keyboard_backspace

ಇಂಡಿಯನ್ ಆರ್ಮಿ ಸೈನಿಕರ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮೋಸ ಹೇಗಿದೆ ಗೊತ್ತಾ ?

Google Oneindia Kannada News

ಬೆಂಗಳೂರು, ಡಿಸೆಂಬರ್ 31: ಇಂಡಿಯನ್ ಆರ್ಮಿ ಹೆಸರಿನಲ್ಲಿ ಸೈಬರ್ ವಂಚಕರು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂಡಿಯನ್ ಆರ್ಮಿಯ ಲೋಗೋ, ಸೈನಿಕರ ಭಾವಚಿತ್ರಗಳನ್ನು ಬಳಸಿಕೊಂಡೇ ಅಂತರ್ಜಾಲ ತಾಣದಲ್ಲಿ ಖಾತೆ ತೆರೆದು ಮುಗ್ಧರ ಗಮನ ಸೆಳೆಯುತ್ತಿದ್ದಾರೆ. ಬೈಕ್, ಕಾರ್ ಕಡಿಮೆ ಬೆಲೆಗೆ ಮಾರಾಟ ಮಾಡುವ ಸೋಗಿನಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡುವ ಜಾಲ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ.

ವಂಚನೆ ಹಾದಿ: ಇಂಡಿಯನ್ ಆರ್ಮಿ ಸೈನಿಕರ ಹೆಸರಿನಲ್ಲಿ ಬೈಕ್, ಕಾರ್, ಇತರೆ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಫೇಸ್‌ ಬುಕ್ ಇನ್‌ಸ್ಟ್ರಾಗ್ರಾಮ್ ಗ್ರೂಪ್‌ ಗಳಲ್ಲಿ ಹಾಕುತ್ತಾರೆ. ಆರ್ಮಿ ಸೈನಿಕರು ಅಂದರೆ ಮೋಸ ಮಾಡಲ್ಲ. ಪ್ರಾಮಾಣಿಕರು, ದೇಶ ಕಾಯುವರು ಎಂಬ ಬಹುದೊಡ್ಡ ನಂಬಿಕೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಭಾರತೀಯ ಸೇನೆ, ಸೈನಿಕರ ಭಾವಚಿತ್ರಗಳನ್ನು ಬಳಸಿಕೊಂಡು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ.

ಹೀಗೆ ಲಕ್ಷಾಂತರ ಜನರಿಗೆ ಮಾಸ ಮಾಡುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಇತ್ತೀಚೆಗೆ ಮೋಸ ಹೋಗುತ್ತಿರುವ ಪ್ರಕರಣಗಳು ಜಾಸ್ತಿಯಾಗಿವೆ. ವರ್ಗಾವಣೆ ಕಾರಣದಿಂದಾಗಿ ಕಡಿಮೆ ಬೆಲೆಗೆ ವಾಹನ ಮಾರುತ್ತಿರುವುದದಾಗಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕುತ್ತಾರೆ. ಕಡಿಮೆ ಬೆಲೆಗೆ ವಾಹನ ಸಿಗುತ್ತಿದೆ ಎಂದು ಭಾವಿಸಿ ಸಂಪರ್ಕಿಸಿದರೆ, ಆರ್‌.ಸಿ. ದಾಖಲೆ, ಕೊರಿಯರ್ ಮಾಡುತ್ತಿರುವ ಬಗ್ಗೆ ಎಲ್ಲಾ ಅಸಲಿ ದಾಖಲೆ ಕಳಿಸಿರುವ ಬಗ್ಗೆ ನಂಬಿಸುತ್ತಾರೆ. ಆನ್‌ಲೈನ್ ನಲ್ಲಿ ಹಣ ಹಾಕಿಸಿಕೊಂಡು ಬಳಿಕ ಸ್ವಿಚ್‌ ಆಫ್‌ ಮಾಡಿಕೊಳ್ಳುತ್ತಾರೆ. ಭಾರತೀಯ ಸೇನೆ ಹೆಸರಿನಲ್ಲಿ ಪೋಸ್ಟ್ ಹಾಕಿ ವಂಚಿಸುವ ಜಾಲಕ್ಕೆ ಬೆಂಗಳೂರಿನಲ್ಲಿ ನೂರಾರು ಜನರು ಮೋಸ ಹೋಗಿದ್ದಾರೆ. ಲಕ್ಷ ಲಕ್ಷ ಹಣ ಬ್ಯಾಂಕ್ ಖಾತೆಗೆ ಹಾಕಿ ಕೈ ಸುಟ್ಟುಕೊಂಡಿದ್ದು, ಸಾಕಷ್ಟು ಕೇಸು ದಾಖಲಾಗಿವೆ. ಆದರೆ ಈವರೆಗೂ ಪೊಲೀಸರು ಸೈಬರ್ ಕಳ್ಳರ ಬಂಧನಕ್ಕೆ ಪೊಲೀಸರು ಮುಂದಾಗಿಲ್ಲ. ಸೈನಿಕರ ಹೆಸರಿನಲ್ಲಿ ಇತ್ತೀಚೆಗೆ ವಂಚನೆ ಮಾಡಿದ ಯುವಕನ ಸ್ಟೋರಿ ಇಲ್ಲಿದೆ ನೋಡಿ.

ಆನ್‌ಲೈನ್ ಪೋಸ್ಟ್

ಆನ್‌ಲೈನ್ ಪೋಸ್ಟ್

ಹಳೇ ವಸ್ತುಗಳನ್ನು ಮಾರಾಟ ಮಾಡವ ಕೆಲವು ಗುಂಪುಗಳು ಅಂತರ್ಜಾಲ ತಾಣದಲ್ಲಿವೆ. ಇಂತದ್ದೇ ತಾಣದಲ್ಲಿ ಇಂಡಿಯನ್ ಆರ್ಮಿಗೆ ಸೇರಿದ ವಿಕಾಸ್ ಪಟೇಲ್ ಹೆಸರಿನಲ್ಲಿ ಅಕ್ಸಿಸ್ ಬೈಕ್ ಮಾರಾಟದ ಬಗ್ಗೆ ಪೋಸ್ಟ್ ಹಾಕಿದ್ದರು. ಭಾರತೀಯ ಸೇನೆಗೆ ಸೇರಿದ ವಿಕಾಸ್ ಪಾಟೇಲ್ ತಾನು ಬೆಂಗಳೂರಿನಿಂದ ವಿಜಯವಾಡಕ್ಕೆ ವರ್ಗಾವಣೆಗೊಂಡಿದ್ದೇನೆ. ಹೀಗಾಗಿ ನನ್ನ ಹೊಸ ಬೈಕ್ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಕ್ಕಣಿ ಬರೆದು ಚಿತ್ರಗಳನ್ನು ಹಾಕಿದ್ದರು. ಆರ್ಮಿ ವ್ಯಕ್ತಿ ಬೈಕ್ ಮಾರಾಟ ಮಾಡುತ್ತಿದ್ದ ಪೋಸ್ಟ್ ನೋಡಿದ ಬೆಂಗಳೂರಿನ ಯುವಕ, ಅದನ್ನು ಖರೀದಿಸುವ ಸಲುವಾಗಿ ಅಂತರ್ಜಾಲದಲ್ಲಿ ಮಾತುಕತೆ ನಡೆಸಿದ್ದರು.

ನಂಬಿಕೆ ಹುಟ್ಟಿಸಿದ

ನಂಬಿಕೆ ಹುಟ್ಟಿಸಿದ

ಆನ್‌ಲೈನ್ ನಲ್ಲಿ ಚಾಟಿಂಗ್ ನಡೆಯುತ್ತಿದ್ದಂತೆ, ಮೊಬೈಲ್ ಸಂಪರ್ಕವೂ ನೀಡಿದ್ದ. ಬೆಂಗಳೂರಿನ ಯುವಕನ ಜತೆ ಮಾತನಾಡಿದ ವಿಕಾಸ್ ಪಟೇಲ್ , ತನ್ನ ಪತ್ನಿ ರೂಪಾ ಹೆಸರಿನಲ್ಲಿ ಬೈಕ್ ಯಿದ್ದು, ಬೆಂಗಳೂರಿನಲ್ಲೇ ನೋಂದಣಿಯಾಗಿದೆ. ಯಲಹಂಕದ ನ್ಯೂಟೌನ್ ನಲ್ಲಿ ವಾಸವಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ದಾಖಲೆಗಳನ್ನು ಸಹ ವಾಟ್ಸಪ್ ಮೂಲಕ ಹಂಚಿಕೊಂಡಿದ್ದಾರೆ. ಕೇವಲ ಹದಿನೆಂಟು ಸಾವಿರಕ್ಕೆ ಅಕ್ಸಿಸ್ ಬೈಕ್ ಕೊಡುವುದಾಗಿ ಹೇಳಿದ್ದಾರೆ. ವಿಕಾಸ್ ಪಟೇಲ್ ಹೆಸರಿನಲ್ಲಿ ದಾಖಲೆಗಳನ್ನು ನೋಡಿದ ಕೂಡಲೇ ಬೆಂಗಳೂರಿನ ಯುವಕನಿಗೆ ನಂಬಿಕೆ ಬಂದಿತ್ತು. ಹಣದ ತುರ್ತು ಅಗತ್ಯವಿದ್ದು ಮೂರು ಸಾವಿರ ರೂ. ಮುಂಗಡ ನೀಡುಂತೆ ಕೇಳಿದ್ದಾರೆ.

ಹಣ ಪಾವತಿ

ಹಣ ಪಾವತಿ

ಮೊದಲು ಮೂರು ಸಾವಿರ ರೂಪಾಯಿ ಪಡೆದುಕೊಂಡ ಬಳಿಕ ಇಂಡಿಯನ್ ಆರ್ಮಿ ಪಾರ್ಸಲ್ ವಿಭಾಗದಿಂದ ವಾಹನ ಡೆಲಿವರಿ ಕೊಡುತ್ತಿರುವ ರಶೀದಿಯನ್ನು ಬೆಂಗಳೂರಿನ ಯುವಕನಿಗೆ ವಾಟ್ಸಪ್ ಮೂಲಕ ಕಳಿಸಿದ್ದಾರೆ. ಇದೇ ಸಮಯಕ್ಕೆ ಕೊರಿಯರ್ ಕಂಪನಿ ಹೆಸರಿನಲ್ಲಿ ಅಪರಿಚಿತನೊಬ್ಬ ಮಾತನಾಡಿ, ನಿಮಗೆ ಪಾರ್ಸಲ್ ಬಂದಿದೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಯುವಕ ಮೊದಲು ಮೂರು ಸಾವಿರ ಪಾವತಿಸಿದ್ದಾನೆ. ಮರು ದಿನ ಹದಿಮೂರು ಸಾವಿರ ಕಳಿಸಿದ್ದಾರೆ. ವಾಹನ ಬಿಲ್ ಪಾವತಿಸಿದ ಬಳಿಕ ಮಿಲಟರಿ ನಿಯಮದ ಪ್ರಕಾರ ನೀವು ಸೆಕ್ಯುರಿಟಿ ಡೆಪಾಸಿಟ್ ಹದಿನೈದು ಸಾವಿರ ಕಳಿಸಬೇಕು ಎಂದು ಕೇಳಿದ್ದಾನೆ.

ಇಲ್ಲದಿದ್ದರೆ ಈಗಾಗಲೇ ಕೊಟ್ಟಿರುವ ಹದಿನೆಂಟು ಸಾವಿರಕ್ಕೆ ಬೈಕ್ ಕೊಡಲಿಕ್ಕೆ ಆಗಲ್ಲ ಎಂದು ಹೇಳಿದ್ದಾನೆ. ವಿಕಾಸ್ ಪಟೇಲ್ ಮಾತು ನಂಬಿ ಮತ್ತೆ ಬೆಂಗಳೂರಿನ ಯುವಕ ಮತ್ತೆ ಹದಿನೈದು ಸಾವಿರ ಪಾವತಿಸಿದ್ದಾನೆ. ಹೀಗೆ ಹಂತ ಹಂತವಾಗಿ 40 ಸಾವಿರ ರೂಪಾಯಿ ವಸೂಲಿ ಮಾಡಿದ್ದಾನೆ. ಹೀಗೆ ಭಾರತೀಯ ಸೇನೆಯ ಸೈನಿಕನ ಹೆಸರಿನಲ್ಲಿ 40 ಸಾವಿರ ಮೋಸ ಮಾಡಿ ಎರಡೇ ದಿನಕ್ಕೆ ಹಣ ಪಡೆದು ಸಂಪರ್ಕ ಕಡಿತಗೊಳಿಸಿದ್ದಾನೆ. ಎರಡು ದಿನದ ಬಳಿಕ ಮೋಸ ಹೋಗಿರುವ ಸಂಗತಿ ಗೊತ್ತಾಗಿದೆ. ಕೂಡಲೇ ಸಮೀಪದ ಬನಶಂಕರಿ ಪೊಲೀಸ್ ಠಾಣೆಗೆ ಬೆಂಗಳೂರಿನ ಯುವಕ ದೂರು ನೀಡಿದ್ದಾರೆ. ಅಲ್ಲದೇ ಗೂಗಲ್ ಪೇ ನಂಬರ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ಕೇಳಿದಾಗ ಉತ್ತರ ಭಾರತ ರಾಜ್ಯದಿಂದ ಬಂದಿರುವ ಮಾಹಿತಿ ಗೊತ್ತಾಗಿದೆ.

ನೂರಾರು ಜನರಿಗೆ ಮೋಸ

ನೂರಾರು ಜನರಿಗೆ ಮೋಸ

ಭಾರತೀಯ ಸೇನೆ ಸೈನಿಕರ ಹೆಸರಿನಲ್ಲಿ ಪೋಸ್ಟ್ ಹಾಕಿ ಮುಗ್ಧರನ್ನು ವಂಚಿಸಲಾಗುತ್ತಿದೆ. ಆನ್‌ಲೈ ನ್‌ ನಲ್ಲಿ ಅತಿ ಕಡಿಮೆ ಬೆಲೆಗೆ ಮಾರುವ ಉತ್ಪನ್ನಗಳ ಬಗ್ಗೆ ಜನರು ಜಾಗರೂಕರಾಗಿರಬೇಕು. ಈ ಕುರಿತು ಪ್ರತಿ ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ನೂರಾರು ದೂರುಗಳು ದಾಖಲಾಗುತ್ತಿವೆ. ಇನ್ನು ರಾಜ್ಯದ ಸ್ಥಿತಿ ಹೇಳುವಂತಿಲ್ಲ. ಕಡಿಮೆ ದುಡ್ಡಿಗೆ ವಾಹನ, ಟಿವಿ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ಸೈಬರ್ ಕ್ರಿಮಿನಲ್ ಗಳು ಜನರಿಗೆ ಮೋಸ ಮಾಡುತ್ತಿದ್ದಾರೆ. ನೂರಾರು ದೂರು ದಾಖಲಾದರೂ ಪೊಲೀಸರು ಮಾತ್ರ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಇತ್ತೀಚೆಗೆ ರಾಜ್ಯದಲ್ಲಿ ಆನ್‌ಲೈನ್ ತುರ್ತು ಸಾಲ ನೀಡುವ ಆಪ್‌ ಗಳ ಅಕ್ರಮ ಜಾಲ ಬೆಳಕಿಗೆ ಬಂದಿತ್ತು. ಇದೀಗ ಸೈನಿಕರ ಹೆಸರಿನಲ್ಲಿ ಮಾಡುತ್ತಿರುವ ಮೋಸದ ಜಾಲ ಇದಕ್ಕಿಂತಲೂ ದೊಡ್ಡದಾಗಿ ಬೆಳೆದು ನಿಂತಿದೆ. ಕಂಪ್ಯೂಟರ್ ಜ್ಞಾನ ಇದ್ದವರೇ ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಒಂದು ರೂಪಾಯಿಗೆ ಟಿವಿ.. ಪ್ರೊಸಿಸಿಂಗ್ ಶುಲ್ಕ ಐದು ಸಾವಿರ ಎಂದೇಳಿ ನಂಬಿಸಿ ಮೋಸ ಮಾಡಲಾಗುತ್ತಿದೆ. ಯಾರೂ ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಪಡೆಯಲು ಹೋಗಬಾರದು. ಆನ್‌ಲೈನ್ ಮಾರ್ಕೆಟ್ ಜಾಲತಾಣ ಗುಂಪುಗಳ ರಚನೆ ಉದ್ದೇಶವೇ ವಂಚನೆಯದ್ದಾಗಿದೆ ಎಂದು ಸೈಬರ್ ತಜ್ಞ ವಿಜಯ ಶಂಕರ್ ಕಿವಿ ಮಾತು ಹೇಳಿದ್ದಾರೆ.

English summary
The cyber cheats people in the name of Indian Army has come to light
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X