ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದೇ ಪದೇ ಅದೇ ಸೋಲು... ಸೋಲು ಕಾಡುವುದೇಕೆ?

By ಡಾ. ಎ.ಶ್ರೀಧರ್, ಮನಶಾಸ್ತ್ರಜ್ಞ
|
Google Oneindia Kannada News

ನನಗೆ ಬಲ್ಲ ಈ ವ್ಯಕ್ತಿಗೆ ಈಗ ಸುಮಾರು ನಲವತ್ತೈದು ವಯಸು. ಒಂದು ರೀತಿ ಜೀವಮಾನದ ಅರ್ಧದಷ್ಟು ಕಳೆದೇ ಹೋಗಿದೆ. ಹಾಗೆಯೇ ಕೈ ಹಿಡಿದ ಕೆಲಸಗಳು, ಮಾಡಿದ ಪ್ರಯತ್ನಗಳು ಒಂದಾದರೂ ತೃಪ್ತಿಕರವಾದ ಫಲಿತಾಂಶ ನೀಡಿಯೇ ಇಲ್ಲ ಎನ್ನುವ ಭಾವನೆ. ಭಾವನೆ ನಿಜವೂ ಹೌದು. ಈ ವ್ಯಕ್ತಿಯ ಪ್ರತಿಯೊಂದು ತರಗತಿಯಲ್ಲೂ ಒಂದಲ್ಲಾ ಒಂದು ಕಾರಣದಿಂದ ಕಡಿಮೆ ಅಂಕಗಳು.
ಪ್ರಯತ್ನ ಮತ್ತು ಬುದ್ಧಿ ಸಾಮರ್ಥ್ಯಗಳಿಗೇನೂ ಕೊರತೆ ಇಲ್ಲ. ಆದರೆ ಆತ್ಮವಿಶ್ವಾಸದಿಂದ ಮಾಡಿದ ಕೆಲಸ ಸಫಲಗೊಳ್ಳುತ್ತಿದ್ದ ರೀತಿ ಅತೃಪ್ತಿಯನ್ನೇ ಹೆಚ್ಚಿಸುತ್ತಿತ್ತು. ಅದೇಷ್ಟೋ ನೂರಾರು ಸೋಲುಗಳು ಅವನ ಜೀವನದ ಒಂದು ರೀತಿ ಎನ್ನುವ ಹಾಗಾಗಿಬಿಟ್ಟಿತ್ತು.

ಉದಾಹರಣೆಗೆ ಆತ ಒಂದು ದ್ವಿಚಕ್ರ ವಾಹನ ಕೊಂಡ. ಕೊಂಡ ಮೂರು ತಿಂಗಳಲ್ಲಿ ಅದಕ್ಕೆ ಒಂದಲ್ಲಾ ಒಂದು ರಿಪೇರಿ. ಬೇಸರದಿಂದ ಮಾರಿದಾಗ ಬಂದ ಹಣವೂ ಸಹ ಕೈಗೆ ಸಿಗಲಿಲ್ಲ. ಇಷ್ಟಪಟ್ಟು ಸಣ್ಣದೊಂದು ಆಸ್ತಿ ಖರೀದಿಸಿದ. ಅದು ಹೇಗೋ ಬೆಲೆ ಹೆಚ್ಚಾಗಿ ಕೊಟ್ಟಿರುವುದು ನಂತರದಲ್ಲಿ ತಿಳಿದುಬಂತು.

 ಮನಸನ್ನು ಗಟ್ಟಿಯಾಗಿ ಜೋಡಿಸಿದ್ದ ಭಾವರಸ ಹುಳಿಯಾದದು ಹೇಗೆ? ಮನಸನ್ನು ಗಟ್ಟಿಯಾಗಿ ಜೋಡಿಸಿದ್ದ ಭಾವರಸ ಹುಳಿಯಾದದು ಹೇಗೆ?

ವೃತ್ತಿಯಲ್ಲಿಯೂ ಅಷ್ಟೇ. ಅವನ ಸಲಹೆ, ಸೂಚನೆಗಳನ್ನು ಮೇಲಧಿಕಾರಿಗಳು ಮೊದಲಿಗೆ ಒಪ್ಪಿ ಇನ್ನೇನು ಅದು ಕಾರ್ಯರೂಪಕ್ಕೆ ಬಂತು ಎನ್ನುಕೊಳ್ಳುತ್ತಿದ್ದಂತೆಯೇ ಯಾವುದೋ ಎಡವಟ್ಟಿನಿಂದ ಅದು ಅಲ್ಲಿಗೆ ನಿಂತಿತು. ಈ ತರಹದ ನೂರಾರು ಪ್ರಸಂಗಗಳು ಆತನ ಬದುಕನ್ನು ಆವರಿಸಿತ್ತು. ಆದರೆ, ಕುಟುಂಬ ಮತ್ತು ಗೆಳೆಯರ ವಿಷಯದಲ್ಲಿ ಇಂತಹ ಸೋಲುಗಳು ಇದ್ದವಾದರೂ ಸಂಕಟಪಡುವಷ್ಟು ಇದ್ದಿರಲಿಲ್ಲ. ಮುಂದೆ ಓದಿ...

 ಬದುಕಿನಲ್ಲಿ ನೂರಾರು ಸಮಸ್ಯೆಗಳು...

ಬದುಕಿನಲ್ಲಿ ನೂರಾರು ಸಮಸ್ಯೆಗಳು...

ಬದುಕಿನಲ್ಲಿ ಇಂತಹ ಸ್ಥಿತಿಯನ್ನು ಎದುರಿಸುವವರ ಸಂಖ್ಯೆ ಬಹುಶಃ ದೊಡ್ಡದೇ ಇರಬಲ್ಲದು. ಏಕೆ ಹೀಗೆ ಎನ್ನುವುದಕ್ಕೆ ಕಾರಣಗಳೂ ನೂರಾರು ಇರಬಹುದು. ಮಾನಸಿಕ ದೃಷ್ಟಿಯಿಂದ ಗಮನಿಸಿದಾಗ ಇವುಗಳಿಗೆ ಕಾರಣ: 1. ಗಮನ ಹರಿಸುವ ಶಕ್ತಿಯ ಕೊರತೆ 2. ಮನಸಿನಲಿ ಕಾಣಿಸಿಕೊಳ್ಳುವ ಒತ್ತಾಯ ಮತ್ತು ಗೊಂದಲಗಳು, 3. ಎಲ್ಲದರಲ್ಲಿಯೂ ಅವಸರ 4. ಕೆಲಸ ಆರಂಭಿಸುವುದಕ್ಕೆ ಮುಂಚಿತವಾಗಿಯೇ ಫಲಿತಾಂಶದ ನೀರೀಕ್ಷೆ 5. ಆತಿಯಾದ ಆತ್ಮವಿಶ್ವಾಸ 6. ವಿಷಯದ ಬಗ್ಗೆ ಸರಿಯಾದ ಮಾಹಿತಿ ಗ್ರಹಿಸದಿರುವುದು 7. ಸೋಲಿನ ಕಾರಣಗಳನ್ನು ವಿಮರ್ಶೆ ಮಾಡಲು ಹಿಂಜರಿಯುವುದು ಹೀಗೆ ಹಲವು ಕಾರಣಗಳಿವೆ...

 ಪ್ರಯತ್ನಗಳನ್ನು ಬಿಡದ ಛಲ ಜೊತೆಗಿರಲಿ

ಪ್ರಯತ್ನಗಳನ್ನು ಬಿಡದ ಛಲ ಜೊತೆಗಿರಲಿ

ಇವೆಲ್ಲದರ ನಡುವೆಯೂ ಪ್ರಯತ್ನಗಳನ್ನು ಬಿಡದಿರುವಂತಹ ಛಲದ ಬಲವೂ ಇರುತ್ತದೆ ಎನ್ನುವುದೇ ಅಚ್ಚರಿಯ ಸಂಗತಿ. ಹೀಗೆ ಪದೇ ಪದೇ ಎದುರಾಗುವ ವೈಫಲ್ಯಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆಗೆ ಸಾಧ್ಯ ಎಂದು ಉತ್ತರಿಸಬಹುದು. ಅದು ಹೇಗೆಂದರೆ:
* ನಿಮ್ಮ ವ್ಯಕ್ತಿತ್ತದ ಲಕ್ಷಣಗಳೇನೆಂಬುದರ ಉತ್ತಮ ತಿಳಿವಳಿಕೆ ಇರಲಿ. ಅಂದರೆ ನಿಮ್ಮ ನಡೆನುಡಿಗಳತ್ತ ನಿಗಾ ವಹಿಸುವುದು
* ಇತರರ ಮನ್ನಣೆಗಾಗಿ ಕಾತುರ ಬೇಡ
* ಹಿಡಿದ ಕೆಲಸವನ್ನು ತಕ್ಷಣದಲ್ಲಿ ಮುಗಿಸಿಬಿಡಬೇಕೆಂಬ ಒತ್ತಾಯಕ್ಕೆ ಮಣಿಯದಿರಿ
* ಗುರಿಯ ಬಗ್ಗೆ ಅರಿವು ಇರಲಿ, ಅದಕ್ಕೂ ಮುಂಚಿತವಾಗಿ ಗುರಿಯನ್ನು ತಲುಪುವ ದಾರಿಯ ಬಗ್ಗೆ ಮುನ್ನೋಟ ಇರಲಿ
* ಗುರಿ ಮುಟ್ಟುವ ಕ್ರಮಗಳನ್ನು ತಾಳ್ಮೆಯಿಂದ ಮುಂದುವರೆಸುವುದು ಸೂಕ್ತ

ಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತುಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತು

 ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕ

ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕ

* ಹಿಡಿದ ಕೆಲಸ ಆರಂಭಿಸುವುದಕ್ಕೆ ಮುಂಚಿತವಾಗಿ ಆತ್ಮಾವಲೋಕನ ಮಾಡುವ ಅಭ್ಯಾಸ ಇರಬೇಕು.
* ಕೈ ಹಿಡಿದ ಕೆಲಸದ ಪ್ರತಿಯೊಂದು ಹಂತದತ್ತ ಗಮನ ಇರಿಸಿಕೊಳ್ಳುವುದನ್ನು ತಪ್ಪಬಾರದು
* ಅವರಿವರನ್ನು ಅನುಕರಣೆ ಮಾಡುವ ಸ್ವಭಾವ ಇದ್ದಲ್ಲಿ ಅದರ ಬಗ್ಗೆ ಮರುವಿಮರ್ಶೆ ಮಾಡಿ
* ಹಣದ ವ್ಯವಹಾರದ ಬಗ್ಗೆ ನಿಪುಣರ ಸಲಹೆ ಪಡೆಯುವುದನ್ನು ಮರೆಯಬಾರದು
* ನಿಮ್ಮ ಸೋಲಿಗೆ ಅವರಿವರು ಕಾರಣ ಎನ್ನುವಂತಹ ಅನಿಸಿಕೆಗಳನ್ನು ಉತ್ತೇಜಿಸದಿರಿ
* ಸೋಲು ಅನಿವಾರ್ಯ ಎನ್ನುವಂತಹ ಮನ ಸ್ಥಿತಿ ಇದ್ದಲ್ಲಿ ಅದನ್ನು ಮಾರ್ಪಾಡು ಮಾಡಿಕೊಳ್ಳುವುದು
* ಕೈಹಿಡಿದ ಕೆಲಸ ಮುಗಿಸಿದೆ ಎನ್ನುವುದಷ್ಟೇ ಸಾಕು ಎನ್ನುವ ಭಾವನೆ ಬದಲಾಯಿಸಿಕೊಳ್ಳಿ
* ನಿಮ್ಮ ವ್ಯಕ್ತಿತ್ವ ಮತ್ತು ಒಳ ಶಕ್ತಿಗಳ ಬಗ್ಗೆ ಹಗಲುಗನಸು ಕಾಣುವುದನ್ನು ನಿಲ್ಲಿಸಿದಷ್ಟು ಒಳ್ಳೆಯದು.

 ಕೊನೆಯಲ್ಲಿ ಒಂದು ಪುರಾಣದ ಕತೆ...

ಕೊನೆಯಲ್ಲಿ ಒಂದು ಪುರಾಣದ ಕತೆ...

ಋಷಿಯೊಬ್ಬನಿಗೆ ಬಹಳ ವರ್ಷಗಳ ನಂತರ ಒಂದು ಗಂಡು ಸಂತಾನವಾಯಿತು. ಮಗನಿಗೆ ಅಜೇಯ ಎಂದು ನಾಮಕರಣ ಮಾಡಿದರು. ಎಲ್ಲಾ ವಿದ್ಯೆಗಳಲ್ಲಿಯೂ ಪಾರಂಗತನಾಗಿದ್ದರಿಂದ ಋಷಿಯ ಸಲಹೆ ಕೇಳಲು ರಾಜರು, ಮಂತ್ರಿಗಳು, ವ್ಯಾಪಾರಿಗಳು, ಪಂಡಿತರು ಸದಾ ಬರುತ್ತಿದ್ದರು. ಮಗ ಅಜೇಯ ಇವುಗಳನ್ನು ಗಮನಿಸುತ್ತಲೇ ಬೆಳೆದ. ಮಗನನ್ನು ಉತ್ತಮ ಜ್ಞಾನಿಯಾಗಿ ಮಾಡುವ ಹಂಬಲದಲ್ಲಿ ಮಗನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಪ್ರತಿನಿತ್ಯವೂ ಇದು ಮಾಡಬೇಕು, ಇದು ಮಾಡಬಾರದು ಎಂದು ಸೂಚನೆ ಕೊಡುತ್ತಿದ್ದ. ಆದರೆ ಅಜೇಯ ಈ ಸೂಚನೆಗಳಾವುವನ್ನು ಕೇಳಿಸಿಯೂ ಕೊಳ್ಳುತ್ತಿರಲಿಲ್ಲ. ಇದರಿಂದ ಬೇಸತ್ತ ಋಷಿ ಮಗನನ್ನು ಹಿರಿಯರಾದ ಮೇಧಾವಿ ಗುರುವಿನ ವಶಕ್ಕೆ ಒಪ್ಪಿಸಿದ. ಅಜೇಯ ಅಲ್ಲಿಯೂ ಹಳೆಯ ಚಾಳಿ ಮುಂದುವರೆಸಿದ್ದ. ಮೇಧಾವಿ ಗುರುವಿಗೆ ಅಜೇಯನ ಸ್ವಭಾವ ಎಂತಹದ್ದು ಎನ್ನುವುದು ಬಹಳ ಬೇಗ ತಿಳಿದುಬಿಟ್ಟಿತು. ಹೀಗಾಗಿ ಅವನಿಗೆ ನಿಜವಾದ ಪಾಠ ಕಲಿಸುವ ಸಲುವಾಗಿ ತನಗೆ ಇಷ್ಟವಾದದ್ದನೇ ಮಾಡಬಹುದು ಎಂದು ತಿಳಿಸಿ ಸುಮ್ಮನಿದ್ದಂತೆ ಇದ್ದ. ಆದರೆ ಶಿಷ್ಯ ಹಿಡಿದ ಪ್ರತಿಯೊಂದು ಕೆಲಸವೂ ಸೋಲಿನ ರುಚಿಯನ್ನಷ್ಟೇ ಉಣಿಸುತ್ತಿದ್ದದ್ದು. ಹೀಗೆ ಕೆಲ ವರ್ಷಗಳ ಕಾಲ ನಿತ್ಯವೂ ಸೋಲನ್ನು ಅನುಭವಿಸಿದ ಅಜೇಯ ವ್ಯಾಕುಲನಾಗಿ ಗುರುವಿನ ಕಾಲಿಗೆ ಬಿದ್ದು ಕೇಳಿದ...

"ಹೀಗೇಕೆ ಎಲ್ಲದರಲ್ಲಿಯೂ ಸೋಲುತ್ತಿದ್ದೇನೆ? ಇದೇನು ಶಾಪವೋ ಅಥವಾ ಅದೃಷ್ಟ ದೇವತೆಯ ಕೈವಾಡವೋ ದಯಮಾಡಿ ತಿಳಿಸಿ" ಎಂದು ಅಂಗಲಾಚಿದ. ಮೇಧಾವಿ ಗುರುವು ಗಂಭೀರವಾಗಿ ಹೇಳಿದ "ಈ ಪ್ರಶ್ನೆಗೆ ನಿನ್ನ ಒಳಮನಸಿನಲ್ಲಿಯೇ ಉತ್ತರವಿದೆ, ಅದನ್ನೇ ಕೇಳಬಾರದೇಕೆ?" ಅದಕ್ಕೆ ಅಜೇಯ ಹೇಳಿದ " ಇದುವರೆವಿಗೂ ನಾನು ಯಾರ ಮಾತು, ಸಲಹೆ ಕೇಳಿಲ್ಲ, ಅದು ಮಾಡು, ಇದು ಮಾಡು ಎಂದಾಗ ತಾಳ್ಮೆ ಕೆಟ್ಟು ಮನಸು ಚಂಚಲಗೊಳ್ಳುತ್ತದೆ, ನಾನು ಯಾವತ್ತು ನನ್ನ ಒಳಮನಸಿಗೆ ಪ್ರಶ್ನೆ ಕೇಳಿಲ್ಲ. ನನಗೆ ಒಳಮನಸು ಇದೆ ಎನ್ನುವುದೂ ಗೊತ್ತಿಲ್ಲ. ದಯಮಾಡಿ ಅದನ್ನಾದರೂ ತಿಳಿಸಿಕೊಡಿ" ಎಂದ. ಅದಕ್ಕೆ ಋಷಿ "ನಿನ್ನ ಸೋಲೆಲ್ಲಕ್ಕೂ ಇದೇ ಕಾರಣ" ಎಂದಾಗ ಅಜೇಯನಿಗೆ ಅರಿವಾಯಿತು. ಅಜೇಯ ಎಂಬ ಹೆಸರು ಇದ್ದ ಮಾತ್ರಕ್ಕೆ ಎಲ್ಲದರಲ್ಲೂ ಜಯ ಎಂದುಕೊಳ್ಳುವುದು ಭ್ರಮೆಯಷ್ಟೇ.

English summary
How to deal with continuos failures in life? Psychologist Dr A Sridhar gave some tips on this,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X