India
  • search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ನರೇಂದ್ರ ಮೋದಿ

ನರೇಂದ್ರ ಮೋದಿ

ಜೀವನ ಚರಿತ್ರೆ

ನರೇಂದ್ರ ಮೋದಿ ಭಾರತದ 14ನೇ ಮತ್ತು ಪ್ರಸ್ತುತ ಪ್ರಧಾನಿ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಸಂಸದರು. 2014ರಲ್ಲಿ ದೇಶದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. 2019ರ ಚುನಾವಣೆಯಲ್ಲಿಯೂ ವಾರಣಾಸಿ ಕ್ಷೇತ್ರದಲ್ಲಿ ಜಯಗಳಿಸಿ 2ನೇ ಅವಧಿಗೆ ಪ್ರಧಾನಿಯಾಗಿ ಮುಂದುವರೆದಿದ್ದಾರೆ. ಪ್ರಥಮ ಬಾರಿಗೆ ಶಾಸಕರಾದ ನಂತರ ಗುಜರಾತಿನ ಮುಖ್ಯಮಂತ್ರಿಯಾಗಿದ್ದು ಇವರ ಹೆಗ್ಗಳಿಕೆ. ಹಾಗೆಯೇ ಮೊದಲ ಬಾರಿ ಸಂಸದರಾದ ಕೂಡಲೇ ಇವರು ಪ್ರಧಾನಮಂತ್ರಿಯಾದರು. 1984ರ ನಂತರ ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಬಿಜೆಪಿ ಬಹುಮತ ಪಡೆಯಲು ಮೋದಿ ಅವರೇ ಕಾರಣಕರ್ತರಾಗಿದ್ದಾರೆ. ಗುಜರಾತಿನ ವಾಡನಗರದ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಮೋದಿ ಅವರ ಆರಂಭಿಕ ಜೀವನ ಕಷ್ಟಕರವಾಗಿತ್ತು. ಇವರ ತಂದೆ ನಡೆಸುತ್ತಿದ್ದ ಚಿಕ್ಕ ಟೀ ಸ್ಟಾಲ್ ಒಂದರಲ್ಲಿ ಇವರೂ ಸಹ ಚಹಾ ಮಾರಲು ತಂದೆಗೆ ನೆರವಾಗುತ್ತಿದ್ದರು. ತಮ್ಮ 8ನೇ ವಯಸ್ಸಿನಲ್ಲಿಯೇ ಆರೆಸ್ಸೆಸ್ ಸಂಪರ್ಕಕ್ಕೆ ಬಂದ ಇವರು ನಂತರದ ಅವಧಿಯಲ್ಲಿ ಸಂಘ ಪರಿವಾರದೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡರು. 1985 ರಲ್ಲಿ ಮೋದಿ ಬಿಜೆಪಿಗೆ ಸೇರಿದರು.

ವಯಕ್ತಿಕ ಜೀವನ

ಪೂರ್ಣ ಹೆಸರು ನರೇಂದ್ರ ಮೋದಿ
ಜನ್ಮ ದಿನಾಂಕ 17 Sep 1950 (ವಯಸ್ಸು 71)
ಹುಟ್ಟಿದ ಸ್ಥಳ ವಾಡನಗರ, ಮೆಹಸಾಣಾ, ಗುಜರಾತ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ದಾಮೋದರದಾಸ ಮೂಲಚಂದದಾಸ ಮೋದಿ
ತಾಯಿಯ ಹೆಸರು ಶ್ರೀಮತಿ ಹಿರಾಬೆನ್ ದಾಮೋದರದಾಸ ಮೋದಿ
ಅವಲಂಬಿತರ ಹೆಸರು ಶ್ರೀಮತಿ ಜಶೋದಾಬೆನ್ ಮೋದಿ
ಅವಲಂಬಿತರ ಉದ್ಯೋಗ ಹೌಸವೈಫ್

ವಿಳಾಸ

ಖಾಯಂ ವಿಳಾಸ ಸಿ-1, ಸೋಮೇಶ್ವರ ಟೆನಮೆಂಟ್, ರಾನಿಪ್, ಅಹ್ಮದಾಬಾದ, ಗುಜರಾತ – 382480
ಪ್ರಸ್ತುತ ವಿಳಾಸ ನಂ.7, ಲೋಕಕಲ್ಯಾಣ ಮಾರ್ಗ, ಹೊಸದಿಲ್ಲಿ - 110 011
ಸಂಪರ್ಕ ಸಂಖ್ಯೆ 079-23232611
ವೆಬ್‌ಸೈಟ್ http://www.narendramodi.in
ಸಾಮಾಜಿಕ ಜಾಲತಾಣದ ವಿಳಾಸ

ಆಸಕ್ತಿಕರ ಅಂಶಗಳು

ತಮ್ಮ 8ನೇ ವಯಸ್ಸಿನಲ್ಲಿಯೇ ಆರೆಸ್ಸೆಸ್ ಸೇರ್ಪಡೆಯಾದರು. 1970ರಲ್ಲಿ ತಮ್ಮ 20ನೇ ವಯಸ್ಸಿಗೆ ಬರುವಷ್ಟರಲ್ಲಿ ಸಂಘದ ವಿಚಾರಧಾರೆಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದ ಮೋದಿ, ಆರೆಸ್ಸೆಸ್ಸಿನ ಪೂರ್ಣಾವಧಿ ಕಾರ್ಯಕರ್ತರಾದರು. 1971 ರಲ್ಲಿ ಅಧಿಕೃತವಾಗಿ ಆರೆಸ್ಸೆಸ್ ಸೇರಿದರು.
ಒಟ್ಟು ಆಸ್ತಿ2.51 CRORE
ಆಸ್ತಿ2.51 CRORE
ಸಾಲಸೋಲN/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಸಾಮಾಜಿಕ

ಆಲ್ಬಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X