ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಜನರ ಲೈಂಗಿಕ ಸಮಸ್ಯೆಗಳು ನಿಜವಾಗಿಯೂ ಸಮಸ್ಯೆಗಳೇ ಅಥವಾ...?

By ಡಾ. ಎ. ಶ್ರೀಧರ್, ಮನಃಶಾಸ್ತ್ರಜ್ಞ
|
Google Oneindia Kannada News

ನನಗೆ ತಿಳಿದಂತೆ ಲೈಂಗಿಕ ಸಮಸ್ಯೆಗಳು ಅನ್ನುವುದಕ್ಕಿಂತ ಸೆಕ್ಸ್‌ ವಿಷಯ ಬಹುತೇಕ ಎಲ್ಲರ ಮನಸಿನಲ್ಲಿಯೂ ಒಂದಲ್ಲ ಒಂದು ಗೊಂದಲ ಎಬ್ಬಿಸುತ್ತದೆ. ಇಂತಹ ಗೊಂದಲಗಳು ಸಣ್ಣ ವಯಸ್ಸಿನಿಂದಲೇ ಕಾಣಿಸಿಕೊಳ್ಳುವುದು ಸಹಜ. ಹದಿಹರೆಯ ಕೊನೆಗೊಳ್ಳುವ ತನಕ ನಿತ್ಯವೂ ಕಾಡುವಂಥದ್ದು. ಹೆಣ್ಣು ಗಂಡುಗಳೆನ್ನುವ ಭೇದ ಈ ವಿಷಯಕ್ಕೆ ಅನ್ವಯಿಸುವುದಿಲ್ಲ. ತನ್ನ ಲಿಂಗಾಂಗಗಳ ಬಗ್ಗೆ ಕುತೂಹಲ, ತಪ್ಪು ಕಲ್ಪನೆಗಳು ಬಾಲ್ಯದ ದಿನಗಳಲ್ಲಿ ಅಪಾರ. ಲೈಂಗಿಕ ಆಸಕ್ತಿ ಕ್ರಿಯೆಗಳ ಬಗ್ಗೆ ಪಾಪಪ್ರಜ್ಞೆ, ಅಪರಾಧದ ಭಾವ, ಬಯಕೆ, ಭಯ, ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಕಾಣಿಸಿಕೊಳ್ಳುವುದು.

ಲಿಂಗಾಂಗಗಳ ಉದ್ರೇಕ, ಮನಸಿನಲ್ಲಿ ಕಂಪನ ಮೂಡಿಸುವ ವಿಷಯ, ಆಲೋಚನೆ, ಚಿತ್ರ, ದೃಶ್ಯಗಳು ಮತ್ತಷ್ಟು ಆಸೆಯನ್ನೋ, ಆತಂಕವನ್ನೋ ಸೃಷ್ಟಿಸುವುದಂತೂ ನಿಜ. ಒಂದು ಕಡೆ ತನ್ನ ಶರೀರದ ಅಂಗಾಂಗಳು ಉದ್ರಿಕ್ತಗೊಳ್ಳುವುದರ ಅನುಭವ, ಇನ್ನೊಂದೆಡೆ ಮನಸಿನಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ತೃಪ್ತಿಗಾಗಿ ಕಾತುರ. ಇದರ ಜೊತೆಯಲ್ಲಿ ಸಮಾಜದ ಕಟ್ಟುಪಡುಗಳು, ಪಾಪ ಮಾಡುತ್ತಿರುವೆನೆಂಬ ಆತಂಕ ನಡೆನುಡಿಗಳ ಮೇಲೆ ಹಿಡಿತ ಸಾಧಿಸುತ್ತದೆ.

ವೃದ್ಧಾಪ್ಯದೊಂದಿಗೆ ಕಾಮಾಕಾಂಕ್ಷೆಯೂ ಕುಸಿಯುವುದೇ?; ಕೆಲವು ತಪ್ಪು ಕಲ್ಪನೆಗಳು...ವೃದ್ಧಾಪ್ಯದೊಂದಿಗೆ ಕಾಮಾಕಾಂಕ್ಷೆಯೂ ಕುಸಿಯುವುದೇ?; ಕೆಲವು ತಪ್ಪು ಕಲ್ಪನೆಗಳು...

ಕೆಲವರಲ್ಲಂತೂ ಸುಖ ನಿದ್ದೆಯ ಹದ ಕೆಡಿಸುವಂತಹ ಕನಸು, ಕಲ್ಪನೆಗಳು. ಈ ಕಲ್ಪನೆಗಳಲ್ಲಿ ಯಾವಯಾವುದೋ ವ್ಯಕ್ತಿಗಳು ಲೈಂಗಿಕ ಬಯಕೆಯ ಪ್ರಬಲ ಪ್ರೇರಣೆಯಾಗಿ ಬಂದಿರುತ್ತಾರೆ. ಜಾಗೃತವಾಗಿರುವ ದಿನದ ಸಮಯದಲ್ಲಿ, ಅದರಲ್ಲಿಯೂ ಮುಖ್ಯ ಕೆಲಸಗಳನ್ನು ಮಾಡುತ್ತಿರುವಂತಹ ಸಮಯದಲ್ಲಿ ಈ ಕಲ್ಪನೆಗಳ ಬಗ್ಗೆ ಅಭಿಪ್ರಾಯಗಳು ಮೂಡಿಬರುತ್ತವೆ. ಅದೆಷ್ಟೋ ಆಪ್ತರು, ಸಂಬಂಧಿಗಳು ಲೈಂಗಿಕ ಮೂರ್ತಿಗಳಾಗಿ ದೇಹ, ಮನಸ್ಸಿಗೆ ತಾತ್ಕಾಲಿಕವಾಗಿ ಹಿತ ಒದಗಿಸಿರುತ್ತಾರೆ. ತೃಪ್ತಿ ಪಡೆದ ನಂತರ ಘೋರ ಅಪರಾಧ ಮಾಡಿದ ಭಾವನೆ. ಅದಕ್ಕೆ ಶಿಕ್ಷೆಯಾಗುತ್ತದೆಂಬ ಭಯ ಕೆಲವರಲ್ಲಿದ್ದರೆ, ಇನ್ನು ಕೆಲವರು ತಮಗೆ ತಾವೇ ಶಿಕ್ಷೆ ಕೊಡುತ್ತಾರೆ. ಇಂತಹ ಶಿಕ್ಷೆಗಳು ಶರೀರಕ್ಕಿಂತ ಮನಸಿಗೆ ನೋವು, ತಲ್ಲಣ ತರುವಂತಹದ್ದೇ ಆಗಿರುತ್ತದೆ. ಇನ್ನು ಕೆಲವರಂತೂ ಜೀವಕ್ಕೆ ಹಾನಿಮಾಡಿಕೊಳ್ಳುವಂತಹ ನಡೆನುಡಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಮುಂದೆ ಓದಿ...

 ಪ್ರಚೋದಿಸುವ ಕ್ರಿಯೆ ಹಾಗೂ ಆತಂಕ

ಪ್ರಚೋದಿಸುವ ಕ್ರಿಯೆ ಹಾಗೂ ಆತಂಕ

ಹೆಚ್ಚಿನ ಸಮಯದಲ್ಲಿ ಹಸ್ತಮೈಥುನ (ಮಾಸ್ಟರ್ಬೆಷನ್), ಜನನೇಂದ್ರಿಯಗಳನ್ನು ಭೌತಿಕ ಪ್ರಯತ್ನಗಳ ಮೂಲಕ ಉದ್ರೇಕಗೊಳಿಸುವುದು. ಲಿಂಗಾಂಗ ಸ್ನಾಯುಗಳ ಸೆಳೆತ, ಬಿಗಿತಗಳ ಮೂಲಕ ಸಿಗುವ ತೃಪ್ತಿ ಆಹ್ಲಾದಕರವಾಗಿರುವುದರಿಂದ ಅವುಗಳ ಚೋದನೆ. ಆದರೆ ಹೀಗೆ ಚೋದಿಸುವ ಕ್ರಿಯೆಯು ಭಯ ಮತ್ತು ಆತಂಕಕ್ಕೂ ಕಾರಣವಾಗಿರುತ್ತದೆ. ಇತರರು, ಮನೆಮಂದಿ, ಸಮಾಜ ಇದನ್ನು ವಿರೋಧಿಸುತ್ತದೆ ಎನ್ನುವ ಕಲ್ಪನೆಗಳು ಈ ಮಾದರಿಯ ಭಯ, ಆತಂಕವನ್ನು ಮತ್ತಷ್ಟು ತೀವ್ರಗೊಳಿಸಿಬಿಡುತ್ತದೆ. ಇದಲ್ಲದೆಯೇ ಕೆಲವರಿಗೆ ಅತಿಯಾದ ಭಯದ ಭಾವನೆಯಿಂದ ಸಹಜ ಲೈಂಗಿಕ ಸ್ವಭಾವಗಳ ಬಗ್ಗೆಯೇ ನಕಾರಾತ್ಮಕ ಭಾವನೆಗಳು ಮೂಡಿಬಿಡುತ್ತವೆ. ಇದರ ಪರಿಣಾಮವಾಗಿ ಇತರರ ಲೈಂಗಿಕ ಕ್ರಿಯೆಗಳ ಮೇಲೂ ಹಿಡಿತ, ನಿರ್ಬಂಧ ಹೇರುವಂತಹ ಪ್ರಯತ್ನಗಳನ್ನು ಮಾಡುತ್ತಾರೆ.

ಪತ್ನಿ ಇಷ್ಟಕ್ಕೆ ವಿರುದ್ಧ ಲೈಂಗಿಕಕ್ರಿಯೆ ನಡೆಸುವುದು ಅತ್ಯಾಚಾರ; ವಿಚ್ಛೇದನ ಪಡೆಯಲು ಉತ್ತಮ ಕಾರಣ; ಕೇರಳ ಹೈಕೋರ್ಟ್ಪತ್ನಿ ಇಷ್ಟಕ್ಕೆ ವಿರುದ್ಧ ಲೈಂಗಿಕಕ್ರಿಯೆ ನಡೆಸುವುದು ಅತ್ಯಾಚಾರ; ವಿಚ್ಛೇದನ ಪಡೆಯಲು ಉತ್ತಮ ಕಾರಣ; ಕೇರಳ ಹೈಕೋರ್ಟ್

 ಶಾಲೆಯ ವಯಸ್ಸಿನಲ್ಲಿಯೇ ತಪ್ಪು ಕಲ್ಪನೆ

ಶಾಲೆಯ ವಯಸ್ಸಿನಲ್ಲಿಯೇ ತಪ್ಪು ಕಲ್ಪನೆ

ಶಾಲೆಯ ವಯಸ್ಸಿನಲ್ಲಂತೂ ಲೈಂಗಿಕ ವಿಷಯಗಳ ಬಗ್ಗೆ ವಿಪರೀತ ಎನ್ನುವಷ್ಟು ತಪ್ಪು ಅಭಿಪ್ರಾಯಗಳು ಇದ್ದೇಇರುವುದು. ಲೈಂಗಿಕ ಕ್ರಿಯೆಗಳನ್ನು ಕದ್ದು ಮುಚ್ಚಿ ನೋಡುವುದು, ಗೋಪ್ಯವಾಗಿ ಮಾಡುವುದು ಮತ್ತು ಅದರ ಬಗ್ಗೆಯೇ ಜಂಭ ಕೊಚ್ಚಿಕೊಳ್ಳುವುದು ಹದಿಹರೆಯದ ಹಂತದಲ್ಲಿ ಕಂಡುಬರುವುದು ಅಪರೂಪವಲ್ಲ. ಇದೇ ಮಾದರಿಯಲ್ಲಿ ವಯಸ್ಕರಲ್ಲಿಯೂ ಲೈಂಗಿಕ ವಿಷಯಗಳ ಬಗ್ಗೆ ತಪ್ಪಕಲ್ಪನೆ, ಅಸಹ್ಯದ ಭಾವನೆಗಳು ಇರುತ್ತವೆ. ವಯಸ್ಸಿನ ಕಾರಣದಿಂದ ತಮ್ಮಲ್ಲಿರುವ ಲೈಂಗಿಕ ಪ್ರಜ್ಞೆ ಪರಿಪೂರ್ಣ ಎನ್ನುವಂತಹ ಭ್ರಮೆ. ಬಾಲ್ಯ ಮತ್ತು ಹದಿಹರೆಯದ ದಿನಗಳಲ್ಲಿ ಇದ್ದಂತಹ ಗೊಂದಲಗಳು ವಯಸ್ಕತನದಲ್ಲಿಯೂ ಮುಂದುವರೆಯುತ್ತವೆ ಅನೇಕ ವಯಸ್ಕರಲ್ಲಿ.

ಸಮಾಜ ಸಹಿಸುವ ವಿಧಿ ವಿಧಾನಗಳ ಮೂಲಕವೇ ಲೈಂಗಿಕ ತೃಪ್ತಿ ಸಿಕ್ಕಿದ್ದರೂ ಇತರರ ಲೈಂಗಿಕ ಭಾವನೆ, ಆಸಕ್ತಿಗಳ ಬಗ್ಗೆ ಕ್ರೋಧ, ಸಹಿಸದಿರುವಿಕೆ ಮೂಲಕ ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ, ಬಹುಪಾಲು ನವವಿವಾಹಿತರು ತಮ್ಮ ವೈವಾಹಿಕ ಜೀವನದ ಆರಂಭದಲ್ಲಿ ಪೋಷಕರು, ಹಿರಿಯರಿಂದ ಇಂತಹ ನಡೆನುಡಿಗಳನ್ನು ಎದುರಿಸಿರುತ್ತಾರೆ. ನನಗೆ ತಿಳಿದ ಅದೆಷ್ಟೋ ನವ ವಿವಾಹಿತರ ಮಲಗುವ ಕೋಣೆಯ ಬಾಗಿಲ ಚಿಲಕ ತೆಗೆಸಿದ್ದ ಪೋಷಕರೂ ಇದ್ದಾರೆ. ಹಾಗೆಯೇ ನವದಂಪತಿಗಳಿಗೆ ಕೊಂಚವೂ ಏಕಾಂತ ಕೊಡದಂತಹ ಮನೆಯ ಹಿರಿಯರ ಬಗ್ಗೆ ಕೇಳಿದ್ದೇನೆ.
 ಆರೋಗ್ಯಕರ ಲೈಂಗಿಕ ಭಾವನೆಗಳು ಹೇಗಿರುತ್ತವೆ?

ಆರೋಗ್ಯಕರ ಲೈಂಗಿಕ ಭಾವನೆಗಳು ಹೇಗಿರುತ್ತವೆ?

* ಪಾಪಪ್ರಜ್ಞೆ, ತಪ್ಪಿತಸ್ಥ ಭಾವನೆಗಳು ಇರದಿರುವುದು
* ಲೈಂಗಿಕ ಭಾವಗಳಲ್ಲಿ ಯಾವುದೇ ರೀತಿಯ ಆವೇಶ, ಆಕ್ರೋಶ, ಹಿಂಸೆ, ಅಪಮಾನ, ಹೀಯಾಳಿಕೆಯ ನಡೆನುಡಿಗಳು ಇರದಿರುವುದು
* ಮನದಲ್ಲಿ ಒತ್ತಡ, ಬಲಾತ್ಕಾರದ ಮೂಲಕ ಲೈಂಗಿಕ ಕ್ರಿಯೆಗಳು ಸುಳಿಯದಿರುವುದು
* ಲೈಂಗಿಕ ಕ್ರಿಯೆ ಬಳಿಕ ಹಿತವಿರವುದು, ಸಂಗಾತಿಯೊಂದಿಗೆ ಸಮಾಧಾನಕರ ಭಾವನೆಗಳು
* ಲೈಂಗಿಕ ವಿಷಯಗಳ ಬಗ್ಗೆ ಸೋಗಲಾಡಿತನ ಇರದಿರುವುದು
* ಲಿಂಗಾಂಗಗಳ ಬಗ್ಗೆ, ಕಾಮಭಾವನೆಗಳ ಬಗ್ಗೆ ಹಿತಮಿತವಾದ ಸದಭಿಪ್ರಾಯ
* ಆಹ್ಲಾದಕರ ಲೈಂಗಿಕ ಆಸಕ್ತಿ, ಕುತೂಹಲ
* ಕ್ರೌರ್ಯವೇ ಇರದ ಸಹಮತದ ಲೈಂಗಿಕ ಪ್ರಕ್ರಿಯೆ
* ಎಳೆಯರು, ಮುಗ್ಧರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಕೊಂಚವೂ ಆಸಕ್ತಿ ಇರದಿರುವುದು
* ಸಂಗಾತಿಯ ಲೈಂಗಿಕ ಆಸೆ ಆಕಾಂಕ್ಷೆಗಳನ್ನು ಆದರ ಗೌರವಗಳಿಂದ ಸ್ವೀಕರಿಸುವುದು

ವರ್ಕ್‌ ಫ್ರಂ ಹೋಂನಲ್ಲಿ ಹೆಚ್ಚುತ್ತಿದೆ ವರ್ಚ್ಯುವಲ್ ಶೋಷಣೆವರ್ಕ್‌ ಫ್ರಂ ಹೋಂನಲ್ಲಿ ಹೆಚ್ಚುತ್ತಿದೆ ವರ್ಚ್ಯುವಲ್ ಶೋಷಣೆ

 ಲೈಂಗಿಕ ವಿಕಾರ

ಲೈಂಗಿಕ ವಿಕಾರ

ಲೈಂಗಿಕ ತೃಪ್ತಿಯನ್ನು ಪಡೆಯಲು ಪ್ರಾಣಿ, ವಸ್ತುಗಳನ್ನೇ ಕೇಂದ್ರವಾಗಿರಿಸಿಕೊಳ್ಳುವ ಕ್ರಿಯೆಗಳೊಂದಿಗೆ ವ್ಯಕ್ತಿತ್ವದ ಸಮಸ್ಯೆಗಳು ಲೈಂಗಿಕ ಕ್ರಿಯೆಗಳೊಂದಿಗೆ ಕಾಣಿಸಿಕೊಳ್ಳುವುದು. ಇವುಗಳನ್ನು ಲೈಂಗಿಕ ಅಥವಾ ಕಾಮವಿಕಾರಗಳು ಎನ್ನುವುದಾಗಿ ಗುರುತಿಸಲಾಗುತ್ತದೆ. ಈ ಲಕ್ಷಣಗಳು ತನ್ನ ವ್ಯಕ್ತಿತ್ವ, ಇತರರ ದಿನನಿತ್ಯದ ಹೊಂದಾಣಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಜೊತೆಯಲ್ಲಿ, ಲೈಂಗಿಕ ಸಮಸ್ಯೆಗಳು ವ್ಯಕ್ತಿಯ ಇತರೆ ಸಾಮರ್ಥ್ಯಗಳನ್ನು ಅಡ್ಡಪಡಿಸುವುದು ಸಾಮಾನ್ಯ.

 ಆರೋಗ್ಯಕರ ಲೈಂಗಿಕ ಸ್ವಭಾವಗಳನ್ನು ಬೆಳೆಸುವುದು ಹೇಗೆ?

ಆರೋಗ್ಯಕರ ಲೈಂಗಿಕ ಸ್ವಭಾವಗಳನ್ನು ಬೆಳೆಸುವುದು ಹೇಗೆ?

* ಲೈಂಗಿಕ ನಡೆನುಡಿಗಳು ಸಾಮಾಜಿಕ, ಸಾಂಸ್ಕೃತಿಕ ಮತ್ತು ಶಾರೀರಿಕ ಕ್ರಿಯೆಗಳು ಎನ್ನುವುದನ್ನು ಮರೆಯಬಾರದು
* ಅತಿ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಎನ್ನುವಂತಹ ನಡೆನುಡಿಗಳು ಕಾಣಿಸಿಕೊಳ್ಳುವುದು
* ವಯಸ್ಕರು, ಅದರಲ್ಲಿಯೂ ಪೋಷಕರು, ಪಾಲಕರ ಲೈಂಗಿಕ ನಡೆನುಡಿಗಳು ಅನುಕರಣೆ ಮಾಡುವುದು ಮಕ್ಕಳ ಸಹಜ ವರ್ತನೆ
* ಮಕ್ಕಳಿಗೆ ತಮ್ಮ ಜನನೇಂದ್ರಿಯ ಮತ್ತು ಅದಕ್ಕೆ ಸಂಬಂಧಿಸಿದ ಕುತೂಹಲವನ್ನು ತಿಳಿವಳಿಕೆಯ ಮಾತುಗಳ ಮೂಲಕ ವಿವರಿಸುವುದು ಬಹುಮುಖ್ಯ
* ಲೈಂಗಿಕ ಕ್ರಿಯೆಗಳ ಬಗ್ಗೆ ನಕಾರಾತ್ಮಕ ಭಾವನೆ, ಭಯ, ಆತಂಕ ಮಕ್ಕಳಲ್ಲಿ ಸಾಮಾನ್ಯ. ಇವುಗಳಿರುವುದು ಕಂಡುಬಂದಲ್ಲಿ ಸೂಕ್ತ ತಿಳಿವಳಿಕೆ ನೀಡುವುದೇ ಸರಿ
* ಸಣ್ಣ ವಯಸಿನಿಂದಲೇ ಗಂಡು-ಹೆಣ್ಣು ಲಿಂಗಗಳ ಬಗ್ಗೆ ಗೌರವ, ಅದರದ ಭಾವನೆಗಳು ಮೂಡಿಸುವುದು ಮುಖ್ಯ.
* ಲಿಂಗಾಧಾರಿತ ಪೂರ್ವಗ್ರಹ, ರೂಢಿಗತ ವರ್ತನೆಗಳ ಬಗ್ಗೆ ಪೋಷಕರಲ್ಲಿಯೂ ವೈಜ್ಞಾನಿಕ ತಿಳಿವಳಿಕೆ ಇರಬೇಕು
* ಮಕ್ಕಳ ಅತಿ ಲೈಂಗಿಕ ವರ್ತನೆ, ಕಾಮಾಸಕ್ತಿಗಳಿಗೆ ಶಿಕ್ಷೆ, ನಿಂದನೆ, ಅಪಮಾನ ಮಾಡುವುದು ಆರೋಗ್ಯಕರ ಲೈಂಗಿಕ ವಿಕಾಸಕ್ಕೆ ಅಡ್ಡಿ
* ಹದಗೆಟ್ಟ ವಯಸ್ಕತನದ ಲೈಂಗಿಕ ದುರ್ವರ್ತನೆಗಳಿಗೆ ಸರಾಗವಿರದ ಬಾಲ್ಯದ ಲೈಂಗಿಕ ನಡೆನುಡಿಗಳು ಕಾರಣವಾಗಿರಬಲ್ಲದು. ಇದಕ್ಕೆ ಮನೆಯ ವಾತಾವರಣವೂ ಕಾರಣವಾಗಿರಬಲ್ಲದು.

English summary
Psychologist Dr A Sridhar explains sexual and related psychological problmes in youth,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X