bredcrumb

ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ

By Dheeraj K
| Published: Tuesday, February 1, 2022, 15:40 [IST]
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
1/9
ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ, ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಪರಿಣಾಮ ಚಿನ್ನ ಮತ್ತು ವಜ್ರದ ಬೆಲೆಯಲ್ಲಿ ಇಳಿಕೆಯೂಗುವ ಲಕ್ಷಣ ಗೋಚರವಾಗುತ್ತಿವೆ. 
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
2/9
ಡಿಜಿಟಲ್ ಕರೆನ್ಸಿಯ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಈ ವರೆಗೂ ಇದ್ದ ಗೊಂದಲಗಳಿಗೆ ಫೆ.1 ರಂದು ಮಂಡನೆಯಾದ 2022-23 ನೇ ಸಾಲಿನ ಬಜೆಟ್ ನಲ್ಲಿ ಸ್ಪಷ್ಟತೆ ಸಿಕ್ಕಿದೆ. 
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
3/9
ಇ-ಪಾಸ್ ಪೋರ್ಟ್ ನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಹೊರಡಿಸಲಾಗುವುದು. ಈ ಮೂಲಕ ನಾಗರಿಕರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್-2022ರ ಮಂಡನೆ ವೇಳೆ ಪ್ರಕಟಿಸಿದ್ದಾರೆ. 
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
4/9
ದೇಶದಲ್ಲಿ ಒಟ್ಟು 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದ್ದು, ಸಮಯಪಾಲನೆ ಮತ್ತು ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಈ ರೈಲುಗಳು ಒದಗಿಸುತ್ತವೆ.
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
5/9
ಆದಾಯ ತೆರಿಗೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದಾಯ ತೆರಿಗೆ ಸಲ್ಲಿಸುವಾಗ ಆದಾಯವನ್ನು ಘೋಷಿಸಿ, ಸ್ವಯಂಪ್ರೇರಿತ ದೂರು ದಾಖಲಿಸಲು ಅವಕಾಶ ನೀಡಲಾಗುತ್ತದೆ.
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
6/9
"ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಆಧರಿಸಿ ಆರ್ ಬಿಐ ಡಿಜಿಟಲ್ ಕರೆನ್ಸಿಯನ್ನು 2022-23 ಆರ್ಥಿಕ ವರ್ಷದಲ್ಲೇ ಪರಿಚಯಿಸಲಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.   
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
7/9
ಕೇಂದ್ರ ಸರ್ಕಾರವು ಈ ವರ್ಷ ಸ್ಪೆಕ್ಟ್ರಮ್ ಹರಾಜನ್ನು ನಡೆಸಲಿದೆ, ಇದು 2022-23 ರ ಹಣಕಾಸು ವರ್ಷದಲ್ಲಿ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಂದ 5G ಸೇವೆಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
8/9
ಬಜೆಟ್ ಭಾಷಣದಲ್ಲಿ ಆತ್ಮ ನಿರ್ಭರ್ ಭಾರತ್ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಈ ಯೋಜನೆಯಡಿ 6 ಮಿಲಿಯನ್ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ ಎಂದು ಘೋಷಣೆ ಮಾಡಿದರು.
ಚಿತ್ರಗಳು: ಕೇಂದ್ರ ಬಜೆಟ್ 2022 ಪ್ರಮುಖಾಂಶಗಳು ಹೀಗಿವೆ
9/9
2022 ರ ಜನವರಿ ತಿಂಗಳ ಒಟ್ಟು ಜಿಎಸ್‌ಟಿ ಸಂಗ್ರಹ 1,40,986 ಕೋಟಿ ರೂ. ಇದು ಜಿಎಸ್‌ಟಿ ಪ್ರಾರಂಭವಾದಾಗಿನಿಂದ ಸಂಗ್ರಹವಾದ ಅತಿ ಹೆಚ್ಚು ಮೊತ್ತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X