ಎಚ್.ಡಿ. ಕುಮಾರಸ್ವಾಮಿ

ಎಚ್.ಡಿ. ಕುಮಾರಸ್ವಾಮಿ

ಮಾಜಿ ಪ್ರಧಾನಿ ಎಚ್. ಡಿ.

ಎಚ್.ಡಿ. ಕುಮಾರಸ್ವಾಮಿ ಜೀವನ ಚರಿತ್ರೆ

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಪುತ್ರ ಎಚ್. ಡಿ. ಕುಮಾರಸ್ವಾಮಿಯವರು ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಎರಡು ಬಾರಿ ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಎಚ್. ಡಿ. ದೇವೇಗೌಡರ ಕಿರಿಯ ಪುತ್ರ ಎಚ್. ಡಿ. ಕುಮಾರಸ್ವಾಮಿ ಕರ್ನಾಟಕ ಜೆಡಿಎಸ್ ಘಟಕದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಎಚ್. ಡಿ. ಕುಮಾರಸ್ವಾಮಿ ಪೂರ್ಣ ಹೆಸರು ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ.

ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಪ್ರೀತಿಯಿಂದ ಎಚ್. ಡಿ. ಕುಮಾರಸ್ವಾಮಿಯನ್ನು ’ಕುಮಾರಣ್ಣ’ ಎಂದು ಕರೆಯುತ್ತಾರೆ. ರಾಜಕೀಯಕ್ಕೆ ಬರುವ ಮೊದಲು ಎಚ್. ಡಿ. ಕುಮಾರಸ್ವಾಮಿ ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಹಲವಾರು ವರ್ಷಗಳಿಂದ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಹಲವಾರು ವಿವಾದಗಳು ಕುಮಾರಸ್ವಾಮಿ ವಿರುದ್ಧ ಕೇಳಿ ಬಂದಿವೆ. ದ್ವಿಪತ್ನಿತ್ವ, ಜಂತಕಲ್ ಮೈನಿಂಗ್ ಹಗರಣ, ವಿಶ್ವಭಾರತಿ ಪ್ರಕರಣ ಮುಂತಾದ ಆರೋಪಗಳು ಇವರ ಮೇಲಿವೆ. 2006 ರಲ್ಲಿ ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದ ಜಿಡಿಪಿ ಅತ್ಯುನ್ನತ ಮಟ್ಟವನ್ನು ಮುಟ್ಟಿದ್ದು ದಾಖಲೆಯಾಗಿದೆ.

ಮತ್ತಷ್ಟು ಓದು

ಎಚ್.ಡಿ. ಕುಮಾರಸ್ವಾಮಿ ವಯಕ್ತಿಕ ಜೀವನ

ಪೂರ್ಣ ಹೆಸರು ಎಚ್.ಡಿ. ಕುಮಾರಸ್ವಾಮಿ
ಜನ್ಮ ದಿನಾಂಕ 16 Dec 1959 (ವಯಸ್ಸು 64)
ಹುಟ್ಟಿದ ಸ್ಥಳ ಹರದನಹಳ್ಳಿ, ಹಾಸನ ಜಿಲ್ಲೆ
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ Graduate
ಉದ್ಯೋಗ ಸಾಮಾಜಿಕ ಕಾರ್ಯಕರ್ತ ಹಾಗೂ ಕೃಷಿಕ
ತಂದೆಯ ಹೆಸರು ಎಚ್.ಡಿ. ದೇವೇಗೌಡ
ತಾಯಿಯ ಹೆಸರು ಚೆನ್ನಮ್ಮ
ಅವಲಂಬಿತರ ಹೆಸರು ಅನಿತಾ ಕುಮಾರಸ್ವಾಮಿ
ಅವಲಂಬಿತರ ಉದ್ಯೋಗ ಉದ್ಯಮಿ ಹಾಗೂ ರಾಜಕಾರಣಿ
ಮಕ್ಕಳು 1 ಪುತ್ರ(ರು)
ಧರ್ಮ ಹಿಂದು
ಖಾಯಂ ವಿಳಾಸ ನಂ. 286, ೩ನೇ ಮುಖ್ಯ ರಸ್ತೆ, ೩ನೇ ಫೇಸ್, ಜೆಪಿ ನಗರ, ಬೆಂಗಳೂರು -560078
ಪ್ರಸ್ತುತ ವಿಳಾಸ ನಂ. 286, ೩ನೇ ಮುಖ್ಯ ರಸ್ತೆ, ೩ನೇ ಫೇಸ್, ಜೆಪಿ ನಗರ, ಬೆಂಗಳೂರು -560078
ಸಂಪರ್ಕ ಸಂಖ್ಯೆ 9980087725
ಈ ಮೇಲ್ [email protected]
ವೆಬ್‌ಸೈಟ್ http://www.cmkarnataka.gov.in/
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಎಚ್.ಡಿ. ಕುಮಾರಸ್ವಾಮಿ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹112.76 CRORE
ಆಸ್ತಿ:₹189.28 CRORE
ಸಾಲಸೋಲ: ₹76.52 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ಎಚ್.ಡಿ. ಕುಮಾರಸ್ವಾಮಿ ಕುರಿತು ಆಸಕ್ತಿದಾಯಕ ಸಂಗತಿಗಳು

ಕುಮಾರಸ್ವಾಮಿಯವರು ಚಲನಚಿತ್ರ ನಿರ್ಮಾಣ ಹಾಗೂ ಹಂಚಿಕೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಹಲವಾರು ಚಲನಚಿತ್ರಗಳ ನಿರ್ಮಾಪಕರಾಗಿದ್ದು, ಇವರ ನಿರ್ಮಾಣದ ಚಂದ್ರ ಚಕೋರಿ ಚಲನಚಿತ್ರ ರಾಜ್ಯಾದ್ಯಂತ ಹಲವಾರು ಚಿತ್ರಮಂದಿರಗಳಲ್ಲಿ 365 ದಿನಗಳ ಕಾಲ ಪ್ರದರ್ಶನಗೊಂಡು ಸೂಪರ್ ಹಿಟ್ ಆಗಿತ್ತು.
ಸೆಪ್ಟೆಂಬರ್ 2007 ರಲ್ಲಿ ಕುಮಾರಸ್ವಾಮಿ ತಮ್ಮದೇ ಆದ ’ಕಸ್ತೂರಿ’ ಕನ್ನಡ ವಾಹಿನಿ ಆರಂಭಿಸಿದರು. ಈಗ ಇದನ್ನು ಅವರ ಪತ್ನಿ ಅನಿತಾ ನೋಡಿಕೊಳ್ಳುತ್ತಿದ್ದಾರೆ.
ಕುಮಾರಸ್ವಾಮಿ ಡಾ.ರಾಜಕುಮಾರ ಅವರ ಅಭಿಮಾನಿಯಾಗಿದ್ದು ಅವರಂತೆಯೇ ವೇಷಭೂಷಣ ಧರಿಸುತ್ತಿದ್ದರು. ತಮಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇಲ್ಲ, ಚಿತ್ರ ನಿರ್ಮಾಣದಲ್ಲಿಯೇ ಆಸಕ್ತಿ ಜಾಸ್ತಿ ಎಂದು ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದರು.
ಕಾರುಗಳ ಬಗ್ಗೆ ಒಲವು ಹೊಂದಿರುವ ಕುಮಾರಸ್ವಾಮಿಯವರ ಬಳಿ ಲ್ಯಾಂಬೊರ್ಗಿನಿ, ಪೋರ್ಶ, ಹಮ್ಮರ್ ಮತ್ತು ರೇಂಜ್ ರೋವರ್ ಮುಂತಾದ ದುಬಾರಿ ಕಾರುಗಳಿವೆ.
ಈ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಂದ ಇವರು ಜನಪ್ರಿಯ ನಾಯಕರಾಗಿ ಹೆಸರು ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ರಾಜಕೀಯ ಟೈಮ್‌ಲೈನ್

2019
  • ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿತು. ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವ ಮೊದಲೇ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದರು.
2018
  • 2018 ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಈ ಬಾರಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರಕಾರ ರಚಿಸಿದ ಕುಮಾರಸ್ವಾಮಿ ಮೇ 23, 2018 ರಂದು ಕರ್ನಾಟಕದ ಮುಖ್ಯಮಂತ್ರಿಯಾದರು.
2014
  • ನವೆಂಬರ್ 2014 ರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮರುನೇಮಕಗೊಂಡರು.
2013
  • 2013ರ ಮೇ 31 ರಂದು ಕರ್ನಾಟಕ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದರು.
2009
  • 15ನೇ ಲೋಕಸಭೆಯ ಸದಸ್ಯರಾಗಿ ಮತ್ತೆ ಚುನಾಯಿತರಾದರು. (2ನೇ ಅವಧಿ)
2006
  • ಜನವರಿ 2006ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ತಲಾ 20 ತಿಂಗಳ ಸರಕಾರ ನಡೆಸುವ ಒಪ್ಪಂದ ಮಾಡಿಕೊಂಡ ನಂತರ ಆಗಿನ ರಾಜ್ಯಪಾಲ ಟಿ.ಎನ್. ಚತುರ್ವೇದಿಯವರು ಕುಮಾರಸ್ವಾಮಿ ಅವರಿಗೆ ಸರಕಾರ ರಚನೆಯ ಆಹ್ವಾನ ನೀಡಿದರು. ಫೆಬ್ರುವರಿ 4, 2006 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ ಅಕ್ಟೋಬರ್ 8, 2007 ರವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದರು. ಒಪ್ಪಂದದಂತೆ ಬಾಕಿ 20 ತಿಂಗಳ ಅವಧಿಗೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿದ್ದರು.
2004
  • 2004ರಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೈಜೋಡಿಸಿ ಸರ್ಕಾರ ರಚಿಸಲಾಯಿತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
1999
  • 1999ರಲ್ಲಿ ಸಾತನೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋತರು. ಆದರೆ 2004 ರಲ್ಲಿ ಜೆಡಿಎಸ್‌ನ ಅದೃಷ್ಟ ಮತ್ತೆ ಖುಲಾಯಿಸಿ ರಾಮನಗರ ಕ್ಷೇತ್ರದಲ್ಲಿ ಜಯಗಳಿಸಿದರು.
1998
  • 1998 ರಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ ವಿರುದ್ಧ ಸೋಲನುಭವಿಸಿದರು. ಅಲ್ಲದೆ ಈ ಚುನಾವಣೆಯಲ್ಲಿ ಅವರು ಠೇವಣಿಯನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
1996
  • 1996 ರಲ್ಲಿ ಪ್ರಥಮ ಬಾರಿಗೆ ಚುನಾವಣಾ ರಾಜಕೀಯ ಪ್ರವೇಶಿಸಿದ ಕುಮಾರಸ್ವಾಮಿಯವರು 1996 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ 11ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು.

ಹಿಂದಿನ ಇತಿಹಾಸ

1986
  • 1986ರ ಮಾರ್ಚ 13 ರಂದು ಅನಿತಾ ಅವರೊಂದಿಗೆ ವಿವಾಹವಾದರು. ಕುಮಾರಸ್ವಾಮಿ ದಂಪತಿಗೆ ನಿಖಿಲ್ ಗೌಡ ಎಂಬ ಪುತ್ರನಿದ್ದಾರೆ.
80ರ ದಶಕದ ಆರಂಭದಲ್ಲಿ
  • ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ ಕುಮಾರಸ್ವಾಮಿ ನಂತರ ನ್ಯಾಷನಲ್ ಕಾಲೇಜಿನಿಂದ ಬಿಎಸ್‌ಸಿ ಡಿಗ್ರಿ ಪಾಸು ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ಸಾಧನೆಗಳು

2004, 2008, 2013 ಹಾಗೂ 2018 ರಲ್ಲಿ ರಾಮನಗರ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಎರಡು ಅವಧಿಗೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ’ಭಾಗ್ಯಲಕ್ಷ್ಮಿ’ ಯೋಜನೆ ಜಾರಿಗೊಳಿಸಿದರು. ಈ ಯೋಜನೆಯನ್ವಯ ಮಾರ್ಚ 31, 2006 ರ ನಂತರ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಲ್ಲಿ 10 ಸಾವಿರ ರೂಪಾಯಿಗಳನ್ನು ಸರಕಾರದ ವತಿಯಿಂದ ಠೇವಣಿ ಇಡಲಾಗುತ್ತದೆ.
ಗ್ರಾಮ ವಾಸ್ತವ್ಯ, ಒಂದು ಬಾರಿ ರೈತರ ಸಾಲಮನ್ನಾ, ಲಾಟರಿ ನಿಷೇಧ, ಹೆಣ್ಣು ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮತ್ತು ಜನತಾ ದರ್ಶನ ಕಾರ್ಯಕ್ರಮಗಳು ಇವರಿಗೆ ಬಹಳಷ್ಟು ಜನಪ್ರಿಯತೆ ತಂದು ಕೊಟ್ಟವು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X