bredcrumb

ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು

By Madhusudhan KR
| Published: Thursday, November 24, 2022, 13:10 [IST]
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
1/10
ಅಂದಿನಿಂದ ಪ್ರತಿ ವರ್ಷ ಸುತ್ತಮುತ್ತಲಿನ ಗ್ರಾಮಗಳ ರೈತರು ಇಲ್ಲಿಗೆ ಬಂದು ಬಸವಣ್ಣನವರಿಗೆ ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಅರ್ಪಿಸುವ ಸಂಪ್ರದಾಯ ಈಗಲೂ ಇದೆ.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
2/10
ಕಡಲೆಕಾಯಿ ಜೊತೆಗೆ ಕುಂಕುಮ ಸೇರಿದಂತೆ ಇನ್ನಿತರ ಮನೆ ಅಲಂಕಾರಿಕಾ ವಸ್ತುಗಳನ್ನು ಬೀದಿ ಬದಿ ಇಟ್ಟು ಮಾರಾಟ ಮಾಡಿರುವುದು ಗಮನ ಸೆಳೆದಿದೆ.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
3/10
1537ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದಲ್ಲಿ ದೊಡ್ಡ ಬಸವನ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯವನ್ನು ಬುಲ್ ಟೆಂಪಲ್ ಎಂದೂ ಕರೆಯಲಾಗುತ್ತದೆ.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
4/10
ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಶೇಂಗಾ ಬೆಳೆಯೂ ಉತ್ತಮವಾಗಿ ಬಂದಿತ್ತು. ಇನ್ನು ವ್ಯಾಪಾರಿಗಳು ದೇವರಿಗೆ ಧನ್ಯವಾದ ಸಲ್ಲಿಸಿ ಪರಿಷೆಯನ್ನು ಸಂಭ್ರಮದಿಂದ ಆಚರಿಸಿದರು.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
5/10
ಇದು ರೈತರ ಆರಾಧನೆಯ ಸ್ಥಳವಾಗಿದ್ದು, ತಮ್ಮ ದೇವರಿಗೆ ನೈವೇದ್ಯವಾಗಿ ದೊಡ್ಡಬಸವಣ್ಣ ಮತ್ತು ನಂದಿಗೆ ಕಡಲೆಕಾಯಿಯನ್ನು ಅಭಿಷೇಕ ಮಾಡಿ ಸಂಭ್ರಮಿಸಿದರು.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
6/10
ಸಾಮಾನ್ಯವಾಗಿ ಪರಿಷೆಯಲ್ಲಿ ಬಡ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದು, ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿತ್ತು.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
7/10
ಇನ್ನು ಬಡವರ ಬಾದಾಮಿ ಅಂತಲೇ ಹೆಸರುವಾಸಿ ಆಗಿರುವ ಕಡಲೆಯನ್ನು ಕೊಳ್ಳಲು ನಗರ ಜನ ಕಿಕ್ಕಿರಿದು ಬಂದಿದ್ದು, ಇನ್ನು ಕೆಲವರು ಶೇಂಗಾವನ್ನು ಕೊಂಡು ಚೀಲಗಳಲ್ಲಿಯೇ ತುಂಬಿಸಿಕೊಂಡು ಹೋದರು.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
8/10
ಈ ಬಾರಿ ಮೂರು ದಿನಗಳ ಕಡಲೆ ಪರಿಷೆ ಯಶಸ್ವಿಯಾಗಿ ನಡೆದಿದ್ದು, ನವೆಂಬರ್ 20ರ ಸಂಜೆಯಿಂದ ಸಂಜೆಯಿಂದ ನವೆಂಬರ್‌ 23ರವರೆಗೂ ಜನರು ಜಾತ್ರೆಯ ದೃಶ್ಯಗಳನ್ನು ಸವಿದರು.
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
9/10
ಈ ಜಾತ್ರೆಯ ರೀತಿಯಲ್ಲಿ ನಡೆದ ಪರಿಷೆಯನ್ನು ನೋಡಲು ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳ ಜನರು ವರ್ಷವಿಡೀ ಕುತೂಹಲದಿಂದ ಕಾದಿದ್ದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X