. ಮೊಟ್ಟೆ ಇಂದ ಮರಿಗಳು ಹೊರಬಂದ ಮೇಲೂ ಸಹ, ಮರಿಗಳ ರೆಕ್ಕೆ ಬಲಿತು ಸ್ವತಂತ್ರವಾಗಿ ಹಾರಾಡುವ ತನಕ, ಆಹಾರವನ್ನು ತಂದು ಗುಟುಕು ಕೊಡುತ್ತವೆ. ಗೂಡಿನ ತುಂಬಾ ಮರಿಗಳು ಮತ್ತು ಅವುಗಳ ಚಿಲಿಪಿಲಿ. ನಿಧಾನವಾಗಿ ಮರಿಗಳು ಹಾರಲು ಶಕ್ತರಾಗಿ, ರೆಕ್ಕೆ ಬಲಿತ ಮೇಲೆ ಗೂಡಿನಿಂದ ಹಾರಿ ಹೋಗುತ್ತವೆ. ಮತ್ತೆ ತಾಯಿ ಹಕ್ಕಿಯ ಬಳಿಯಾಗಲೀ ಅಥವಾ ಗೂಡಿಗಾಗಲೀ ಬಂದು ಸೇರುವುದಿಲ್ಲ. ಅವುಗಳು ಸ್ವತಂತ್ತರವಾಗಿ ಜೀವನ ನಡೆಸಲು ಶುರುಮಾಡುತ್ತದೆ. ಈಗ ಹಕ್ಕಿ ಗೂಡು ಖಾಲಿ ಖಾಲಿ.

ಸದಾ ತಮ್ಮ ಕಣ್ಣ ಮುಂದೆಯೇ ಇರಬೇಕು ಎಂಬ ವ್ಯಾಮೋಹ

ಸದಾ ತಮ್ಮ ಕಣ್ಣ ಮುಂದೆಯೇ ಇರಬೇಕು ಎಂಬ ವ್ಯಾಮೋಹ

ಹುಟ್ಟಿದಾಗಿನಿಂದ ಮಕ್ಕಳ ಬಗ್ಗೆ ಕಾಳಜಿ, ಪಾಲನೆ ಪೋಷಣೆಯಲ್ಲಿ ತಂದೆತಾಯಿಗಳು ತಮ್ಮ ಎಲ್ಲಾ ಸಮಯ ಹಾಗು ಶಕ್ತಿ ಮೀಸಲಿಡುತ್ತಾರೆ. . ಮಕ್ಕಳ ಜೀವನ ರೂಪಿಸುವುದಕ್ಕೆ ಹೆಚ್ಚಿನ ಮನ್ನಣೆ ಕೊಡುವುದು ಸಹಜ. ಮಕ್ಕಳನ್ನು ಬೆಳೆಸಿ ಪೋಷಿಸುವಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವುದು ಹೌದು. ಎಷ್ಟರ ಮಟ್ಟಿಗೆ ಎಂದರೆ ಅವರ ಊಟ, ಹಾಕುವ ಬಟ್ಟೆ, ಸೇರುವ ಶಾಲೆ, ಸ್ನೇಹಿತರು, ಆಯ್ಕೆ ಮಾಡುವ ವೃತ್ತಿ, ಮದುವೆ ಸಮಯದಲ್ಲಿ ಸಂಗಾತಿಯ ಆಯ್ಕೆ ಹೀಗೆ ಜೀವನದ ಪ್ರತಿ ಹಂತದಲ್ಲೂ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪೋಷಕರು ಮುಖ್ಯ ಪಾತ್ರ ವಹಿಸುತ್ತಾರೆ. ಮಕ್ಕಳೂ ಸಹ ಪೋಷಕರ ಮೇಲೆ ಅನೇಕ ವಿಷಯಗಳಲ್ಲಿ ಅವಲಂಬಿತರಾಗಿರುತ್ತಾರೆ.

ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!

ಮಕ್ಕಳು ದೊಡ್ಡವರಾದಂತೆ ಸಹಜವಾಗಿ, ಅವರ ಕೆಲಸ ಅವರೇ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಸ್ವತಂತ್ರವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ನಿಜ. ಮಕ್ಕಳ ಬೆಳವಣಿಗೆ ಕಂಡು ಪೋಷಕರೂ ಖುಷಿ ಪಡುತ್ತಾರೆ. ಆದರೆ ಮಕ್ಕಳು ಸದಾ ತಮ್ಮ ಕಣ್ಣ ಮುಂದೆಯೇ ಇರಬೇಕು ಎಂಬ ವ್ಯಾಮೋಹ ಬೆಳೆಯುತ್ತಾ ಹೋಗುತ್ತದೆ.

ಎಮ್ಟಿ ಸೆಸ್ಟ್ ಸಿಂಡ್ರೋಮ್ ಎಂದರೇನು?

ಎಮ್ಟಿ ಸೆಸ್ಟ್ ಸಿಂಡ್ರೋಮ್ ಎಂದರೇನು?

ಮಕ್ಕಳು ಮನೆ ಇಂದ, ತಂದೆತಾಯಿಗಳಿಂದ ದೂರವಾದಾಗ ಪೋಷಕರು ಅನುಭವಿಸುವ ಒಂದು ರೀತಿಯ ಖಾಲಿತನ, ಒಂಟಿತನ, ಮಕ್ಕಳನ್ನು ಕಳೆದುಕೊಳ್ಳುವ ಆತಂಕದ ಸ್ಥಿತಿಯೇ ಎಮ್ಟಿ ನೆಸ್ಟ್ ಸಿಂಟ್ರೋಮ್ ಅಥವಾ ಖಾಲಿ ಗೂಡಿನ ಸಿಂಡ್ರೋಮ್. ಪೋಷಕರಿಗೆ ಮಕ್ಕಳು ಬೆಳೆದು ದಡ್ಡವರಾದ ಮೇಲೆ ಸಮಯ ಬಂದಾಗ ಸಕಾರಣಗಳಾದ ಹೆಚ್ಚಿನ ವಿದ್ಯಾಭ್ಯಾಸ, ಕೆಲಸ, ಮದುವೆ ಇಂದ ಮಕ್ಕಳು ತಮ್ಮಿಂದ ದೂರವಾಗುತ್ತಾರೆ ಎಂದು ಮೊದಲೇ ತಿಳಿದ್ದರೂ ಹಿಡಿತ ರಹಿತ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೂ ತಮ್ಮ ಎಲ್ಲಾ ಚಟುವಟಿಕೆಗಳು ಮಕ್ಕಳಿಗಾಗಿಯೇ ಎಂದು ತಿಳಿದು ಜೀವನ ನಡೆಸುತ್ತಾರೆ, ಆದರೆ ಇದ್ದಕ್ಕಿದ್ದಂತೆ ಮಕ್ಕಳ ಬದುಕಿನಲ್ಲಿ ಆಗುವ ಬದಲಾವಣೆಗಳು ತಮ್ಮ ಜೀವನಕ್ರಮದ ಮೇಲೂ ಪರಿಣಾಮ ಬೀರಿದಾಗ ದಿಕ್ಕುತೋಚದಂತಾಗುತ್ತದೆ. ಖಾಲಿತನ ಆವರಿಸುತ್ತದೆ. ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುವುದು. ಇದು ಜೀವನದ ಬದಲಾವಣೆಗಳನ್ನು ಹೊಂದಿಕೊಳ್ಳುವಲ್ಲಿನ ಅಸ್ವಸ್ಥತೆ. ಮಾನಸಿಕ ಸ್ವಾಸ್ಥ್ಯ ಕಾಪಾಡಲು ಚಿಕಿತ್ಸೆ ಹಾಗು ಆಪ್ತಸಲಹೆ ಕೂಡ ಸಹಕಾರಿ.

ಲಕ್ಷಣಗಳು, ಕಾರಣಗಳು

ಲಕ್ಷಣಗಳು, ಕಾರಣಗಳು

ಲಕ್ಷಣಗಳು
*ನಿರಂತರ ದಃಖ
* ದೈಹಿಕ ಆರೋಗ್ಯದಲ್ಲಿ ಏರುಪೇರು
* ಒತ್ತಡ
* ಖಿನ್ನತೆ
* ನಕಾರಾತ್ಮಕ ಚಿಂತನೆಗಳು
* ಅತಿಯಾದ ಕೋಪ
* ಜಿಗುಪ್ಸೆ
* ನಿದ್ರಾಹೀನತೆ
* ಜೀವನ ಉದ್ದೇಶರಹಿತ ಅಥವಾ ಗುರಿ ರಹಿತವಾದದು ಎಂಬ ಯೋಚನೆಗಳು

ಹಿರಿಯ ನಾಗರಿಕರಿಗೆ ಸುಗಮ ಜೀವನದ ಖಾತ್ರಿ ಪಡಿಸುವ PPOಹಿರಿಯ ನಾಗರಿಕರಿಗೆ ಸುಗಮ ಜೀವನದ ಖಾತ್ರಿ ಪಡಿಸುವ PPO

ಕಾರಣಗಳು:
• ಮಕ್ಕಳ ಮೇಲಿನ ವ್ಯಾಮೋಹ
• ಬದಲಾವಣೆ, ಪರಿಸ್ಥಿತಿಗೆ ಒಗ್ಗದ ಮನಸ್ಸು.
• ಅತಿಯಾದ ರಕ್ಷಣಾ ಮನೋಭಾವ
• ಮಕ್ಕಳ ಮೇಲಿನ ಹಿಡಿತ, ಅಧಿಕಾರ ತಪ್ಪಿ ಹೋಗುವ ಭಯ
• ಹೆಚ್ಚುತ್ತಿರುವ ( ಸಿಂಗಲ್ ಪೇರೆಂಟಿಂಗ್) ಒಬ್ಬರೇ ಪೋಪಕ ಪೋಷಣೆ ಇಂದಾಗಿ ಮಕ್ಕಳ ಮೇಲೆ ಹೆಚ್ಚಿನ ಭಾವನಾತ್ಮಕ ಅವಲಂಬನೆ.
• ಎಷ್ಟೇ ಉತ್ತಮವಾಗಿ ಪಾಲನೆ ಪೋಷಣೆ ಮಾಡಿದ್ದರೂ ಇನ್ನೂ ಉತ್ತಮವಾಗಿ ಸಲಹಬಹುದಿತ್ತು, ಕೈ ಮೀರಿ ಪ್ರಯತ್ನಿಸಬಹುದಿತ್ತು, ಮಕ್ಕಳು ಏನೋ ಒಂದನ್ನು ಬಯಸಿದಾಗ ಒದಗಿಸಲಾಗಲಿಲ್ಲ ಎಂಬ ಅಪರಾಧ ಮನೋಭಾವ.
• ಮಕ್ಕಳ ಪಾಲನೆಯನ್ನೋ ಸರಿಯಾಗಿ ಮಾಡಿದ್ದೇವೋ ಇಲ್ಲವೋ, ಮಕ್ಕಳು ಸ್ವತಂತ್ರವಾಗಿ ಹೊರ ಪ್ರಪಂಚವನ್ನು ಹೇಗೆ ಎದುರಿಸುತ್ತಾರೋ ಎಂಬ ಸಂಶಯ ಮತ್ತು ಆತಂಕ.
• ಮಕ್ಕಳ ದೈಹಿಕ, ಮಾಸಸಿಕ ಹಾಗು ಆರ್ಥಿಕ ಪಾಲನೆ ಪೋಷಣೆಯಲ್ಲಿ ಸಂಗಾತಿಗಳು, ನಮ್ಮ ಬೇಕು ಬೇಡಗಳನ್ನು ಬದಿಗಿಟ್ಟಿರುತ್ತಾರೆ, ಅವರ ಮಾತು ಕತೆ ಎಲ್ಲಾ ಹೆಚ್ಚಿನ ಸಮಯ ಮಕ್ಕಳ ವಿಷಯದ ಸುತ್ತವೇ ಸುಳಿಯುತ್ತದೆ, ಸಂಗಾತಿಗಳಿಗೆ ತಾವಿಬ್ಬರೇ ಭಾವನಾತ್ಮಕವಾಗಿ ಒಬ್ಬರಿಗೊಬ್ಬರು ಸ್ಪಂದಿಸಲಾಗದ, ಬೆಂಬಲಿಸಕ್ಕಾಗದ ಮನಸ್ಥಿತಿ ಎದುರಾಗಬಹುದು. ಇದೂ ಸಹ ಒಂಟಿತನ ಹೆಚ್ಚುಲು ಕಾರಣ.

ಹೊರಬರುವಲ್ಲಿ ಸಹಕಾರಿಯಾಗುವ ಕ್ರಮಗಳು

ಹೊರಬರುವಲ್ಲಿ ಸಹಕಾರಿಯಾಗುವ ಕ್ರಮಗಳು

ಎಮ್ಟಿ ನೆಸ್ಟ್ ಸಿಂಡ್ರೋಮ್ ಇಂದ ಹೊರಬರುವಲ್ಲಿ ಸಹಕಾರಿಯಾಗುವ ಕ್ರಮಗಳು.

• ಮಕ್ಕಳು ದೂರವಿರುವ ಕಾರಣ ಹಾಗು ಉದ್ದೇಶವನ್ನು ಅರ್ಧ ಮಾಡಿಕೊಳ್ಳಿ
• ವಾಸ್ತವ ಜೀವನ ಸಂದರ್ಭಗಳನ್ನು ಒಪ್ಪಿಕೊಳ್ಳಿ.
• ನೈಸರ್ಗಿಕ ಬದಲಾವಣೆ ಹಾಗೂ ಸಂದರ್ಭಗಳನ್ನು ಸಹಜವಾಗಿ ಸ್ವೀಕರಿಸಿ
• ಮಕ್ಕಳ ಯೋಚನೆ, ಕೆಲಸ, ಸ್ವಾತಂತ್ರ್ಯವನ್ನು ಗೌರವಿಸಿ.
• ಮಕ್ಕಳೊಂದಿಗೆ ಫೋನಿನಲ್ಲಿ ಮಾತನಾಡಿ, ವಿಡಿಯೋ ಕರೆಗಳನ್ನೂ ಮಾಡಬಹುದು.
• ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ.
• ಧ್ಯಾನ, ಯೋಗ ಭಾವೋದ್ವೇಗಗಳನ್ನು ನಿಯಂತ್ರಿಸುವಲ್ಲಿ ಸಹಕಾರಿ.
• ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದರಿಂದ ದೇಹ ಮನಸ್ಸೂ ಎರಡೂ ಉಲ್ಲಾಸವಾಗಿರುತ್ತವೆ.
• ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ತೋಟಗಾರಿಕೆ, ಹೊಸ ರುಚಿ, ಕ್ರೀಡೆ , ಪುಸ್ತಕ, ಬರವಣಿಗೆ ಹೀಗೆ.
• ಸ್ನೇಹಿತರೊಂದಿಗೆ ಮಾತನಾಡಿ. ಭಾವನೆಗಳನ್ನು ಹಂಚಿಕೊಳ್ಳಿ. .
• ನಿಮ್ಮ ಹಾಗು ಸಂಗಾತಿಯ ಕಡೆ ಹೆಚ್ಚಿನ ಗಮನ ಹರಿಸಿ. ಸಮಯವನ್ನು ಉತ್ತಮಗೊಳಿಸಿ.
• ಆರೋಗ್ಯದ ಕಡೆ ಗಮನ ಹರಿಸುವುದು ಒಳಿತು.

ಮಕ್ಕಳ ಪಾತ್ರ
• ತಂದೆ ತಾಯಿಯ ಕಾಳಜಿ ಅರ್ಥ ಮಾಡಿಕೊಳ್ಳಿ
• ಕೇಳುವ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿ.
• ತಂದೆ ತಾಯಿಗಳಿಗಾಗಿ ಉತ್ತಮ ಗುಣಮಟ್ಟದ ಸಮಯ ಮೀಸಲಿಡಿ.
• ನಿಮ್ಮ ಕೆಲಸ ಹಾಗು ಚಟುವಟಿಕೆಗಳ ಬಗ್ಗೆ ಅವರ ಬಳಿ ಹಂಚಿಕೊಳ್ಳಿ.
• ಇಂತಹ ದಿನ ಬರುವೆ ಎಂದು ತಿಳಿಸಿದ್ದರೆ, ಭೇಟಿ ಮಾಡಲು ಆದಷ್ಟು ಪ್ರಯತ್ತಿಸಿ.
• ತಂದೆ ತಾಯಿಯ ಮೇಲಿನ ಪ್ರೀತಿಯು ಮಾತಿನಲ್ಲಿ ವ್ಯಕ್ತಪಡಿಸಿ. ಇದೂ ಸಹ ಮುಖ್ಯ.
• ಅವರ ಅನಿಸಿಕೆ ಅಭಿಪ್ರಾಯ, ಸಲಹೆಗಳು ಮುಖ್ಯ ಎನ್ನುವುದನ್ನು ಮನದಟ್ಟು ಮಾಡಿ.
• ಏನಾದರೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರ ಬಳಿಯೂ ಚರ್ಚಿಸಿ ಅಥವಾ ಕನಿಷ್ಟ ಪಕ್ಷ ತಿಳಿಸಿ ನಿರ್ಧರಿಸಿ.

ಮುಕ್ತ ಸಂವಹನ, ವಾಸ್ತವ ಸಂದರ್ಭಗಳನ್ನು ಸ್ವೀಕರಿಸುವ ರೀತಿ ಹಾಗು ಜೀವನದ ಬದಲಾವಣೆಗಳಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಬದುಕಿನ ಸವಾಲುಗಳನ್ನು ಎದುರಿಸಲು ಸಹಕಾರಿ.

English summary
Desc: What is empty nest syndrome? Find out how it can affect parents, what you can do to prepare for the transition and how to cope. Read on article by Rekha Belvadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X