ಮುಖ್ಯಪುಟ
 » 
ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ ಹಿಂದೂ ಧರ್ಮದ ಪ್ರಬಲ ಬೆಂಬಲಿಗ ಬಲಪಂಥೀಯ ಫೈರಬ್ರ್ಯಾಂಡ್ ರಾಜಕಾರಣಿಯಾಗಿದ್ದಾರೆ. ಪ್ರಸ್ತುತ ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.

ಯೋಗಿ ಆದಿತ್ಯನಾಥ ಜೀವನ ಚರಿತ್ರೆ

ಯೋಗಿ ಆದಿತ್ಯನಾಥ ಹಿಂದೂ ಧರ್ಮದ ಪ್ರಬಲ ಬೆಂಬಲಿಗ ಬಲಪಂಥೀಯ ಫೈರಬ್ರ್ಯಾಂಡ್ ರಾಜಕಾರಣಿಯಾಗಿದ್ದಾರೆ. ಪ್ರಸ್ತುತ ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಇವರು ಪೌರಿ ಗಢವಾಲ (ಈಗಿನ ಉತ್ತರಾಖಂಡ) ಜಿಲ್ಲೆಯಲ್ಲಿ ಜನಿಸಿದರು. ಆಗ ಇವರ ಹೆಸರು ಅಜಯ ಮೋಹನ ಎಂದಿತ್ತು. ವಿಜ್ಞಾನ ವಿಷಯದಲ್ಲಿ ಇವರು ಪದವಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಹಲವಾರು ಸಾಮಾಜಿಕ ಚಳವಳಿ ಹಾಗೂ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ತಮ್ಮ 22ನೇ ವಯಸ್ಸಿನಲ್ಲಿ ಕುಟುಂಬವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದರು. ಒಂದು ಕಡೆ ಕುಳಿತು ದೈವಾರಾಧನೆ ಮಾಡುವ ಬದಲಾಗಿ ಎಲ್ಲ ಕಡೆಗೆ ಸುತ್ತಾಡುತ್ತ ಜನರಲ್ಲಿ ಅರಿವು ಮೂಡಿಸತೊಡಗಿದರು. ಪೂರ್ವ ಉತ್ತರ ಪ್ರದೇಶದಲ್ಲಿ ಜನಜಾಗರಣ ಅಭಿಯಾನ ಆರಂಭಿಸಿದರು. ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಇವರು ಎಲ್ಲ ವರ್ಗದ ಜನರೊಂದಿಗೆ ಬೆರೆತು ಅವರೊಂದಿಗೆ ಊಟ ಸೇವಿಸಿದರು. 1998 ರಲ್ಲಿ ಪ್ರಥಮ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ಮತ್ತಷ್ಟು ಓದು
By Zainab Ashraf Updated: Thursday, May 30, 2019, 03:45:57 PM [IST]

ಯೋಗಿ ಆದಿತ್ಯನಾಥ ವಯಕ್ತಿಕ ಜೀವನ

ಪೂರ್ಣ ಹೆಸರು ಯೋಗಿ ಆದಿತ್ಯನಾಥ
ಜನ್ಮ ದಿನಾಂಕ 05 Jun 1972 (ವಯಸ್ಸು 51)
ಹುಟ್ಟಿದ ಸ್ಥಳ ಪಾಂಚೂರ, ಪೌರಿ ಗಢವಾಲ್
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ಸನ್ಯಾಸಿ ಹಾಗೂ ರಾಜಕಾರಣಿ
ತಂದೆಯ ಹೆಸರು ಆನಂದ ಸಿಂಗ್ ಬಿಷ್ಟ್
ತಾಯಿಯ ಹೆಸರು ಸಾವಿತ್ರಿ ದೇವಿ
ಧರ್ಮ ಹಿಂದು
ವೆಬ್‌ಸೈಟ್ http://www.yogiadityanath.in/
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಯೋಗಿ ಆದಿತ್ಯನಾಥ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹72.18 LAKHS
ಆಸ್ತಿ:₹72.18 LAKHS
ಸಾಲಸೋಲ: N/A

ಯೋಗಿ ಆದಿತ್ಯನಾಥ ಕುರಿತು ಆಸಕ್ತಿದಾಯಕ ಸಂಗತಿಗಳು

’ಹಿಂದಿ ವೀಕ್ಲಿ’ ಎಂಬ ಪತ್ರಿಕೆ ಹಾಗೂ ’ಯೋಗವಾಣಿ’ ಮಾಸಿಕದ ಪ್ರಧಾನ ಸಂಪಾದಕರಾಗಿದ್ದಾರೆ.
ಹಿಂದು ಯುವ ವಾಹಿನಿ ಎಂಬ ಯುವಕರ ಸಂಘಟನೆಯನ್ನು ಇವರು ಕಟ್ಟಿದ್ದಾರೆ. ಕೋಮು ಸಂಘರ್ಷಗಳಲ್ಲಿ ಇದರ ಸದಸ್ಯರು ಭಾಗವಹಿಸಿದ್ದಾರೆ ಎಂಬ ಆರೋಪಗಳಿವೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X