ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆಯಾಗಿರುವ ಮಮತಾ ಬ್ಯಾನರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ಕೋಲ್ಕತ್ತಾದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಮತಾ ತಮ್ಮ ಕಾಲೇಜು ದಿನಗಳಲ್ಲಿಯೇ ರಾಜಕೀಯಕ್ಕೆ ಬಂದರು.

ಮಮತಾ ಬ್ಯಾನರ್ಜಿ ಜೀವನ ಚರಿತ್ರೆ

ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆಯಾಗಿರುವ ಮಮತಾ ಬ್ಯಾನರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ಕೋಲ್ಕತ್ತಾದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಮತಾ ತಮ್ಮ ಕಾಲೇಜು ದಿನಗಳಲ್ಲಿಯೇ ರಾಜಕೀಯಕ್ಕೆ ಬಂದರು. ಯುವ ವಯಸ್ಸಿನಲ್ಲಿದ್ದಾಗಲೇ ರಾಜಕೀಯಕ್ಕೆ ಬಂದ ಇವರು 1984 ರಲ್ಲಿ ಸೌತ್ ಕೋಲ್ಕತಾ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಜಯ ಗಳಿಸಿದರು. ಇದೇ ಕ್ಷೇತ್ರದಲ್ಲಿ ಇವರು 1989 ಹಾಗೂ 1991 ರಲ್ಲಿ ಸೋಲನುಭವಿಸಿದರು. ನಂತರ 2009ರ ಸಾರ್ವತ್ರಿಕ ಚುನಾವಣೆಗಳವರೆಗೂ ಈ ಕ್ಷೇತ್ರದಲ್ಲಿ ಸತತವಾಗಿ ಜಯಗಳಿಸಿದರು. 1997 ರಲ್ಲಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಎರಡು ಬಾರಿ ಕೇಂದ್ರದಲ್ಲಿ ರೈಲ್ವೆ ಖಾತೆ ಸಚಿವರಾದರು. ಎನ್ಡಿಎ ಹಾಗೂ ಯುಪಿಎ ಎರಡೂ ಮೈತ್ರಿಕೂಟಗಳ ಸರಕಾರಗಳಲ್ಲಿ ಸಚಿವೆಯಾಗಿದ್ದ ಇವರು ನಂದಿಗ್ರಾಮ ಹಾಗೂ ಸಿಂಗೂರ ಹೋರಾಟಗಳಿಂದ ದೇಶಾದ್ಯಂತ ಹೆಸರುವಾಸಿಯಾದರು. 2011 ರಲ್ಲಿ ಪ್ರಥಮ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ನಂತರ 2016 ರಲ್ಲಿ ಮತ್ತೂ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೇರಿದರು.

ಮತ್ತಷ್ಟು ಓದು

ಮಮತಾ ಬ್ಯಾನರ್ಜಿ ವಯಕ್ತಿಕ ಜೀವನ

ಪೂರ್ಣ ಹೆಸರು ಮಮತಾ ಬ್ಯಾನರ್ಜಿ
ಜನ್ಮ ದಿನಾಂಕ 05 Jan 1955 (ವಯಸ್ಸು 69)
ಹುಟ್ಟಿದ ಸ್ಥಳ ಕೋಲ್ಕತಾ
ಪಕ್ಷದ ಹೆಸರು All India Trinamool Congress
ವಿದ್ಯಾರ್ಹತೆ Post Graduate
ಉದ್ಯೋಗ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತೆ
ತಂದೆಯ ಹೆಸರು ಪ್ರೊಮಿಲೇಸ್ವರ ಬ್ಯಾನರ್ಜಿ
ತಾಯಿಯ ಹೆಸರು ಗಾಯತ್ರಿ ಬ್ಯಾನರ್ಜಿ
ಧರ್ಮ ಹಿಂದು
ಖಾಯಂ ವಿಳಾಸ 30ಬಿ, ಹರೀಶ ಚಟರ್ಜಿ ಸ್ಟ್ರೀಟ್, ಕೋಲ್ಕತಾ - 700026
ಪ್ರಸ್ತುತ ವಿಳಾಸ 30ಬಿ, ಹರೀಶ ಚಟರ್ಜಿ ಸ್ಟ್ರೀಟ್, ಕೋಲ್ಕತಾ - 700026
ಸಂಪರ್ಕ ಸಂಖ್ಯೆ (033)2214-5555, 2214-3101
ಈ ಮೇಲ್ [email protected]
ವೆಬ್‌ಸೈಟ್ https://wb.gov.in/portal/web/guest/meet-the-chief-minister
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಮಮತಾ ಬ್ಯಾನರ್ಜಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹16.72 LAKHS
ಆಸ್ತಿ:₹16.72 LAKHS
ಸಾಲಸೋಲ: N/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಮಮತಾ ಬ್ಯಾನರ್ಜಿ ಕುರಿತು ಆಸಕ್ತಿದಾಯಕ ಸಂಗತಿಗಳು

ಪಶ್ಚಿಮ ಬಂಗಾಳದ ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಇವರದಾಗಿದೆ. ದೀದಿ ಎಂದು ತಮ್ಮ ಆತ್ಮೀಯ ವಲಯದಲ್ಲಿ ಜನಪ್ರಿಯರಾಗಿದ್ದಾರೆ. ಇತಿಹಾಸ ವಿಷಯದಲ್ಲಿ ಆನರ್ಸ್ ಪದವಿ, ಇಸ್ಲಾಮಿಕ್ ಸ್ಟಡೀಸ್ನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿಕ್ಷಣ ಹಾಗೂ ಕಾನೂನು ಪದವಿಗಳನ್ನು ಪಡೆದುಕೊಂಡಿದ್ದಾರೆ. ಇವರು ಕವಿತೆಗಳನ್ನು ಸಹ ಬರೆಯುತ್ತಾರೆ. ಇವರ ಮುನ್ನೂರಕ್ಕೂ ಹೆಚ್ಚು ಪೇಂಟಿಂಗ್ಗಳು ಮಾರಾಟವಾಗಿವೆ. ಅನೇಕರು ಇವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಪರಿಗಣಿಸುತ್ತಾರೆ.

ಮಮತಾ ಬ್ಯಾನರ್ಜಿ ಸಾಧನೆಗಳು

1984 ರಲ್ಲಿ ಖ್ಯಾತ ಕಮ್ಯುನಿಸ್ಟ್ ಮುಖಂಡ ಸೋಮನಾಥ ಚಟರ್ಜಿ ಅವರನ್ನು ಜಾದವಪುರ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿ ಪ್ರಥಮ ಬಾರಿಗೆ ಸಂಸದೆಯಾದರು. ಕಾಂಗ್ರೆಸ್ ಪಕ್ಷದಿಂದ ಸಂಸದೆಯಾಗಿದ್ದಾಗ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಕಿರಿಯ ಸಚಿವೆ, ಯುವಜನ ಹಾಗೂ ಕ್ರೀಡಾ ಇಲಾಖೆ ಸಚಿವೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಕಾರ್ಯನಿರ್ವಹಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಬೇರು ಬಿಟ್ಟಿದ್ದ ಮಾವೋವಾದಿ ಸಮಸ್ಯೆಯನ್ನು ನಿರ್ನಾಮ ಮಾಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X