ಮುಖ್ಯಪುಟ
 » 
ಪ್ರಹ್ಲಾದ ಜೋಶಿ

ಪ್ರಹ್ಲಾದ ಜೋಶಿ

ಪ್ರಹ್ಲಾದ ಜೋಶಿ

ಪ್ರಹ್ಲಾದ ಜೋಶಿ ಮೂಲತಃ ಓರ್ವ ಕೈಗಾರಿಕೋದ್ಯಮಿ. 1992 ರಿಂದ 94 ರ ಅವಧಿಯಲ್ಲಿ ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಮೈದಾನ ಅಥವಾ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಚಳವಳಿಯ ಮುಂಚೂಣಿ ವಹಿಸುವ ಮೂಲಕ ರಾಜಕೀಯವಾಗಿ ಮುನ್ನೆಲೆಗೆ ಬಂದರು.

ಪ್ರಹ್ಲಾದ ಜೋಶಿ ಜೀವನ ಚರಿತ್ರೆ

ಪ್ರಹ್ಲಾದ ಜೋಶಿ ಮೂಲತಃ ಓರ್ವ ಕೈಗಾರಿಕೋದ್ಯಮಿ. 1992 ರಿಂದ 94 ರ ಅವಧಿಯಲ್ಲಿ ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಮೈದಾನ ಅಥವಾ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಚಳವಳಿಯ ಮುಂಚೂಣಿ ವಹಿಸುವ ಮೂಲಕ ರಾಜಕೀಯವಾಗಿ ಮುನ್ನೆಲೆಗೆ ಬಂದರು. ಇದರ ನಂತರ ಧಾರವಾಡ ಬಿಜೆಪಿ ಘಟಕದ ಅಧ್ಯಕ್ಷರಾದರು. 2004 ರ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ಸಿನ ಬಿ.ಎಸ್. ಪಾಟೀಲ ಅವರನ್ನು ಸೋಲಿಸಿ 14ನೇ ಲೋಕಸಭೆಯ ಸಂಸದರಾದರು. ಧಾರವಾಡ ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದರಾಗಿ ಚುನಾಯಿತರಾಗಿರುವ ಜೋಶಿ, ಪ್ರಸ್ತುತ ಕೂಡ ಸಂಸದರಾಗಿದ್ದಾರೆ. 2009 ರ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೇ ಅತಿ ಹೆಚ್ಚು ಮತಗಳ ಅಂತರದಿಂದ ಚುನಾಯಿತರಾದ ಹೆಗ್ಗಳಿಕೆ ಇವರದಾಗಿದೆ.

ಮತ್ತಷ್ಟು ಓದು
By Anushree Updated: Monday, April 29, 2019, 06:14:14 PM [IST]

ಪ್ರಹ್ಲಾದ ಜೋಶಿ ವಯಕ್ತಿಕ ಜೀವನ

ಪೂರ್ಣ ಹೆಸರು ಪ್ರಹ್ಲಾದ ಜೋಶಿ
ಜನ್ಮ ದಿನಾಂಕ 27 Nov 1952 (ವಯಸ್ಸು 71)
ಹುಟ್ಟಿದ ಸ್ಥಳ ವಿಜಯಪುರ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ಕೈಗಾರಿಕೋದ್ಯಮಿ
ತಂದೆಯ ಹೆಸರು ಶ್ರೀ ವೆಂಕಟೇಶ ಜೋಶಿ
ತಾಯಿಯ ಹೆಸರು ಶ್ರೀಮತಿ ಮಾಲತಿಬಾಯಿ
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಪ್ರಹ್ಲಾದ ಜೋಶಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹3.52 CRORE
ಆಸ್ತಿ:₹4.2 CRORE
ಸಾಲಸೋಲ: ₹67.4 LAKHS

ಪ್ರಹ್ಲಾದ ಜೋಶಿ ಕುರಿತು ಆಸಕ್ತಿದಾಯಕ ಸಂಗತಿಗಳು

2018 ರಲ್ಲಿ ಹುಬ್ಬಳ್ಳಿಯ ಸದರಸೋಫಾ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡಿದ ಆರೋಪದ ಮೇಲೆ ಇವರ ವಿರುದ್ಧ ಎಫ್‌ಐಆರ್ ದಾಖಲಾಯಿತು. ಸೆಕ್ಷನ್ 153ಎ (ಎರಡು ಧರ್ಮದವರ ಮಧ್ಯೆ ವೈರತ್ವ ಮೂಡಿಸುವಿಕೆ) ಹಾಗೂ ಸೆಕ್ಷನ್ 298 (ಯಾವುದೇ ವ್ಯಕ್ತಿಯ ಧಾರ್ಮಿಕ ನಂಬಿಕೆಗಳಿಗೆ ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು) ಸೇರಿದಂತೆ ಇನ್ನೂ ಕೆಲ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಕೇಸು ದಾಖಲಿಸಲಾಯಿತು.

ಪ್ರಹ್ಲಾದ ಜೋಶಿ ಸಾಧನೆಗಳು

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಆಹಾರ ಯೋಜನೆ ನಡೆಸುತ್ತಿದ್ದು, 86,000 ಕ್ಕೂ ಅಧಿಕ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. ನೂರಾರು ಉಚಿತ ಕಣ್ಣು ತಪಾಸಣೆ, ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿದ್ದು, ಸಾವಿರಾರು ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಸಿಗುವಂತಾಗಿದೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X