ಮುಖ್ಯಪುಟ
 » 
ಇ. ಶ್ರೀಧರನ್

ಇ. ಶ್ರೀಧರನ್

ಇ. ಶ್ರೀಧರನ್

ಭಾರತದ 'ಮೆಟ್ರೋ ಮನುಷ್ಯ' ಎಂದು ಪ್ರೀತಿಯಿಂದ ಕರೆಯಲ್ಪಡುವ ಎಲಾತುವಾಲ್ಪಿಲ್ ಶ್ರೀಧರನ್ ಅವರು ಶ್ರೇಷ್ಠ ಎಂಜಿನಿಯರ್. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕರುಕಾಪುಥೂರಿನಲ್ಲಿ 1932 ರ ಜೂನ್ 12 ರಂದು ಜನಿಸಿದರು.

ಇ. ಶ್ರೀಧರನ್ ಜೀವನ ಚರಿತ್ರೆ

ಭಾರತದ 'ಮೆಟ್ರೋ ಮನುಷ್ಯ' ಎಂದು ಪ್ರೀತಿಯಿಂದ ಕರೆಯಲ್ಪಡುವ ಎಲಾತುವಾಲ್ಪಿಲ್ ಶ್ರೀಧರನ್ ಅವರು ಶ್ರೇಷ್ಠ ಎಂಜಿನಿಯರ್. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕರುಕಾಪುಥೂರಿನಲ್ಲಿ 1932 ರ ಜೂನ್ 12 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಾಲಕ್ಕಾಡ್ ಜಿಲ್ಲೆಯ ಪಟ್ಟಂಬಿ ಬಳಿಯ ಚಥನೂರಿನ ಸರ್ಕಾರಿ ಲೋವರ್ ಪ್ರೈಮರಿ ಶಾಲೆಯಲ್ಲಿ ಪಡೆದರು. ಪ್ರೌಢ ಶಿಕ್ಷಣವನ್ನು ಬಾಸೆಲ್ ಇವಾಂಜೆಲಿಕಲ್ ಮಿಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಗಿಸಿದರು.

'ಜೆಎನ್‌ಟಿಯುಕೆ' ಎಂದು ಕರೆಯಲ್ಪಡುವ ಆಂಧ್ರಪ್ರದೇಶದ ಕಾಕಿನಾಡದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ಅವರು ಐಇಎಸ್ ಪಾಸಾಗಿ ಭಾರತೀಯ ರೈಲ್ವೆ ಎಂಜಿನಿಯರಿಂಗ್ ಸೇವೆಗೆ ಸೇರಿದರು. ಸೇವೆಗೆ ಸೇರಿದ ಪ್ರಾರಂಭದ ದಿನಗಳಲ್ಲೇ ಇವರು ಚಂಡಮಾರುತದಿಂದ ಕುಸಿದು ಬಿದ್ದಿದ್ದ ರಾಮೇಶ್ವರಂ ಪಂಬಂ ಸೇತುವೆಯನ್ನು ಪುನರ್ ನಿರ್ಮಿಸಿದರು.ಕಡಿಮೆ ಸಮಯದಲ್ಲೇ ಇದನ್ನು ಮಾಡಿದ ಖ್ಯಾತಿಯು ದೊರೆಯಿತು. ನಂತರ ಅವರು ಕೊಂಕಣ ರೈಲ್ವೆ, ಆಗ್ನೇಯ ರೈಲ್ವೆ, ಕೋಲ್ಕತಾ ಮೆಟ್ರೋ, ಕೊಚ್ಚಿನ್ ಶಿಪ್‌ಯಾರ್ಡ್, ದೆಹಲಿ ಮೆಟ್ರೋ ರೈಲು, ಕೊಚ್ಚಿ ಮೆಟ್ರೋ ಮತ್ತು ಲಕ್ನೋ ಮೆಟ್ರೊದಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ತಮ್ಮ ಸೇವೆಯ ಸಮಯದಲ್ಲಿ ಮತ್ತು ನಿವೃತ್ತಿಯ ನಂತರವೂ ಮಾಡಿದರು. ಯಾವುದೇ ಯೋಜನೆಗಳಿರಲಿ ಅದನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದರಲ್ಲಿ ಶ್ರೀಧರನ್ ಅವರು ಹೆಸರುವಾಸಿ. ಭಾರತದಲ್ಲಿ ನಗರ ಸಾರಿಗೆ ಮೂಲಸೌಕರ್ಯಗಳ ಸ್ವರೂಪವನ್ನು ಬದಲಾಯಿಸುವಲ್ಲಿ ಶ್ರೀಧರನ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೂರು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಇ. ಶ್ರೀಧರನ್ ಅವರು ವಿಶ್ವದಾದ್ಯಂತ ಅನೇಕ ಪ್ರಶಸ್ತಿ, ಪುರಸ್ಕಾರ ಮತ್ತು ಹಲವಾರು ಗೌರವ ಡಾಕ್ಟರೇಟ್ ಗಳನ್ನು ಪಡೆದಿದ್ದಾರೆ. ಪದ್ಮವಿಭೂಷಣ್, ಪದ್ಮಶ್ರೀ, ಅತ್ಯುನ್ನತ ಫ್ರೆಂಚ್ ಪ್ರಶಸ್ತಿ "ಚೆವಲಿಯರ್ ಡೆ ಲಾ ಲೆಜಿಯನ್ ಡಿ ಹೊನ್ನೂರ್", ಜಪಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ "ಆರ್ಡರ್ ಆಫ್ ದಿ ರೈಸಿಂಗ್ ಸನ್" ಚಿನ್ನ ಮತ್ತು ಬೆಳ್ಳಿ ತಾರೆ, ಜಿ-ಫೈಲ್ಸ್ ಪ್ರಶಸ್ತಿಗಳು ಸೇರಿದಂತೆ ಇನ್ನೂ ಅನೇಕ ಪುರಸ್ಕಾರಗಳು ಅನೇಕ ಇವರ ಮುಡಿಗೇರಿವೆ.

ಇವರ ಮೇಲೆ ಅನೇಕ ಬರಹಗಾರರು ಪುಸ್ತಕಗಳನ್ನು ಬರೆದಿದ್ದಾರೆ. ಸ್ವತಃ ಶ್ರೀಧರನ್ ಕೂಡ ವಿಜ್ಞಾನ, ತಂತ್ರಜ್ಞಾನ, ಅಭಿವೃದ್ಧಿ, ತಮ್ಮ ಆಲೋಚನೆಗಳು ಮತ್ತು ಕೆಲಸದ ನೀತಿ ಇತ್ಯಾದಿಗಳ ಬಗ್ಗೆಯೂ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. 2021 ರ ಫೆಬ್ರವರಿಯಲ್ಲಿ ಬಿಜೆಪಿಗೆ ಸೇರುವವರೆಗೂ ಅವರು ತಮ್ಮ ಜೀವನದುದ್ದಕ್ಕೂ ಸಂಪೂರ್ಣವಾಗಿ ರಾಜಕೀಯ ವಿರೋಧಿಗಳಾಗಿದ್ದರು. ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಎಂದು ಶ್ಲಾಘಿಸಿದ್ದರು. ಜೊತೆಗೆ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಅವರನ್ನು ಒಪ್ಪಿಕೊಂಡಿದ್ದರು.

ಮತ್ತಷ್ಟು ಓದು
By Keshav Karna Updated: Wednesday, March 17, 2021, 01:58:12 PM [IST]

ಇ. ಶ್ರೀಧರನ್ ವಯಕ್ತಿಕ ಜೀವನ

ಪೂರ್ಣ ಹೆಸರು ಇ. ಶ್ರೀಧರನ್
ಜನ್ಮ ದಿನಾಂಕ 12 Jun 1932 (ವಯಸ್ಸು 91)
ಹುಟ್ಟಿದ ಸ್ಥಳ ಕರುಕಾಪುಥೂರ್, ಪಾಲಕ್ಕಾಡ್ ಜಿಲ್ಲೆ, ಕೇರಳ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Bachelor of Engineering
ಉದ್ಯೋಗ ಎಂಜಿನಿಯರ್
ತಂದೆಯ ಹೆಸರು ಕೆ.ನೀಲಕಂದನ್ ಮೂಸತ್
ತಾಯಿಯ ಹೆಸರು ಅಮ್ಮಲುಅಮ್
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಇ. ಶ್ರೀಧರನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: N/A
ಆಸ್ತಿ:N/A
ಸಾಲಸೋಲ: N/A

ಇ. ಶ್ರೀಧರನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಇ. ಶ್ರೀಧರನ್ ಹಾಗೂ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಟಿ.ಎನ್.ಶೇಷನ್ ಅವರು ಬಿಇಎಂ ಹೈಸ್ಕೂಲ್‌ನಲ್ಲಿ ಸಹಪಾಠಿಗಳು. ಇವರಿಬ್ಬರು ಕಾಕಿನಾಡದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಆಯ್ಕೆಯಾಗಿದ್ದರು. ಆದರೆ, ಟಿ.ಎನ್.ಶೇಷನ್ ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಸೇರಲು ನಿರ್ಧರಿಸಿದರು. ಇ.ಶ್ರೀಧರನ್ ಅವರು ಕಾಕಿನಾಡದಲ್ಲಿ ಸಿವಿಲ್ ಎಂಜಿನಿಯರಿಂಗ್ ಮುಗಿಸಿದರು.

ಇ. ಶ್ರೀಧರನ್ ರಾಜಕೀಯ ಟೈಮ್‌ಲೈನ್

2021
  • ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಸ್ವಲ್ಪ ದಿನ ಇರುವಾಗ ಇ. ಶ್ರೀಧರನ್ 2021 ಫೆಬ್ರವರಿ 18 ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಒಂದು ವಾರದ ನಂತರ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು.

ಹಿಂದಿನ ಇತಿಹಾಸ

2008
  • ಭಾರತದ ರಾಷ್ಟ್ರಪತಿ ಅವರಿಂದ ಪದ್ಮವಿಭೂಷಣವನ್ನು ಸ್ವೀಕರಿಸಿದರು
2005
  • ಫ್ರೆಂಚ್ ಸರ್ಕಾರವು ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ, ದಿ ಆರ್ಡರ್ ಆಫ್ ಲೆಜಿಯನ್ ಡಿ ಹೊನ್ನೂರ್ ನೀಡಿ ಗೌರವಿಸಿತು.
2001
  • ಇ ಶ್ರೀಧರನ್ ಪದ್ಮಶ್ರೀ ಪಡೆದರು
1996
  • ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಇ.ಶ್ರೀಧರನ್ ಅವರನ್ನು ನೇಮಿಸಲಾಯಿತು.
1990
  • ಭಾರತೀಯ ಎಂಜಿನಿಯರಿಂಗ್ ಸೇವೆಯಿಂದ ನಿವೃತ್ತಿಯಾದ ನಂತರ, ಇ.ಶ್ರೀಧರನ್ ಅವರು ಸೇವಾ ವಿಸ್ತರಣೆಯನ್ನು ಪಡೆದರು ಮತ್ತು ಗುತ್ತಿಗೆ ಆಧಾರದ ಮೇಲೆ ಕೊಂಕಣ ರೈಲ್ವೆಯ ಸಿಎಂಡಿ ಆಗಿ ನೇಮಕವಾದರು.
1989
  • ಶ್ರೀಧರನ್ ಅವರನ್ನು ಸದಸ್ಯ ಎಂಜಿನಿಯರಿಂಗ್, ರೈಲ್ವೆ ಮಂಡಳಿ ಮತ್ತು ಭಾರತ ಸರ್ಕಾರದ ಎಕ್ಸ್ ಆಫಿಸಿಯೊ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಯಿತು.
1987
  • ಶ್ರೀಧರನ್ ಪಶ್ಚಿಮ ರೈಲ್ವೆಯ ಜನರಲ್ ಮ್ಯಾನೇಜರ್ ಆದರು.
1979
  • ಇ ಶ್ರೀಧರನ್ ಅವರು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಸೇರಿದರು. ಅವರ ಸಮರ್ಥ ಆಡಳಿತದ ನಿರ್ದೇಶನದಲ್ಲಿ, ಕೊಚ್ಚಿನ್ ಶಿಪ್‌ಯಾರ್ಡ್ 1981 ರಲ್ಲಿ ತನ್ನ ಮೊದಲ ಹಡಗು ಎಂ.ವಿ.ರಾಣಿ ಪದ್ಮಿನಿ ಪ್ರಾರಂಭಿಸಿತು
1970
  • 1970 ರಲ್ಲಿ ಕೋಲ್ಕೋತ್ತ ಮೆಟ್ರೋ ರೈಲು ಡಿಕ್ಕಿ ಹೊಡೆದಾಗ, ಕೋಲ್ಕತಾ ಮೆಟ್ರೋ ಯೋಜನೆ, ಅನುಷ್ಠಾನ ಮತ್ತು ವಿನ್ಯಾಸದ ಜವಾಬ್ದಾರಿಯನ್ನು ಶ್ರೀಧರನ್ ಅವರಿಗೆ ನೀಡಲಾಯಿತು.
1964
  • ರಾಮೇಶ್ವರಂನ ಚಂಡಮಾರುತದಿಂದ ಕುಸಿದಿದ್ದ ಪಂಬನ್ ಸೇತುವೆಯನ್ನು ಯಶಸ್ವಿಯಾಗಿ ಪುನರ್ ನಿರ್ಮಿಸುವ ತಮ್ಮ ಮೊದಲ ದೊಡ್ಡ ಸವಾಲನ್ನು ಎದುರಿಸಿದ್ದಲ್ಲದೆ ಗೆದ್ದರು ಕೂಡ. ಅದು ನಂತರ ಎಂಜಿನಿಯರಿಂಗ್ ಪ್ರತಿಭೆ ಎಂಬ ಖ್ಯಾತಿಯನ್ನು ಗಳಿಸಿತು.
1954
  • ಯುಪಿಎಸ್ಸಿ ಆಯೋಜಿಸಿದ್ದ ಐಇಎಸ್ ಪರೀಕ್ಷೆಯನ್ನು ತೇರ್ಗಡೆ ಆಗಿ ಭಾರತೀಯ ರೈಲ್ವೆಗೆ ಸಹಾಯಕ ಎಂಜಿನಿಯರ್ ಆಗಿ ನಿಯುಕ್ತರಾದರು.
1949
  • ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯಲು ಜೆಎನ್‌ಟಿಯು ಕಾಕಿನಾಡ ಸೇರಿದರು.

ಇ. ಶ್ರೀಧರನ್ ಸಾಧನೆಗಳು

ಪದ್ಮವಿಭೂಷಣ,
ಪದ್ಮಶ್ರೀ,
ಚೆವಲಿಯರ್ ಡೆ ಲಾ ಲೆಜಿಯನ್ ಡಿ ಹೊನ್ನೂರ್,
ಆರ್ಡರ್ ಆಫ್ ದಿ ರೈಸಿಂಗ್ ಸನ್,
ಚಿನ್ನ ಮತ್ತು ಬೆಳ್ಳಿ ತಾರೆ ಹಾಗೂ
ಜಿ-ಫೈಲ್ಸ್ ಪ್ರಶಸ್ತಿಗಳು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X