ಮುಖ್ಯಪುಟ
 » 
ಸುಶೀಲ ಕುಮಾರ ಮೋದಿ

ಸುಶೀಲ ಕುಮಾರ ಮೋದಿ

ಸುಶೀಲ ಕುಮಾರ ಮೋದಿ

ಸುಶೀಲ ಕುಮಾರ ಮೋದಿ ಭಾರತೀಯ ಜನತಾ ಪಕ್ಷದ ಪ್ರಮುಖ ರಾಜಕಾರಣಿಯಾಗಿದ್ದು, ಪ್ರಸ್ತುತ ಜುಲೈ 2017 ರಿಂದೀಚೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1952 ರಲ್ಲಿ ಜನಿಸಿದ ಇವರು ಪಾಟ್ನಾದ ಬಿ.

ಸುಶೀಲ ಕುಮಾರ ಮೋದಿ ಜೀವನ ಚರಿತ್ರೆ

ಸುಶೀಲ ಕುಮಾರ ಮೋದಿ ಭಾರತೀಯ ಜನತಾ ಪಕ್ಷದ ಪ್ರಮುಖ ರಾಜಕಾರಣಿಯಾಗಿದ್ದು, ಪ್ರಸ್ತುತ ಜುಲೈ 2017 ರಿಂದೀಚೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1952 ರಲ್ಲಿ ಜನಿಸಿದ ಇವರು ಪಾಟ್ನಾದ ಬಿ.ಎನ್. ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ. 1973 ರಲ್ಲಿ ಪಾಟ್ನಾ ವಿಜ್ಞಾನ ಮಹಾವಿದ್ಯಾಲಯದಿಂದ ಬಾಟನಿ ವಿಷಯದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಎಂಎಸ್ಸಿ ಬಾಟನಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ತೊರೆದು ಜಯಪ್ರಕಾಶ ನಾರಾಯಣ ಅವರ ಸಾಮಾಜಿಕ ಆಂದೋಲನದಲ್ಲಿ ಭಾಗಿಯಾದರು. 2005 ರಿಂದ 2013 ರವರೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ ಹಾಗೂ ಹಣಕಾಸು ಸಚಿವರಾಗಿ ಇವರು ಕೆಲಸ ಮಾಡಿದ್ದು ಗಮನಾರ್ಹ ಸಂಗತಿಯಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಆಜೀವ ಸದಸ್ಯರಾಗಿದ್ದಾರೆ. ಜಿಎಸ್ಟಿ ಜಾರಿಗಾಗಿ ರಚಿಸಲಾದ ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿಯ ಚೇರಮನ್‌ರಾಗಿ ಜುಲೈ 2011 ರಲ್ಲಿ ನೇಮಕಗೊಂಡರು.

ಮತ್ತಷ್ಟು ಓದು
By Zainab Ashraf Updated: Friday, February 1, 2019, 05:56:02 PM [IST]

ಸುಶೀಲ ಕುಮಾರ ಮೋದಿ ವಯಕ್ತಿಕ ಜೀವನ

ಪೂರ್ಣ ಹೆಸರು ಸುಶೀಲ ಕುಮಾರ ಮೋದಿ
ಜನ್ಮ ದಿನಾಂಕ 05 Jan 1952 (ವಯಸ್ಸು 72)
ಹುಟ್ಟಿದ ಸ್ಥಳ ಪಾಟ್ನಾ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಮೋತಿಲಾಲ ಮೋದಿ
ತಾಯಿಯ ಹೆಸರು ರತ್ನಾ ದೇವಿ
ಧರ್ಮ ಹಿಂದು
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಸುಶೀಲ ಕುಮಾರ ಮೋದಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹5.36 CRORE
ಆಸ್ತಿ:₹5.64 CRORE
ಸಾಲಸೋಲ: ₹28.53 LAKHS

ಸುಶೀಲ ಕುಮಾರ ಮೋದಿ ಕುರಿತು ಆಸಕ್ತಿದಾಯಕ ಸಂಗತಿಗಳು

1962 ರಲ್ಲಿ ನಡೆದ ಚೀನಾ-ಭಾರತ ಯುದ್ಧದ ಸಂದರ್ಭದಲ್ಲಿ ಸಕ್ರಿಯವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದರು. ನಾಗರಿಕರು ಹಾಗೂ ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಹೆಚ್ಚಿಸಲು ನಾಗರಿಕ ರಕ್ಷಣಾ ಇಲಾಖೆ ರಚಿಸಿದ ಸಮಿತಿಯ ಕಮಾಂಡೆಂಟ್ ಆಗಿ ನೇಮಿಸಲ್ಪಟ್ಟರು. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಜೀವ ಸದಸ್ಯರಾಗಿದ್ದಾರೆ.

ಸುಶೀಲ ಕುಮಾರ ಮೋದಿ ರಾಜಕೀಯ ಟೈಮ್‌ಲೈನ್

2017
  • 2017ರಲ್ಲಿ ಬಿಹಾರದ 5ನೇ ಉಪ ಮುಖ್ಯಮಂತ್ರಿಯಾದರು. ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಮಹಾಮೈತ್ರಿಕೂಟ ಸೋಲಿನ ಹಿಂದೆ ಇವರ ಕಾರ್ಯತಂತ್ರಗಳು ಬಹುಮುಖ್ಯ ಪಾತ್ರ ವಹಿಸಿದ್ದವು.
2010
  • 2010 ರಲ್ಲಿ ಇವರು ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸದೆ ಕೇವಲ ಬಿಜೆಪಿಗಾಗಿ ಚುನಾವಣಾ ಪ್ರಚಾರ ಕಾರ್ಯ ಕೈಗೊಂಡರು.
2006
  • ಬಿಹಾರದ ಹಣಕಾಸು ಸಚಿವರಾದರು.
2005
  • ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಬಿಹಾರದ ಉಪಮುಖ್ಯಮಂತ್ರಿಯಾದರು. ಬಿಹಾರದ ಮೂರನೇ ಉಪಮುಖ್ಯಮಂತ್ರಿಯಾದ ಇವರು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿಲ್ಲ
2004
  • ಭಾಗಲ್ಪುರ ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ಸುಬೋಧ ರಾಯ್ ಅವರನ್ನು ಅವರನ್ನು ಸೋಲಿಸಿ 14ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು.
2000
  • ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಶಾಸಕರಾದರು. ನಂತರ ಬಿಹಾರ ಸರಕಾರದ ಸಂಸದೀಯ ವ್ಯವಹಾರಗಳ ಸಚಿವರಾದರು.
1996–2004
  • ಬಿಹಾರ ವಿಧಾನ ಸಭೆಯ ಪ್ರತಿಪಕ್ಷದ ನಾಯಕರಾದರು.
1995
  • ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿಯಾದರು. ಪಾಟ್ನಾ ವಿಧಾನ ಸಭೆಯ ಶಾಸಕರಾಗಿ ಮರು ಆಯ್ಕೆಯಾದರು.
1990
  • ಪಾಟ್ನಾದ ಕುಮ್ರಾರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಜಯಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು.
1983–86
  • ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು.
1973–77
  • ಪಾಟ್ನಾ ವಿಶ್ವವಿದ್ಯಾಲಯದ ಸ್ಟೂಡೆಂಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿಯಾದರು.

ಹಿಂದಿನ ಇತಿಹಾಸ

1968
  • ತಮ್ಮ ಹತ್ತನೇ ತರಗತಿ ಪಾಸು ಮಾಡಿದ ನಂತರ ಆರೆಸ್ಸೆಸ್‌ನ ಉನ್ನತ ತರಬೇತಿ ಕೋರ್ಸ್ ಆದ ಮೂರು ವರ್ಷದ ಅಧಿಕಾರಿ ತರಬೇತಿ ಕೋರ್ಸ್ (ಓಟಿಸಿ) ಮುಗಿಸಿದರು. ಖಗೋಲ, ದಾನಾಪುರದಲ್ಲಿ ಒಂದು ತಿಂಗಳು ಆರೆಸ್ಸೆಸ್ ವಿಸ್ತಾರಕರಾಗಿ ಕೆಲಸ ಮಾಡಿದರು. ರಾಜ್ಯದ ವಿವಿಧೆಡೆ ಸಂಘದ ಶಾಖೆಗಳನ್ನು ಆರಂಭಿಸಿದರು. ನಂತರ ಪಾಟ್ನಾ ಮಹಾನಗರದ ಸಾಯಂಕಾಲ ಅವಧಿಯ ಆರೆಸ್ಸೆಸ್ ಶಾಖೆಗಳ ಕಾರ್ಯ ನಿರ್ವಾಹಕರಾಗಿ ಕೆಲಸ ಮಾಡಿದರು.
1962
  • ಸುಶೀಲ ಕುಮಾರ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ಸದಸ್ಯರಾದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X