bredcrumb

ಚಿತ್ರಗಳು; ನಷ್ಟದ ಭೀತಿಯಲ್ಲಿ ದಾವಣಗೆರೆ ಹೋಟೆಲ್ ಉದ್ಯಮ

By Dheeraj K
| Published: Friday, January 7, 2022, 12:09 [IST]
ಚಿತ್ರಗಳು; ನಷ್ಟದ ಭೀತಿಯಲ್ಲಿ ದಾವಣಗೆರೆ ಹೋಟೆಲ್ ಉದ್ಯಮ
1/5
ವಾರಾಂತ್ಯದಲ್ಲಿ ಹೊಟೇಲ್‌ನಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಜನರು ಆಗಮಿಸುವುದಿಲ್ಲ. ಊಟ, ತಿಂಡಿ ಸೇರಿದಂತೆ ಆಹಾರ ಪದಾರ್ಥವನ್ನು ರೆಡಿ ಮಾಡಿಟ್ಟುಕೊಂಡು ಕಾದು ಕುಳಿತುಕೊಳ್ಳಲು ಸಹ ಆಗುವುದಿಲ್ಲ. ಗ್ರಾಹಕರು ಬಾರದಿದ್ದರೆ ನಷ್ಟವಾಗಲಿದೆ.
ಚಿತ್ರಗಳು; ನಷ್ಟದ ಭೀತಿಯಲ್ಲಿ ದಾವಣಗೆರೆ ಹೋಟೆಲ್ ಉದ್ಯಮ
2/5
ದಾವಣಗೆರೆಯ ಹೋಟೆಲ್ ಮಾಲೀಕರು ಮತ್ತೆ ಆರ್ಥಿಕ ಸಂಕಷ್ಟದ ಭೀತಿ ಎದುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಅಲೆ ಹೊಡೆತಕ್ಕೆ ಸಿಲುಕಿ ಹೊಟೇಲ್ ಉದ್ಯಮ ಬಳಲಿ ಬೆಂಡಾಗಿತ್ತು.
ಚಿತ್ರಗಳು; ನಷ್ಟದ ಭೀತಿಯಲ್ಲಿ ದಾವಣಗೆರೆ ಹೋಟೆಲ್ ಉದ್ಯಮ
3/5
ಈಗ ಕೋವಿಡ್ ಪರಿಸ್ಥಿತಿ ತಿಳಿಯಾಗಿ ವ್ಯಾಪಾರ ವಹಿವಾಟು ಸುಧಾರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೆ ಬಂದಿದೆ. ಇದರಿಂದಾಗಿ ಹೊಟೇಲ್‌ಗಳಲ್ಲಿ ರಾತ್ರಿ ಆಗುತ್ತಿದ್ದ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ.
ಚಿತ್ರಗಳು; ನಷ್ಟದ ಭೀತಿಯಲ್ಲಿ ದಾವಣಗೆರೆ ಹೋಟೆಲ್ ಉದ್ಯಮ
4/5
ವ್ಯಾಪಾರ ವಹಿವಾಟು ಕಡಿಮೆಯಾದರೆ ಮನೆ ಬಾಡಿಗೆ, ಹೊಟೇಲ್ ಮಳಿಗೆ ಬಾಡಿಗೆ, ಕೆಲಸಗಾರರಿಗೆ ಸಂಬಳ, ವಿದ್ಯುತ್ ಬಿಲ್, ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಹತ್ತು ಹಲವು ರೀತಿಯ ಖರ್ಚುಗಳನ್ನು ಭರಿಸುವುದು ಹೇಗೆ? ಎಂಬುದು ಮಾಲೀಕರ ಚಿಂತೆ.
ಚಿತ್ರಗಳು; ನಷ್ಟದ ಭೀತಿಯಲ್ಲಿ ದಾವಣಗೆರೆ ಹೋಟೆಲ್ ಉದ್ಯಮ
5/5
ಕರ್ನಾಟಕ ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದಾಗಿ ಹೋಟೆಲ್ ಮಾಲೀಕರು ಚಿಂತೆಗೆ ಒಳಗಾಗಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X