ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಸುರಕ್ಷತೆಯ ಭಾವನೆ ಬಹಳ ವಿಚಿತ್ರವಾದುದು

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಸುರಕ್ಷತೆಯ ಅನುಭವ, ಸುರಕ್ಷತೆಯ ಭಾವನೆ ಬಹಳ ವಿಚಿತ್ರವಾದುದು. ಇದು ಒಂದು ವೈಯುಕ್ತಿಕ ಅನುಭವ.

ನೀವು ನಿಮ್ಮ ಕುಟುಂಬದೊಂದಿಗೆ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದೀರಿ ಎಂದುಕೊಳ್ಳೋಣ. ಎದುರಿಗೆ ದಟ್ಟವಾದ ಹಸಿರು ಪೊದೆ ಕಾಣುತ್ತದೆ. ಆ ದಟ್ಟ ಪೊದೆಯೊಳಗೆ ಏನೋ ಚಲಿಸಿದಂತೆ ಭಾಸವಾಗುತ್ತದೆ. ಹುಲಿ ಇರಬಹುದೇನೋ ಎಂದು ಎನಿಸುತ್ತೀರಿ. ಗಾಬರಿಯಾಗುತ್ತೀರಿ. ನಿಮ್ಮ ಜೊತೆಗಿರುವವರು ಹುಲಿ ಇಲ್ಲ ಎಂದು ಎನಿಸುತ್ತಾರೆ. ಅಷ್ಟಾಗಿ ಹೆದರದೆ ಸಂಚಾರ ಮುಂದುವರೆಸುತ್ತಾರೆ. ಅಲ್ಲಿ ನಿಜವಾಗಿಯೂ ಹುಲಿ ಇದೆಯೇ?

ಭಯದ ಬೇರು ಯಾವುದು? ಇವರಿಗೇಕೆ ಅಷ್ಟೊಂದು ಭಯ?ಭಯದ ಬೇರು ಯಾವುದು? ಇವರಿಗೇಕೆ ಅಷ್ಟೊಂದು ಭಯ?

ಈ ಕೆಳಗಿನ ಅಂಶಗಳನ್ನು ಪರಿಗಣಿಸಿ
1. ಪೊದೆಯೊಳಗೆ ಹುಲಿ ಇದೆ ಎಂದು ನೀವು ಭಾವಿಸುತ್ತೀರಿ. ಆದರೆ ವಾಸ್ತವವಾಗಿ ಅಲ್ಲಿ ಹುಲಿ ಇರುವುದಿಲ್ಲ.
2. ಪೊದೆಯೊಳಗೆ ಹುಲಿ ಇಲ್ಲ ಎಂದು ನೀವು ಭಾವಿಸುತ್ತೀರಿ. ಆದರೆ ವಾಸ್ತವವಾಗಿ ದಾಳಿ ಮಾಡಲು ಸಿದ್ದವಿರುವ ಹುಲಿಯೊಂದು ಇದೆ.
ನಮ್ಮಲ್ಲಿ ಹೆಚ್ಚಿನವರು ಮೊದಲ ಅಂಶವನ್ನು ಪರಿಗಣಿಸುವುದೇ ಹೆಚ್ಚು. ಮೊದಲ ಅಂಶ ಹೆಚ್ಚಿನ ಆತಂಕ ಹಾಗು ಭಯ ಹುಟ್ಟಿಸಿದರೆ ಎರಡನೆಯ ಅಂಶ ನಿರ್ಲಕ್ಷ, ಸನ್ನಧ್ಧತೆಯ ಕೊರತೆಗೆ ( lack of preparedness) ಈಡುಮಾಡುತ್ತದೆ. ಇದರಿಂದ ಎಣಿಸದ್ದಕ್ಕಿಂತ ಹೆಚ್ಚಿನ ತೊಂದರೆ ಎದುರಾಗಬಹುದು.

ಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತುಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತು

ಉದಾಹರಣೆಗೆ, ಮಾಧ್ಯಮದಲ್ಲಿ ಹೇಳುವ , ಪ್ರಸಾರವಾಗುವ ಪ್ರಪಂಚದಲ್ಲಿನ ಅನೇಕ ವಿಚಾರಗಳು, ಕೊಲೆಗಳು, ಆಪತ್ತು, ವಿಪತ್ತು, ಆರ್ಥಿಕ ಪ್ರಕ್ಷುಭ್ಧತೆ, ನೈಸರ್ಗಿಕ ಅಸಮತೋಲನ, ಸಂಭವಿಸುವ ಭಯಾನಕ ಸಂಗತಿಗಳ ಬಗ್ಹೆ ಹೆಚ್ಚಿನ ಗಮನ ಹರಿಸುತ್ತೇವೆ. ಅಪಾಯ ಎಲ್ಲೆಡೆ ಅದೇ ತೀವ್ರತೆಯಲ್ಲಿ ಇರುವುದಿಲ್ಲ. ಕೆಲವು ಸ್ಥಳಗಳಲ್ಲಿ ಪರಿಸ್ಥಿತಿಗಳು ಹೆಚ್ಚು ಅಪಾಯಕಾರಿಯಾಗಿರಬಹುದು. ಕೆಲವು ಪ್ರದೇಶದ ಜನರಲ್ಲಿ ಆತಂಕದ ತೀವ್ರತೆ ಹೆಚ್ಚಿರಬಹುದು. ಕೆಲವು ಸಂದರ್ಭದಲ್ಲಿ ಅಪಾಯ ಹೆಚ್ಚಿದ್ದರೂ ಸಹ ಸನ್ನದ್ದತೆಯ ಕಾರಣ ಆತಂಕ ಕಡಿಮೆ ಇರಬಹುದು. ಇನ್ನೂ ಕೆಲವೆಡೆ, ನಮ್ಮ ನಮ್ಮ ಸ್ಥಳೀಯ ಪರಿಸ್ಥಿತಿ ಸಾಮಾನ್ಯವಾಗಿದ್ದು , ಕಡಿಮೆ ಅಪಾಯಕಾರಿಯಾಗಿರಬಹುದು. ಇದನ್ನು ಅರ್ಥೈಸಿಕೊಂಡು ಪರಿಸ್ಥಿತಿಗೆ ತಕ್ಕಂತೆ ಸನ್ನದ್ದರಾಗಿರಬೇಕು ಹಾಗು ಎದುರಿಸಬೇಕು.

ಕುಟುಂಬ ಸದಸ್ಯರು ಹಾಗು ಗೆಳೆಯರೊಂದಿಗಿನ ಅನುಭವ

ಕುಟುಂಬ ಸದಸ್ಯರು ಹಾಗು ಗೆಳೆಯರೊಂದಿಗಿನ ಅನುಭವ

ಬಾಲ್ಯದಲ್ಲಿನ ಪರಿಸರ, ಕುಟುಂಬ ಸದಸ್ಯರು ಹಾಗು ಗೆಳೆಯರೊಂದಿಗಿನ ಅನುಭವಗಳು ನಮ್ಮ ಮೇಲೆ ಬಹಳವಾಗಿ ಪ್ರಭಾವ ಬೀರಿರುತ್ತದೆ. ಹಿರಿಯರೊಬ್ಬರು ಹೇಳುವ ಅವರ ಕಾಲದ, ಅವರು ಅನುಭವಿಸಿದ, ಸವಾಲುಗಳು, ಅನುಭವಗಳು, ಆತಂಕಗಳು, ನಿರೀಕ್ಷೆಗಳು ಕೇಳುವ ಮಕ್ಕಳ ಯೋಚನಾ ಕ್ರಮ, ಪರಿಸ್ಥಿತಿ ಅರ್ಥೈಸಿಕೊಳ್ಳುವ ರೀತಿ, ಸವಾಲುಗಳನ್ನು ಎದುರಿಸುವ ಕ್ರಮದಲ್ಲೂ ಛಾಯೆ ಮೂಡುತ್ತದೆ.

ಸವಾಲುಗಳು, ಅಡೆತಡೆಗಳು, ಸಮಸ್ಯೆಗಳ ಸ್ವರೂಪ ಒಂದೇ ತರಹ ಕಂಡರೂ, ಕಾಲಕಾಲಕ್ಕೆ ಅವುಗಳು ರೂಪಾಂತರವಾಗಬಹುದು. ಅಂತೆಯೇ ಪರಿಸ್ಥಿತಿ ಎದುರಿಸುವ ರೀತಿ ಒಬ್ಬರಿಂದ ಒಬ್ಬರಿಗೆ, ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ವಿಜ್ನಾನ ತಾಂತ್ರಿಕ ಹಾಗು ಆವಿಷ್ಕಾರಗಳ ಬೆಳವಣಿಗೆ ನಾವು ಸವಾಲನ್ನು ಗ್ರಹಿಸುವ ರೀತಿ, ಪರಿಹಾರ ಕಂಡುಕೊಳ್ಳುವ ಬಗೆಗಳಲ್ಲಿ ಅನೇಕ ಚೇತರಿಕೆ ಕಾಣುತ್ತದೆ.

ನಿಜವಾದ ಹುಲಿಗಳು ಯಾವುವು?

ನಿಜವಾದ ಹುಲಿಗಳು ಯಾವುವು?

ನಿಜವಾದ ಹುಲಿಗಳು ಯಾವುವು? ಅವುಗಳೊಂದಿಗಿನ ಹೋರಾಟ ಹೇಗಿರಬಹುದು?
ನಮ್ಮ ನಮ್ಮ ಜೀವನದ ಹುಲಿಗಳು ಯಾವುವು ಎಂದು ಗುರುತಿಸಿ ಅರಿತುಕೊಳ್ಳುವುದು ಮುಖ್ಯ. ಸಮಸ್ಯೆಗಳು ದೈಹಿಕವಾಗಿರಬಹುದು, ಸಾಮಾಜಿಕವಾಗಿರಬಹುದು ಹಾಗೂ ಮಾನಸಿಕವಾಗಿಯೂ ಇರಬಹುದು. ಪ್ರತಿಯೊಬ್ಬರ ಪರಿಸ್ಥಿತಿ, ಎದುರಿಸುವ ಸಾಮರ್ಥ್ಯದಲ್ಲಿ ಭಿನ್ನತೆಯನ್ನು ಕಾಣಬಹುದು.

ಗಾಳಿಗೋಪುರ ಕಟ್ಟುವುದು, ಹಗಲು ಕನಸು ಕಾಣುವುದು ಬಿಡಿ...ಗಾಳಿಗೋಪುರ ಕಟ್ಟುವುದು, ಹಗಲು ಕನಸು ಕಾಣುವುದು ಬಿಡಿ...

ಸವಾಲುಗಳು ಅನೇಕ ಆಕಾರ ಹಾಗು ಗಾತ್ರ, ತೀವ್ರತೆಗಳಲ್ಲಿ ಬರಬಹುದು. ಸಮಸ್ಯೆ ಅಥವಾ ಸವಾಲು ಗುರುತಿಸುವುದು ಮೊದಲ ಹಂತ. ಉದಾಹರಣೆಗೆ ಕೆಲಸದ ಒತ್ತಡ, ದೇಹದ ಆರೋಗ್ಯದಲ್ಲಿ ಏರುಪೇರು, ಕುಟುಂಬದೊಂದಿಗೆ ಹೊಂದಾಣಿಕೆ, ದೈಹಿಕ ಭಿನ್ನತೆ, ಸ್ನೇಹಿತರು ಅಥವಾ ಸಹೋದ್ಯೋಗಿಗಳು ಕೀಳಾಗಿ ಕಾಣುತ್ತಾರೆ ಎಂಬ ಭಯ, ನೆರೆಹೊರೆಯವರೊಂದಿಗಿನ ಒಡನಾಟ, ಕೀಳರಿಮೆ, ಹದಿಹರೆಯದವರ ಗೊಂದಲಗಳು, ಖಿನ್ನತೆ, ಎಲ್ಲರನ್ನೂ ಮತ್ತು ಎಲ್ಲದನ್ನೂ ಅನುಮಾನದಿಂದ ನೋಡುವುದು, ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು, ಬೇರೆಯವರು ತಮ್ಮನ್ನು ಎಲ್ಲಿ( judge) ನಿರ್ಣಯಿಸಿಬಿಡುತ್ತಾರೋ ಎಂದು ತಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಇರುವುದು, ಇತ್ಯಾದಿ.

ಸಂದರ್ಭಗಳನ್ನು ಗ್ರಹಿಸುವಲ್ಲಿನ ಭಿನ್ನತೆ

ಸಂದರ್ಭಗಳನ್ನು ಗ್ರಹಿಸುವಲ್ಲಿನ ಭಿನ್ನತೆ

ಒಮ್ಮೊಮ್ಮೆ ಹೆಚ್ಚಿನ ಸಂದರ್ಭಗಳು ನಮಗೆ ಸಮಸ್ಯೆಯಾಗದಿದ್ದರೂ, ನಮ್ಮ ಸುತ್ತಮುತ್ತ ಹಾಗು ಜೊತೆಗಿರುವವರು ಪರಿಸ್ಥಿತಿ ಒಂದನ್ನು, ಸಮಸ್ಯೆ ಎಂದು ಗ್ರಹಿಸಿ, ಪರಿಸ್ಥಿತಿ ಹಾಗು ಸಂದರ್ಭದ ತೀವ್ರತೆ ಯನ್ನು ನಿಗದಿಪಡಿಸಬಹುದು. ಇದರಿಂದ ಸಹಜವಾಗಿ ಆತಂಕ ಹೆಚ್ಚಾಗುತ್ತದೆ. ಅನೇಕ ಬಾರಿ ಮನಸ್ತಾಪಗಳು, ಆಗುವುದು ಇದೇ ಕಾರಣ. ಸಂದರ್ಭಗಳನ್ನು ಗ್ರಹಿಸುವಲ್ಲಿನ ಭಿನ್ನತೆ. ಪರಿಹಾರ ಕಂಡುಹಿಡಿದುಕೊಳ್ಳುವ ಭಿನ್ನತೆ.

ಈಗ, ನೀವು ಯಾವುದಾದರೂ ಹುಲಿಯ ಇರುವಿಕೆಯನ್ನು ಕಡೆಗಣಿಸಿದ್ದೀರಾ? ಅಥವಾ ಯಾವುದೇ ಒಂದು ಹುಲಿ ಇರಬಹುದು ಎಂದು ವಿಪರೀತವಾಗಿ ಯೋಚನೆ ಮಾಡಿದ್ದೀರಾ?
ಈ ಯೋಚನೆಗಳು ವ್ಯಕ್ತಿಯಲ್ಲಿ ಕೋಪ ತರಿಸಬಹುದು, ಒತ್ತಡ ಹೆಚ್ಚಿಸಬಹುದು, ಆತಂಕ, ಚಿಂತೆ ಮತ್ತು ಅಹಿತಕರ ಭಾವನೆಗಳು ಹೆಚ್ಚಾಗಬಹುದು. ಹಾಗಾದರೆ ವ್ಯಕ್ತಿ ತಾನು ಸುರಕ್ಷಿತ ಎಂದು ತಿಳಿದುಕೊಳ್ಳುವುದು ಹೇಗೆ?

ವ್ಯಕ್ತಿ ತಾನು ಸುರಕ್ಷಿತ ಎಂದು ತಿಳಿದುಕೊಳ್ಳುವುದು ಹೇಗೆ?

ವ್ಯಕ್ತಿ ತಾನು ಸುರಕ್ಷಿತ ಎಂದು ತಿಳಿದುಕೊಳ್ಳುವುದು ಹೇಗೆ?

1. ದೈಹಿಕ ವಯಸ್ಸಿನ ಅನುಗುಣವಾಗಿ ಆಗುವ ಬದಲಾವಣೆ ಆರೋಗ್ಯ ದ ಬದಲಾವಣೆಯನ್ನು, ಏರುಪೇರನ್ನು ಸಹಜವಾಗಿ ಸ್ವೀಕರಿಸಿ. ಆರೋಗ್ಯ ಕಾಪಾಡಿಕೊಳ್ಳಲು ಚಟುವಟಿಕೆ ಇಂದಿರಿ. ಉತ್ತಮ ಆಹಾರ ಸೇವಿಸಿ. ಎಲ್ಲರ ತಲೆ ನೋವಿಗೂ ಒಂದೇ ಔಷಧ ಕೆಲಸ ಮಾಡುತ್ತದೆ ಎಂಬ ನಂಬಿಕೆ ಇಂದ ಹೊರಬನ್ನಿ. ವಯಸ್ಸಾಯಿತು ಏನೋ ಆಗಿಬಿಡುತ್ತದೆ ಎಂಬ ಭಯವಾಗಲೀ ಅಥವಾ ನನಗೇನಾಗಿದೆ ನಾನು ಆರಾಮವಾಗಿಯೇ ಇದ್ದೇನೆ ಎಂಬ ನಿರ್ಲಕ್ಷ ಬೇಡ. ಉತ್ತಮ ಆಹಾರ, ದೈಹಿಕ ವ್ಯಾಯಾಮ ಹಾಗು ಕಾಲಕಾಲಕ್ಕೆ ದೈಹಿಕ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ‌.
2. ಪರಿಸ್ಥಿತಿ ಹಾಗು ಸಮಸ್ಯೆಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳುವುದು ಒಳಿತು. ಇದು ಎದುರಾಗಬಹುದಾದ ಸಂದರ್ಭಕ್ಕೆ ಬೇರೆ ಬೇರೆ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿ.
3. ದುಗುಡಗಳು ಎಲ್ಲರಿಗೂ ಎಲ್ಲಾ ವಯಸ್ಸಿನವರಿಗೂ ಸಹಜ. ಮುಕ್ತವಾಗಿ ಮಾತನಾಡಿ.

4. ನಮ್ಮ ಆತಂಕಗಳನ್ನು ಇತರರ ಮೇಲೆ ಹೇರದೇ ಇರೋಣ.

5. Technology ಅಷ್ಟೇ ಅಲ್ಲ ನಮ್ಮ ನಮ್ಮ ಯೋಚನೆಗಳೂ ನವೀಕರಿಸಿಕೊಳ್ಳೋಣ. ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ಸುರಕ್ಷತೆಯನ್ನು ಹೇಗೆ ಅನುಭವಿಸಬಹುದು?

ಸುರಕ್ಷತೆಯನ್ನು ಹೇಗೆ ಅನುಭವಿಸಬಹುದು?

6. ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳುವಲ್ಲಿ ತೊಡಗಿಸಿಕೊಂಡರೆ , ಹೋಲಿಕೆಗೆ ಬೆಲೆ ಇಲ್ಲದಂತಾಗುವುದು ಖಂಡಿತ.

7. ಧೈರ್ಯಶಾಲಿಯಾಗಿದ್ದೀರಾ? ಜಾಗರೂಕತೆ ಇಂದಿದ್ದೀರಾ? ಸಮಾಧಾನವಾಗಿದ್ದೀರಾ? ಈ ಅಂಶಗಳಿಗೆ ಹೆಚ್ಚು ಒತ್ತು ಕೊಡಿ. ಹಾಗು ಇತರರಿಗೂ ಬೆಂಬಲಿಸಿ.

8. ಒಂದು ಶಾಂತವಾದ ಸ್ಥಳದ ಆಯ್ಕೆ ಮಾಡಿ. ಮನೆ, ಇಷ್ಟವಾದ ವ್ಯಕ್ತಿಯ ಬಳಿ, ಮರದ ಕೆಳಗೆ ಹೀಗೆ.

• ಆಳವಾಗಿ ಉಸಿರಾಡಿ, ಕಣ್ಣು ಮುಚ್ಚಿ
• ಸುತ್ತಮುತ್ತಲ ಶಬ್ದಗಳನ್ನು ಆಲಿಸಿ
• ಯಾವುದಾದರೂ ಒಂದು ಸವಾಲು ಅಥವಾ ಸನ್ನಿವೇಶವನ್ನು ನೀವು ಧೈರ್ಯವಾಗಿ ಎದುರಿಸಿದನ್ನು ಹಾಗು ತೆಗೆದುಕೊಂಡ ಮುನ್ನೆಚ್ಚರಿಕೆಗಳನ್ನು ನೆನಪಿಸಿಕೊಳ್ಳಿ.
• ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಧನಾತ್ಮಕ ಚಿಂತನೆ ಬೆಳೆಯುವಲ್ಲಿ ಸಹಕಾರಿ.
• ನಿಮ್ಮನ್ನು ಪ್ರೀತಿಸುವ , ಬೆಂಬಲಿಸುವ, ನಿಮ್ಮ ಬಗ್ಗೆ ಕಾಳಜಿ ಹೊಂದಿರುವ ಒಬ್ಬರನ್ನು ಮನಸ್ಸಿಗೆ ತಂದುಕೊಳ್ಳಿ.
• ನಿಮ್ಮನ್ನು ನೀವು ಸುರಕ್ಷಿತ ಸ್ಥಳದಲ್ಲಿ ಗುರುತಿಸಿಕೊಳ್ಳಿ.

9. ಸಮಸ್ಯೆ ಗ್ರಹಿಸುವ ಬಗೆ, ಮುನ್ನೆಚ್ಚರ ಹಾಗೂ ಸನ್ನದ್ದತೆ ಇಂದ ನಮ್ಮನ್ನು ನಾವು ಒಂದು ಮಟ್ಟಿಗೆ ಸುರಕ್ಷಿತ ಎಂದು ಭಾವಿಸಬಹುದು. .
10. ಇದು ಅನಿಶ್ಚಿತವಾದ ಪೊದೆಯಲ್ಲಿನ ಹುಲಿ ಎದುರಿಸುವಲ್ಲಿ ಸಹಕಾರಿ.

English summary
Keys to feel safer- perception of the situations/ problems and preparedness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X