ವಿ.ಎಸ್.ಅಚುತಾನಂದನ್

ವಿ.ಎಸ್.ಅಚುತಾನಂದನ್

1923 ರಲ್ಲಿ ಅಚುತಾನಂದನ್ ಅವರು ಶಂಕರನ್ ಮತ್ತು ಅಕ್ಕಮ್ಮ ದಂಪತಿ ಮಗನಾಗಿ ಕೇರಳದ ಆಲಪ್ಪುಳದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಅಚುತಾನಂದನ್ ತಮ್ಮಹೆತ್ತವರನ್ನು ಕಳೆದುಕೊಂಡ ಪರಿಣಾಮ 11ನೇ ವಯಸ್ಸಿನಲ್ಲಿ
ತಮ್ಮವಿದ್ಯಾಭ್ಯಾಸವನ್ನು ತೊರೆಯಬೇಕಾಯಿತು.

ವಿ.ಎಸ್.ಅಚುತಾನಂದನ್ ಜೀವನ ಚರಿತ್ರೆ

1923 ರಲ್ಲಿ ಅಚುತಾನಂದನ್ ಅವರು ಶಂಕರನ್ ಮತ್ತು ಅಕ್ಕಮ್ಮ ದಂಪತಿ ಮಗನಾಗಿ ಕೇರಳದ ಆಲಪ್ಪುಳದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಅಚುತಾನಂದನ್ ತಮ್ಮಹೆತ್ತವರನ್ನು ಕಳೆದುಕೊಂಡ ಪರಿಣಾಮ 11ನೇ ವಯಸ್ಸಿನಲ್ಲಿ
ತಮ್ಮವಿದ್ಯಾಭ್ಯಾಸವನ್ನು ತೊರೆಯಬೇಕಾಯಿತು. ಜೊತೆಗೆ ಸಹೋದರರೊಂದಿಗೆ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಕೆಲಕಾಲ ಕಾಯಿರ್ ಕಾರ್ಖಾನೆಯಲ್ಲಿ ದುಡಿದರು. ಅಚುತಾನಂದನ್ ಅವರು ಕಾರ್ಮಿಕ ಸಂಘದ ಸಕ್ರಿಯ ಸದಸ್ಯರಾಗಿದ್ದ ಕಾರಣ ರಾಜಕೀಯಕ್ಕೆ ಪ್ರವೇಶಿಸಲು ಇದು ಒಂದು ವೇದಿಕೆಯಾಯಿತು. ಅಲ್ಲದೆ, ಜನಪ್ರಿಯ ಸಾಮೂಹಿಕ ನಾಯಕನಾಗಿ ಬೆಳೆಯುವ ಮೂಲಕ ರಾಜಕೀಯ ಕ್ಷೇತ್ರಕ್ಕೂ ಸಮಗ್ರ ಗೌರವ ತಂದರು. ಇವರು 2006ರಿಂದ 2011ರವರೆಗೆ ಕೇರಳದ ಮುಖ್ಯಮಂತ್ರಿಯೂ ಆಗಿದ್ದರು. ಪ್ರಸ್ತುತ 2011 ರಿಂದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದ ಅಚುತಾನಂದನ್ ಅವರು ಬಾಲ್ಯದಿಂದಲೂ ಸಂಘಟಿತ ಜೀವನ ವಿಧಾನವನ್ನು ಬಲವಾಗಿ ನಂಬಿದ್ದರು. ಸಮರ್ಪಣೆ ಮತ್ತು ಸರಳತೆಗೆ ಹೆಸರು ವಾಸಿಯಾಗಿದ್ದಾರೆ. ರೈತರು ಮತ್ತು ಅವರ ಜಮೀನುಗಳ ಸಂರಕ್ಷಣೆ ಹೋರಾಟದಲ್ಲಿ ಅಚುತಾನಂದನ್ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, 1946 ರಲ್ಲಿ ಜೈಲಿಗೂ ಹೋದರು. ಅಲ್ಲದೆ, 1967 ರಲ್ಲಿ ಇಎಂಎಸ್ ಸರ್ಕಾರ ಅಂಗೀಕರಿಸಿದ ಭೂ ಸುಧಾರಣಾ ಕಾಯ್ದೆ ವಿರುದ್ಧ ನಡೆದ ಭೂ ಹೋರಾಟಗಳಲ್ಲಿ ಅಚುತಾನಂದನ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತದೆ.

ಮತ್ತಷ್ಟು ಓದು

ವಿ.ಎಸ್.ಅಚುತಾನಂದನ್ ವಯಕ್ತಿಕ ಜೀವನ

ಪೂರ್ಣ ಹೆಸರು ವಿ.ಎಸ್.ಅಚುತಾನಂದನ್
ಜನ್ಮ ದಿನಾಂಕ 20 Oct 1923 (ವಯಸ್ಸು 100)
ಹುಟ್ಟಿದ ಸ್ಥಳ ಆಲಪ್ಪುಳ
ಪಕ್ಷದ ಹೆಸರು Communist Party Of India (marxist)
ವಿದ್ಯಾರ್ಹತೆ 5th Pass
ಉದ್ಯೋಗ Social Works
ತಂದೆಯ ಹೆಸರು ಶಂಕರನ್
ತಾಯಿಯ ಹೆಸರು ಅಕ್ಕಮ್ಮ
ಅವಲಂಬಿತರ ಹೆಸರು ಕೆ.ವಸುಮತಿ
ಅವಲಂಬಿತರ ಉದ್ಯೋಗ ಪಿಂಚಣಿದಾರರು (ರಾಜ್ಯ ಸೇವೆಯಿಂದ ನಿವೃತ್ತಿ)
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಖಾಯಂ ವಿಳಾಸ Velikkakathu, Punnapra North PO- Alappuzha 688014
ಪ್ರಸ್ತುತ ವಿಳಾಸ Velikkakathu, Punnapra North PO- Alappuzha 688014
ಈ ಮೇಲ್ NA
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ವಿ.ಎಸ್.ಅಚುತಾನಂದನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹16.1 LAKHS
ಆಸ್ತಿ:₹16.1 LAKHS
ಸಾಲಸೋಲ: N/A

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ವಿ.ಎಸ್.ಅಚುತಾನಂದನ್ ಕುರಿತು ಆಸಕ್ತಿದಾಯಕ ಸಂಗತಿಗಳು

ಬೆಟ್ಟದ ಮೇಲೆ ರೆಸಾರ್ಟ್ ನಿರ್ಮಾಣ ಹಾಗೂ ಮುನ್ನಾರ್ ಬಳಿ ಚಹಾ ತೋಟ ಮಾಡಲು ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಂಡಿದ್ದರು. ಸರಕಾರಿ ಭೂಮಿ ರೆಸಾರ್ಟ್ ಮಾಲೀಕರು ಹಾಗೂ ಎಂಎನ್ ಸಿ ಕಂಪನಿಗಳ ಪಾಲಾಗದಂತೆ ನಿಗಾ ವಹಿಸಿದ್ದರು. 2007 ರ ಡಿಸೆಂಬರ್‌ನಲ್ಲಿ 400 ವರ್ಷಗಳಷ್ಟು ಹಳೆಯದಾದ ಶಬರಿಮಲೆಯ ದೇವಾಲಯಕ್ಕೆ ಚಾರಣ ಮಾಡಿದ ಮೊದಲ ಕಮ್ಯುನಿಸ್ಟ್ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬೆಟ್ಟ ಹತ್ತುವಾಗ 84 ವರ್ಷವಾದರೂ ಅಚುತಾನಂದನ್ ಅವರು ವೈದ್ಯರು ನೀಡಿದ ವೈದ್ಯಕೀಯ ಸಲಹೆ ಸೂಚನೆಯನ್ನು ತಿರಸ್ಕರಿಸಿದ್ದರು.

ರಾಜ್ಯದಲ್ಲಿ ಉಚಿತ ಮತ್ತು ಮುಕ್ತವಾದ ಸಾಫ್ಟ್‌ವೇರ್ ಆಂದೋಲನಕ್ಕೆ ಒತ್ತಾಸೆಯಾಗಿದ್ದ ಅಚುತಾನಂದನ್ ಕ್ರಮಕ್ಕೆ ರಿಚರ್ಡ್ ಸ್ಟಾಲ್ಮನ್ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ತಮ್ಮ
40 ವರ್ಷಗಳ ರಾಜಕೀಯ ಜೀವನದಲ್ಲಿ ಇವರು ಐದು ವರ್ಷ ಮತ್ತು ಆರು ತಿಂಗಳು ಕಾಲ ಜೈಲಿನಲ್ಲಿದ್ದರು. ನಾಲ್ಕುವರೆ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು. ಇವರ ಅಧಿಕಾರಾವಧಿಯಲ್ಲೇ
ಕೇರಳದ ಪ್ರಮುಖ ಐಟಿ ರಫ್ತು ಬೆಳವಣಿಗೆ ರಾಷ್ಟ್ರೀಯ ಸರಾಸರಿಯನ್ನು ಮೀರಿತ್ತು. ಪ್ರವಾಸೋದ್ಯಮ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಮಲಂಪುಜ್ಹ ಪ್ರವಾಸಿ ತಾಣಕ್ಕೆ ಕಾಯಕಲ್ಪ ನೀಡಿದರು. ಕೊಲ್ಲಂನ ಅಷ್ಟಮುಡಿ ತಾಣವನ್ನು ಪ್ರವಾಸೋದ್ಯಮ ಸರ್ಕಿಟ್ ಆಗಿ ಪರಿವರ್ತಿಸಿದರು. ಅಲ್ಲದೆ, ರಾಜ್ಯದಿಂದ ಅಕ್ರಮ ಲಾಟರಿ ಮಾಫಿಯಾವನ್ನು ಬಂದ್ ಮಾಡಿದರು. ಇವುಗಳ ಜೊತೆಗೆ ಕೊಲ್ಲಂನಲ್ಲಿ ಐಟಿ ಪಾರ್ಕ್- ಟೆಕ್ನೋಪಾರ್ಕ್ ನಿರ್ಮಿಸಿದರು. ಅಚುತಾನಂದನ್ ಅವರು ಕೇರಳ ರಾಜ್ಯದ ಐಟಿ ಮಂತ್ರಿಯಾಗಿದ್ದಾಗ ಐಟಿ ಪಾರ್ಕ್ ಅನ್ನು ಪ್ರಾರಂಭಿಸಲು ಯೋಚಿಸಿ ಅದನ್ನು ಕಾರ್ಯಗತಗೊಳಿಸಿದ್ದರು. ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾದ ಕೊಲ್ಲಂನಲ್ಲಿನ ಅಷ್ಟಮುಡಿ ಹಾಗೂ ಮಲಂಪುಳ ಅನ್ನು ಸರ್ಕಿಟ್ ಮಾಡಿ ವಿವಿಧ ನವೀಕರಣ ಕಾರ್ಯಕ್ರಮಗಳನ್ನು ಅವರು ಪ್ರಾರಂಭಿಸಿದ್ದರು.
ಇದಲ್ಲದೆ ಕೊಚ್ಚಿ ಎಂ.ಜಿ. ರಸ್ತೆ ಕೆಡವಿದ್ದು, ಪೈರಸಿ ವಿರುದ್ಧ ಆಂದೋಲನ ನಡೆಸಿದ್ದು, ರಾಜ್ಯದಲ್ಲಿ ಲಾಟರಿ ಮಾಫಿಯಾ ವಿರುದ್ಧ ಸುದೀರ್ಘ ಹೋರಾಟ ನಡೆಸಿದ ಹೆಗ್ಗಳಿಕೆಯೂ ಇವರಿಗೆ ಇದೆ. ಮಾಜಿ ಸಚಿವ ಆರ್.ಬಾಲಕೃಷ್ಣ ಪಿಳ್ಳೈ ಅವರ ಭ್ರಷ್ಟಾಚಾರದ ವಿರುದ್ಧವೂ ಧ್ವನಿ ಎತ್ತುವ ಜೊತೆಗೆ ಅಪರಾಧ ಸಾಬೀತಾಗಲು ಪ್ರಮುಖ ಪಾತ್ರ ವಹಿಸಿದ್ದರು. ಅಚುತಾನಂದನ್ ಅವರಿಗೆ ಜೀವಮಾನ ಸಾಧನೆಗಾಗಿ 2013ರಲ್ಲಿ ಪ್ರವಾಸಿ ಎಕ್ಸ್‌ಪ್ರೆಸ್ ಪ್ರಶಸ್ತಿ ಲಭಿಸಿದೆ.

ವಿ.ಎಸ್.ಅಚುತಾನಂದನ್ ರಾಜಕೀಯ ಟೈಮ್‌ಲೈನ್

2016
  • ಬಿಜೆಪಿಯ ಸಿ.ಕೃಷ್ಣಕುಮಾರ್ ಅವರನ್ನು ಸೋಲಿಸಿ ಮತ್ತೆ ಮಲಂಪುಳ ಕ್ಷೇತ್ರದಿಂದ ಗೆದ್ದರು. ಮುಂದಿನ ಮುಖ್ಯಮಂತ್ರಿ ಎಂದೂ ಘೋಷಿಸಿಕೊಂಡರು. ಆದರೆ, ರಾಜ್ಯ ಮತ್ತು ಕೇಂದ್ರ ನಾಯಕರು ಪಿಣರಾಯಿ ವಿಜಯನ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತು. ಅಂತಿಮವಾಗಿ ಅಚುತಾನಂದನ್ ಅವರನ್ನು ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
2013
  • ಅಚುತಾನಂದನ್ ಅವರ ಆಪ್ತ ಸಿಬ್ಬಂದಿ ವಿ.ಕೆ.ಸಸಿಧರನ್ (ಹೆಚ್ಚುವರಿ ಖಾಸಗಿ ಕಾರ್ಯದರ್ಶಿ), ಎ. ಸುರೇಶ್ (ವೈಯಕ್ತಿಕ ಸಹಾಯಕ) ಮತ್ತು ಕೆ. ಬಾಲಕೃಷ್ಣನ್ (ಪತ್ರಿಕಾ ಕಾರ್ಯದರ್ಶಿ) ಅವರನ್ನು ಪಾಲಿಟ್‌ ಬ್ಯುರೊ ಉಚ್ಚಾಟಿಸಿತು. ಆ ಸಮಯದಲ್ಲಿ ಇದೊಂದು ಪ್ರಮುಖ ರಾಜಕೀಯ ವಿಷಯವಾಗಿತ್ತು.
2011
  • ಮತ್ತೆ 2011 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಲಂಪುಳದಿಂದ ಗೆದ್ದರು. ಆದರೆ, 2011 ರಿಂದ 2016 ರವರೆಗೆ ಕೇರಳದಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು.
2006
  • ಈ ವಿಧಾನಸಭೆ ಚುನಾವಣೆಯಲ್ಲಿ ಅಚುತಾನಂದನ್ ಅವರ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು. ಮಲಂಪುಳ ಕ್ಷೇತ್ರದಿಂದ ಯುಡಿಎಫ್ ಪಕ್ಷದ ಸತೀಸನ್ ಪಚೇನಿ ಅವರನ್ನು 20,017 ಮತಗಳ ಅಂತರದಿಂದ ಸೋಲಿಸಿ ಕೇರಳದ ಮುಖ್ಯಮಂತ್ರಿಯಾಗಿ 18 ಮೇ 2006 ರಿಂದ 14 ಮೇ 2011 ರವರೆಗೆ ಅಧಿಕಾರ ನಿರ್ವಹಿಸಿದರು
2001
  • ಅವರು ಮಲಂಪುಳ ಸೆಟಾದಿಂದ ಸ್ಪರ್ಧಿಸಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಕಾಂಗ್ರೆಸ್ ಅಭ್ಯರ್ಥಿ ಸತೀಸನ್ ಪಚೇನಿ ಅವರನ್ನು ಸೋಲಿಸಿದರು.
1996
  • ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮರಾರಿಕುಲಂನಿಂದ ಸೋತರು. ಕಾಂಗ್ರೆಸ್ ಅಭ್ಯರ್ಥಿ ಪಿ.ಜೆ.ಫ್ರಾನ್ಸಿಸ್ ಗೆಲುವು ಸಾಧಿಸಿದರು.
1991
  • ಮರಾರಿಕುಲಂ ಕ್ಷೇತ್ರದಿಂದ ಗೆಲ್ಲುವ ಮೂಲಕ ಮತ್ತೆ ವಿಧಾನಸಭೆಗೆ ಮರಳಿದರು. ಈ ಬಾರಿ ಕಾಂಗ್ರೆಸ್ ನ ಡಿ.ಸುಗತನ್ ಅವರನ್ನು ಸೋಲಿಸಿದರು.
1985
  • ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯರಾದರು. ಆದರೆ ನಂತರ ಅವರನ್ನು ಶಿಸ್ತು ವಿರೋಧಿ ಚಟುವಟಿಕೆಗಳಿಂದಾಗಿ 2009 ರಲ್ಲಿ ಈ ಹುದ್ದೆಯಿಂದ ತೆಗೆದುಹಾಕಲಾಯಿತು.
1980
  • ಸಿಪಿಐ (ಎಂ) ಯ ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿಯಾದರು.
1977
  • ಅಚುತಾನಂದನ್ ತಮ್ಮ ಅಂಬಲಪುಳ ಕ್ಷೇತ್ರವನ್ನು ಆರ್‌ಎಸ್‌ಪಿಯ ಕುಮಾರ ಪಿಳ್ಳೈ ಎದುರು ಕಳೆದುಕೊಂಡರು. ಇದು ಸಿಪಿಎಂಗೆ ದೊಡ್ಡ ಹಿನ್ನಡೆಯಾಯಿತು.
1970
  • ಅದೇ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಮತ್ತೆ ಆಯ್ಕೆಯಾದರು. ಈ ಬಾರಿ ಅವರು ಆರ್‌ಎಸ್‌ಪಿಯ ಕೆ.ಕೆ.ಕುಮಾರ ಪಿಳ್ಳೈ ಅವರನ್ನು ಸೋಲಿಸಿದರು.
1967
  • ಅಚುತಾನಂದನ್ ಅವರು ಕೇರಳ ವಿಧಾನಸಭೆಯ ಸದಸ್ಯರಾಗಿ ಅಂಬಲಪುಳ ಕ್ಷೇತ್ರದಿಂದ ಆಯ್ಕೆಯಾದರು. ಅವರು ಕಾಂಗ್ರೆಸ್ ನ ಎ.ಅಚ್ಯುತನ್ ಅವರನ್ನು ಸೋಲಿಸಿದರು.
1957
  • ಸಿಪಿಐ ರಾಜ್ಯ ಕಾರ್ಯದರ್ಶಿ ಸದಸ್ಯರನ್ನಾಗಿ ನೇಮಿಸಲಾಯಿತು.
1940
  • ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಸಕ್ರಿಯ ಸದಸ್ಯರಾದರು.
1938
  • ಅಚುತಾನಂದನ್ ಸಂಘಟನೆ ಚಟುವಟಿಕೆಗಳ ಮೂಲಕ ರಾಜಕೀಯ ಪ್ರವೇಶಿಸಿ ರಾಜ್ಯ ಕಾಂಗ್ರೆಸ್ ಸೇರಿದರು.

ವಿ.ಎಸ್.ಅಚುತಾನಂದನ್ ಸಾಧನೆಗಳು

Because of his efforts, Kerala registered Major IT export growth during his tenure surpassing the national average. His other contributions are the major renovation of Malampuzha Tourist destination, AshtaMudi tourism circuit in Kollam and closing down of illegal lottery mafia from the state. IT park In Kollam- Kollam Technopark.

The IT park is initiated, planned and constructed during while VS was also the IT minister of the state. He initiated major renovation programmes of famous tourist attractions such as AshtaMudi circuit in Kollam and Malampuzha.

As the Chief Minister of Kerala, he initiated various steps, such as the action against encroachment on government land in the hilly and tea plantation town of Munnar. The land was allegedly grabbed by resort owners and MNCs such as Tata Tea limited.

His other initiatives included the demolition drive in Kochi M.G. Road, anti-piracy drive against film-piracy, and his long struggle against the lottery mafia in the state. He also raised his voice against corruption by former minister R. Balakrishna Pillai and was instrumental in bringing about conviction. He was conferred with Pravasi Express Awards Lifetime Achievement Award 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X