ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರನ್ನೂ ಕಾಡುವ, ಕಾಡಿಸುವ ಸಂಶಯ ಪಿಶಾಚಿ...

By ಡಾ. ಎ. ಶ್ರೀಧರ್, ಮನಶಾಸ್ತ್ರಜ್ಞ
|
Google Oneindia Kannada News

ಪ್ರೀತಿ, ವಾತ್ಸಲ್ಯ ಪ್ರಧಾನವಾಗಿರುವಾಗ ಗಂಡ-ಹೆಂಡತಿಯ ನಡುವೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆಂದು ಮೆಚ್ಚಿಕೊಳ್ಳುವವರು, ಅಸೂಯೆಪಡುವವರ ಮಾತುಗಳಿವರ ಕಿವಿಗೆ ಬಿದ್ದಾಗ ಹೆಮ್ಮೆ ಆಗುವುದು ಸಹಜ.

ಹೀಗೆ ಹೊಗಳಿಕೆ, ಅಭಿಮಾನ, ಅನುಕರಣೆಗೆ ಪಾತ್ರರಾದವರಲ್ಲಿಯೂ, ಇದ್ದಕ್ಕಿದ್ದಂತೆ ಎನ್ನುವಂತೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವುದು ಸಹ ಅಪರೂಪವಲ್ಲ. ಇಂತಹ ಸ್ಥಿತಿಯಲ್ಲಿ ಸಿಕ್ಕಿಕೊಂಡು ಒದ್ದಾಡಿದ ಅದಷ್ಟೋ ದಂಪತಿಗಳನ್ನು ನಾ ಕಂಡಿದ್ದೇನೆ. ಸಂಕಟದಲ್ಲಿ ಸಿಕ್ಕಿ ಖಿನ್ನರಾಗುವವರ ನಡೆನುಡಿಗಳನ್ನು ವಿಶ್ಲೇಷಿಸಿದಾಗ ಕಂಡುಬರುವ ಸಂಗತಿಗಳು ಒಂದೇ ರೀತಿಯದ್ದಾಗಿರುವುದಿಲ್ಲ.

ಮನಸನ್ನು ಗಟ್ಟಿಯಾಗಿ ಜೋಡಿಸಿದ್ದ ಭಾವರಸ ಹುಳಿಯಾದದು ಹೇಗೆ?ಮನಸನ್ನು ಗಟ್ಟಿಯಾಗಿ ಜೋಡಿಸಿದ್ದ ಭಾವರಸ ಹುಳಿಯಾದದು ಹೇಗೆ?

ಸದಾ ತನ್ನ ಸಂಗಾತಿಯ (ಪತಿ/ಪತ್ನಿ)ಯ ಚಲನವಲನಗಳನ್ನು ಗಮನಿಸುವುದು, ಅವರ ಪ್ರತಿಯೊಂದು ನಡೆನುಡಿಗಳತ್ತ ತೀವ್ರ ಗಮನ ಇರಿಸುವುದು, ಮೊಬೈಲು ಫೋನು, ಸಾಮಾಜಿಕ ಜಾಲತಾಣಗಳ ಸಂಪರ್ಕದ ರೀತಿಯನ್ನು ಗಮನಿಸುತ್ತಲೇ ಇರುವುದು …ಹೀಗೆ ನಾನಾ ರೀತಿಯಲ್ಲಿ ತಮ್ಮ ಅತ್ಯಂತ ಹತ್ತಿರದವರು ಎನ್ನುವಂತಹರ ಮೇಲೆಯೇ ಅನುಮಾನ ಮೂಡುವುದು. ಇಂತಹ ಸಂಶಯ ತುಂಬಿದ ವರ್ತನೆಗಳು ಸಂಬಂಧಗಳನ್ನು ಉಳಿಸಿಕೊಳ್ಳುವುದರ ಬದಲಿಗೆ ಮತ್ತಷ್ಟು ಹದಗೆಡಿಸುವುದಲ್ಲಿ ಸಂದೇಹವಿಲ್ಲ. ಮುಂದೆ ಓದಿ...

 ಸಂದೇಹದ ಫಲವೇ ಸಮಸ್ಯೆಗಳು

ಸಂದೇಹದ ಫಲವೇ ಸಮಸ್ಯೆಗಳು

ಇದೇ ವರ್ತನೆಯು ಮಿಕ್ಕೆಲ್ಲಾ ರೀತಿಯ ಆರೋಗ್ಯಕರ ಹೊಂದಾಣಿಕೆಯ ಮೇಲೂ ಕೆಟ್ಟ ಪ್ರಭಾವ ಬೀರದು ಎಂದು ಹೇಳಲು ಬರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಎಲ್ಲರ ಬಗ್ಗೆ, ಎಲ್ಲದರ ಬಗ್ಗೆ ಅಸಮಾಧಾನ, ಅವಿಶ್ವಾಸ , ತಳಮಳ, ಆಕ್ರೋಶ, ಅಸಹನೆಯಂತಹ ಹಲವಾರು ವರ್ತನಾ ಲಕ್ಷಣಗಳು ಬಲಗೊಳ್ಳುವ ಸಾಧ್ಯತೆಗಳಿರುತ್ತವೆ. ಇದರ ಪರಿಣಾಮದ ಫಲವಾಗಿ ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಲ್ಲದು. ಸಂದೇಹದ ಫಲವಾಗಿಯೇ ಉಂಟಾಗುವುಂತಹ ಸಮಸ್ಯೆಗಳು ಅನಾದಿಯಿಂದಲೂ ಇದೆ. ಅಷ್ಟೇಕೆ ದೇವಾನುದೇವತೆಗಳಲ್ಲಿ ಇಂತಹ ಸಮಸ್ಯೆಗಳ ಎದುರಾಗಿದ್ದವು ಎನ್ನುವುದನ್ನು ಪುರಾಣದ ಕತೆಗಳಲ್ಲಿಯೇ ಕಾಣಬಹುದು.

 ಒಮ್ಮೆ ಸಂಶಯ ಒಳಬಂದರೆ ಗಟ್ಟಿಯಾಗಿ ಉಳಿಯುತ್ತದೆ

ಒಮ್ಮೆ ಸಂಶಯ ಒಳಬಂದರೆ ಗಟ್ಟಿಯಾಗಿ ಉಳಿಯುತ್ತದೆ

ಗಂಡ-ಹೆಂಡಿರ ನಡುವೆ ಮೂಡುವ ಸಂದೇಹಗಳು ಹೆಚ್ಚಿನ ಸಮಯದಲ್ಲಿ ದಾಂಪತ್ಯದ ನಿಷ್ಠೆ, ಬದ್ಧತೆ ಮತ್ತು ಆಳವಾದ ಗೆಳೆತನದ ಲಕ್ಷಣಗಳನ್ನು ಅನುಸರಿಸದಿರುವುದು ಬಹು ಮುಖ್ಯವೆನ್ನುವಂತಹ ಕಾರಣಗಳಲ್ಲಿ ಒಂದು. ಇಂತಹ ಸಂದೇಹಗಳ ಮೂಲಕ ನಿಜ ಏನೆಂಬುದು ತಿಳಿಯಬಹುದು. ಆದರೆ, ಕೇವಲ ಊಹೆ, ಭ್ರಮೆ, ಅವರಿವರ ಮಾತುಗಳನ್ನು ನಂಬಿಯೇ ತಮ್ಮ ಆತ್ಮೀಯರು ಎನಿಸಿಕೊಂಡವರನ್ನು ಅತಿ ಸಂದೇಹಕ್ಕೆ ಒಳಪಡಿಸುವುದು ಅಪಾಯಕಾರಿ. ಊಹೆ, ತಪ್ಪು ಕಲ್ಪನೆ, ಹೋಲಿಕೆ, ಕಾರಣವಿರದ ಭಯ, ಭೀತಿ ಮತ್ತು ಭ್ರಮೆಯ ಮಾನಸಿಕತೆಯ ಲಕ್ಷಣಗಳು. ಒಮ್ಮೆಯದು ವ್ಯಕ್ತಿಯ ಮನವನ್ನು ಪ್ರವೇಶಿಸಿದರೇ ಅಲ್ಲಿಯೇ ಗಟ್ಟಿಯಾಗಿ ಉಳಿಯುವ ಪ್ರಯತ್ನವನ್ನೇ ಮಾಡುತ್ತಿರುತ್ತದೆ. ಮನಸಿನಿಂದ ಹೊರಹಾಕುವ ಸಾಮಾನ್ಯ ಪ್ರಯತ್ನಗಳಿಗೆ ಅದು ಜಗ್ಗದಂತಹ ಮನೋಬಲ.

ಕೊರೊನಾ ಲಾಕ್‌ಡೌನ್ ಹೊಡೆತಕ್ಕೆ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿಕೊರೊನಾ ಲಾಕ್‌ಡೌನ್ ಹೊಡೆತಕ್ಕೆ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿ

 ಸಂಬಂಧಗಳು ಹಳಸುವ ಮುನ್ನವೇ ಎಚ್ಚೆತ್ತುಕೊಳ್ಳಿ

ಸಂಬಂಧಗಳು ಹಳಸುವ ಮುನ್ನವೇ ಎಚ್ಚೆತ್ತುಕೊಳ್ಳಿ

ಆದುದರಿಂದಲೇ ಸಂಬಂಧಗಳು ಹಳಸುತ್ತಿದೆ ಎನ್ನುವುದರ ವಾಸನೆ ಬರುವುದಕ್ಕೂ ಮುಂಚಿತವಾಗಿ ಮನವನ್ನು ಕಾಪಾಡುವ ಗುಣಗಳಾದ ವಿಚಾರ, ವಿಮರ್ಶೆ ಮತ್ತು ವಿಶ್ವಾಸದ ಪ್ರಯತ್ನಗಳು ಸದಾ ಇರಲೇಬೇಕು. ಆತ್ಮವಿಮರ್ಶೆ ಎಂದು ಕರೆಯಲ್ಪಡುವ ಚಿಂತನಾ ಕ್ರಮ ಸಂದೇಹದ ಮನಸು ಗಟ್ಟಿಯಾಗದಂತೆ ತಡೆಗಟ್ಟಬಲ್ಲದು.

ಹೀಗೆ ಬದಲಾಗುವ ದಂಪತಿಗಳ ವರ್ತನೆಗಳನ್ನು ಚಲನಚಿತ್ರ ಕಥಾ ಸರಕಾಗಿಸಿಕೊಂಡಿರುವುದು ಎಣಿಕೆಗೆ ಸಿಗದಷ್ಟು. ಗಂಡನ ಮೇಲೆ ಹೆಂಡತಿಗೆ ಸಂದೇಹ, ಹೆಂಡತಿಯ ಮೇಲೆ ಗಂಡನಿಗೆ ಸಂಶಯ ಇರುವ ಕುಟುಂಬಸ್ಥರ ಸಂಖ್ಯೆ ಎಲ್ಲಿಯೂ ಕಡಿಮೆ ಇರಲಾರದು. ಈ ರೀತಿಯ ಪ್ರಕರಣಗಳು ಇದು ವಿಶ್ವವ್ಯಾಪಿಯಾಗಿರುವ ರೀತಿಯನ್ನು ಗಮನಿಸಿದರೆ ಮನುಷ್ಯ ಸಹಜ ಗುಣಗಳಲ್ಲಿ ಇದೂ ಒಂದೆನಿಸುವುದು. ಆದರೇ, ಹೀಗೇಕೆ? ನಮ್ಮ ಹತ್ತಿರದವರು, ಬೇಕಾದವರು, ಅವರ ಬಗ್ಗೆಯೇ ಇಂತಹ ಆಲೋಚನೆ, ಭಾವನೆಗಳು ಬರುವುದು ಏಕೆ ಎನ್ನುವುದರ ಬಗ್ಗೆ ವಿವರಣೆಗಳು ಬೇಕಾದಷ್ಟು ಸಿಗುತ್ತವೆ. ಆದರೇ ಮನೋವಿಜ್ಞಾನದ ದೃಷ್ಟಿಯಲ್ಲಿ ಇಂತಹದೊಂದು ಭಾವನೆ ಅತಿಯಾದಾಗ ಮಾನಸಿಕ ರೋಗ ಎನ್ನಬಹುದು.

 ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವುದಕ್ಕೆ ಕಾರಣ

ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವುದಕ್ಕೆ ಕಾರಣ

ಅತಿಯಾದ ಸಂದೇಹವು ವ್ಯಕ್ತಿ ಸರಾಗವಾಗಿ ಜೀವನ ಸಾಗಿಸುವ ರೀತಿಗೆ ಅಡ್ಡಿಪಡಿಸುತ್ತದೆ. ಜೊತೆಯಲ್ಲಿ ದಿನನಿತ್ಯ ಚಟುವಟಿಕೆಗಳನ್ನು ಏರುಪೇರು ಮಾಡುವಂತಹ ಗುಣ ಈ ಸಂದೇಹದ ಮಾನಸಿಕ ಸ್ಥಿತಿಯದ್ದು. ನಾವು ಎಷ್ಟೋ ಸಲ ʻʻಅವರು ಸಂದೇಹದ ಸ್ವಭಾವದವರು" ಎಂದು ಅವರಿವರ ವಿಷಯದಲ್ಲಿ ಹೇಳುವುದು ಸರ್ವೇ ಸಾಮಾನ್ಯ. ಅಂದರೆ, ಅವರೊಂದಿಗೆ ನಿಕಟ ಸಂಪರ್ಕ ಅಥವಾ ವ್ಯವಹರಿಸುವ ಸನ್ನಿವೇಶದಲ್ಲಿ ಇಂತಹದೊಂದು ವ್ಯಕ್ತಿತ್ವದ ಲಕ್ಷಣ ಬಗ್ಗೆ ಅರಿವು ಇರಲಿ ಎನ್ನುವ ಉದ್ದೇಶವೂ ಇರಬಲ್ಲದು.

ದಾಂಪತ್ಯದ ಸಂಬಂಧ ದೃಷ್ಟಿಯಿಂದಷ್ಟೇ ನೋಡುವ ಉದ್ದೇಶ ಈ ಬರಹದಲ್ಲಿರುವುದರಿಂದ, ಮಿಕ್ಕೆಲ್ಲಾ ರೀತಿಯ ಸಂಬಂಧ, ಸಂಪರ್ಕಗಳ ಬಗ್ಗೆಯೂ ತೋರ್ಪಡಿಸುವ ಸಂದೇಹವನ್ನು ಬೇರೊಂದು ಸಮಯದಲ್ಲಿ ಪ್ರಸ್ತಾಪಿಸುವೆ. ಈ ಸನ್ನಿವೇಶದಲ್ಲಿ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವುದಕ್ಕೆ ಕಾರಣಗಳಲ್ಲಿ ಒಂದಾದ ಸಂದೇಹ, ನಿರ್ವಹಣೆ, ನಿವಾರಣೆಯ ಬಗ್ಗೆ ಒಂದೆರಡು ಕಿವಿಮಾತುಗಳನ್ನು ಹೇಳುತ್ತೇನೆ.

 ಸಂದೇಹದಿಂದ ದೂರವುಳಿಯಲು ಕಿವಿ ಮಾತು

ಸಂದೇಹದಿಂದ ದೂರವುಳಿಯಲು ಕಿವಿ ಮಾತು

*ಅನಗತ್ಯ ಎನ್ನುವಂತಹ ಕೋಪ, ಮೂಗು ತೂರಿಸುವ ಸ್ವಭಾವ ಅತಿ ಎನ್ನುವಷ್ಟು ನಿಮ್ಮಲ್ಲಿದ್ದರೆ ಅದನ್ನು ಮಿತಿಗೊಳಿಸುವ ಪ್ರಯತ್ನ ಇಂದೇ ಆರಂಭಿಸಿ
* ಎಲ್ಲ ವಿಷಯಗಳನ್ನು ಇದೇ ಸರಿ, ತಪ್ಪು ಎನ್ನುವಂತಹ ಕಟ್ಟುನಿಟ್ಟಿನ ದೃಷ್ಟಿಕೋನ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳುವುದೇ ಸರಿ
* ನನಗಿರುವ ವಿಶೇಷ ಸಾಮರ್ಥ್ಯ ಅಥವಾ ದೈವಿ ಶಕ್ತಿಯಿಂದ ಇನ್ನೊಬ್ಬರ ಚಹರೆಯಷ್ಟು ನನಗೆ ಗೊತ್ತು ಎನ್ನುವ ಭಾವನೆ ಕಳಚಿಕೊಂಡಷ್ಟು ಉತ್ತಮ
* ದಾಂಪತ್ಯದ ಹಾದಿಯಲ್ಲಿ ಸರಸ-ವಿರಸಗಳು ನಯವಾದ ರಸ್ತೆಗಳಲ್ಲಿರುವ ಉಬ್ಬುತಗ್ಗುಗಳಂತೆ, ಅದರ ಬಗ್ಗೆ ಸಿಟ್ಟುತಾಪಗಳು ಲಾಭದಾಯಕವಲ್ಲ
* ಹಳೆಯ ಕೆಟ್ಟ ಅನುಭವಗಳನ್ನು ಮೇಲಿಂದ ಮೇಲೆ ನೆನಪಿಸಿಕೊಳ್ಳುವ ಸ್ವಭಾವ ನಿಮ್ಮಲ್ಲಿದ್ದಲ್ಲಿ ಬಿಟ್ಟುಬಿಡಿ
*ಹಟಮಾರಿತನ, ನಾನೇ ಸರಿ ಎನ್ನುವ ಭಾವನೆಯಿಂದ ದಂಪತಿಗಳ ನಡುವೆ ಅಸಮಾಧಾನ ಹೆಚ್ಚಬಲ್ಲವು
* ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲಾ ಒಂದು ಮಿತಿ, ಕೊರತೆ ಇದ್ದೇ ಇರುವುದು. ಅದನ್ನೇ ದೊಡ್ಡದಾಗಿಸಿಕೊಂಡು ಶಿಕ್ಷಿಸುವುದು, ಶಿಕ್ಷಿಸಿಕೊಳ್ಳುವುದರತ್ತ ಮನಸು ಹೋಗದಂತೆ ಎಚ್ಚರ ವಹಿಸಿ
* ಅವಸರದ ತೀರ್ಮಾನ, ಎಲ್ಲವೂ ತನ್ನಿಷ್ಟದಂತೆ ನಡೆಯಲೇಬೇಕೆಂಬ ಮನದ ಸ್ಥಿತಿಯೂ ಸಂದೇಹದ ಅಡಗುತಾಣ
ಒಂದು ವೇಳೆ ನಿಮ್ಮ ಸಂಶಯದ ಮಟ್ಟ ಅತಿಯಾಗಿದ್ದು , ನಿರುತ್ಸಾಹ, ನಿದ್ರಾಹೀನತೆ, ಸದಾ ಜಿಗುಪ್ಸೆ ಭಾವನೆಗಳು ಕಂಡುಬಂದಲ್ಲಿ ತಜ್ಞರನ್ನು ಭೇಟಿಮಾಡುವುದು ಸೂಕ್ತ. ಹಾಗೆಯೇ ಬೃಹನ್ಮತಿ ಮನೋತಂತ್ರಗಳ ಮೂಲಕ ನಿಮ್ಮ ಮನಸು ಹಿತದ ಸ್ಥಿತಿಯತ್ತ ಇರುವಂತೆ ಮಾಡಿಕೊಳ್ಳಲು ಸಾಧ್ಯ.

English summary
Psychologist Dr A Sridhar explains about couple and their psychological problems
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X