ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಜೀವನದಲ್ಲಿ ಸ್ಪಷ್ಟ ಸಂವಹನ ಎಷ್ಟು ಮುಖ್ಯ

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಬೇಸಿಗೆ ರಜೆಯ ಸಂಜೆಯೊಂದು ಸಣ್ಣ ಮಕ್ಕಳು ಆಟವಾಡುತ್ತಿದ್ದರು. ಎರಡು ತಂಡಗಳು ಇದ್ದವು. ಮಕ್ಕಳು ತಮ್ಮ ತಮ್ಮ ತಂಡದ ಆಟಗಾರರೊದಿಗೆ ಎದುರುಬದುರಾಗಿ ಕುಳಿತುಕೊಂಡಿದ್ದರು. ಮಧ್ಯೆದಲ್ಲಿ ಮೇಜು ಒಂದನ್ನು ಇರಿಸಿ, ಮೇಜಿನ ಮೇಲೆ ಗಾಜಿನ ಬಟ್ಟಲೊಂದನ್ನು ಇಟ್ಟು ಅದರೊಳಗೆ ಚೀಟಿಗಳನ್ನು ಹಾಕಲಾಗಿತ್ತು. ಮೇಲಿನ ಬಾಲ್ಕನಿಯೊಂದರಲ್ಲಿ ನೋಡುತ್ತಿದ್ದ ನಾನು ಅದು ಡಮ್ಶರಾಡ್ಸ್- ಸಿನಿಮಾ ಹೆಸರುಗಳನ್ನು ಗುರುತಿಸುವ ಆಟ ಎಂದುಕೊಂಡಿದ್ದೆ. ಆಟ- ಚೀಟಿಯಲ್ಲಿ ಬರೆದಿದ್ದ ಹಾಡನ್ನು ಗುರುತಿಸುವುದಾಗಿತ್ತು.

ಎರಡೂ ತಂಡದಿಂದ ಒಬ್ಬಬ್ಬರು ಮಕ್ಕಳು ಬಂದರು. ತಂಡ "ಎ" ಕಡೆಯಿಂದ ಒಬ್ಬ ಹುಡುಗ ಗಾಜಿನ ಬಟ್ಟಲಿನಿಂದ ಚೀಟಿಯೊಂದನ್ನು ತೆಗೆದುಕೊಂಡು, ಅದರಲ್ಲಿ ಬರೆದಿದ್ದನ್ನು ಮನಸ್ಸಿನಲ್ಲಿ ಓದಿದ ನಂತರ, ಮೇಜಿನ ಮೇಲೆ ತನ್ನ ಕೈ ಬೆರಳುಗಳನ್ನು ತಬಲದಂತೆ ನುಡಿಸಲು/ ಬಡಿಯಲು ಶುರುಮಾಡಿದ. ಎದುರಾಳಿ ಮಗು (ತಂಡ "ಬಿ") ನುಡಿಸುತ್ತಿದ್ದ ಹಾಡನ್ನು ಗುರುತಿಸಬೇಕಿತ್ತು. ಆಟ ಬಹಳ ಕುತೂಹಲಕಾರಿಯಾಗಿತ್ತು.

ತಂಡ (ಬಿ) ಮಗು ಮೇಜು ಬಡಿತದಿಂದ ಬರುತ್ತಿದ್ದ ಹಾಡನ್ನು ಗುರುತಿಸಲು ಬಹಳ ಕಷ್ಟಪಡುತ್ತಿತ್ತು. "ನಿನಗೆ ಬಹಳ ಇಷ್ಟವಾದ ಹಾಡು ಇದು, ನಿನಗೆ ಈ ಹಾಡು ಯಾವುದೆಂದು ತಿಳಿದಿದೆ, ಗಮನವಿಟ್ಟು ತನ್ನ ಮೇಜು ಬಡಿತವನ್ನು ಆಲಿಸು "ಎಂದೆಲ್ಲಾ ಸುಳಿವುಗಳನ್ನು ಕೊಟ್ಟರೂ ಸಹ, ಮಗು ಹಾಡನ್ನು ಗುರುತಿಸಲು ಸಾಧ್ಯವಾಗಲಿಲ್ಲ., ವಿಫಲವಾಯಿತು. ನಿಗದಿತ ಸಮಯ ಮೀರಿದ ಮೇಲೆ, ಹಾಡನ್ನು ನುಡಿಸುತ್ತಿದ್ದ ಹುಡುಗ (ತಂಡ ಎ) " ನಾನು ಎಷ್ಟು ಸ್ಪಷ್ಟವಾಗಿ ಹಾಡು ನುಡಿಸಿದರೂ ಸಹ, ಇಷ್ಟು ಸುಲಭವಾದ ಹಾಡನ್ನು ಗುರುತಿಸದಾದೆಯಲ್ಲಾ ನೀನು, ಆಟದಲ್ಲಿ ನೀನು ಸೋತೆ ಎಂದು ಗೇಲಿಮಾಡುತ್ತಾ ನಕ್ಕನು.

Importance of Clear Communication in life

ಪೆಚ್ಚು ಮೋರೆ ಹಾಕಿಕೊಂಡಿದ್ದ ಮಗು (ತಂಡ ಬಿ)
ಇಷ್ಟು ಸುಲಭದ ಹಾಡನ್ನು ಬಹಳ ಸರಳವಾಗಿ ಸುಲಭವಾಗಿ ನುಡಿಸಬಹುದಿತ್ತು. ನೀನು ನುಡಿಸಿದ್ದು ಯಾವ ಹಾಡು ಎನ್ನಯವುದು ನನಗೆ ಅರ್ಥವೇ ಆಗಲಿಲ್ಲ. ನಿನಗೆ ನುಡಿಸಲು ಬಾರದು, ನೀನು ನುಡಿಸುವಲ್ಲಿ ಸ್ಪಷ್ಟತೆ ಇರಲಿಲ್ಲ ಎಂದಾಗ ಇಬ್ಬರಲ್ಲೂ ಜಗಳ ಹಾಗು ಮನಸ್ತಾಪ ಶುರುವಾಯಿತು.

ಹುಡುಗ ತಾನು ನುಡಿಸಿದ ಹಾಡು ಯಾರು ಯಾರಿಗೆ ಅರ್ಥ ವಾಯಿತು? ಗುರುತಿಸಲು ಸಾಧ್ಯವಾಯಿತು? ಕೈ ಮೇಲೆ ಮಾಡಿ ಎಂದಾಗ ಕೆಲವೇ ಕೈಗಳು ಮೇಲೆ ಕಾಣಸಿಕ್ಕಿದವು. ಅಂದರೆ ಗುಂಪಿನಲ್ಲಿ ಕೆಲವು

* ಮಕ್ಕಳಿಗೆ ಹಾಡು ಗುರುತಿಸಲು ಸಾಧ್ಯವಾಗಿತ್ತು.
* ಕೆಲವು ಮಕ್ಕಳಿಗೆ ಹಾಡು ಗುರುತಿಸಲು ಸಾಧ್ಯ ವಾಗಲಿಲ್ಲ.
* ಇನ್ನೂ ಕಲವರು "ಈ ಹಾಡು ಇರಬಹುದೇನೋ!" ಎಂದು ಅಸ್ಪಷ್ಟವಾಗಿ ಊಹಿಸಿದ್ದರು ಅಷ್ಟೇ.

ಇದನ್ನು ತಿಳಿದ ಹುಡುಗನಿಗೆ ತಾನು ಇಷ್ಟು ಸ್ಪಷ್ಟವಾಗಿ ನುಡಿಸಿದರೂ ಸಹ ಕೆಲವು ಮಕ್ಕಳಿಗೆ ಏಕೆ ತಿಳಿಯದಾಯಿತು? ಕೆಲವರು ಮಾತ್ರ ಗುರುತಿಸಿದರು ಮತ್ತು ಕೆಲವರು ಅಸ್ಪಷ್ಟವಾಗಿ ಊಹಿಸುತ್ತಿದ್ದರು ಅಷ್ಟೇ.. ಏಕೆ ಹೀಗಾಯಿತು ಎಂಬ ಗೊಂದಲ ಶುರುವಾಯಿತು.

Importance of Clear Communication in life

ಅನೇಕ ಬಾರಿ ನಮಗೂ ಈ ಅನುಭವ ಆಗಿದೆ ಅಲ್ಲವೇ? ವೈಯುಕ್ತಿಕ, ವೃತ್ತಿ ಕ್ಷೇತ್ರ, ಸ್ನೇಹ ಬಳಗಗಳಲ್ಲಿ ಅನೇಕ ತಪ್ಪು ತಿಳುವಳಿಕೆಗಳು (mis understanding), ಘರ್ಷಣೆಗಳಿಗೆ ಕಾರಣ ನಮ್ಮ ಸಂವಹನದಲ್ಲಿ, ವಿಚಾರ- ಭಾವನೆಗಳನ್ನು ವ್ಯಕ್ತಡಿಸುವಲ್ಲಿ ಮತ್ತು ಅರ್ಥೈಸಿಕೊಳ್ಳುವಲ್ಲಿನ ಅಸ್ಪಷ್ಟತೆ ಎಂದರೆ ತಪ್ಪಾಗಲಾರದು.

ನಮ್ಮ ಆಲೋಚನೆಗಳು, ವಿಚಾರಗಳು ನಿರ್ಧಾರಗಳು ನಮಗೆ ಬಹಳ ಸ್ಪಷ್ಟವಾಗಿರುತ್ತವೆ. ಅವುಗಳನ್ನು ವ್ಯಕ್ತಪಡಿಸುವ ರೀತಿ, ಇತರರಿಗೆ ಅರ್ಥ ಮಾಡಿಸುವ ವಿಧಾನ ನಮಗೆ ಸ್ಪಷ್ಟವಾಗಿರುತ್ತದೆ.ನಾವು ಬಳಸುವ ಪದಗಳ ಆಯ್ಕೆ, ಮೇಲೆ ನಮಗೆ ಗಾಢವಾದ ನಂಬಿಕೆ ಇರುತ್ತದೆ. ಆದರೆ ಇತರರು ಅರ್ಥಮಾಡಿಕೊಳ್ಳುವ ವೇಗ, ರೀತಿ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಇದು ತಪ್ಪು ತಿಳುವಳಿಕೆಗಳು, ಮನಸ್ತಾಪ, ಘರ್ಷಣೆಗಳು ಉಂಟಾಗಬಹುದು.

Importance of Clear Communication in life

ಸಂಭವನೀಯ ಕಾರಣಗಳು:

* ನಾವು ಯಾರಿಗಾದರೂ ಏನಾದರೂ ಹೇಳುವಾಗ, ವಿಚಾರ, ಭಾವನೆಗಳನ್ನು ವ್ಯಕ್ತಪಡಿಸುವಾಗ ಇತರರಿಗೂ ಸಹ ತಮ್ಮಂತೆಯೇ ಅಂಶಗಳು ಸ್ಪಷ್ಟವಾಗಿದೆ ಎಂದು ಊಹಿಸಿಬಿಡುತ್ತೇವೆ.

* ನಮ್ಮ ಆಲೋಚನೆಗೆ ತಕ್ಕಂತೆ ಇತರರೂ ಸಹ ಸಮವಾಗಿ ಯೋಚಿಸಬೇಕು, ವರ್ತಿಸಬೇಕೆಂದು ನಿರೀಕ್ಷಿಸುತ್ತೇವೆ.

* ಒಂದು ವೇಳೆ ಇತರರಿಗೆ ತಮ್ಮಂತೆಯೇ ಆಲೋಚನೆ ಹಾಗು ವಿಚಾರದ ಅರಿವು ಮತ್ತು ಆಳ ಅರ್ಥವಾಗಿಲ್ಲ ಎಂದು ತಿಳಿದಾಗ, ಸಿಟ್ಟಾಗುತ್ತೇವೆ. ಇಷ್ಟು ದಿನಗಳಿಂದ, ವರುಷಗಳಿಂದ ಜೊತೆಗಿದ್ದರೂ ಸಹ ತನ್ನನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಬೇಸರ ಉಂಟಾಗುತ್ತದೆ.

* ಇತರರಿಗೆ ತಮ್ಮಂತೆ ಪ್ರಬುದ್ಧತೆ ಇಲ್ಲ ಎಂದುಕೊಂಡು ಬಿಡುತ್ತೇವೆ.

* ಪ್ರತಿಯೊಬ್ಬರ ಆಲೋಚನಾ ಸಾಮರ್ಥ್ಯ, ರೀತಿ, ವಿಚಾರಧಾರೆಗಳು, ಗ್ರಹಿಕೆ, ಅರ್ಥೈಸಿಕೊಳ್ಳುವ ವಿಧಾನ, ವೇಗ ವಿಭಿನ್ನವಾಗಿರುತ್ತದೆ ಎಂದು ಮರೆತುಬಿಡುತ್ತೇವೆ.

* ಹೀಗಿರುವಾಗ ಎಷ್ಟೋ ವರ್ಷಗಳಿಂದ ಗೊತ್ತಿದ್ದರೂ ಹಾಗು ಜೊತೆಗಿದ್ದರೂ ಸಹ, ಪ್ರತಿ ಮನುಷ್ಯನ ಕಲಿಕೆ, ಜೀವನಾನುಭವ ,ಕಾಲಕ್ಕೆ ತಕ್ಕಂತೆ ಜಗತ್ತಿನ ಬದಲಾವಣೆಗಳಿಗೆ ಹೊಂದಿಕೊಳ್ಳುವ, ಸವಾಲುಗಳನ್ನು ಅರ್ಥೈಸಿಕೊಳ್ಳುವ, ಎದುರಿಸುವ ರೀತಿ, ಪ್ರತಿ ವರ್ತಿಸುವ ರೀತಿಯಲ್ಲಿ‌ ಬದಲಾವಣೆಗಳನ್ನು ಕಾಣಬಹುದು. ಮೂಲಭೂತ ಸ್ವಭಾವದಲ್ಲಿ ಅಂತಹ ವ್ಯತ್ಯಾಸ ಕಂಡುಬರದಿದ್ದರೂ, ನಮ್ಮಲ್ಲೂ ಮತ್ತು ಇತರರಲ್ಲೂ ಬದಲಾವಣೆ ಸಹಜ ಹಾಗು ಅದು ನೈಸರ್ಗಿಕ ಕೂಡ.

* ಹಾಗಾಗಿ ಜೊತೆಗಿರುವವರು ನಮ್ಮ ವಿಚಾರಧಾರೆಗಳು ಅಥವಾ ಅಂಶಗಳನ್ನು ಸರಿಯಾಗಿ ಅರ್ಥವಾಗಿಲ್ಲ ಎಂದು ಎನಿಸಿದಾಗ, ಸಂಯಮ ಕಳೆದುಕೊಳ್ಳದೆ ಸ್ಪಷ್ಟವಾಗಿ ಇನ್ನೊಮ್ಮೆ ವಿವರಿಸಿ.

*ಹೇಳುತ್ತಿರುವ ವಿಚಾರ ಸ್ಪಷ್ಟವಾಗಿ ಅರ್ಥವಾಗಲಿಲ್ಲ ಎಂದಾಗ ಮತ್ತೊಮ್ಮೆ ಕೇಳಿ ತಿಳಿಯುವ ಪ್ರಯತ್ನ ಸಹ ಮಾಡಬೇಕು. ಉತ್ತಮ ಆಲಿಸುವಿಕೆಯೂ ಮುಖ್ಯವಾದ ಅಂಶವಾಗಿದೆ.

* ವಿಷಯವನ್ನು ಪುನರಾವರ್ತಿತವಾಗಿ ಪದೇ ಪದೇ ಹೇಳುವುದಕ್ಕಿಂತ
- ಸರಳವಾಗಿ ಹೇಳುವುದರಿಂದ
- ಸ್ಪಷ್ಟವಾಗಿ ಹೇಳುವುದು
- ತಿಳಿಸುವ ವಿಧಾನ
-ಬಳಸುವ ಮಾಧ್ಯಮ ಹೆಚ್ಚು ಪರಿಣಾಮಕಾರಿಯನ್ನಾಗಿಸುತ್ತದೆ.

ಸ್ಪಷ್ಟ ಹಾಗು ಉತ್ತಮ ಸಂವಹನ ದೈನಂದಿನ ಜೀವನ‌ ಚಟುವಟಿಗೆಗಳಿಗೆ ಬಹಳ ಮುಖ್ಯ. ಇದರಿಂದ ಅನಗತ್ಯ ಒತ್ತಡಗಳು ಕಡಿಮೆಯಾಗುತ್ತದೆ. ಘರ್ಷಣೆಗಳು , ಮನಸ್ತಾಪಗಳು‌ ದೂರವಾಗುತ್ತದೆ. ಸಂಬಂಧಗಳು ಉತ್ತಮಗೊಳ್ಳುತ್ತದೆ. ಪ್ರಯತ್ನಿಸಿ.

ಅಂದ ಹಾಗೆ "ಮೇಜಿನ ಮೇಲೆ ನುಡಿಸುವ ಹಾಡನ್ನು ಗುರುತಿಸುವ ಆಟ ಬಹಳ ಕುತೂಹಲಕಾರಿಯಾಗಿದೆ, ಕುಟುಂಬದೊಂದಿಗೆ ‌ ಒಮ್ಮೆ‌ಆಡಿ ಆನಂದಿಸಿ.. ನಿಮ್ಮ ಅನುಭವ ತಿಳಿಸಿ.

English summary
Importance of Clear Communication: Communication not only conveys information, trust with others and prevents problems and gives direction in work or life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X