ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Body shaming ಭಯಬಿಡಿ; ಭಿನ್ನತೆಗಳನ್ನು ಸಹಜವಾಗಿ ಒಪ್ಪಿಕೊಳ್ಳಿ

By ರೇಖಾ ಬೆಳವಾಡಿ ಆಪ್ತ ಸಲಹೆಗಾರರು
|
Google Oneindia Kannada News

ಶ್ವೇತ ಅತ್ಯಂತ ಚಟುವಟಿಕೆಯ ಹುಡುಗಿ. ಮಾತಿನಲ್ಲಿ ಚುರುಕು. ಮನೆಯ ಪ್ರತಿ ಗೋಡೆಗಳು ಅವಳ ಬಣ್ಣ ಬಣ್ಣದ ಪೇಂಟಿಂಗ್‌ನಿಂದ ತುಂಬಿದ್ದವು. ಯಾರಾದರೂ ಮನೆಗೆ ಬಂದರೆ ಮೌನವಾಗಿಬಿಡುತ್ತಾಳೆ. ತನ್ನ ಕೋಣೆ ಇಂದ ಹೊರ ಬರುವುದೇ ಇಲ್ಲ. ಯಾವುದೇ ಸಮಾರಂಭಗಳಿಗೂ ಹೊರ ಹೋಗುವುದೇ ಇಲ್ಲ. ಕಾರಣ ಅವಳ ಶ್ಯಾಮಲ ಮೈ ಬಣ್ಣ. ತನ್ನ ಅಕ್ಕ ಬಿಳುಪಾಗಿದ್ದಾಳೆ, ತನ್ನ ಬಣ್ಣ ಏಕೆ ಹಾಗಿಲ್ಲಾ? ಎಂದು ಅಳುತ್ತಾಳೆ. ತನಗೆ ಶ್ವೇತ ಎಂದು ಯಾಕೆ ಹೆಸರಿಟ್ಟರಿ ಎಂದು ಆಗಾಗ ತಂದೆ ತಾಯಿಗಳೊಂದಿಗೆ ಜಗಳವಾಡುತ್ತಿರುತ್ತಾಳೆ. ಟಿವಿಯಲ್ಲಿ ಬರುವ ಎಲ್ಲಾ ಸೌಂದರ್ಯ ವರ್ಧಕಗಳನ್ನು ಮರುದಿನವೇ ತಂದು ಬಳಸುತ್ತಾಳೆ.

ಹರ್ಷನನ್ನು ಕಂಡರೆ ಎಲ್ಲರಿಗೂ ಇಷ್ಟ. ಸ್ನೇಹಜೀವಿ. ಡುಮ್ಮ ಎಂದೇ ಎಲ್ಲರೂ ಕರೆಯೋದು. ಯಾರು ಏನು ಹೇಳಿದರೂ ನಗು ನಗುತ್ತಾ ಇರುತ್ತಾನೆ. ದಪ್ಪಗಿರುವ ಕಾರಣ ಎಲ್ಲೇ ಹೋದರೂ ಎಲ್ಲರಿಗೂ ಅವನು ಮಾಡುವ ಊಟದ ಮೇಲೆಯೇ ಕಣ್ಣು. ಸಂಕೋಚದಿಂದಲೇ ಊಟ ಮಾಡುತ್ತಾನೆ. ಒಳಗೊಳಗೇ ನೋವು ಅನುಭವಿಸಿದರೂ, ತನ್ನ ಆಕಾರದ ಬಗ್ಗೆ ತಾನೇ ಲೇವಡಿ ಮಾಡುತ್ತಾ, ಇತರರನ್ನೂ ನಗಿಸಿ ತಾನೂ ನಗುತ್ತಾನೆ.

 ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ... ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...

ಗಿರೀಶ್‌ಗೆ ಒಳ್ಳೆಯ ಕೆಲಸ. ಮದುವೆ ಎಂದರೆ ಕೋಪ. ಸಪೂರ ದೇಹ ಇರುವ ಕಾರಣ , ತಿರಸ್ಕೃತನಾದರೆ ಎಂಬ ಭಯ. ದಿನ ನಿತ್ಯವೂ ಮಾರುಕಟ್ಟೆಯಲ್ಲಿ ಬರುವ ಪ್ರೋಟೀನ್ ಪುಡಿಗಳನ್ನು ಸೇವಿಸುತ್ತಾನೆ. ಆರೋಗ್ಯದಲ್ಲಿ ಏರುಪೇರು ಕಂಡಾಗ ಖಿನ್ನತೆಗೆ ಒಳಗಾಗುತ್ತಾನೆ. ತನ್ನ ಭಾವನಾತ್ಮಕ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹೇಳಿಕೊಂಡರೆ ಎಲ್ಲಿ ಎಲ್ಲರೂ ನಗುವರೋ ಎಂಬ ಆತಂಕ.

ನಮ್ಮ ಸುತ್ತಮುತ್ತ ಇಂತಹ ಅನೇಕರನ್ನು ನಾವು ಕಾಣಬಹುದು. ಮೈಬಣ್ಣ, ಎತ್ತರ, ಗಾತ್ತ, ತೂಕ, ಹೀಗೆ ತಮ್ಮ ದೇಹದ ಬಗೆಗಿನ ಕೀಳರಿಮೆ ಇಂದ ಬದುಕುತ್ತಿರುತ್ತಾರೆ.

 ಕಾರಣವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ

ಕಾರಣವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ

ಶ್ವೇತ ಏಕೋ ಯಾರ ಜೊತೆಯೂ ಮಾತನಾಡುವುದಿಲ್ಲ. "She looks reserved" ಎಂದುಕೊಳ್ಳುವ ಮೊದಲು, ಅದರ ಹಿಂದಿನ ಕಾರಣವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ. ಮಗು ಹುಟ್ಟಿದಾಗ , ಮಗು ಆರೋಗ್ಯವಾಗಿದೆ ಎಂದು ತಿಳಿದು ಖುಷಿ ಪಡುವುದಕ್ಕಿಂತಲೂ ಹೆಚ್ಚಾಗಿ, "ಯಾಕೋ ಮಗುವಿನ ಬಣ್ಣ ಸುಮಾರು, ಕಪ್ಪು" ಎಂದಾಗ ತಂದೆ ತಾಯಿಗಳಿಗೆ, ಧಸಕ್ ಎಂದು ಒಂದಡಿ ಭೂಮಿಯೊಳಗೆ ಕುಸಿದಂತಾಗುತ್ತದೆ. ಮುಂದೆ, ಬೇರೆಯವರು ಮಗುವಿನ ಬಗ್ಗೆ ಏನನ್ನಾದರೂ ಹೇಳುವುದಕ್ಕೂ ಮೊದಲೇ, ತಂದೆ ತಾಯಿಗಳೇ... ಮಗು ಸ್ವಲ್ಪ ಕಪ್ಪು ಎಂದು ಬಿಡುತ್ತಾರೆ. ಮಗು ತನ್ನ ಬಣ್ಣದಿಂದಲೇ ಪ್ರಪಂಚಕ್ಕೆ ಪರಿಚಿತವಾಗುತ್ತದೆ.

ಬದುಕಿನ ವಿವಿಧ ಬಣ್ಣಗಳನ್ನುಪರಿಚಯಿಸುವ ಮೊದಲೇ ಬರೀ "ಕಪ್ಪು ಬಿಳುಪಿಗೆ"ನ ಪ್ರಪಂಚಕ್ಕೆ ಮಗುವನ್ನೇಕೆ ನಿರ್ಬಂಧಿಸಬೇಕು! ಈ ರೀತಿಯಾಗಿ ಸ್ಟ್ಯಾಂಪ್ ಒತ್ತಿ ಪ್ತತ್ಯೇಕಿಸಿಬಿಟ್ಟರೆ ಎಲ್ಲರ ಹಾಗೇ ನಾನೂ ಎಂಬ ಭಾವನೆ ತಾನೆ ಹೇಗೆ ಬರಲುಸಾಧ್ಯ? ಈ ಹೋಲಿಕೆಯು ತನ್ನ ಅಕ್ಕ ತಂಗಿಯರ ಸಂಬಂದದ ಮೇಲೂ ಪರಿಣಾಮ ಬೀರಿದೆ. ಸ್ವಚ್ಛಂದ ಮನಸ್ಸಿನ ಶ್ವೇತಾಳ ಇತರ ಗುಣಗಳು ಏಕೆ ಗುರುತಿಸಲಾಗುವುದಿಲ್ಲ?

ಏನಿದು ಇಳಿವಯಸ್ಸಿನಲ್ಲಿ ಕಾಡುವ Empty Nest Syndrome?ಏನಿದು ಇಳಿವಯಸ್ಸಿನಲ್ಲಿ ಕಾಡುವ Empty Nest Syndrome?

 ಬೇರೆಯವರೊಂದಿಗೆ ಹೋಲಿಸಿಕೊಂಡು ಖಿನ್ನತೆ

ಬೇರೆಯವರೊಂದಿಗೆ ಹೋಲಿಸಿಕೊಂಡು ಖಿನ್ನತೆ

ಹಕ್ಕಿಯಂತೆ ಹಾರಾಡುವ ಸಮಯದಲ್ಲಿ ತನ್ನನ್ನು ತಾನು ಪಂಜರ ಬಂಧಿಯನ್ನಾಗಿಸಿಕೊಂಡಿರುವ ಶ್ವೇತಾ ಅಂತಹ ಅನೇಕರು, ಮಾರುಕಟ್ಟೆಯಲ್ಲಿ ಸಿಗುವ ಹಾನಿಕಾರಕ ಕಾಂತಿವರ್ಧಕಗಳನ್ನು ಬಳಸಿದಾಗ, ಚರ್ಮ ಬಿಳುಚಿಕೊಂಡು ಸುಟ್ಟು ಹೋದಂತಾಗಿರುತ್ತದೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಾರೆ. ಚರ್ಮದ ಬಣ್ಣದಲ್ಲಿ ವ್ಯತ್ಯಾಸವೇನೂ ಕಂಡು ಬರದೆ ಇದ್ದಾಗ ಮತ್ತಷ್ಟೂ ದುಃಖಿತರಾಗುತ್ತಾರೆ. ತಮ್ಮನ್ನು ತಾವು ಬೇರೆಯವರೊಂದಿಗೆ ಹೋಲಿಸಿಕೊಂಡು ಖಿನ್ನತೆಗೆ ಒಳಗಾಗಿಬಿಡುತ್ತಾರೆ. ತಮ್ಮಲ್ಲಿನ ಅನೇಕ ಗುಣಗಳು ಪ್ರತಿಭೆಗಳಿದ್ದರೂ ಗುರುತಿಸದೆ , ಯಾವಾಗಲೂ ತನ್ನ ಬಣ್ಣದ ಬಗ್ಗೆಯೇ ವಿಚಾರಿಸುವ ಜನರಿಂದ ದೂರವಾಗಿಬಿಡುತ್ತಾರೆ. ಒಂದೇ ಮರದ ಹಣ್ಣುಗಳೂ ಸಹ ಬಣ್ಣ, ರುಚಿಯಲ್ಲಿ ವ್ಯತ್ತಾಸವಿರುತ್ತದೆ. ಹೀಗಿರುವಾಗ ಹೋಲಿಕೆ ಥರವಲ್ಲ ಎಂದು ತಿಳಿದುಕೊಳ್ಳುವುದು ಒಳಿತು. ಭಿನ್ನತೆಯನ್ನು ಸಕಾರಾತ್ಮಕವಾಗಿ ಅಪ್ಪಿಕೊಳ್ಳುವ ( embrace) ಮನೋಭಾವ ಬೆಳೆಸಿಕೊಳ್ಳಬೇಕು.

 ಪ್ರತಿರೋಧ ವ್ಯಕ್ತ ಪಡಿಸುವುದಿಲ್ಲವೇಕೆ?

ಪ್ರತಿರೋಧ ವ್ಯಕ್ತ ಪಡಿಸುವುದಿಲ್ಲವೇಕೆ?

ನೀವು, ಕನ್ನಡಕ ಹಾಕುತ್ತೀರಿ ಎಂದಿಟ್ಟುಕೊಳ್ಳಿ. ನಿಮ್ಮ ಸ್ನೇಹಿತರು ನಿಮ್ಮನ್ನು ಸೋಡ ಗ್ಲಾಸ್ ಎಂದು ಕರೆಯಲು ಪ್ರಾರಂಭಿಸಿದಾಗ, ನಿಮ್ಮ ದೇಹದ ಕೊರತೆ ಯೊಂದನ್ನು ಪದೇ ಪದೇ ನೆನಪಿಸಿದಂತೆ ಅಲ್ಲವೇ? ಹೆಸರು ಯಾವುದೇ ಮನುಷ್ಯನ ಗುರುತು, ಅಸ್ತಿತ್ವದ ಪ್ರತೀಕ. ಒಬ್ಬರನ್ನು ಅವರ ಹೆಸರಿನಿಂದ ಗುರುತಿಸಿವುದು ನಾವು ಅವರಿಗೆ ಕೊಡುವ ಮೊದಲ ಕನಿಷ್ಟ ಗೌರವ. ಪ್ರೀತಿ ಇಂದ ಅಡ್ಡ ಹೆಸರೂ ಇರಬಹುದು ಆದರೆ ಒಬ್ಬರನ್ನು ಅವರ ದೈಹಿಕ ಭಿನ್ನತೆಯನ್ನು ಕೊರತೆ ಎಂಬಂತೆ, ಗುರುತಿಸುವುದು ಎಷ್ಟರ ಮಟ್ಟಿಗೆ ಸರಿ?

ಇನ್ನೊಂದು ದೃಷ್ಟಿಯಿಂದ ನೋಡಿದರೆ, ಹರ್ಷನಂತೆ, ಬೇರೆಯವರು ನಿಮ್ಮನ್ನು ಯಾವುದೇ ಹೆಸರಿನಿಂದ ಕರೆಯುತ್ತಿದ್ದರೂ, ಒಳಗೊಳಗೆ ಬೇಸರ ಇದ್ದರೂ, ನಕ್ಕು, ತಮ್ಮನ್ನು ತಾವೇ ಲೇವಡಿ ಮಾಡಿಕೊಂಡರೆ ನಾವೇ ಇತರರಿಗೆ, ಉತ್ತೇಜಿಸಿದ ಹಾಗೆ ಅಲ್ಲವೇ? ಯಾವುದೇ ರೀತಿಯ ಪ್ರತಿರೋಧ ವ್ಯಕ್ತ ಪಡಿಸುವುದಿಲ್ಲವೇಕೆ?

 ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ

ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ

ನಮ್ಮ ಕುಟುಂಬದಲ್ಲಿ ಎಲ್ಲರೂ ನನ್ನ ಹಾಗೆ ಎಂದುಕೊಂಡು, ಸುಮ್ಮನಾಗುವುದಕ್ಕಿಂತ, ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸಣ್ಣ ಬದಲಾವಣೆಗಳಾದ ಸಮತೋಲನ ಆಹಾರ, ದಿನನಿತ್ಯದ ವ್ಯಾಯಾಮ, ಒಳ್ಳೆಯ ಚಿಂತನೆಯನ್ನು ಬೆಳೆಸಿಕೊಂಡರೆ ಒಳ್ಳೆಯದು. ತಮ್ಮ ಬಗ್ಗೆ ಗೌರವ ಹೆಚ್ಚುತ್ತದೆ, ಆತ್ಮವಿಶ್ವಾಸ ಬೆಳೆಯುತ್ತದೆ. ಕೀಳರಿಮೆ ಇಂದ ಹೊರ ಬರಲು ಸಾಧ್ಯ. ದೇಹದ ಆರೋಗ್ಯ ಹಾಗು ಮಾನಸಿಕ ಆರೋಗ್ಯವೂ ಹೆಚ್ಚುತ್ತದೆ. ದೈನಂದಿನ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಯುತ್ತದೆ.

ದೇಹ ಬೆಳೆಸುವುದಕ್ಕೆ ಪ್ರೋಟೀನು ಪೌಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಮ್ಮೆ ಅಂತಹ ಪೌಡರ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಮುಂದುವರೆಸಲೇ ಬೇಕು. ಅಲ್ಲದೇ ದುಬಾರಿ. ಮೊದಮೊದಲು ಉತ್ಸುಕರಾಗಿ ತೆಗೆದುಕೊಳ್ಳುತ್ತಾರೆ. ಆದರೆ ಅದು ಬರಬರುತ್ತಾ ದೇಹದ ಮೇಲೆ ದುಷ್ಪರಿಣಾಮ ಬೀರಿ, ಅನೇಕರ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಹಾಗೆಯೇ ತಿರಸ್ಕಾರ, ಅಪಮಾನದ ನೋವಿನಿಂದಾಗಿ ಗಿರೀಶ್ , ಏನಾದರೂ ಮಾಡಿ ಸಮಾಜದಿಂದ ಸೈ ಎನಿಸಿ ಕೊಳ್ಳಲು, ಅವರಲ್ಲಿ ತಾನೂ ಒಬ್ಬನಾಗಲು , ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿಲ್ಲವೇ?

 ಬದಲಾವಣೆಗಳನ್ನು ಅರ್ಥೈಸಿಕೊಳ್ಳಬೇಕು

ಬದಲಾವಣೆಗಳನ್ನು ಅರ್ಥೈಸಿಕೊಳ್ಳಬೇಕು

ಇನ್ನೂ ಅನೇಕ ರೂಪದರ್ಶಿಯರು ಆಹಾರವನ್ನು ಸರಿಯಾಗಿ ಸೇವಿಸದೇ ಅಪೌಷ್ಟಿಕರಾಗಿರುತ್ತಾರೆ. (ಅನೋರೆಕ್ಸಿಯಾ ) ಪ್ರಜ್ಞಾಪೂರ್ವಕವಾದ ಹಸಿವಿನಿಂದ ಬಳಲುತ್ತಿರುತ್ತಾರೆ. ದಪ್ಪವಾದರೆ, ಚೆಲುವು ಮಾಸಿದರೆ, ಅವಕಾಶಗಳು ಸಿಗುವುದಿಲ್ಲ ಎಂಬ ಭಯದಲ್ಲಿ ದೇಹ ದಂಡಿಸಿಕೊಳ್ಳುತ್ತಾರೆ. ಖಿನ್ನತೆ ಆವರಿಸುತ್ತದೆ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನೆರವು ಪಡೆಯುವಲ್ಲಿ ಹಿಂಜರಿಯಬಾರದು.

ವ್ಯಾಪಕ ಮಟ್ಟದ ಬಾಡಿ ಶೇಮಿಂಗ್ ಋಣಾತ್ಮಕ, ಬಾವನಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಆತ್ಮಗೌರವ ಕುಗ್ಗುವುದು, ಆತಂಕ (anxiety),ತಿನ್ನುವ ಖಾಯಿಲೆಗಲು( eating disorder), ಖಿನ್ನತೆಗಳು ಹೆಚ್ಚಾಗುತ್ತದೆ. ಇದು ಜೀವನದ ಅನೇಕ ಚಟುವಟಿಕೆಗಳನ್ನು ನಿರ್ವಹಿಸಲು ಅಡ್ಡಿಯಾಗುತ್ತದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಆಪ್ತಸಮಾಲೋಚನೆಯು ಸಹಕಾರಿಯಾಗುತ್ತದೆ.

ಇನ್ನು ಮಹಿಳೆಯರಿಗೆ ಮಗುವಾದಾಗ, ದೇಹದಲ್ಲಾಗುವ ತೂಕ, ಗಾತ್ರದಲ್ಲಿನ ಬದಲಾವಣೆ, ಸ್ಟ್ರೆಚ್ ಮಾರ್ಕ್ಸ್‌ಗಳು ಸಹಜ. ಮೆನೋಪಾಸ್ ಹಂತದಲ್ಲಿಯೂ ದೈಹಿಕ ಹಾಗು ಮಾನಸಿಕ ಬದಲಾವಣೆಗಳಾಗುತ್ತದೆ. ಇಂತಹ ಬದಲಾವಣೆಗಳು ಅವರನ್ನು ಸೂಕ್ಷವನ್ನಾಗಿಸಬಹುದು. ತನ್ನಲ್ಲಾಗುತ್ತಿರುವ ಬದಲಾವಣೆಗಳನ್ನು ಅರ್ಥೈಸಿಕೊಳ್ಳಲು ಸಮಯ ಹಿಡಿಯುತ್ತದೆ.

 ಮನೆಯವರ ಸಕಾರಾತ್ಮಕತೆ, ಬೆಂಬಲ ಬಹಳ ಮುಖ್ಯ

ಮನೆಯವರ ಸಕಾರಾತ್ಮಕತೆ, ಬೆಂಬಲ ಬಹಳ ಮುಖ್ಯ

ಈ ಹಂತದಲ್ಲಿ body shaming, ತಿರಸ್ಕಾರ, ನೋವು, ಹತಾಶೆ ಬದುಕನ್ನು ಘಾಸಿಗೊಳೊಸಬಹುದು. ಇಂತಹ ಸಂದರ್ಭಗಳಲ್ಲಿ ಮನೆಯವರ, ಬೆಂಬಲ, ಸಕಾರಾತ್ಮಕತೆ ಬಹಳ ಮುಖ್ಯ. ಇದರಿಂದ ಜೀವನದ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಒಪ್ಪಿಕೊಳ್ಳುವಲ್ಲಿ ಅವರಿಗೂ ಸಹಕಾರಿ.

ಜಾಹೀರಾತುಗಳಲ್ಲಿ ಬಿಳುಪಾದ ಮೈ ಬಣ್ಣವೇ ಸೌಂದರ್ಯದ ಪ್ರತೀಕ ಎಂದು ಬಿಂಬಿಸಲಾಗುತ್ತದೆ. ಮಹಿಳೆಯರು ತೆಳ್ಳಗೆ ಬೆಳ್ಳಗೆಯೇ ಇರಬೇಕು , ಪುರುಷರು ಎತ್ತರವಾಗಿ ಬಲಿಷ್ಟ ಮಾಂಸಖಂಡಗಳನ್ನೇ ಹೊಂದಿರಬೇಕು ಎಂಬಂತೆ ತೋರಿಸಲಾಗುತ್ತದೆ. ಇದೇ ಜೀವನದ ಗುರಿ ಎಂದು ಪ್ರಚಾರ ಮಾಡಲಾಗುತ್ತದೆ. ಇದರಿಂದ ಶ್ವೇತ, ಹರ್ಷ, ಗಿರೀಶ್ ನಂತಹ ಅನೇಕರು ಎಂತಹ ಒತ್ತಡ, ತಿರಸ್ಕಾರ, ಹತಾಶೆಯ ಬದುಕು ನಡೆಸುತ್ತಾರೆ ಎಂದು ಒಮ್ಮೆ ಊಹಿಸಿಕೊಳ್ಳಿ. ಜೀವನದ ಗುರಿ ಬಣ್ಣ ,ಎತ್ತರ ಗಾತ್ರ ಕ್ಕಿಂತ ಮಿಗಿಲಾದುದು.

 ದೈಹಿಕ ಭಿನ್ನತೆಯನ್ನುಸ್ವೀಕರಿಸಿ ಮತ್ತು ಗೌರವಿಸಿ.

ದೈಹಿಕ ಭಿನ್ನತೆಯನ್ನುಸ್ವೀಕರಿಸಿ ಮತ್ತು ಗೌರವಿಸಿ.

* ಬಣ್ಣ,ಎತ್ತರ,ಗಾತ್ರ ಗಳಿಗೆ ಅನುವಂಶೀಯತೆಯೂ ಕಾರಣ.
* ಪ್ರತೀ ಪ್ರದೇಶದ, ಭೌಗೋಳಿಕ ವಾತಾವರಣ
* ಅಲ್ಲಿನ ಜನರ ಆಹಾರ ಜೀವವ ಕ್ರಮಗಳೂ ಕಾರಣವಾಗುತ್ತದೆ.

ಜೀವನ ಕೌಶಲ್ಯಗಳಾದ ಸ್ವಯಂಜ್ಞಾನ - (self awareness), ಪರಾನುಭೂತಿ- (empathy), ಸಮಸ್ಯೆಗಳು ಹಾಗು ಸಂಘರ್ಷಗಳ ನಿರ್ವಹಣೆ- (problem solving skills), ಸಂವಹನ- (communication) ಹಾಗೂ ಮುಂತಾದವುಗಳನ್ನು ನಾವು ಬೆಳೆಸಿಕೊಂಡಾಗ ನಮ್ಮನ್ನು ಹಾಗು ಇತರರನ್ನು ಅವರು ಇರುವಂತೆಯೇ ಒಪ್ಪಿಕೊಳ್ಳುವ, ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ಜೀವನದಲ್ಲಿ ಎದುರಾಗುವ ಸಂಧರ್ಭಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಾಧ್ಯವಾಗುತ್ತದೆ.

 ಬೇರೆಯವರೊಂದಿಗೆ ಹೋಲಿಕೆ ಬೇಡ

ಬೇರೆಯವರೊಂದಿಗೆ ಹೋಲಿಕೆ ಬೇಡ

ನಮ್ಮ ಪಾತ್ರ
• ದೈಹಿಕ ಭಿನ್ನತೆಯು ಸಹಜವಾದುದು‌ ಎಂದು ಅರ್ಥ ಮಾಡಿಕೊಳ್ಳಿ
• ದೈಹಿಕ ಭಿನ್ನತೆಯನ್ನುಸ್ವೀಕರಿಸಿ ಮತ್ತು ಗೌರವಿಸಿ.
• ಸಣ್ಣವಾಗಬೇಕು ಎನ್ನುವುದಕ್ಕಿಂತ ಆರೋಗ್ಯ ವಾಗಿರಬೇಕು ಎಂದು ಆಹಾರ ಕ್ರಮ, ವ್ಯಾಯಾಮ ಮಾಡಿ.
•ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ.
• ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಡಿ.
• ನಿಮ್ಮ strengthsಗಳ ಕಡೆ ಗಮನ ಹರಿಸಿ.
• ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬರೊಂದಿಗೆ ಮಾತನಾಡುವಾಗ, ಅವರ ಕುಂದು ಕೊರತೆಗಳ ಬಗ್ಗೆ ಮಾತಾಡುವುದಕ್ಕಿಂತ, ಅವರ ಆಸಕ್ತಿ ವಿಷಯಗಳ ಬಗ್ಗೆ ಮಾತನಾಡಿ.

ದೇಶದ ವಿಭಿನ್ನತೆ ಹಾಗು ವೈವಿಧ್ಯತೆಯನ್ನು ನಾವು ಹೆಮ್ಮೆ ಇಂದ ಮೆಚ್ಚಿಕೊಳ್ಳುವಂತೆ, ಪ್ರತಿಯೊಬ್ಬರ ದೇಹದಲ್ಲಿನ ಈ ಭಿನ್ನತೆಗಳನ್ನು ಸಹಜವಾಗಿ ಒಪ್ಪಿಕೊಂಡರೆ ಎಷ್ಟು ಚೆಂದ. ಜೀವನ ಬಹಳ ಸುಂದರವಾದುದು. ನಮ್ಮ ಆಲೋಚನೆಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವುದು ಅವಶ್ಯಕ. ಇದೇ ಬಣ್ಣ ಶ್ರೇಷ್ಠ, ಇದೇ ಆಕಾರ ಶ್ರೇಷ್ಠ, ಮಾದರಿ ದೇಹವೆಂದರೆ ಹೀಗಿರಬೇಕು ಎಂಬ ಭ್ರಮೆ ಇಂದ ಹೊರ ಬಂದು, ಮುಕ್ತ ಮನಸ್ಸಿನಿಂದ ಎಲ್ಲರನ್ನೂ ಇರುವಂತೆಯೇ ಒಪ್ಪಿಕೊಂಡು , ದೈಹಿಕ ಭಿನ್ನತೆಗಳನ್ನು ಗೌರವಿಸುವುದು ಉತ್ತಮ , ಆರೋಗ್ಯಕರ ಸಮಾಜ ಕಟ್ಟಲು ಮಾದರಿಯಾಗೋಣ.

English summary
What is Body shaming? how to Face and Over come it? Article by Rekha Belvadi. Body shaming is a kind of bullying, humiliating another individual's body shape or size.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X