ಮುಖ್ಯಪುಟ
 » 
ಡಾ. ಶಶಿ ತರೂರ

ಡಾ. ಶಶಿ ತರೂರ

ಡಾ. ಶಶಿ ತರೂರ

ಕೇರಳ ರಾಜ್ಯದವರಾದ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ಅವರು ಮಾಜಿ ರಾಜತಾಂತ್ರಿಕರೂ ಹೌದು. ಪ್ರಸ್ತುತ ಕೇರಳದ ತಿರುವನಂತಪುರಂ ಕ್ಷೇತ್ರದ ಸಂಸದರಾಗಿದ್ದಾರೆ.

ಡಾ. ಶಶಿ ತರೂರ ಜೀವನ ಚರಿತ್ರೆ

ಕೇರಳ ರಾಜ್ಯದವರಾದ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ಅವರು ಮಾಜಿ ರಾಜತಾಂತ್ರಿಕರೂ ಹೌದು. ಪ್ರಸ್ತುತ ಕೇರಳದ ತಿರುವನಂತಪುರಂ ಕ್ಷೇತ್ರದ ಸಂಸದರಾಗಿದ್ದಾರೆ. ಕಾಂಗ್ರೆಸ್‌ನಿಂದ ಈ ಪ್ರದೇಶದಲ್ಲಿ ಸತತ ಎರಡು ಬಾರಿ ಅವರು ಸಂಸದರಾಗಿ ಚುನಾಯಿತರಾಗಿದ್ದಾರೆ. ಮನಮೋಹನ್ ಸಿಂಗ್ ಅವರ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರೂ ಆಗಿದ್ದರು. 1956 ರಲ್ಲಿ ಲಂಡನ್‌ನಲ್ಲಿ ಹುಟ್ಟಿದ ತರೂರ, ಭಾರತ ಹಾಗೂ ಅಮೆರಿಕಾಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1978 ರಲ್ಲಿ ಫ್ಲೆಚರ್ ಸ್ಕೂಲ್ ಆಫ್ ಲಾ ಆಂಡ್ ಡಿಪ್ಲೊಮಸಿ ಕಾಲೇಜಿನಿಂದ ಪಿಎಚ್‌ಡಿ ಪದವಿ ಪಡೆದರು. ವಿಶ್ವಸಂಸ್ಥೆಯಲ್ಲಿ ಶಾಂತಿದೂತನಾಗಿ, ನಿರಾಶ್ರಿತರ ಕಾರ್ಯಕರ್ತನಾಗಿ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಕೋಫಿ ಅನ್ನಾನ್ ಅವರ ಕಾರ್ಯಾವಧಿಯಲ್ಲಿ ಅಂಡರ್ ಸೆಕ್ರೆಟರಿ ಜನರಲ್ ಆಗಿ ಕೆಲಸ ಮಾಡಿದ್ದಾರೆ.

ಮತ್ತಷ್ಟು ಓದು
By Shalini Updated: Monday, April 29, 2019, 06:14:14 PM [IST]

ಡಾ. ಶಶಿ ತರೂರ ವಯಕ್ತಿಕ ಜೀವನ

ಪೂರ್ಣ ಹೆಸರು ಡಾ. ಶಶಿ ತರೂರ
ಜನ್ಮ ದಿನಾಂಕ 09 Mar 1956 (ವಯಸ್ಸು 68)
ಹುಟ್ಟಿದ ಸ್ಥಳ ಲಂಡನ್ (ಇಂಗ್ಲೆಂಡ್)
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Doctorate
ಉದ್ಯೋಗ ರಾಜತಾಂತ್ರಿಕ, ಬರಹಗಾರ, ಅಂತಾರಾಷ್ಟ್ರೀಯ ನಾಗರಿಕ ಸೇವೆ
ತಂದೆಯ ಹೆಸರು ಶ್ರೀ ಚಂದ್ರನ್ ತರೂರ
ತಾಯಿಯ ಹೆಸರು ಶ್ರೀಮತಿ ಲಿಲ್ಲಿ ತರೂರ
ಧರ್ಮ ಹಿಂದು
ವೆಬ್‌ಸೈಟ್ http://shashitharoor.in/
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಡಾ. ಶಶಿ ತರೂರ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹35 CRORE
ಆಸ್ತಿ:₹35 CRORE
ಸಾಲಸೋಲ: N/A

ಡಾ. ಶಶಿ ತರೂರ ಕುರಿತು ಆಸಕ್ತಿದಾಯಕ ಸಂಗತಿಗಳು

ಭಾರತೀಯ ನಿಯತಕಾಲಿಕೆಗಳು ಹಾಗೂ ವಿದೇಶಿ ನಿಯತಕಾಲಿಕೆಗಳಾದ ನ್ಯೂಯಾರ್ಕ್ ಟೈಮ್ಸ್, ದಿ ವಾಶಿಂಗ್ಟನ್ ಪೋಸ್ಟ್, ಗಾರ್ಡಿಯನ್ ಮುಂತಾದ ಪತ್ರಿಕೆಗಳಲ್ಲಿ ಇವರ ಹಲವಾರು ಅಂಕಣ ಹಾಗೂ ಬರಹಗಳು ಪ್ರಕಟವಾಗಿವೆ. ನ್ಯೂಸವೀಕ್ ಇಂಟರನ್ಯಾಷನಲ್ ಪತ್ರಿಕೆಯ ಕಾರ್ಯನಿರತ ಸಂಪಾದಕರಾಗಿ ಹಾಗೂ ಅಂಕಣಕಾರರಾಗಿ ಕೆಲಸ ಮಾಡಿದ್ದಾರೆ. 2006 ರಲ್ಲಿ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಎಂದು ಭಾರತ ಸರಕಾರದಿಂದ ತರೂರ ನಾಮನಿರ್ದೇಶಿತರಾಗಿದ್ದರು. ಆದರೆ ಸೌತ್ ಕೊರಿಯಾದ ಬಾನ್-ಕಿ-ಮೂನ್ ಅವರು ಸೆಕ್ರೆಟರಿ ಜನರಲ್ ಆಗಿ ಆಯ್ಕೆಯಾಗಿ ತರೂರ್ ಎರಡನೇ ಸ್ಥಾನ ಗಳಿಸಿದ್ದರು.

ಡಾ. ಶಶಿ ತರೂರ ಸಾಧನೆಗಳು

ಕಾಲ್ಪನಿಕ ಹಾಗೂ ಪ್ರಬಂಧ ವಿಭಾಗಗಳಲ್ಲಿ ಸುಮಾರು 18 ಬಹು ಮಾರಾಟವಾದ ಗ್ರಂಥಗಳನ್ನು ರಚಿಸಿದ್ದಾರೆ. ಶ್ರೇಷ್ಠ ಅಂಕಣಕಾರರಾದ ತರೂರ ಜಗತ್ತಿನ ಹಲವಾರು ಪ್ರಖ್ಯಾತ ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X