• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ನಿಮಿಷ ಒತ್ತಡ: ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿ

|
Google Oneindia Kannada News

ನಮ್ಮನ್ನು ಬಾಧಿಸುವ ಅನೇಕ ಕಾಯಿಲೆಗಳಿಗೆ ಒತ್ತಡ ಕಾರಣ ಎಂದು ಕೇಳಿರುತ್ತೇವೆ. ಸ್ಟ್ರೆಸ್ ನಿವಾರಣೆಗೆ ಗುಂಡು ಪಾರ್ಟಿ, ಡ್ಯಾನ್ಸ್ ಪಾರ್ಟಿ, ಪಿಕ್ನಿಕ್ ಪಾರ್ಟಿ ಇತ್ಯಾದಿ ಮಾಡುವುದನ್ನು ನಾವು ನೋಡಿರುತ್ತೇವೆ. ಶಾಲೆ ಕಾಲೇಜು ಓದುತ್ತಿರುವ ಮಕ್ಕಳಿಗೆ ಸ್ಟ್ರೆಸ್ ಆದರೆ ಏನು ಮಾಡುವುದು?

ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎನ್ನುತ್ತದೆ ಒಂದು ಅಧ್ಯಯನ. ಶಾಲೆ ಕಾಲೇಜು ಓದುವ ಮಕ್ಕಳ ಮಾನಸಿಕ ಬೆಳವಣಿಗೆಗೆ ಸ್ಟ್ರೆಸ್ ಸಹಕಾರಿಯಂತೆ. ಒತ್ತಡಕ್ಕೆ ಸಿಲುಕಿದಾಗ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಒಳ್ಳೆಯದೇ ಆಗಿರುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಇದಕ್ಕಾಗಿ 30 ನಿಮಿಷಗಳ ಆನ್‌ಲೈನ್ ತರಬೇತಿ ಸೆಷನ್‌ನ ಪ್ರಯೋಗ ಕೂಡ ಮಾಡಿ ಸಾಬೀತು ಮಾಡಿದ್ದಾರೆ.

ಕೆಲಸದ ಒತ್ತಡ ಹಾಗೂ ನಿರ್ವಹಣಾ ಕ್ರಮಗಳುಕೆಲಸದ ಒತ್ತಡ ಹಾಗೂ ನಿರ್ವಹಣಾ ಕ್ರಮಗಳು

ಅಮೆರಿಕದ ಆಸ್ಟಿನ್‌ನ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಮನೋವಿಜ್ಞಾನಿಯಾಗಿರುವ ಡಾ. ಡೇವಿಡ್ ಯೇಗರ್ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಪ್ರೌಢಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗಿನ 4 ಸಾವಿರ ವಿದ್ಯಾರ್ಥಿಗಳನ್ನು ಒಳಗೊಳ್ಳಲಾಗಿದೆ.

ಇದರಲ್ಲಿ ಒತ್ತಡವು ನಮಗೆ ಹೇಗೆ ಸಕಾರಾತ್ಮಕವಾಗಿ ಪರಣಿಸುತ್ತದೆ, ನಮ್ಮ ಬೆಳವಣಿಗೆಗೆ ಒತ್ತಡವನ್ನು ಹೇಗೆ ಉಪಯೋಗಿಸಬಹುದು ಎಂಬುದು ಈ ಅಧ್ಯಯನದಿಂದ ಕಂಡುಕೊಳ್ಳಬಹುದು.

 ಏನಿದು ತರ್ಕ?

ಏನಿದು ತರ್ಕ?

ಒತ್ತಡದ ಸನ್ನಿವೇಶದಿಂದ ನಾವು ಪಲಾಯನ ಮಾಡಲಾಗುವುದಿಲ್ಲ. ಒತ್ತಡವನ್ನು ಒತ್ತಡದಿಂದಲೇ ಎದುರಿಸಬೇಕು. ನಾವು ಒತ್ತಡದ ಸ್ಥಿತಿ ಎದುರಿಸಿದರೆ ಅದು ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ. ಒತ್ತಡ ಸಂದರ್ಭದಲ್ಲಿ ನಮ್ಮ ಹೃದಯದ ಬಡಿತ ಹೆಚ್ಚಾಗುತ್ತದೆ. ಇದು ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಈ ಅಧ್ಯಯನ ನಡೆಸಿದ ಮನೋವಿಜ್ಞಾನಿ ಡಾ. ಡೇವಿಡ್ ಯೇಗರ್ ಹೇಳುತ್ತಾರೆ.

ನಾವು ಹದಿಹರೆಯದವರಿಗೆ ಒತ್ತಡದ ಸನ್ನಿವೇಶದ ಬಗ್ಗೆ ಇರುವ ಕಲ್ಪನೆ, ಒತ್ತಡ ಸನ್ನಿವೇಶಗಳಿಗೆ ಅವರು ನೀಡುವ ಸ್ಪಂದನೆ ಇವುಗಳನ್ನು ಬದಲಿಸಲು ಯತ್ನಿಸುತ್ತಿದ್ದೇವೆ. "ನೀವು ಕಷ್ಟಪಟ್ಟು ಏನಾದರೂ ಮಾಡುತ್ತಿರುವಾಗ ನಿಮ್ಮ ದೇಹಕ್ಕೆ ಸ್ಟ್ರೆಸ್ ಆದಂತಹ ಭಾವನೆ ಬರುತ್ತದೆ. ಅದು ವಾಸ್ತವವಾಗಿ ಒಳ್ಳೆಯ ಸಂಗತಿ. ಇದನ್ನು ನಾವು ಮಕ್ಕಳಿಗೆ ತಿಳಿಸಲು ಬಯಸುತ್ತೇವೆ" ಎಂದು ಡಾ. ಡೇವಿಡ್ ಅಭಿಪ್ರಾಯಪಡುತ್ತಾರೆ.

ಕೋವಿಡ್‌ ಲಾಕ್‌ಡೌನ್ ಎಫೆಕ್ಟ್: ಮನೋವಿಜ್ಞಾನ ಕೋರ್ಸ್‌ಗೆ ಹೆಚ್ಚಾಯ್ತು ಬೇಡಿಕೆಕೋವಿಡ್‌ ಲಾಕ್‌ಡೌನ್ ಎಫೆಕ್ಟ್: ಮನೋವಿಜ್ಞಾನ ಕೋರ್ಸ್‌ಗೆ ಹೆಚ್ಚಾಯ್ತು ಬೇಡಿಕೆ

 30 ನಿಮಿಷಗಳ ಟ್ರೈನಿಂಗ್ ಸೆಷನ್

30 ನಿಮಿಷಗಳ ಟ್ರೈನಿಂಗ್ ಸೆಷನ್

ಒತ್ತಡದಿಂದ ಕೂಡಿದ 30 ನಿಮಿಷಗಳ ತರಬೇತಿ ತರಗತಿ ಮಕ್ಕಳ ಮಾನಸಿಕ ಕ್ಷಮತೆ ಮತ್ತು ಅವರ ವಿದ್ಯಾಭ್ಯಾಸದ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಈ ವಿಜ್ಞಾನಿ ನೇತೃತ್ವದ ತಂಡ ಪ್ರಯೋಗ ಮಾಡಿ ತೋರಿಸಿದೆ. ಸ್ಟ್ರೆಸ್ ಆದಾಗ ನಮ್ಮ ಹೃದಯ ಬಡಿದುಕೊಳ್ಳುವುದರಿಂದ ಶಕ್ತಿ ಸಂಚಯವಾಗುತ್ತದೆ. ನಮ್ಮ ಮಿದುಳಿಗೆ ಆಕ್ಸಿಜನ್ ಹರಿವು ಸರಾಗವಾಗುತ್ತದೆ ಎನ್ನುತ್ತಾರೆ ಈ ವಿಜ್ಞಾನಿ.

 ವಿವಿಧ ಪ್ರಯೋಗಗಳು

ವಿವಿಧ ಪ್ರಯೋಗಗಳು

ಒಂದು ಪ್ರಯೋಗದಲ್ಲಿ 166 ಮಕ್ಕಳನ್ನು ಆಯ್ದುಕೊಳ್ಳಲಾಗಿತ್ತು. ಅದರಲ್ಲಿ ಅವರಿಗೆ ನಮ್ಮ ಮಿದುಳಿನ ಬಗ್ಗೆ ಒಂದು ಆನ್‌ಲೈನ್ ಸೆಷನ್ ನಡೆಸಲಾಯಿತು. ಆದರೆ, ಮುಖ್ಯ ವಿಚಾರ ಅದಲ್ಲ. ಸೆಷೆನ್ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಒಬ್ಬೊಬ್ಬ ವಿದ್ಯಾರ್ಥಿಗೂ ಅವರ ವೈಯಕ್ತಿಕ ಶಕ್ತಿ ಮತ್ತು ದೌರ್ಬಲ್ಯಗಳ ಬಗ್ಗೆ ಮಾತನಾಡಲು ತಿಳಿಸಲಾಯಿತು. ಹಾಗೆಯೇ, ಕುಚೋದ್ಯ ಮಾಡಿ ಸ್ಟ್ರೆಸ್ ಉಂಟು ಮಾಡಲೆಂದೇ ಕೆಲವರನ್ನು ಅಣಿಗೊಳಿಸಲಾಗಿತ್ತು. ಇದರಿಂದ ಮಕ್ಕಳಲ್ಲಿ ಉಂಟಾದ ಒತ್ತಡ ಹಾಗೂ ಹೃದಯ ಬಡಿತ ಇತ್ಯಾದಿ ದೈಹಿಕ ಸ್ಪಂದನೆಗಳನ್ನು ಅವಲೋಕಿಸಲಾಯಿತು.

ಮತ್ತೊಂದು ಪ್ರಯೋಗದಲ್ಲಿ, ಇದೇ ರೀತಿಯ ಆನ್‌ಲೈನ್ ಸೆಷನ್ ಅನ್ನು ಬೇರೆ ಗುಂಪಿನ ಮಕ್ಕಳಿಗೆ ತೋರಿಸಲಾಯಿತು. ಇದರಿಂದ ಆ ಮಕ್ಕಳ ಶೈಕ್ಷಣಿಕ ಸಾಧನೆ ಉತ್ತಮಗೊಂಡಿದ್ದು ಕಂಡು ಬಂದಿತು. ಹಾಗೆಯೇ, ಈ ಒತ್ತಡದ ಸೆಷನ್‌ಗಳಲ್ಲಿ ಭಾಗಿಯಾದ ಮಕ್ಕಳಲ್ಲಿ ಹಲವು ತಿಂಗಳ ಬಳಿಕವೂ ಹೆಚ್ಚು ಆತಂಕ ಕಾಣಿಸಲಿಲ್ಲವಂತೆ.

 ವಿಜ್ಞಾನಿ ಸಲಹೆ

ವಿಜ್ಞಾನಿ ಸಲಹೆ

ಒತ್ತಡವನ್ನು ನೆಗಟಿವ್ ಆಗಿ ನೋಡುವ ಧೋರಣೆಯನ್ನು ನಿಲ್ಲಿಸಬೇಕು. ಒತ್ತಡ ನಿವಾರಿಸಲು ಯೋಗ, ಧ್ಯಾನ ಮಾಡಿ ಎಂದು ಜನರು ಸಲಹೆ ನೀಡುತ್ತಾರೆ. ಆದರೆ, ಹಾಗೆ ಮಾಡಿದರೆ ಒತ್ತಡದಿಂದ ನೀವು ತಾತ್ಕಾಲಿಕವಾಗಿ ದೂರ ಉಳಿಯಬಹುದೇ ಹೊರತು ಒತ್ತಡಕ್ಕೆ ಕಾರಣವಾಗುವ ಸಂಗತಿಯನ್ನು ಎದುರಿಸಲು ಆಗುವುದಿಲ್ಲ" ಎಂದು ಟೆಕ್ಸಾಸ್ ಯೂನಿವರ್ಸಿಟಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Stress in teenagers can be reduced by a single 30-minute online training session aimed at encouraging a growth mindset and seeing the body’s reaction to stress as a positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X