bredcrumb

ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್

By Revanth Gowda
| Published: Thursday, June 17, 2021, 13:56 [IST]
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
1/7
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ವಾಹನಕ್ಕೆ ಕಲಬುರಗಿಯಲ್ಲಿ ಚಾಲನೆ ನೀಡಿದರು. ಕಲಬುರಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಕೋರಿಕೆ ಮೇರೆಗೆ ಈ ಬಸ್‍ ವಿನ್ಯಾಸಗೊಳಿಸಲಾಗಿದೆ.
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
2/7
ಈಗ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಜನರು ಆಸ್ಪತ್ರೆಗೆ ಆಗಮಿಸಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಬಸ್ ಮೂಲಕ ಜನ ಮನೆ ಬಾಗಿಲಿನಲ್ಲಿಯೇ ಲಸಿಕೆ ಹಾಕಲಾಗುತ್ತದೆ.
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
3/7
ಪ್ರತಿ ತಾಲೂಕಿನಲ್ಲಿ ಮೂರು ದಿನಗಳ ಕಾಲ ವ್ಯಾಕ್ಸಿನ್ ಬಸ್ ಸಂಚಾರ ನಡೆಸಲಿದೆ. ಸೇಡಂ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮೊದಲು ಬಸ್ ಸಂಚಾರ ನಡೆಸಲಿದೆ.
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
4/7
ವ್ಯಾಕ್ಸಿನ್ ಬಸ್ ಒಂದು ತಾಲೂಕಿನಲ್ಲಿ ಸಂಚಾರ ನಡೆಸುವ ಕುರಿತು ತಾಲೂಕಿನ ಜನರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಜನಸಾಮಾನ್ಯರಲ್ಲಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಿದ್ದಾರೆ.  
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
5/7
ವ್ಯಾಕ್ಸಿನ್ ಬಸ್‌ನಲ್ಲಿ ಮೂರು ವಿಭಾಗಗಳಿವೆ. ಮೊದಲನೇ ವಿಭಾಗದಲ್ಲಿ ನೋಂದಣಿ, ಎರಡನೇ ವಿಭಾಗ ಲಸಿಕೆ ನೀಡುವುದು ಮತ್ತು ಮೂರನೇ ವಿಭಾಗದಲ್ಲಿ ಲಸಿಕೆ ಪಡೆದ ನಂತರ ವಿಶ್ರಾಂತಿ ಮತ್ತು ನಿಗಾ ಇಡಲು ವ್ಯವಸ್ಥೆ ಇದೆ. 
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
6/7
ಕರ್ನಾಟಕದ ರಾಜ್ಯದಲ್ಲೇ ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿನಲ್ಲಿಯೇ ಕೋವಿಡ್ ಲಸಿಕೆ ನೀಡಲು ವ್ಯಾಕ್ಸಿನ್ ಬಸ್‌ ಸೇವೆ ಆರಂಭಿಸಲಾಗಿದೆ.
ಕರ್ನಾಟಕದಲ್ಲೇ ಪ್ರಥಮ; ಕಲಬುರಗಿಯಲ್ಲಿ ವ್ಯಾಕ್ಸಿನ್ ಬಸ್
7/7
ಕಲಬುರಗಿ ಜಿಲ್ಲೆಯಲ್ಲಿ 'ವ್ಯಾಕ್ಸಿನ್ ಬಸ್' ಸೇವೆಗೆ ಚಾಲನೆ ನೀಡಲಾಗಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದಲ್ಲಿಯೇ ಪ್ರಥಮವಾದ ಕೋವಿಡ್ ಸಂಚಾರಿ ಲಸಿಕಾ ವಾಹನ ವಿನ್ಯಾಸಗೊಳಿಸಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X