ಮುಖ್ಯಪುಟ
 » 
ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ 7,897 ಮತಗಳನ್ನು ಪಡೆದು ಆಯ್ಕೆಗೊಂಡರು.

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಪ್ರಸ್ತುತ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ.

ಮಲ್ಲಿಕಾರ್ಜುನ ಖರ್ಗೆ ಜೀವನ ಚರಿತ್ರೆ

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ 7,897 ಮತಗಳನ್ನು ಪಡೆದು ಆಯ್ಕೆಗೊಂಡರು.

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಪ್ರಸ್ತುತ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ. ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸದ್ಯ ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ. ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ, ಕಾರ್ಮಿಕ ಸೇರಿದಂತೆ ವಿವಿಧ ಖಾತೆಗಳ ಸಚಿವರಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು.

4 ದಶಕಗಳ ಚುನಾವಣೆ ಇತಿಹಾಸದಲ್ಲಿ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆ 2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಸತತವಾಗಿ 9 ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದ ಕೀರ್ತಿ ಖರ್ಗೆ ಅವರದ್ದು.

1947, ಜುಲೈ 24ರಂದು ಜನಿಸಿದ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗ ಸರ್ಕಾರಿ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಕಾನೂನು ಪದವಿ ಪಡೆದ ಬಳಿಕ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಕಚೇರಿಯಲ್ಲಿ ಜ್ಯುನಿಯರ್ ಆಗಿ ವಕೀಲ ವೃತ್ತಿ ಆರಂಭಿಸಿದರು.

ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಮುಖ್ಯಮಂತ್ರಿಯಾಗಬೇಕಿತ್ತು ಎಂಬುದನ್ನು ಅವರ ಅಭಿಮಾನಿಗಳು ಈಗಲೂ ಹೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ ರಾಜಕೀಯದಲ್ಲಿದ್ದು, ಚಿತ್ತಾಪುರ ಕ್ಷೇತ್ರದ ಶಾಸಕರು, ಮಾಜಿ ಸಚಿವರು.

ವಿದ್ಯಾರ್ಥಿ ಸಂಘದ ನಾಯಕರಾಗಿ ವೃತ್ತಿ ಜೀವನ ಆರಂಭಿಸಿದ ಮಲ್ಲಿಕಾರ್ಜುನ ಖರ್ಗೆ ಬಳಿಕ ಲೋಕಸಭೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಬೆಳೆದರು. 1969ರಲ್ಲಿ ಕಾಂಗ್ರೆಸ್ ಸೇರಿದ ಖರ್ಗೆ ಪಕ್ಷ, ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರು.

1972ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ 9 ಬಾರಿ ವಿಧಾನಸಭೆಗೆ, 2 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ.

ರಾಜ್ಯದಲ್ಲಿ ಗೃಹ, ಕಂದಾಯ, ಪ್ರಾಥಮಿಕ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಖಾತೆ ನಿಭಾಯಿಸಿದ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ವಿಚಾರ.

ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಖಾತೆ ಸಚಿವರಾಗಿದ್ದರು. ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರಲ್ಲಿ ಖರ್ಗೆ ಸಹ ಒಬ್ಬರು.

ಮತ್ತಷ್ಟು ಓದು
By Zainab Ashraf Updated: Wednesday, October 19, 2022, 02:04:18 PM [IST]

ಮಲ್ಲಿಕಾರ್ಜುನ ಖರ್ಗೆ ವಯಕ್ತಿಕ ಜೀವನ

ಪೂರ್ಣ ಹೆಸರು ಮಲ್ಲಿಕಾರ್ಜುನ ಖರ್ಗೆ
ಜನ್ಮ ದಿನಾಂಕ 21 Jul 1942 (ವಯಸ್ಸು 81)
ಹುಟ್ಟಿದ ಸ್ಥಳ ವರವಟ್ಟಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ ಮತ್ತು ವಕೀಲ
ತಂದೆಯ ಹೆಸರು ಮಾಪಣ್ಣಾ
ತಾಯಿಯ ಹೆಸರು ಸೈಬವ್ವಾ
ಧರ್ಮ ಬೌದ್ಧ
ವೆಬ್‌ಸೈಟ್ NIL
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಮಲ್ಲಿಕಾರ್ಜುನ ಖರ್ಗೆ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹15.46 CRORE
ಆಸ್ತಿ:₹15.77 CRORE
ಸಾಲಸೋಲ: ₹31.22 LAKHS

ಮಲ್ಲಿಕಾರ್ಜುನ ಖರ್ಗೆ ಕುರಿತು ಆಸಕ್ತಿದಾಯಕ ಸಂಗತಿಗಳು

ಪುಸ್ತಕಗಳನ್ನು ಓದುವುದರಲ್ಲಿ ಅಪಾರ ಆಸಕ್ತಿ ಹೊಂದಿರುವ ಖರ್ಗೆ, ಪ್ರಗತಿಪರ ಚಿಂತಕರು. ಮೂಢನಂಬಿಕೆ ಹಾಗೂ ಕಂದಾಚಾರಗಳ ವಿರುದ್ಧ ಇವರು ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.

9 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಟೈಮ್‌ಲೈನ್

2014
  • 2014 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಇವರು ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿಯನ್ನು 73 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಆಯ್ಕೆಯಾದರು. ಇದೇ ವರ್ಷದ ಜೂನ್ ತಿಂಗಳಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಧಿಕೃತ ನಾಯಕನಾಗಿ ಖರ್ಗೆ ಅವರನ್ನು ನೇಮಿಸಲಾಯಿತು.
2009
  • 2009 ರಲ್ಲಿ ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಕಣಕ್ಕಿಳಿದ ಖರ್ಗೆ ಸತತ 10 ನೇ ಬಾರಿ ಜಯಿಸುವ ಮೂಲಕ ಸಂಸದರಾಗಿ ಆಯ್ಕೆಯಾದರು.
2008
  • 2008 ರಲ್ಲಿ ಚಿತ್ತಾಪುರ ವಿಧಾನ ಸಭಾ ಕ್ಷೇತ್ರದಿಂದ ದಾಖಲೆಯ ಒಂಭತ್ತನೆ ಬಾರಿಗೆ ಖರ್ಗೆ ಶಾಸಕರಾಗಿ ಆಯ್ಕೆಯಾದರು. 2004 ಚುನಾವಣೆಗೆ ಹೋಲಿಸಿದಲ್ಲಿ 2008 ರ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಿದರೂ ಅದರ ಬಹುತೇಕ ಪ್ರಮುಖ ನಾಯಕರು ಚುನಾವಣೆಯಲ್ಲಿ ಸೋತ ಕಾರಣ ಬಹುಮತ ಪಡೆಯಲಾಗಲಿಲ್ಲ. ಈ ಸಂದರ್ಭದಲ್ಲಿ ಖರ್ಗೆ ಎರಡನೆ ಬಾರಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ನೇಮಕವಾದರು.
2005
  • 2005 ರಲ್ಲಿ ಖರ್ಗೆಯವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (ಕೆಪಿಸಿಸಿ) ಅಧ್ಯಕ್ಷರಾದರು. ಇವರು ಅಧ್ಯಕ್ಷರಾಗಿ ಕೆಲವೇ ತಿಂಗಳಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಎದುರಾಳಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗಿಂತಲೂ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿತು. ಈ ಜಯದಿಂದ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಚೇತರಿಸಿಕೊಳ್ಳಲು ಸಹಕಾರಿಯಾಯಿತು.
2004
  • 2004 ರಲ್ಲಿ ಎಂಟನೆ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ತೀರಾ ಹತ್ತಿರ ಬಂದರೂ ಮುಖ್ಯಮಂತ್ರಿ ಪಟ್ಟ ಇವರಿಗೆ ಒಲಿಯಲಿಲ್ಲ. ಈ ಸಂದರ್ಭದಲ್ಲಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸಾರಿಗೆ, ಜಲ ಸಂಪನ್ಮೂಲ ಸಚಿವರಾಗಿ ನೇಮಕಗೊಂಡರು.
1999
  • 1999 ರಲ್ಲಿ ಏಳನೆ ಬಾರಿಗೆ ಶಾಸಕರಾಗಿ ಜಯ ದಾಖಲಿಸಿದ ಖರ್ಗೆ ಮುಖ್ಯಮಂತ್ರಿ ಸ್ಥಾನಕ್ಕೇರುವ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡರು.
1994
  • 1994 ರಲ್ಲಿ ಗುರುಮಿಟ್ಕಲ್ ಕ್ಷೇತ್ರದಿಂದ ಆರನೆ ಬಾರಿಗೆ ಶಾಸಕರಾದ ಖರ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದರು.
1992
  • 1992 ರಿಂದ 1994 ರ ಅವಧಿಯಲ್ಲಿ ಮೊಯ್ಲಿ ಅವರ ಸಂಪುಟದಲ್ಲಿ ಸಹಕಾರ, ಸಣ್ಣ ಮತ್ತು ಭಾರಿ ಉದ್ಯಮ ಖಾತೆ ಸಚಿವರಾಗಿ ಖರ್ಗೆ ಸೇವೆ ಸಲ್ಲಿಸಿದರು.
1990
  • 1990 ರಲ್ಲಿ ಮುಖ್ಯಮಂತ್ರಿ ಬಂಗಾರಪ್ಪನವರ ಸಂಪುಟಕ್ಕೆ ಸೇರ್ಪಡೆಯಾದ ಖರ್ಗೆ ಅವರಿಗೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಸಚಿವ ಸ್ಥಾನವನ್ನು ನೀಡಲಾಯಿತು. ಈ ಮುನ್ನ ಈ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹಲವಾರು ಮಹತ್ವದ ಬದಲಾವಣೆಗಳನ್ನು ಖರ್ಗೆ ಜಾರಿಗೆ ತಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
1989
  • 1989 ರಲ್ಲಿ ಗುರುಮಿಟ್ಕಲ್ ಕ್ಷೇತ್ರದಿಂದ ಜಯ ಸಾಧಿಸಿ ಐದನೆ ಬಾರಿಗೆ ಶಾಸಕರಾದರು.
1985
  • 1985 ರಲ್ಲಿ ನಾಲ್ಕನೇ ಬಾರಿಗೆ ಗುರುಮಿಟ್ಕಲ್ ಕ್ಷೇತ್ರದಿಂದ ಶಾಸಕರಾದ ಖರ್ಗೆಯವರು ಕರ್ನಾಟಕ ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕನಾಗಿ ಕಾರ್ಯನಿರ್ವಹಿಸಿದರು.
1983
  • 1983 ರಲ್ಲಿ ಗುರುಮಿಟ್ಕಲ್ ವಿಧಾನ ಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
1980
  • ತದನಂತರ 1980 ರಲ್ಲಿ ಗುಂಡೂರಾಯರ ಸರಕಾರದಲ್ಲಿ ಇವರು ಕಂದಾಯ ಇಲಾಖೆ ಸಚಿವರಾಗಿ ನಿಯುಕ್ತಿಗೊಂಡರು. ಈ ಅವಧಿಯಲ್ಲಿನ ವ್ಯಾಪಕ ಭೂಸುಧಾರಣಾ ಕಾರ್ಯಗಳಿಂದ ರಾಜ್ಯದ ಲಕ್ಷಾಂತರ ಸಣ್ಣ ರೈತರು ಹಾಗೂ ಕೂಲಿಕಾರರಿಗೆ ಭೂಮಿಯ ಹಕ್ಕು ದೊರಕಿದ್ದು ಇತಿಹಾಸ.
1978
  • 1978 ರಲ್ಲಿ ಇವರು ದ್ವಿತೀಯ ಬಾರಿ ಗುರುಮಿಟಕಲ್ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆಯಾದರು. ದೇವರಾಜ ಅರಸು ಅವರ ಮಂತ್ರಿ ಮಂಡಳದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಸಚಿವರಾಗಿ ಇವರು ನೇಮಕಗೊಂಡರು.
1976
  • 1976ರಲ್ಲಿ ಇವರು ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರಾಗಿ ನೇಮಕಗೊಂಡರು. ಸಚಿವರಾಗಿ ಅವರು ತಮ್ಮ ಅವಧಿಯಲ್ಲಿ ಖಾಲಿ ಇದ್ದ 16 ಸಾವಿರ ಎಸ್‌ಸಿ, ಎಸ್‌ಟಿ ಬ್ಯಾಕ್ ಲಾಗ್ ಶಿಕ್ಷಕರ ಹುದ್ದೆಗಳನ್ನು ಏಕಕಾಲಕ್ಕೆ ತುಂಬಿ 16 ಸಾವಿರ ಶಿಕ್ಷಕರನ್ನು ನೇರ ನೇಮಕಾತಿ ಮಾಡಿದರು.
1974
  • 1974 ರಲ್ಲಿ ಚರ್ಮೋದ್ಯಮ ಅಭಿವೃದ್ಧಿ ನಿಗಮದ ಚೇರಮನ್‌ರಾಗಿ ಆಯ್ಕೆಯಾದ ಖರ್ಗೆ, ಬಡತನದಲ್ಲಿದ್ದ ಚರ್ಮಕಾರರ ಜೀವನಮಟ್ಟ ಸುಧಾರಿಸಲು ಹಲವಾರು ಕಾರ್ಯಯೋಜನೆಗಳನ್ನು ಆರಂಭಿಸಿದರು.
1973
  • 1973 ರಲ್ಲಿ ಕರ್ನಾಟಕದ ಪೌರಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸ್ಥಾಪಿಸಲಾದ ಆಕ್ಟ್ರಾಯ್ ತೆರಿಗೆ ನಿರ್ಮೂಲನಾ ಸಮಿತಿಯ ಚೇರಮನ್‌ರಾಗಿ ಖರ್ಗೆ ಅವರನ್ನು ನೇಮಿಸಲಾಯಿತು.
1972
  • ತಮ್ಮ ರಾಜಕೀಯ ಜೀವನದ ಪ್ರಥಮ ಚುನಾವಣೆಯನ್ನು 1972ರಲ್ಲಿ ಎದುರಿಸಿದ ಖರ್ಗೆಯವರು ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.

ಹಿಂದಿನ ಇತಿಹಾಸ

2022
  • ಅಕ್ಟೋಬರ್ 19ರಂದು ಕಾಂಗ್ರೆಸ್ ಅಧ್ಯಕೀಯ ಚುನಾವಣೆ ಫಲಿತಾಂಶ ಪ್ರಕಟವಾಯಿತು. ಮಲ್ಲಿಕಾರ್ಜುನ ಖರ್ಗೆ 7897 ಮತಗಳನ್ನು ಪಡೆದು ಜಯಗಳಿಸಿದರು.
1969
  • 1969 ರಲ್ಲಿ ಖರ್ಗೆಯವರು ಎಂಎಸ್‌ಕೆ ಮಿಲ್ ಕಾರ್ಮಿಕ ಯೂನಿಯನ್ನಿನ ಕಾನೂನು ಸಲಹೆಗಾರರಾಗಿ ನೇಮಕಗೊಂಡರು. ಸಂಯುಕ್ತ ಮಜ್ದೂರ್ ಸಂಘದ ಪ್ರಭಾವಿ ಹೋರಾಟಗಾರಲ್ಲೊಬ್ಬರಾಗಿ ಹೊರಹೊಮ್ಮಿದ ಖರ್ಗೆ ಕಾರ್ಮಿಕರ ಹಕ್ಕುಗಳಿಗಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿದರು. ಇದೇ ವರ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರಿದ ಇವರು ಗುಲಬರ್ಗಾ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡರು.
60 ರ ದಶಕದ ಆರಂಭಿಕ ವರ್ಷಗಳಲ್ಲಿ..
  • ಗುಲಬರ್ಗಾದ ನೂತನ ವಿದ್ಯಾಲಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಖರ್ಗೆ, ನಂತರ ಗುಲಬರ್ಗಾದ ಸರಕಾರಿ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪಡೆದುಕೊಂಡರು. ಇದರ ನಂತರ ಗುಲಬರ್ಗಾದ ಸೇಠ ಶಂಕರಲಾಲ ಲಾಹೋಟಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಗುಲಬರ್ಗಾದ ಸರಕಾರಿ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ಇವರು ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದಿದ್ದರು.

ಮಲ್ಲಿಕಾರ್ಜುನ ಖರ್ಗೆ ಸಾಧನೆಗಳು

ಕಲಬುರಗಿಯ ಬುದ್ಧ ವಿಹಾರದಲ್ಲಿ ನಿರ್ಮಿಸಲಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಸಂಸ್ಥಾಪಕ ಚೇರಮನ್‌.

ಪ್ರಮುಖ ಸಂಗೀತ ಕಚೇರಿ ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ಹೆಸರುವಾಸಿಯಾದ ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್‌ನ ಅಭಿವೃದ್ಧಿಗೆ ಖರ್ಗೆ ಅವರ ಕೊಡುಗೆ ಬಹಳ ದೊಡ್ಡದು. ಚೌಡಯ್ಯ ಮೆಮೊರಿಯಲ್ ಸಂಸ್ಥೆಯ ಸಾಲ ತೀರಿಸಲು ಹಾಗೂ ಇದರ ಪುನರುಜ್ಜೀವನಕ್ಕಾಗಿ ಖರ್ಗೆ ಸಾಕಷ್ಟು ಸಹಾಯ ಮಾಡಿದ್ದಾರೆ.

ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾಗಿಯೂ (2012ರವರೆಗೆ) ಸೇವೆ ಸಲ್ಲಿಸಿದ್ದಾರೆ. 1974 ರಿಂದ 1996 ರವರೆಗೆ ತುಮಕೂರಿನ ಸಿದ್ಧಾರ್ಥ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X