bredcrumb

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಹಳೆಯ ರೈಲು ನಿಲ್ದಾಣಗಳು

By Shiddalingesh S
| Updated: Wednesday, November 23, 2022, 16:32 [IST]
ಭಾರತೀಯ ರೈಲ್ವೆಯ ಇತಿಹಾಸವು 177 ವರ್ಷಗಳಷ್ಟು ಹಳೆಯದು. ಇದರ ಅಡಿಪಾಯವನ್ನು 1877ರಲ್ಲಿ ಬ್ರಿಟಿಷರ ಅವಧಿಯಲ್ಲಿ ಹಾಕಲಾಯಿತು. ಇಂದು ಇದು ವಿಶ್ವದ ಅತ್ಯಂತ ಜನನಿಬಿಡ ಮತ್ತು ಅಗ್ಗದ ರೈಲ್ವೆ ಮಾರ್ಗಗಳು
ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಹಳೆಯ ರೈಲು ನಿಲ್ದಾಣಗಳು
1/5
ನಮ್ಮ ದೇಶದಲ್ಲಿ ಕೆಲವು ಹಳೆಯ ರೈಲು ಮಾರ್ಗಗಳು, ಸೇತುವೆಗಳು ಮತ್ತು ನಿಲ್ದಾಣಗಳು ರೈಲ್ವೆಯ ಶ್ರೀಮಂತ ಇತಿಹಾಸವನ್ನು ಸಂರಕ್ಷಿಸುತ್ತವೆ. ಇವುಗಳಲ್ಲಿ ಕೆಲವು ರೈಲು ನಿಲ್ದಾಣಗಳು ಯುನೆಸ್ಕೋ ವಿಶ್ವ ಪರಂಪರೆಯಲ್ಲಿ ಸ್ಥಾನಮಾನವನ್ನು ಪಡೆದುಕೊಂಡಿವೆ.

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಹಳೆಯ ರೈಲು ನಿಲ್ದಾಣಗಳು
2/5
ನೀಲಗಿರಿ ಮೌಂಟೇನ್ ರೈಲ್ವೆ ನಿಲ್ದಾಣ: ತಮಿಳುನಾಡು ಪ್ರವಾಸೋದ್ಯಮದಲ್ಲಿ ಈ ರೈಲು ಪ್ರಸಿದ್ಧ ತಾಣವಾಗಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ 1,000 ಎಂಎಂ ಗೇಜ್ ರೈಲು ಮಾರ್ಗವಿದೆ. ಈ ರೈಲುಮಾರ್ಗವು ಊಟಿಯ ಸುಂದರ ಪರ್ವತಗಳ ಮೂಲಕ ಹಾದು ಕುನ್ನೂರ್ ಮೂಲಕ ಮೆಟ್ಟುಪಾಳ್ಯಂ ತಲುಪುತ್ತದೆ. 

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಹಳೆಯ ರೈಲು ನಿಲ್ದಾಣಗಳು
3/5
ಡಾರ್ಜಿಲಿಂಗ್ ಹಿಮಾಲಯನ್: ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ನಿಲ್ದಾಣವನ್ನು 1879 ಮತ್ತು 1881ರ ನಡುವೆ ಬ್ರಿಟಿಷರು ನಿರ್ಮಿಸಿದರು. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಮಾರ್ಗವು ನ್ಯೂ ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ನಡುವೆ ಇದೆ.

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಹಳೆಯ ರೈಲು ನಿಲ್ದಾಣಗಳು
4/5
ಶಿವಾಜಿ ಮಹಾರಾಜ್ ಟರ್ಮಿನಸ್: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಈ ರೈಲು ನಿಲ್ದಾಣವು ಮೊದಲು ವಿಕ್ಟೋರಿಯಾ ಟರ್ಮಿನಸ್ ನಿಲ್ದಾಣ ಎಂದು ಕರೆಯಲಾಗುತ್ತಿತ್ತು. ಮುಂಬೈನ ಈ ರೈಲು ನಿಲ್ದಾಣವು ವಿಕ್ಟೋರಿಯನ್ ಗೋಥಿಕ್ ಪುನರುಜ್ಜೀವನದ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ.

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಹಳೆಯ ರೈಲು ನಿಲ್ದಾಣಗಳು
5/5
ಕಲ್ಕಾ ಶಿಮ್ಲಾ ರೈಲ್ವೆ ನಿಲ್ದಾಣ: ಬ್ರಿಟಿಷರ ಕಾಲದಲ್ಲಿ ಶಿಮ್ಲಾ ಭಾರತದ ಬೇಸಿಗೆಯ ರಾಜಧಾನಿಯಾಗಿತ್ತು. ಕಲ್ಕಾ ಶಿಮ್ಲಾದ ರೈಲುಮಾರ್ಗವನ್ನು 1898 -1903ರ ನಡುವೆ ನಿರ್ಮಿಸಲಾಯಿತು. ಇದು ಹಿಮಾಚಲ ಪ್ರದೇಶದ ಕಲ್ಕಾ ಮತ್ತು ಶಿಮ್ಲಾ ಮೌಂಟೇನ್ ಪಾಸ್ ನಡುವಿನ 96.6 ಕಿ.ಮೀ ಉದ್ದದ ನ್ಯಾರೋ ಗೇಜ್ ರೈಲು ಮಾರ್ಗವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X