bredcrumb

ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ

By Dheeraj K
| Published: Wednesday, April 20, 2022, 20:16 [IST]
ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
1/7
ಜಹಾಂಗೀರ್‌ಪುರಿ ಪ್ರದೇಶದಲ್ಲಿ ಪಾಲಿಕೆಯ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ತಮ್ಮ ಅಂಗಡಿ ಕಳೆದುಕೊಂಡು ಮಹಿಳೆಯೊಬ್ಬರು ಪರಿತಪಿಸುತ್ತಿರುವುದು. 
ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
2/7
ನವದೆಹಲಿಯ ಜಹಾಂಗೀರ್‌ಪುರಿಯಲ್ಲಿ ಸ್ಥಳೀಯ ನಗರಪಾಲಿಕೆ ಹಾಗೂ ಇತರೆ ಸರಕಾರಿ ಅಂಗ ಸಂಸ್ಥೆಗಳು ಜಂಟಿಯಾಗಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದವು. ಈ ವೇಳೆ, ಆ ಕಟ್ಟಡಗಳ ನಿವಾಸಿಗಳು ತಮ್ಮ ವಸ್ತುಗಳನ್ನ ಬೇರೆಡೆಗೆ ಸ್ಥಳಾಂತರ ಮಾಡಿದರು. ಕಳೆದ ವಾರ ಇದೇ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕೋಮುಗಲಭೆಗಳಾಗಿದ್ದವು. 
ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
3/7
ಉತ್ತರ ದೆಹಲಿ ನಗರಪಾಲಿಕೆಯಿಂದ ಅಕ್ರಮ ತೆರವು ಕಾರ್ಯಾಚರಣೆ ನಡೆದ ಜಹಂಗೀರ್‌ಪುರಿ ಪ್ರದೇಶಕ್ಕೆ ಸಿಪಿಎಂ ನಾಯಕಿ ಬೃಂದಾ ಕಾರಟ್ ಭೇಟಿ ನೀಡಿದರು. 
ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
4/7
ಎನ್‌ಡಿಎಂಸಿ, ಪಿಡಬ್ಲ್ಯೂಡಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಏಪ್ರಿಲ್ ೨೦ರಂದು ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದವು. ಈ ವೇಳೆ, ಕಟ್ಟಡದ ವಾಸಿಗಳು ತಮ್ಮ ಸಾಮಾನುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದರು. 
ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
5/7
ಉತ್ತರ ದೆಹಲಿ ನಗರಪಾಲಿಕೆ ನಡೆಸಿದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯನ್ನ ವಿರೋಧಿಸಿ ಪ್ರತಿಭಟಿಸಿದ ವ್ಯಕ್ತಿಯೊಬ್ಬರನ್ನ ಪೊಲೀಸರು ತಡೆಯುತ್ತಿರುವುದು. ಕಳೆದ ವಾರ ಕೋಮುಗಲಭೆ ನಡೆದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಪಾಲಿಕೆ ಈ ಕಾರ್ಯಾಚರಣೆ ಕೈಗೊಂಡಿತು. 
ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
6/7
ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಸ್ಥಳೀಯ ಪಾಲಿಕೆಯ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಮುನ್ನ ಜನರು ತಮ್ಮ ಸಾಮಾನು ಸರಂಜಾಮುಗಳನ್ನು ಬೇರೆ ಸ್ಥಳಕ್ಕೆ ಸಾಗಿಸಿದರು.
ಚಿತ್ರಗಳು: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
7/7
ಉತ್ತರ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಗರ ಪಾಲಿಕೆಯಿಂದ ನಡೆದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಬುಲ್ಡೋಜರ್ ಬಳಸಿ ಕಟ್ಟಡವೊಂದನ್ನು ಕೆಡವಲಾಯಿತು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X