keyboard_backspace

Explained: ಭಾರತದಲ್ಲಿ ಏಕರೂಪ ಕಾಯ್ದೆ ಜಾರಿಗೊಳಿಸಲು ಮುಂದಾದ ಕೇಂದ್ರ!

Google Oneindia Kannada News

ನವದೆಹಲಿ, ಅಕ್ಟೋಬರ್ 19: ಭಾರತದಲ್ಲಿ ಪ್ರಮುಖ ಕಾಯ್ದೆ ಮತ್ತು ಕಾನೂನುಗಳಿಗೆ ತಿದ್ದುಪಡಿ ತಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದೇ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಸೆಪ್ಟೆಂಬರ್ 18ರಂದು ಈ ಕುರಿತು ಕಾರ್ಯಯೋಜನೆ ರೂಪಿಸಲು ಮಹತ್ವದ ಸಭೆಯನ್ನು ನಡೆಸಲಾಗಿದೆ.

ಜನನ ಪ್ರಮಾಣಪತ್ರವನ್ನು ಪೌರತ್ವಕ್ಕೆ ಸೇರ್ಪಡೆಗೊಳಿಸುವುದರಿಂದ ಹಿಡಿದು ಉದ್ಯೋಗ ಪಡೆಯುವುದು, ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದರ ಜೊತೆಗೆ ಇಡೀ ಕುಟುಂಬ ವಿನ್ಯಾಸಕ್ಕೆ ಒಂದು ರಚನೆಯನ್ನು ನೀಡುವ ನಿಟ್ಟಿನಲ್ಲಿ ಏಕ ಪರಿಸರ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಗತಿ ಶಕ್ತಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ, ಯೋಜನೆ ಬಗ್ಗೆ ಮಾಹಿತಿಗತಿ ಶಕ್ತಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ, ಯೋಜನೆ ಬಗ್ಗೆ ಮಾಹಿತಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲ ಇಲಾಖೆ ಸಚಿವರು ಮತ್ತು ಕಾರ್ಯದರ್ಶಿಗಳ ಜೊತೆಗೆ ನಡೆದ ಸರಣಿ ಸಭೆಗಳಲ್ಲಿ ಏಕ ಪರಿಸರ ಕಾಯ್ದೆಗೆ ಸಂಬಂಧಿಸಿದಂತೆ 60 ಅಂಶಗಳ ಕಾರ್ಯಯೋಜನೆಯನ್ನು ರೂಪಿಸಲಾಯಿತು. ಈ ಕ್ರಿಯಾ ಯೋಜನೆಯ ಪ್ರಕಾರ, "ಭಾರತದಲ್ಲಿ ಪೌರತ್ವಕ್ಕೆ ಯಾವುದೇ ಪುರಾವೆಗಳಿಲ್ಲ. ತಂತ್ರಜ್ಞಾನ ಮತ್ತು ಮುಖ್ಯವಾಹಿನಿಯ ಮೂಲಕ ಪೌರತ್ವವನ್ನು ಜನನ ಪ್ರಮಾಣಪತ್ರದೊಂದಿಗೆ ಲಿಂಕ್ ಮಾಡಬಹುದು." ಕೇಂದ್ರ ಸರ್ಕಾರದ ಏಕರೂಪ ಕಾಯ್ದೆ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

PM Action Plan: Birth Certificate for Citizenship, Single Environment Act, Job Clause in FTA

ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಪತ್ರ:

ದೇಶದಲ್ಲಿ ಕಾರ್ಯಯೋಜನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಎಲ್ಲ ರಾಜ್ಯಗಳ ಸರ್ಕಾರದ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಿರ್ದೇಶನದಂತೆ ನಿಗದಿತ ಸಮಯದಲ್ಲಿಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯಗಳ ಸರ್ಕಾರದ ಕಾರ್ಯದರ್ಶಿಗಳಿಗೆ ಸೆಪ್ಟೆಂಬರ್ 20ರಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಕ್ರಿಯಾ ಯೋಜನೆಯಲ್ಲಿ ಪ್ರಮುಖ 60 ಅಂಶಗಳು:

ಕೇಂದ್ರ ಸರ್ಕಾರವು ಸಿದ್ಧಪಡಿಸಿದ 60 ಅಂಶಗಳ ಕ್ರಮವು ನಿರ್ದಿಷ್ಟ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದೆ. ವಿಶೇಷವಾಗಿ ನಡೆಸಿರುವ ವಿಶ್ಲೇಷಣೆ ಪ್ರಕಾರ ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿರುವುದು ಗೊತ್ತಾಗುತ್ತದೆ. ಆಡಳಿತ ವಲಯದಲ್ಲಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು, ವ್ಯಾಪಾರಿ ವ್ಯವಸ್ಥೆಯಲ್ಲಿ ವಾತಾವರಣ ಸುಧಾರಿಸುವುದು ಮತ್ತು ನಾಗರಿಕ ಸೇವೆಗಳನ್ನು ಉನ್ನತೀಕರಿಸುವುದಾಗಿದೆ.

PM Action Plan: Birth Certificate for Citizenship, Single Environment Act, Job Clause in FTA

ಉದಾಹರಣೆಗೆ, ವ್ಯಾಪಾರವನ್ನು ಆಕರ್ಷಿಸುವ ಕ್ರಿಯಾ ಅಂಶಗಳು ಇವುಗಳನ್ನು ಒಳಗೊಂಡಿವೆ. ಇವುಗಳನ್ನು ಹೆಚ್ಚಾಗಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ನೀತಿ ಆಯೋಗಕ್ಕೆ ನಿರ್ದೇಶಿಸಲಾಗಿದೆ. ಈ ಕುರಿತು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

* ದೇಶದ 10 ವಲಯಗಳಲ್ಲಿ ವ್ಯಾಪಾರ ಆರಂಭಿಸುವ ವೆಚ್ಚವನ್ನು ತಗ್ಗಿಸುವುದು

* ಹೊಸ ವ್ಯಾಪಾರ ಮತ್ತು ಉದ್ಯಮ ಆರಂಭದ ವೆಚ್ಚವನ್ನು ವಿಯೆಟ್ನಾ ಮತ್ತು ಇಂಡೋನೆಷ್ಯಾಗೆ ಸಮನಾಗಿಸುವುದು

* ಸ್ವಯಂಚಾಲಿತ ಅನುಮತಿಗೆ ಅಧಿಸೂಚನೆ

* ಎಲ್ಲಾ ಸರ್ಕಾರಿ ಸೇವೆಗಳಿಗೆ ಏಕ-ಹಂತದ ಪ್ರವೇಶ

* ಸಕಾಲದಲ್ಲಿ ಭೂಸ್ವಾಧೀನ ಮತ್ತು ಅರಣ್ಯ ಮಂಜೂರಾತಿಗಾಗಿ ರಾಜ್ಯಗಳಿಗೆ ಪ್ರೋತ್ಸಾಹ

* ಆಯಾ ವಲಯದಲ್ಲಿನ ವಿವಿಧ ಕಾನೂನುಗಳನ್ನು ಒಳಗೊಂಡ ಒಂದು ಸಮಗ್ರ ಪರಿಸರ ನಿರ್ವಹಣಾ ಕಾಯ್ದೆ

* ಉದಯೋನ್ಮುಖ ವಲಯಗಳಿಗೆ ಸ್ಟಾರ್ಟ್ ಅಪ್ ಮತ್ತು ಕೌಶಲ್ಯ ಕಾರ್ಯಕ್ರಮಗಳಿಗೆ ಮಾರ್ಗದರ್ಶಿ ವೇದಿಕೆ

ತಂತ್ರಜ್ಞಾನದ ಸಂಪೂರ್ಣ ಸದ್ಬಳಕೆಗೆ ಸೂಚನೆ:

ಆಡಳಿತ ಸುಧಾರಣೆಗೆ ಹೊಸ ತಂತ್ರಜ್ಞಾನ, ಡೇಟಾ ಮತ್ತು ಐಟಿ ಬಳಕೆ ಒತ್ತು ನೀಡುವುದು ಇನ್ನೊಂದು ಪ್ರಮುಖ ಕ್ಷೇತ್ರವಾಗಿದೆ. ವಿದ್ಯಾರ್ಥಿವೇತನ ವಿತರಣೆಯನ್ನು ಸುವ್ಯವಸ್ಥಿತಗೊಳಿಸುವುದರಿಂದ ಹಿಡಿದು ಸ್ಥಳೀಯ ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಹಿಂದುಳಿದ ವಿದ್ಯಾರ್ಥಿಗಳಿಗೆ ವಿತರಿಸುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿಟಲ್ ಮೂಲಕ ವಿಭಜಿಸುವುದಕ್ಕೆ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗಿದೆ. ಈ ಕುರಿತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚಿಸಲಾಗಿದೆ. ತಂತ್ರಜ್ಞಾನದ ಶಕ್ತಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ರಾಜ್ಯ ಕಾರ್ಯದರ್ಶಿಗಳಿಗೆ ಸಂಪುಟ ಕಾರ್ಯದರ್ಶಿ ಗೌಬಾ ತಮ್ಮ ಪತ್ರದ ಮೂಲಕ ಸಂದೇಶ ರವಾನಿಸಿದ್ದಾರೆ. "ಆದ್ದರಿಂದ ಭಾರತ ಸರ್ಕಾರದ ಎಲ್ಲಾ ಯೋಜನೆಗಳು/ ಕಾರ್ಯಕ್ರಮಗಳು ಡಿಜಿಟಲ್ ಘಟಕವನ್ನು ಹೊಂದಿರಬೇಕು" ಎಂದು ಅವರು ಹೇಳಿದ್ದಾರೆ.

ಬಜೆಟ್ ಘೋಷಣೆ ಅನುಷ್ಠಾನಕ್ಕೆ ಸಲಹೆ:

ಬಜೆಟ್ ಘೋಷಣೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು. ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಕೊನೆಯಲ್ಲಿ ಅನೇಕ ಸಚಿವಾಲಯಗಳಲ್ಲಿನ ಪ್ರಗತಿ ತೃಪ್ತಿಕರವಾಗಿಲ್ಲ. "ಪ್ರಸ್ತುತ ಹಣಕಾಸು ವರ್ಷದ ಗುರಿಯನ್ನು ತಲುಪಲು ಬಂಡವಾಳ ವೆಚ್ಚವನ್ನು ವೇಗಗೊಳಿಸಬೇಕಾಗಿದೆ. ವಿಶೇಷವಾಗಿ ಬಂಡವಾಳ ವೆಚ್ಚವನ್ನು ವೇಗಗೊಳಿಸಿ," ಎಂದು ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಗೌಬಾ ಕೋರಿದ್ದಾರೆ.

ಸಾಮರ್ಥ್ಯ ವೃದ್ಧಿಗೆ ಪ್ರಧಾನಮಂತ್ರಿ ಒತ್ತು:

ದೇಶದಲ್ಲಿ ಆಡಳಿತ ಸುಧಾರಣೆಗೆ ಸಾಮರ್ಥ್ಯ ವೃದ್ಧಿಸುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒತ್ತು ನೀಡಿದ್ದಾರೆ.

* ಕೇಂದ್ರ ಮತ್ತು ರಾಜ್ಯಗಳಲ್ಲಿ ಮೂಲಸೌಕರ್ಯದ ವಿವಿಧ ಅಂಶಗಳ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡುವುದು

* ಉನ್ನತ ನಾಗರಿಕ ಸೇವೆಗಳಿಗಾಗಿ ಪರಿಣತಿ ಮತ್ತು ಇತ್ತೀಚಿನ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುವುದು

* ಕಾರ್ಯಕ್ಷಮತೆ ಆಧಾರಿತ ಕೆಲಸ ಮಾಡುವುದು

* ಸಾರ್ವಜನಿಕ ವಲಯದ ಸಂಸ್ಥೆಗಳಂತೆಯೇ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸ್ಪಷ್ಟ ಮತ್ತು ನಿರ್ದಿಷ್ಟ ಗುರಿಗಳು ನೀಡುವುದು

* ರಾಜ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಸಾಂಸ್ಥಿಕ ಕಾರ್ಯವಿಧಾನಗಳು ಅವುಗಳ ಸೀಮಿತ ಸಾಮರ್ಥ್ಯಗಳನ್ನು ಮತ್ತು ಇಲಾಖೆಗಳ ಪುನರ್ರಚನೆಯನ್ನು ಪ್ರತಿ 10 ವರ್ಷಗಳಿಗೊಮ್ಮೆ ಮಾಡುವುದು

ಮಾದರಿ ಯೋಜನೆಗಳ ಎರವಲು ಪಡೆಯಲು ಸಲಹೆ:

ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಯಶಸ್ವಿ ನಡೆಗಳನ್ನು ಇಲಾಖೆಗಳು ಮತ್ತು ಸಚಿವಾಲಯಗಳು ಎರವಲು ಪಡೆಯುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಳಿದ್ದಾರೆ. ಉದಾಹರಣೆಗೆ, ಕ್ರೀಡಾ ಇಲಾಖೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳ ಉತ್ತೇಜನಕ್ಕಾಗಿ ಒಡಿಶಾ ಮಾದರಿಯನ್ನು ಅಳವಡಿಸಿಕೊಳ್ಳಲು ಕೇಳಿಕೊಳ್ಳಲಾಗಿದೆ. ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು ಭಾರತೀಯ ರಿಸರ್ವ್ ಬ್ಯಾಂಕಿನ ಮಾಸ್ಟರ್ ಸರ್ಕ್ಯುಲರ್‌ಗಳಂತಹ ಎಲ್ಲಾ ಸರ್ಕಾರಿ ಸುತ್ತೋಲೆಗಳನ್ನು ಆಯೋಜಿಸಲು ಕೇಳಲಾಗಿದೆ. "ರಾಜ್ಯಗಳು/ ಪುರಸಭೆಯ ಸಂಸ್ಥೆಗಳು ಅನೇಕ ಉತ್ತಮ ಉಪಕ್ರಮಗಳನ್ನು ಕೈಗೊಂಡಿವೆ. ಅಂತಹ ಎಲ್ಲ ಉಪಕ್ರಮಗಳನ್ನು ಒಂದೇ ಸೂರಿನಡಿ ತರಲು ರಾಷ್ಟ್ರೀಯ ನಗರ ಡಿಜಿಟಲ್ ಮಿಷನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ, ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನಂತಹ ವ್ಯವಸ್ಥೆಗಳು ಉದ್ಯಮದಿಂದ ಸೇವೆಯಾಗಿ ಲಭ್ಯವಾಗುವಂತೆ ಮಾಡಬಹುದು, ಇದರಿಂದ ಸಣ್ಣ ಪಟ್ಟಣಗಳು ಕೂಡ ಪ್ರಯೋಜನವನ್ನು ಪಡೆಯಬಹುದು, "ಎಂದು ಕ್ರಿಯಾ ಯೋಜನೆ ಹೇಳುತ್ತದೆ.

ಐದು ವರ್ಷದಲ್ಲಿ ಬಡತನ ನಿರ್ಮೂಲನೆಗೆ ಕ್ರಮ:

ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಬಡತನ ನಿರ್ಮೂಲನೆ ಗುರಿಯನ್ನು ಇಟ್ಟುಕೊಂಡು ನೀತಿ ಆಯೋಗಕ್ಕೆ ಪ್ರಧಾನಮಂತ್ರಿ ಸೂಚನೆ ನೀಡಿದ್ದಾರೆ. ಕೊಳೆಗೇರಿಗಳ ರಚನೆಯನ್ನು ತಡೆಗಟ್ಟಲು ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸೇವಾ ಸಿಬ್ಬಂದಿಗೆ ವಸತಿ ಸೌಲಭ್ಯಗಳನ್ನು ಒದಗಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವನ್ನು ಕೇಳುತ್ತದೆ. ಈ ಯೋಜನೆಯು "ವಿವಿಧ ಸಚಿವಾಲಯಗಳ ಫಲಾನುಭವಿ ಆಧಾರಿತ ಯೋಜನೆಗಳನ್ನು ಒಟ್ಟುಗೂಡಿಸಲು" ಆಧಾರ್ ಅನ್ನು ಬಳಸಲು ಶಿಫಾರಸು ಮಾಡುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 'ಕುಟುಂಬ ಡೇಟಾಬೇಸ್ ವಿನ್ಯಾಸ'ವನ್ನು ಅಭಿವೃದ್ಧಿಪಡಿಸಿದೆ ಮತ್ತು "ಆಧಾರ್ ರೀತಿಯಲ್ಲೇ ಪ್ರಚಾರ ಮಾಡಬಹುದು" ಎಂದು ಕೂಡ ಸೇರಿಸುತ್ತದೆ. ಎಲ್ಲಾ ಸರ್ಕಾರಿ ಡೇಟಾ ಎಲ್ಲಾ ಸಚಿವಾಲಯಗಳಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಅದು ಹೇಳುತ್ತದೆ.

English summary
PM Action Plan: From linking birth certificates to citizenship to pushing for jobs while negotiating trade pacts, from promoting a family database design to drafting a single environment Act. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X