ಎಚ್.ಡಿ. ಕುಮಾರಸ್ವಾಮಿಯವರು ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಇವರು ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಿರಿಯ ಸುಪುತ್ರರಾಗಿರುವ ಇವರು ಕರ್ನಾಟಕ ಜೆಡಿಎಸ್ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ. ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎಂಬುದು ಇವರ ಪೂರ್ಣ ನಾಮಧೇಯವಾಗಿದ್ದು ’ಕುಮಾರಣ್ಣ’ ಎಂದು ಅಭಿಮಾನಿ ಬಳಗದಲ್ಲಿ ಹೆಸರುವಾಸಿಯಾಗಿದ್ದಾರೆ. ಜೆಡಿಎಸ್ನ ಅತ್ಯಂತ ಕ್ರಿಯಾಶೀಲ ಹಾಗೂ ಯಶಸ್ವಿ ನಾಯಕರಾಗಿರುವ ಕುಮಾರಸ್ವಾಮಿಯವರು ರಾಜಕೀಯ ಅಷ್ಟೆ ಅಲ್ಲದೆ ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಚಲನ ಚಿತ್ರ ನಿರ್ಮಾಣದಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಇನ್ನಿತರ ಹಲವಾರು ರಾಜಕೀಯ ಮುಖಂಡರಂತೆ ಇವರಿಗೂ ಹಲವಾರು ವಿವಾದಗಳು ಸುತ್ತಿಕೊಂಡಿವೆ. ದ್ವಿಪತ್ನಿತ್ವ, ಜಂತಕಲ್ ಮೈನಿಂಗ್ ಹಗರಣ, ವಿಶ್ವಭಾರತಿ ಪ್ರಕರಣ ಮುಂತಾದ ಆರೋಪಗಳು ಇವರ ಮೇಲಿವೆ. 2006 ರಲ್ಲಿ ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದ ಜಿಡಿಪಿ ಅತ್ಯುನ್ನತ ಮಟ್ಟವನ್ನು ಮುಟ್ಟಿದ್ದು ದಾಖಲೆಯಾಗಿದೆ.
Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.