ಮುಖ್ಯಪುಟ
 » 
ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ಸೋನಿಯಾ ಗಾಂಧಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಇದರ ಸಮನ್ವಯ ಸಮಿತಿಯ ಅಧ್ಯಕ್ಷೆಯಾಗಿದ್ದರು.

ಸೋನಿಯಾ ಗಾಂಧಿ ಜೀವನ ಚರಿತ್ರೆ

ಸೋನಿಯಾ ಗಾಂಧಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಇದರ ಸಮನ್ವಯ ಸಮಿತಿಯ ಅಧ್ಯಕ್ಷೆಯಾಗಿದ್ದರು. ಸೋನಿಯಾ 1946ರ ಡಿಸೆಂಬರ್ 9 ರಂದು ಇಟಲಿಯಲ್ಲಿ ಜನಿಸಿದರು. ತಮ್ಮ ಮೂಲ ಶಿಕ್ಷಣದ ನಂತರ ಇವರು ವಿದೇಶಿ ಭಾಷೆಗಳ ಶಿಕ್ಷಣ ಸಂಸ್ಥೆಗೆ ಸೇರಿ ಇಂಗ್ಲಿಷ್, ಫ್ರೆಂಚ್ ಹಾಗೂ ರಶಿಯನ್ ಭಾಷೆಗಳನ್ನು ಕಲಿತರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಕೋರ್ಸ್ ಕಲಿಯುತ್ತಿರುವಾಗ ಇವರು ರಾಜೀವ ಗಾಂಧಿಯವರನ್ನು ಭೇಟಿಯಾದರು. ನಂತರ ಇವರಿಬ್ಬರೂ 1968 ರಲ್ಲಿ ಹೊಸದಿಲ್ಲಿಯಲ್ಲಿ ವಿವಾಹವಾದರು. ಇವರಿಗೆ ರಾಹುಲ ಹಾಗೂ ಪ್ರಿಯಾಂಕಾ ಎಂಬ ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳು ಇದ್ದಾರೆ. ಸೋನಿಯಾ ತಮ್ಮ ಬಹುತೇಕ ವೈವಾಹಿಕ ಜೀವನವನ್ನು ಮನೆಯ ವ್ಯವಹಾರ ನೋಡಿಕೊಳ್ಳುತ್ತ ಒಬ್ಬ ಸಾಮಾನ್ಯ ಗೃಹಿಣಿಯಾಗಿಯೇ ಕಳೆದರು. ಆಗ ಪ್ರಧಾನಿಯಾಗಿದ್ದ ತಮ್ಮ ಅತ್ತೆ ಇಂದಿರಾ ಗಾಂಧಿಯವರ ಅನೇಕ ಕಚೇರಿ ಕೆಲಸಗಳಲ್ಲಿ ಇವರು ಸಹಾಯ ಮಾಡುತ್ತ ಅವರಿಗೆ ಬೆಂಬಲವಾಗಿದ್ದರು. 1984 ರಿಂದ 1991 ರ ಅವಧಿಯಲ್ಲಿ ಪತಿ ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಯಾವಾಗಲಾದರೊಮ್ಮೆ ಇವರು ಪತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ವಿರಳವಾಗಿ ಅವರೊಂದಿಗೆ ವಿದೇಶಗಳಿಗೆ ಹೋಗುತ್ತಿದ್ದರು. ಇದೇ ಸಮಯದಲ್ಲಿ ಪತಿಯ ಅಮೇಥಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಆರೋಗ್ಯ ಶಿಬಿರಗಳು ಹಾಗೂ ಇನ್ನಿತರ ಸಮಾಜ ಕಲ್ಯಾಣ ಕೆಲಸಗಳ ಉಸ್ತುವಾರಿಯನ್ನು ಸಹ ಇವರು ನೋಡಿಕೊಳ್ಳುತ್ತಿದ್ದರು.
1991 ರ ಮೇ ತಿಂಗಳಲ್ಲಿ ಪತಿ ರಾಜೀವ ಗಾಂಧಿಯವರ ಹತ್ಯೆಯ ನಂತರ ಲಾಭರಹಿತ ರಹಿತ ರಾಜೀವ ಗಾಂಧಿ ಫೌಂಡೇಶನ್ ಹಾಗೂ ಇದಕ್ಕೆ ಸಂಬಂಧಿಸಿದಂತೆ ಬುದ್ಧಿಜೀವಿಗಳ ರಾಜೀವ ಗಾಂಧಿ ಇನಸ್ಟಿಟ್ಯೂಟ್ ಆಫ್ ಕಂಟೆಂಪೊರರಿ ಸ್ಟಡೀಸ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಘಟನೆಗಳ ಮುಖ್ಯಸ್ಥೆಯಾಗಿ ಪತಿ ರಾಜೀವ ಗಾಂಧಿಯವರು ಆದರ್ಶಗಳನ್ನು ಸಮಾಜದಲ್ಲಿ ಜಾರಿಗೆ ತರಲು ಪ್ರಯತ್ನಿಸಿದರು. ಸೋನಿಯಾ ಇನ್ನೂ ಹಲವಾರು ಎನ್ಜಿಓ ಸಂಸ್ಥೆಗಳನ್ನು ನಡೆಸುತ್ತಾರೆ.
1998ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಇವರು ಸಾರ್ವಜನಿಕ ಜೀವನ ಪ್ರವೇಶಿಸಿದರು. ನಂತರ ಪಕ್ಷಕ್ಕಾಗಿ ಹಗಲಿರುಳು ಚುನಾವಣಾ ಪ್ರಚಾರ ನಡೆಸಿ ಇವರು 1998ರ ಏಪ್ರಿಲ್ನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು.
1999ರಲ್ಲಿ ಅಮೇಥಿ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಜಯಶಾಲಿಯಾದ ಸೋನಿಯಾ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. 2004 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಇವರು ನಡೆಸಿದ ಪ್ರಚಾರದಿಂದ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಹೀಗಾಗಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಯುಪಿಎ ಸರಕಾರ ರಚಿಸಲು ಸಾಧ್ಯವಾಯಿತು. ಈ ಚುನಾವಣೆಯಲ್ಲಿ ಸೋನಿಯಾ ರಾಯಬರೇಲಿ ಕ್ಷೇತ್ರದಿಂದ ಸಂಸದೆಯಾಗಿ ಚುನಾಯಿತರಾಗಿದ್ದರು.
ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ಅವರನ್ನು ಒಮ್ಮತದಿಂದ ಲೋಕಸಭಾ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರಿಂದ ಇವರೇ ಪ್ರಧಾನಿಯಾಗಬೇಕೆಂಬ ಬೇಡಿಕೆ ಇತ್ತು. ಆದರೆ ಈ ಬೇಡಿಕೆಯನ್ನು ಒಪ್ಪದ ಸೋನಿಯಾ ಮನಮೋಹನ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದರು. ಯುಪಿಎ ಅಧ್ಯಕ್ಷೆಯಾಗಿ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಅವರು ಕೆಲಸ ಮಾಡಿದರು.
ಸಾಮಾಜಿಕ ಹಾಗೂ ಆರ್ಥಿಕ ನೀತಿ ನಿಯಮಾವಳಿಗಳನ್ನು ರೂಪಿಸುವಲ್ಲಿ ಸರಕಾರಕ್ಕೆ ಮಹತ್ವದ ನಿರ್ದೇಶನಗಳನ್ನು ನೀಡುವ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ಅಧ್ಯಕ್ಷೆಯಾಗಿ ಮೇ 2006 ರವರೆಗೆ ಕಾರ್ಯನಿರ್ವಹಿಸಿದರು. ಇವರ ಕಾರ್ಯಾವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ರಾಷ್ಟ್ರೀಯ ಗ್ರಾಮೀನ ಆರೋಗ್ಯ ಮಿಷನ್, ಮಧ್ಯಾಹ್ನ ಆಹಾರ ಯೋಜನೆ, ಜವಾಹರಲಾಲ ನೆಹರು ಅರ್ಬನ್ ರಿನೀವಲ್ ಮಿಷನ್ ಮತ್ತು ನ್ಯಾಷನಲ್ ರಿಹ್ಯಾಬಿಲಿಟೇಷನ್ ಪಾಲಿಸಿ ಮುಂತಾದ ಅತಿ ಪ್ರಮುಖ ಯೋಜನೆಗಳ ಕುರಿತಾಗಿ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ನೀಡಿತ್ತು.

ಮತ್ತಷ್ಟು ಓದು
By Zainab Ashraf Updated: Thursday, May 30, 2019, 03:45:57 PM [IST]

ಸೋನಿಯಾ ಗಾಂಧಿ ವಯಕ್ತಿಕ ಜೀವನ

ಪೂರ್ಣ ಹೆಸರು ಸೋನಿಯಾ ಗಾಂಧಿ
ಜನ್ಮ ದಿನಾಂಕ 09 Dec 1946 (ವಯಸ್ಸು 77)
ಹುಟ್ಟಿದ ಸ್ಥಳ ವಿಸೆಂಜಾ, ಇಟಲಿ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Others
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಸ್ಟೆಫಾನೊ ಮೈನೊ
ತಾಯಿಯ ಹೆಸರು ಪಾವೊಲಾ ಮೈನೊ
ಧರ್ಮ ಹಿಂದು
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಸೋನಿಯಾ ಗಾಂಧಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹11.83 CRORE
ಆಸ್ತಿ:₹11.83 CRORE
ಸಾಲಸೋಲ: N/A

ಸೋನಿಯಾ ಗಾಂಧಿ ಕುರಿತು ಆಸಕ್ತಿದಾಯಕ ಸಂಗತಿಗಳು

1. ಬಾಲ್ಯದಲ್ಲಿ ಇವರಿಗೆ ಫುಟಬಾಲ್ ಅತಿ ಮೆಚ್ಚಿನ ಕ್ರೀಡೆಯಾಗಿತ್ತು ಹಾಗೂ ನೆರೆಹೊರೆಯ ಮಕ್ಕಳೊಂದಿಗೆ ಫುಟಬಾಲ್ ಆಡುತ್ತ ಕಾಲ ಕಳೆಯುತ್ತಿದ್ದರು. ಮದುವೆಗೂ ಮುನ್ನ ಇವರು ಅಮಿತಾಭ ಬಚ್ಚನ್ ಅವರ ವೆಲ್ಲಿಂಗ್ಟನ್ ಕ್ರೆಸೆಂಟ್ ಹೌಸನಲ್ಲಿ ಕೆಲ ಕಾಲ ವಾಸ ಮಾಡಿದ್ದರು.
2. 1968ರ ಜನೆವರಿ 26 ರಂದು ಸೋನಿಯಾ ಹಾಗೂ ರಾಜೀವ ಗಾಂಧಿ ಅವರ ನಿಶ್ಚಿತಾರ್ಥ ನಡೆಯಿತು. ನಂತರ 1968ರ ಫೆಬ್ರವರಿ 25 ರ ವಸಂತ ಪಂಚಮಿಯಂದು ಇಬ್ಬರೂ ವಿವಾಹವಾದರು. ಇದಕ್ಕೆ ದಶಕಗಳ ಮುನ್ನ ಇದೇ ದಿನಾಂಕದಂದು ಇಂದಿರಾ ಹಾಗೂ ಫಿರೋಜ ಗಾಂಧಿ ಅವರ ವಿವಾಹ ನಡೆದಿತ್ತು.
3. ಇವರ ಮದುವೆಯ ಮೆಹಂದಿ ಸಮಾರಂಭವು (ಮದುವೆಯ ಮುನ್ನಾ ದಿನ) ಬಚ್ಚನ್ ಅವರ ನಿವಾಸದಲ್ಲಿ ನಡೆದಿತ್ತು.
4. ವಿವಾಹ ಪೂರ್ವ ಇವರು ಫ್ರೆಂಚ್ ಭಾಷೆಯನ್ನು ಚೆನ್ನಾಗಿ ಕಲಿತಿದ್ದರು. ವಿವಾಹವಾದ ಮೇಲೆ ಒಬ್ಬ ಶಿಕ್ಷಕರಿಂದ ಹಾಗೂ ನಂತರ ತರಬೇತಿ ಸಂಸ್ಥೆಯೊಂದರ ಮೂಲಕ ಹಿಂದಿ ಕಲಿತುಕೊಂಡರು.
5. ರಾಜೀವ ಮತ್ತು ರಾಜೀವ್ಸ್ ವರ್ಲ್ಡ್ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. 1992 ರಿಂದ 1964 ರ ಅವಧಿಯಲ್ಲಿ ಪಂಡಿತ ಜವಾಹರಲಾಲ ನೆಹರು ಹಾಗೂ ಮಗಳು ಇಂದಿರಾ ಅವರ ನಡುವಿನ ಪತ್ರ ವ್ಯವಹಾರ ಆಧರಿಸಿದ ಎರಡು ಕೃತಿಗಳಾದ ’ಫ್ರೀಡಂಸ್ ಡಾಟರ್’ ಹಾಗೂ ’ಟು ಅಲೋನ್, ಟು ಟುಗೆದರ್’ ಎಂಬ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.
6. ಪರಿಸರ, ಹಿಂದುಳಿದವರ ಅಭ್ಯುದಯ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳ ವಿಷಯದಲ್ಲಿ ಸೋನಿಯಾ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.
7. ಭಾರತೀಯ ಸಮಕಾಲೀನ ವಿಷಯಗಳು, ಶಾಸ್ತ್ರೀಯ ಹಾಗೂ ಬುಡಕಟ್ಟು ಕಲೆಗಳು, ಭಾರತೀಯ ಕೈಮಗ್ಗ ಹಾಗೂ ಕರಕುಶಲ ಕಲೆ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಮುಂತಾದುವುಗಳಲ್ಲಿ ಸಹ ಸೋನಿಯಾ ವಿಶೇಷ ಆಸಕ್ತಿ ಹೊಂದಿದ್ದಾರೆ. ತೈಲವರ್ಣ ಚಿತ್ರಕಲೆಗಳನ್ನು ಸಂರಕ್ಷಿಸುವ ಕುರಿತಂತೆ ದೆಹಲಿಯ ನ್ಯಾಷನಲ್ ಮ್ಯೂಸಿಯಂನಿಂದ ಡಿಪ್ಲೊಮಾ ಪಡೆದುಕೊಂಡಿದ್ದಾರೆ.

ಸೋನಿಯಾ ಗಾಂಧಿ ಸಾಧನೆಗಳು

1. 2004 ರಿಂದ 2014 ರ ಅವಧಿಯಲ್ಲಿ ಸೋನಿಯಾ ಭಾರತದ ಅತಿ ಪ್ರಭಾವಶಾಲಿ ರಾಜಕಾರಣಿ, ಮಹಿಳೆಯಾಗಿ ಗುರುತಿಸಿಕೊಂಡಿದ್ದರು ಹಾಗೂ ಹಲವಾರು ಮ್ಯಾಗಜೀನ್ಗಳ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
2. ಫೋರ್ಬ್ಸ್ ಮ್ಯಾಗಜೀನ್ನ 2013 ರ ಪಟ್ಟಿಯಲ್ಲಿ ಜಾಗತಿಕವಾಗಿ 21 ನೇ ಅತಿ ಪ್ರಭಾವಶಾಲಿ ಹಾಗೂ 9ನೇ ಅತಿ ಪ್ರಭಾವಶಾಲಿ ಮಹಿಳೆಯಾಗಿ ಗುರುತಿಸಲ್ಪಟ್ಟಿದ್ದರು.
3. 2007 ರಲ್ಲಿ ಫೋರ್ಬ್ಸ್ ಮ್ಯಾಗಜೀನ್ ಇವರನ್ನು ಜಗತ್ತಿನ ಅತಿ ಪ್ರಭಾವಶಾಲಿ ಮಹಿಳೆಯಾಗಿ ಗುರುತಿಸಿತ್ತು ಹಾಗೂ 2007 ಪಟ್ಟಿಯಲ್ಲಿ ವಿಶಿಷ್ಟವಾಗಿ 6ನೇ ಸ್ಥಾನ ನೀಡಿತ್ತು.
4. 2010 ರಲ್ಲಿ ಫೋರ್ಬ್ಸ್ ಮ್ಯಾಗಜೀನ್ ಸೋನಿಯಾ ಅವರನ್ನು ವಿಶ್ವದ 9ನೇ ಅತಿ ಪ್ರಭಾವಶಾಲಿ ವ್ಯಕ್ತಿಯಾಗಿ ಗುರುತಿಸಿತ್ತು. ಹಾಗೆಯೇ 2012 ರಲ್ಲಿ ಇದೇ ಮ್ಯಾಗಜೀನ್ನ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದರು.
5. 2007 ರಿಂದ 2008 ರ ಅವಧಿಯಲ್ಲಿ ಜಗತ್ತಿನ 100 ಅತಿ ಪ್ರಭಾವಶಾಲಿ ವ್ಯಕ್ತಿಗಳ ಟೈಮ್ ಮ್ಯಾಗಜೀನ್ ಪಟ್ಟಿಯಲ್ಲಿ ಇವರು ಸ್ಥಾನ ಪಡೆದರು. 2010 ರಲ್ಲಿ ನ್ಯೂ ಸ್ಟೇಟ್ಸ್ಮನ್ ನಿಯತಕಾಲಿಕೆ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಜಗತ್ತಿನ ಅತಿ ಪ್ರಭಾವಶಾಲಿ 50 ವ್ಯಕ್ತಿಗಳ ಪಟ್ಟಿಯಲ್ಲಿ ಸೋನಿಯಾ 29ನೇ ಸ್ಥಾನ ಪಡೆದುಕೊಂಡಿದ್ದರು.
6. ಮದರಾಸು ವಿಶ್ವವಿದ್ಯಾಲಯವು ಇವರಿಗೆ 2008 ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
7. 2006 ರಲ್ಲಿ ಬ್ರುಸೆಲ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
8. 2006 ರಲ್ಲಿ ಬೆಲ್ಜಿಯಂ ಸರಕಾರವು ಸೋನಿಯಾ ಅವರಿಗೆ ಆರ್ಡರ್ ಆಫ್ ಕಿಂಗ್ ಲಿಯೊಪೋಲ್ಡ್ ಗೌರವ ಸನ್ಮಾನ ನೀಡಿತು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X