ಮುಖ್ಯಪುಟ
 » 
ಮಾಯಾವತಿ

ಮಾಯಾವತಿ

ಮಾಯಾವತಿ

ಮಾಯಾವತಿ ಇವರು ಭಾರತದ ಪ್ರಶ್ನಾತೀತ ಮಹಿಳಾ ರಾಜಕೀಯ ನಾಯಕಿಯರಲ್ಲೊಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯವಾಗಿ ಅತಿ ಪ್ರಮುಖ ಹಾಗೂ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಮೂಲಕ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಮಾಯಾವತಿಯವರದ್ದಾಗಿದೆ.

ಮಾಯಾವತಿ ಜೀವನ ಚರಿತ್ರೆ

ಮಾಯಾವತಿ ಇವರು ಭಾರತದ ಪ್ರಶ್ನಾತೀತ ಮಹಿಳಾ ರಾಜಕೀಯ ನಾಯಕಿಯರಲ್ಲೊಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯವಾಗಿ ಅತಿ ಪ್ರಮುಖ ಹಾಗೂ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಮೂಲಕ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಮಾಯಾವತಿಯವರದ್ದಾಗಿದೆ. ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿರುವ ದಲಿತ ಸಮುದಾಯದ ನಾಯಕಿ ಮಾಯಾವತಿಯವರು 2012 ರ ವಿಧಾನಸಭಾ ಚುನಾವಣೆಯಲ್ಲಿ ದಾರುಣವಾಗಿ ಸೋತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇವರು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹೌದು. ಮೂಲತಃ ಶಿಕ್ಷಕಿಯಾಗಿದ್ದ ಮಾಯಾವತಿಯವರು ದಲಿತ ನಾಯಕ ಕಾನ್ಷಿರಾಮ ಅವರ ಸಂಪರ್ಕಕ್ಕೆ ಬಂದ ನಂತರ ಯಶಸ್ವಿಯಾಗಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಾನ್ಷಿರಾಮ ಅವರು 1995 ರಲ್ಲಿ ಮಾಯಾವತಿಯವರಿಗೆ ಬಿಎಸ್ಪಿಯಲ್ಲಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು ರಾಜಕೀಯಕ್ಕೆ ಕರೆತಂದರು.

ಮುಖ್ಯಮಂತ್ರಿಯಾಗಿ ಮಾಯಾವತಿಯವರು ನೀಡಿದ ಪರಿಣಾಮಕಾರಿ ಆಡಳಿತ ಹಾಗೂ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮರುಕಳಿಸುವಂತೆ ಮಾಡಿದ ಕ್ರಮಗಳಿಂದ ಸರ್ವತ್ರ ಮೆಚ್ಚುಗೆಗೆ ಪಾತ್ರರಾದರು. ಇವರ ಪ್ರಥಮ ಹಾಗೂ ದ್ವಿತೀಯ ಮುಖ್ಯಮಂತ್ರಿ ಅವಧಿಗಳು ಅತಿ ಕಡಿಮೆ ಸಮಯದ್ದಾಗಿದ್ದವು. ವಿವಿಧ ಕಾರಣಗಳಿಗಾಗಿ ಎರಡೂ ಬಾರಿ ಮುಖ್ಯಮಂತ್ರಿಯಾದ ಕೆಲವೇ ತಿಂಗಳುಗಳಲ್ಲಿ ರಾಜಿನಾಮೆ ಸಲ್ಲಿಸಬೇಕಾಯಿತು. ನಂತರ ಮೂರನೇ ಬಾರಿ ಒಂದು ವರ್ಷದವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. ತದನಂತರ ನಾಲ್ಕನೇ ಬಾರಿ ತಮ್ಮ ಸಂಪೂರ್ಣ ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ನಾಲ್ಕನೇ ಬಾರಿ ಮುಖ್ಯಮಂತ್ರಿಯಾದ ನಂತರ ಹಿಂದಿನ ಮುಲಾಯಂ ಸಿಂಗ್ ಆಡಳಿತದಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿಗಳ ನೇಮಕದಲ್ಲಿ ನಡೆದ ಅಕ್ರಮಗಳ ನಿವಾರಣೆಗೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡರು.
1989ರಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಸಂಸದರಾಗಿ ಚುನಾಯಿತರಾದರು. 1994 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ತದನಂತರ 1998 ರಿಂದ 2004 ರವರೆಗೆ ಅಕ್ಬರಪುರ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಚುನಾಯಿತರಾಗಿ ಸೇವೆ ಸಲ್ಲಿಸಿದರು. ಆದರೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತು ಹಾಗೂ ಬಿಎಸ್ಪಿ ಒಂದೇ ಒಂದು ಸ್ಥಾನವನ್ನು ಸಹ ಗೆಲ್ಲಲಾಗಲಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಮತ್ತೆ ಮಾಯಾವತಿಯವರ ಬಿಎಸ್ಪಿಗೆ ಜನಪ್ರಿಯತೆ ಸಿಗುತ್ತಿದ್ದು ನಿಧಾನವಾಗಿಯಾದರೂ ಪಕ್ಷ ಚೇತರಿಸಿಕೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಗೆಳೆತನ ಸಾಧಿಸಿ ಅಲಿಗಢ ಹಾಗೂ ಮೀರತ್ ಮೇಯರ್ ಸ್ಥಾನಗಳನ್ನು ಪಡೆದುಕೊಂಡಿದ್ದು ಬದಲಾಗುತ್ತಿರುವ ರಾಜಕೀಯ ಸನ್ನಿವೇಶಕ್ಕೆ ದಿಕ್ಸೂಚಿಯಾಗಿದೆ.

ಮತ್ತಷ್ಟು ಓದು
By Zainab Ashraf Updated: Thursday, May 30, 2019, 03:45:57 PM [IST]

ಮಾಯಾವತಿ ವಯಕ್ತಿಕ ಜೀವನ

ಪೂರ್ಣ ಹೆಸರು ಮಾಯಾವತಿ
ಜನ್ಮ ದಿನಾಂಕ 15 Jan 1956 (ವಯಸ್ಸು 68)
ಹುಟ್ಟಿದ ಸ್ಥಳ ದೆಹಲಿ
ಪಕ್ಷದ ಹೆಸರು Bahujan Samaj Party
ವಿದ್ಯಾರ್ಹತೆ NULL
ಉದ್ಯೋಗ ಸಾಮಾಜಿಕ ಕಾರ್ಯಕರ್ತೆ, ನ್ಯಾಯವಾದಿ
ತಂದೆಯ ಹೆಸರು ಶ್ರೀ ಪ್ರಭು ದಾಸ
ತಾಯಿಯ ಹೆಸರು ಶ್ರೀಮತಿ ರಾಮ ರತಿ
ಧರ್ಮ ಹಿಂದು
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಮಾಯಾವತಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹75.92 CRORE
ಆಸ್ತಿ:₹87.27 CRORE
ಸಾಲಸೋಲ: ₹11.35 CRORE

ಮಾಯಾವತಿ ಕುರಿತು ಆಸಕ್ತಿದಾಯಕ ಸಂಗತಿಗಳು

2007ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮಾಯಾವತಿಯವರ ಬಿಎಸ್ಪಿ ಬಹುಮತ ಪಡೆಯಿತು. 2009ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಉತ್ತರ ಪ್ರದೇಶದ 20 ಸ್ಥಾನಗಳಲ್ಲಿ ಜಯ ಸಾಧಿಸಿತು. ಈ ಚುನಾವಣೆಯಲ್ಲಿ ಶೇ.27.42 ರಷ್ಟು ಮತಗಳನ್ನು ಪಡೆಯುವ ಮೂಲಕ ಇತರ ಎಲ್ಲ ಪಕ್ಷಗಳಿಗಿಂತ ಅಧಿಕ ಮತ ಪಡೆದ ಹೆಗ್ಗಳಿಕೆ ಬಿಎಸ್ಪಿಯದಾಗಿತ್ತು.


ದೇಶದ ದಲಿತ ಸಮುದಾಯದ ಉದ್ಧಾರಕರಾಗಿ ಮಾಯಾವತಿ ಗುರುತಿಸಿಕೊಂಡರು. ಕೋಟ್ಯಂತರ ಜನತೆ ಅವರನ್ನು ತಮ್ಮ ಮುಖಂಡರಾಗಿ ಒಪ್ಪಿಕೊಂಡರು. ತಮ್ಮ ಅಭಿಮಾನಿಗಳ ಬಳಗದಲ್ಲಿ ಮಾಯಾವತಿಯವರು ಅಕ್ಕರೆಯಿಂದ ’ಬೆಹೆನ್ ಜಿ’ ಎಂದು ಕರೆಯಲ್ಪಡುತ್ತಾರೆ.

2001ರ ಡಿಸೆಂಬರ್ 15 ರಂದು ನಡೆದ ರ್ಯಾಲಿಯೊಂದರಲ್ಲಿ ದಲಿತ ನಾಯಕ ಕಾನ್ಷಿರಾಮ ಅವರು ಮಾಯಾವತಿಯವರನ್ನು ತನ್ನ ರಾಜಕೀಯ ಉತ್ತರಾಧಿಕಾರಿಯಾಗಿ ಹಾಗೂ ತಾನು ಆರಂಭಿಸಿದ್ದ ಬಹುಜನ ಚಳವಳಿಯ ನಾಯಕಿಯನ್ನಾಗಿ ಘೋಷಿಸಿದರು.

ಮಾಯಾವತಿ ರಾಜಕೀಯ ಟೈಮ್‌ಲೈನ್

2018
  • ಏಪ್ರಿಲ್ 2, 2018 ರಂದು ಮಾಯಾವತಿಯವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿದರು.
2017
  • ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ ಮತ್ತೊಮ್ಮೆ ವಿಫಲವಾಯಿತು. ಈ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಬಿಎಸ್ಪಿ ಕೇವಲ 19 ಸ್ಥಾನಗಳನ್ನು ಮಾತ್ರ ಜಯಿಸಲು ಸಾಧ್ಯವಾಯಿತು.
2014
  • 2014ರ ಲೋಕಸಭಾ ಚುನಾವಣೆಯಲ್ಲಿ ಭಾರಿ ತಯಾರಿಯೊಂದಿಗೆ ಲೋಕಸಭಾ ಚುನಾವಣೆಗೆ ಧುಮುಕಿದರೂ ಮಾಯಾವತಿಯವರ ಬಿಎಸ್ಪಿಗೆ ಒಂದೂ ಲೋಕಸಭಾ ಸ್ಥಾನ ಗೆಲ್ಲಲು ಆಗದೆ ಶೂನ್ಯ ಸಾಧನೆ ಮಾಡುವಂತಾಯಿತು.
2012
  • ಉತ್ತರ ಪ್ರದೇಶದಲ್ಲಿನ ಸೋಲಿನ ನಂತರ ಶೀಘ್ರದಲ್ಲಿ ಏಪ್ರಿಲ್ 3, 2012 ರಂದು ಮಾಯಾವತಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
2012
  • ಮಾಯಾವತಿಯವರು 2012ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಅಲ್ಲದೆ ಅವರ ಬಿಎಸ್ಪಿ ಪಕ್ಷವು ಸಮಾಜವಾದಿ ಪಕ್ಷದ ಎದುರು ಸೋತಿತು. ಹೀಗಾಗಿ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು.
2007
  • 2007ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಗರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಆರ್.ಎ. ಉಸ್ಮಾನಿ ಅವರ ವಿರುದ್ಧ ಸೋಲನುಭವಿಸಿದರು. ಆದರೆ ಈ ಚುನಾವಣೆಯಲ್ಲಿ ಬಿಎಸ್ಪಿ ಬಹುಮತ ಪಡೆದಿದ್ದರಿಂದ ಮಾಯಾವತಿ ಮತ್ತೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಮಾರ್ಚ್ 15, 2012 ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು.
2004
  • ಜುಲೈ 2004ರಲ್ಲಿ ರಾಜ್ಯಸಭಾ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದರು. ಜುಲೈ 5, 2007ರವರೆಗೆ ರಾಜ್ಯಸಭಾ ಸದಸ್ಯೆಯಾಗಿ ಮುಂದುವರಿದರು.
2004
  • ಅಕ್ಬರಪುರ ಲೋಕಸಭಾ ಕ್ಷೇತ್ರದಲ್ಲಿ 58,269 ಮತಗಳ ಅಂತರದಿಂದ ಜಯಿಸಿ ಸಂಸದರಾಗಿ ಚುನಾಯಿತರಾದರು. ಆದರೆ ಜುಲೈ 5, 2004 ರಂದು ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು.
2002
  • ಮೇ 3, 2002 ರಿಂದ ಆಗಸ್ಟ್ 29, 2003 ರವರೆಗೆ ಮೂರನೇ ಅವಧಿಗೆ ಅಲ್ಪಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು.
1999
  • ಅಕ್ಬರಪುರ ಕ್ಷೇತ್ರದಲ್ಲಿ ರಾಮ ಪಿಯಾರೆ ಸುಮನ್ ಅವರನ್ನು 53,386 ಮತಗಳ ಅಂತರದಿಂದ ಸೋಲಿಸಿ ಮತ್ತೊಮ್ಮೆ ಸಂಸದೆಯಾದರು.
1998
  • ಅಕ್ಬರಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಡಾ. ಲಾಲ್ತಾ ಪ್ರಸಾದ ಕನೌಜಿಯಾ ಅವರನ್ನು 25,179 ಮತಗಳ ಅಂತರದಿಂದ ಸೋಲಿಸಿ ಎರಡನೆ ಅವಧಿಗೆ ಸಂಸದೆಯಾದರು.
1997
  • 1997 ರ ಮಾರ್ಚ್ 21 ರಿಂದ ಸೆಪ್ಟೆಂಬರ್ 20ರವರೆಗೆ ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
1996
  • 1996-1998 ರವರೆಗೆ ಉತ್ತರ ಪ್ರದೇಶದ ಹರೋರಾ ವಿಧಾನ ಸಭಾ ಕ್ಷೇತ್ರದಿಂದ ಶಾಸಕಿಯಾಗಿದ್ದರು. ಈ ಸಂದರ್ಭದಲ್ಲಿ ಅವರು 2515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
1995
  • ಬಿಎಸ್ಪಿಯ ನಾಯಕಿಯಾಗಿ ಆಯ್ಕೆಯಾಗಿ ಅಲ್ಪಾವಧಿಯವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಜೂನ್ 3 ರಿಂದ ಅಕ್ಟೋಬರ್ 18, 1995 ರವರೆಗೆ ಅವರು ಮುಖ್ಯಮಂತ್ರಿಯಾಗಿದ್ದರು.
1994
  • ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
1989
  • 1989 ರಲ್ಲಿ ಪ್ರಥಮ ಬಾರಿ ಬಿಜ್ನೋರ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜನತಾ ದಳದ ಮಂಗಲರಾಮ ಪ್ರೇಮಿ ಅವರನ್ನು 8879 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಆಯ್ಕೆಯಾದರು.
1984
  • ಬಿಎಸ್ಪಿ ಸೇರಿ ಕಾನ್ಷಿರಾಮ ಅವರ ಬೆಂಬಲಿಗರಾಗಿ ಗುರುತಿಸಿಕೊಂಡರು.

ಹಿಂದಿನ ಇತಿಹಾಸ

1977
  • 1976 ರಲ್ಲಿ ಮೀರತ್ ವಿಶ್ವವಿದ್ಯಾಲಯದ ಗಾಜಿಯಾಬಾದ್ ವಿಎಂಎಲ್ಜಿ ಕಾಲೇಜಿನಿಂದ ಬಿಎಡ್ ಪದವಿ ಪೂರ್ಣಗೊಳಿಸಿದರು. 1977 ರಿಂದ 1984 ರವರೆಗೆ ದೆಹಲಿ ವಲಯದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು.

ಮಾಯಾವತಿ ಸಾಧನೆಗಳು

ಮಾಯಾವತಿಯವರ ರಾಜಕೀಯ ಸಾಧನೆಯನ್ನು ’ಪ್ರಜಾಪ್ರಭುತ್ವದ ಪವಾಡ’ ಎಂದು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ ಬಣ್ಣಿಸಿದ್ದರು. ಅತ್ಯಂತ ಕೆಳವರ್ಗದಿಂದ ಬಂದ ಮಾಯಾವತಿಯವರು ದೇಶದ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ ಅತ್ಯಂತ ಪ್ರಬಲ ರಾಜಕೀಯ ನಾಯಕಿಯಾಗಿ ಬೆಳೆದಿದ್ದು ಮಹೋನ್ನತ ಸಾಧನೆಯಾಗಿದೆ. 2008 ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮಾಯಾವತಿಯವರಿಗೆ 59ನೇ ಸ್ಥಾನವನ್ನು ನೀಡಿತ್ತು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X