ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ತುಸು ಗಮನಿಸಿ: ಕಡಿಮೆ - ಹೆಚ್ಚು ಪರಿಣಾಮಕಾರಿ

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಬಹಳ ದಿನಗಳಿಂದ ನಾನು ದಂತವೈದ್ಯರನ್ನು ಕಂಡು ನನ್ನ ಹಲ್ಲುಗಳ ತಪಾಸಣೆ ಮಾಡಿಸಿಕೊಂಡು, ಹಲ್ಲುಗಳನ್ನು ಆಳವಾಗಿ ಸ್ವಚ್ಛಗೊಳಿಸುವ (deep cleaning) ಯೋಚನೆಯಲ್ಲಿದ್ದೆ. ಸಾಮಾನ್ಯವಾಗಿ‌ ವರುಷಕ್ಕೊಮ್ಮೆ ದಂತ ತಪಾಸಣೆ ಹಾಗು ದಂತಗಳನ್ನು ಸ್ವಚ್ಚಗೊಳಿಸಿಕೊಳ್ಳಲು ಹೋಗುತ್ತೇನೆ. ಈ ಬಾರಿ ಆರು ತಿಂಗಳ ಮೇಲಾದರೂ ಸಹ ಕಾರಣಾಂತರಗಳಿಂದ ದಂತವೈದ್ಯರ ಬಳಿ ಹೋಗಲಾಗಲಿಲ್ಲ. ಒಂದು ರೀತಿಯಲ್ಲಿ ಆಲಸ್ಯವೂ ಆವರಿಸಿತ್ತು. ದಂತ ತಪಾಸಣೆಯನ್ನು ಮುಂದಕ್ಕೆ ಹಾಕುತ್ತಾ ಬಂದೆ.

ಕಡೆಗೊಮ್ಮೆ ದಂತವೈದ್ಯರಿಂದ ತಪಾಸಣೆಯನ್ನು ನೆನಪಿಸಲು ಕರೆಯೂ (reminder call) ಬಂದುಬಿಟ್ಟಿತು. ನಂತರ ನಾನು ಹಿಂಜರಿಯುತ್ತಲೇ ದಂತವೈದ್ಯರ ಬಳಿ ಹೋದೆ.

Psycholgy: ಅತಿಯಾದ ಕೋಪ ಬಂದಾಗ ನಿರ್ವಹಣೆ ಹೇಗೆ?Psycholgy: ಅತಿಯಾದ ಕೋಪ ಬಂದಾಗ ನಿರ್ವಹಣೆ ಹೇಗೆ?

ತಪಾಸಣೆ ನಂತರ ದಂತಗಳ ಮೇಲಿನ ಕಾಳಜಿ ಹಾಗು ನಿರ್ವಹಣೆ ಕಡಿಮೆಯಾಗಿರುವುದನ್ನ ಕಂಡ ವೈದ್ಯರು, ಹಲ್ಲಿನ ನಿರ್ವಹಣೆಯ ಬಗೆಗೆ ತಾತ್ಸಾರ ತೋರಿದಂತಿದೆ ಎಂದಾಗ ನನಗೆ ಒಂದು ರೀತಿಯಲ್ಲಿ ಪೆಚ್ಚಾಯಿತು.

Psychology: Small is powerful, How to prioritize your work and lifestyle

ಹಲ್ಲಿನ ಆರೋಗ್ಯ ಹಾಗು ಸ್ವಚ್ಛತೆ ಎಷ್ಟು ಮುಖ್ಯ ಎಂದು ತಿಳಿಸುತ್ತಾ ದಂತ ವೈದ್ಯರು ಕೆಲವು ಸಲಹೆಗಳನ್ನು ನೀಡಿದರು. ಅದರಲ್ಲಿ ಮುಖ್ಯವಾಗಿ ಸ್ವಲ್ಪ ಮೌತ್ ವಾಶ್ ಅಥವಾ ಉಪ್ಪು ನೀರನ್ನು ಬಳಸಿ ಸ್ವಲ್ಪ ಕಾಲ ಬಾಯಿ ಮುಕ್ಕಳಿಸುವುದರಿಂದಾಗುವ ಪ್ರಯೋಜನವನ್ನು ವಿವರಿಸಿದರು. ಆರು ತಿಂಗಳು ಬಿಟ್ಟು ಮರೆಯದೇ ತಪಾಸಣೆಗೆ ಬರುವಂತೆ ತಿಳಿಸಿದರು.

ಹೇಗಾದರೂ ಮಾಡಿ ವೈದ್ಯರು ಕೊಟ್ಟ ಎಲ್ಲಾ ಸಲಹೆಗಳನ್ನು ಪಾಲಿಸಿ ಆದಷ್ಟು ಬೇಗ ಹಲ್ಲಿನ ಆರೋಗ್ಯದಲ್ಲಿ ಸುಧಾರಣೆ ತಂದುಕೊಂಡು ಮತ್ತೆ ದಂತ ವೈದ್ಯರ ಬಳಿ ಹೋಗಿ ಅವರಿಂದ ಶಭಾಷ್ ಎನಿಸಿಕೊಳ್ಳುವ ತರಾತುರಿಯಲ್ಲಿದ್ದೆ ನಾನು.

ಆದ ಕಾರಣ

ವೈದ್ಯರು ಬರೆದುಕೊಟ್ಟ ಮೌತ್ವಾಶ್ ಅನ್ನು ಬಳಸಲು ಪ್ರಾರಂಭಿಸಿದೆ. ಸ್ವಲ್ಪ ಹೆಚ್ಚಾಗಿಯೇ ಉಪ್ಪನ್ನೂ ಸಹ ಬಳಸಿದೆ.

Psychology: Small is powerful, How to prioritize your work and lifestyle

ಆರು ತಿಂಗಳ ನಂತರ ಪುನಃ ತಪಾಸಣೆಗೆ ಹೋದಾಗ, ಕೆಲವು ಹಲ್ಲುಗಳಲ್ಲಿ ಕುಳಿ, ಹುಳುಕು ಹಾಗು ವಸಡಿನ ಆರೋಗ್ಯದಲ್ಲಿ ಅಂತಹ ಚೇತರಿಕೆ ಕಾಣದೆ, ಬದಲಾಗಿ ವ್ಯತ್ಯಾಸಗಳೇ ಹೆಚ್ಚಾಗಿ ಕಂಡ, ವೈದ್ಯರು ತಾವು ತಿಳಿಸಿದ ಕ್ರಮಗಳನ್ನು ಪಾಲಿಸುತ್ತಿಲ್ಲವೇ ಎಂದು ಕೇಳಿದರು. ಆಗ ನಾನು ತಿಂಗಳಿಗೆರಡು ಬಾಟಲಿ ಮೌತ್ವಾಶ್/ ಒಂದು ಉಪ್ಪಿನ ಪ್ಯಾಕೆಟ್ ಉಪಯೋಗಿಸಿದ್ದೇನೆ ಎಂದೆ. ಆದರೂ ಹೀಗಾಯಿತಲ್ಲಾ ಎಂದು ಕಸಿವಿಸಿ ಉಂಟಾಯಿತು. ಎಲ್ಲಿ ತಪ್ಪಾಯಿತು ಎಂದು ಯೋಚಿಸುತ್ತಿದ್ದೆ.

Psychology: ಸಂತೋಷ - ಮನಸ್ಥಿತಿ- ಆದ್ಯತೆPsychology: ಸಂತೋಷ - ಮನಸ್ಥಿತಿ- ಆದ್ಯತೆ

ವೈದ್ಯರು ನಾನು ಅನುಸರಿಸಿದ ಕ್ರಮವನ್ನು ಕಂಡು, ನನ್ನ ತಪ್ಪಿನ ಅರಿವು ಆಗುವಂತೆ ಮಾಡಿದರು.

* ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೌತ್ವಾಷ್/ ಉಪ್ಪು ನೀರಿನ ಬಳಕೆ

- ಬಾಯಿಯ ತುಂಬಾ ನೀರು/ ಮೌತ್ವಾಶ್ ಅನ್ನು ತುಂಬಿ ಕೊಂಡಾಗ, ಸಹಜವಾಗಿ ಬಾಯಿ /ಕೆನ್ನೆಯ ಸ್ನಾಯುಗಳ‌ ಮೇಲೆ ಒತ್ತಡ ಏರ್ಪಡುತ್ತದೆ. ನೋವು ಉಂಟಾಗುತ್ತದೆ. ಬೇಗ ಬಾಯಿಂದ ನೀರು/ ಮೌತ್ವಾಶ್ ಹೊರಹಾಕುತ್ತೇವೆ.

- ಮೌತ್ವಾಶ್ / ಉಪ್ಪು ನೀರಿಗೆ ತನ್ನ ಕೆಲಸ ಮಾಡಲು ಬೇಕಾದ ಸಮಯ ಮತ್ತು ಜಾಗ ಸಿಗದೆ ಬಾಯಿಂದ ಹೊರ ಬಂದುಬಿಡುತ್ತದೆ.

- ನೀರು ರಭಸದಿಂದ ಹಲ್ಲುಗಳನ್ನು ಬಡಿದು, ಸಿಕ್ಕಿ ಹಾಕಿಕೊಂಡ ಆಹಾರ ಪದಾರ್ಥಗಳನ್ನು ಬಿಡಿಸಲು ಅವಕಾಶವೇ ಇಲ್ಲ.

- ಮೌತ್ವಾಶ್ / ಉಪ್ಪು ಖರ್ಚಾಗುತ್ತಿದೆ, ಆದರೆ ಅದರ ಪ್ರಯೋಜನವಾಗುತ್ತಿಲ್ಲ. ಹಲ್ಲಿನ ಆರೋಗ್ಯ ಸುಧಾರಿಸುತ್ತಿಲ್ಲ. ಸಮಯ, ಶಕ್ತಿಯ ಸರಿಯಾದ ಬಳಕೆ ಮತ್ತು ಉಪಯೋಗ ಆಗುತ್ತಿಲ್ಲ.

* ನಾನು ತ್ವರಿತವಾಗಿ ಸುಧಾರಣೆ ಕಾಣುವ ಆತುರದಲ್ಲಿ ಕ್ರಮವನ್ನು ಸರಿಯಾಗಿ ಪಾಲಿಸಲಿಲ್ಲ.

* ತನ್ನ ಆರೋಗ್ಯ ಸುಧಾರಣೆಗೆ ಮಹತ್ವ ಕೊಡದೆ ಇತರರನ್ನು‌ಮೆಚ್ಚಿಸುವ ತರಾತುರಿಯಲ್ಲಿದ್ದಿದ್ದು ಸಹ ನಾನು‌ ಮಾಡಿದ ತಪ್ಪು.

ಬದಲಾಗಿ

ಬಾಯಲ್ಲಿ ಸ್ವಲ್ಪ ಉಪ್ಪಿನ ನೀರು/ ಮೌತ್ವಾಶ್ ತೆಗೆದುಕೊಂಡಿದ್ದರೆ,
-ನೀರು ಚಲಿಸಲು ಜಾಗವೂ ಇರುವುದು
-ನೀರು ಶಕ್ತಿಯತ ರಭಸದಿಂದ ಹಲ್ಲುಗಳನ್ನು ಬಡಿದು, ಹಲ್ಲಿನ ಸಂದುಗಳನ್ನು ಸಹ ಸ್ವಚ್ಛಗೊಳಿಸುವುದು
-ಹೆಚ್ಚಿನ ಕಾಲ ಮೌತ್ವಾಶ್ / ಉಪ್ಪು ನೀರು ಬಾಯಿಯಲ್ಲಿದ್ದು ಬ್ಯಾಕ್ಟೀರಿಯಾದೊಂದಿಗೆ ಹೋರಾಡುವುದೂ ಹೌದು.
-ಆಗ ಹಲ್ಲು ಹಾಗು ವಸಡಿನ ಆರೋಗ್ಯ ಉತ್ತಮಗೊಳ್ಳುತ್ತಿತ್ತು.
-ಬಾಯಲ್ಲಿ ಉಪ್ಪು ನೀರಿನ "ಪ್ರಮಾಣ ಕಡಿಮೆ" ಇದ್ದರೂ ಅದರ ಪ್ರಯೋಜನ ಹಾಗು ಪರಿಣಾಮ ಅಪರಿಮಿತ. ಅಂದರೆ

"ಕಡಿಮೆ ಹೆಚ್ಚು ಪರಿಣಾಮಕಾರಿ" ಎಂಬುದು ನನಗೆ ಅರಿವಾಯಿತು.

ಇದು ನಮ್ಮ ಜೀವನಕ್ಕೂ ಎಷ್ಟು ಅನ್ವಯಿಸುತ್ತದೆ ಅಲ್ಲವೇ? ಮನೆಯಲ್ಲಿ ತಂದೆತಾಯಿ , ಶಾಲೆ-ಕಾಲೇಜುಗಳಲ್ಲಿ ಗುರುಗಳು, ಕಚೇರಿಯ ಸಹೋದ್ಯೋಗಿಗಳು, ಮೇಲಾಧಿಕಾರಿಗಳು, ನೆರೆ ಹೊರೆ ಯವರು ಹೀಗೆ ಅನೇಕ ಸನ್ನಿವೇಶಗಳಲ್ಲಿ ಹತ್ತುಹಲವಾರು ಮಂದಿಗಳು ನಮ್ಮ ಕುಂದು ಕೊರತೆಗಳನ್ನು ಗಮನಿಸುತ್ತಾ, ಗುರುತಿಸುತ್ತಾ ನಮ್ಮ ಒಳಿತಿಗಾಗಿ ಸಲಹೆಗಳನ್ನು (feedback ಅಥವಾ tips) ಕೊಡುತ್ತಾರೆ.

ಆದಷ್ಟು ಬೇಗ ಸುಧಾರಣೆ ಕಂಡುಕೊಳ್ಳುವ ಭರದಲ್ಲಿ ಅನೇಕರು ಕೇಳಿಸಿಕೊಂಡ ಎಲ್ಲಾ ಸಲಹೆಗಳನ್ನು ಅನುಸರಿಸಲು ಪ್ರಾರಂಭಿಸುತ್ತೇವೆ. ಆದರೆ One at a time ಎನ್ನುವಂತೆ ಯಾವುದೇ ಒಂದು ಕೊರತೆ / ದುರ್ಬಲತೆ/ ಸಲಹೆ (ಅಥವಾ feedback) ಕಡೆ ಗಮನ ಹರಿಸಿ ಆ ಒಂದು ಅಂಶದ ಮೇಲೆ ಹೆಚ್ಚಿನ ಗಮನಕೊಟ್ಟು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಪರಿಣಾಮಕಾರಿ. ಶಕ್ತಿ, ಸಮಯ‌ ವ್ಯರ್ಥವಾಗದೆ ಸದುಪಯೋಗವಾಗುವುದು. ನಿರಾಶೆಯೂ ಆಗದು.

ಇನ್ನೊಂದು ವಿಚಾರವೆಂದರ feedback/ ಸಲಹೆ ಕೊಡುವವರೂ ಸಹ ಎದುರಿರುವ ವ್ಯಕ್ತಿ ತನ್ನ ಆ ಒಂದು feedback ಮತ್ತು ಸಲಹೆಗಳ ಮೇಲೆ ಕೆಲಸ ಮಾಡಲು ಸ್ಪಲ್ಪ ಕಾಲಾವಕಾಶವನ್ನು ಕೊಡಬೇಕು.

ಬರುವ feedback ಗಳಲ್ಲಿ ನಿಮಗೆ ಮುಖ್ಯವೆನಿಸಿದಕ್ಕೆ ಆದ್ಯತೆ ನೀಡಿ (prioritize) ಸರಿಯಾದ ಕ್ರಮ ಪಾಲಿಸಿ, ಶಕ್ತಿ, ಸಮಯದ ಸದುಪಯೋಗ ಮಾಡಿ ಕೊಂಡು ಕೌಶಲ್ಯಗಳನ್ನು ಉತ್ತಮಗೊಳಿಸಿಕೊಳ್ಳಿ. ತ್ವರಿತಕ್ಕಿಂತ , ಗುಣಮಟ್ಟದ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ.

English summary
Psychology: Small is powerful, KnowHow to prioritize your work and lifestyle
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X