keyboard_backspace

ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿಗಾಗಿ ಸ್ಥಳೀಯರಿಗೆ ಪಾಕಿಸ್ತಾನದ ದಾಳ!?

Google Oneindia Kannada News

ಶ್ರೀನಗರ, ಅಕ್ಟೋಬರ್ 19: ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಾಯೋಜಿತ ಪ್ರತಿನಿಧಿಯಾಗಿ ಭಯೋತ್ಪಾದನಾ ಸಂಘಟನೆಗಳು ಕೆಲಸ ಮಾಡುತ್ತಿವೆ. ಕಳೆದ 14 ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ 11 ನಾಗರಿಕರನ್ನು ಹತ್ಯೆ ಮಾಡುವ ಮೂಲಕ ಆತಂಕಕಾರಿ ಸನ್ನಿವೇಶವನ್ನು ಸೃಷ್ಟಿಸುತ್ತಿವೆ.

ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ), ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮತ್ತು ಜೈಶ್-ಇ-ಮೊಹಮ್ಮದ್ (ಜೆಇಎಂ) ನಂತಹ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ಮುಖವಾಡ ಧರಿಸಿ ಕೆಲಸ ಮಾಡುತ್ತಿವೆ.

"ತಮ್ಮ ಕಾರ್ಯ ಸಾಧನೆಗೆ ಭಯೋತ್ಪಾದನಾ ಸಂಘಟನೆಗಳಿಗಿಂತ ಭಿನ್ನವಾಗಿ ಈ ಪ್ರತಿನಿಧಿಗಳು ಕೆಲಸ ಮಾಡುತ್ತಾರೆ. ಭಾರತದಲ್ಲಿ ಮಾತ್ರವಲ್ಲದೆ ಅಫ್ಘಾನಿಸ್ತಾನದಲ್ಲಿಯೂ ಪಾಕಿಸ್ತಾನ ಈ ರೀತಿಯ ಪ್ರತಿನಿಧಿಗಳನ್ನು ಅಳವಡಿಸಿಕೊಂಡ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದು, ಇದು ಹೆಚ್ಚು ಸುಲಭ ಮತ್ತು ಸುರಕ್ಷಿತ ಮಾರ್ಗ," ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ CRPFನಿಂದ ಮಹಿಳೆಯರ ತಪಾಸಣೆಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ CRPFನಿಂದ ಮಹಿಳೆಯರ ತಪಾಸಣೆ

ಜಮ್ಮು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವುದಕ್ಕೆ ಈ ಪ್ರತಿನಿಧಿಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳುವುದೇ ಸುಲಭ ಮಾರ್ಗ ಎಂದು ಪಾಕಿಸ್ತಾನ ಕಂಡು ಕೊಂಡಿದೆ. ಈ ಹಿನ್ನೆಲೆ ಸ್ಥಳೀಯರನ್ನೇ ಅಸ್ತ್ರವಾಗಿ ಬಳಸಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿರುವುದು ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಭಯೋತ್ಪಾದಕ ಕೃತ್ಯಕ್ಕೆ ಪ್ರತಿನಿಧಿಗಳೇಕೆ ಅಸ್ತ್ರ?

ಭಯೋತ್ಪಾದಕ ಕೃತ್ಯಕ್ಕೆ ಪ್ರತಿನಿಧಿಗಳೇಕೆ ಅಸ್ತ್ರ?

ಜಮ್ಮು-ಕಾಶ್ಮೀರದಲ್ಲಿ ಉಗ್ರ ಕೃತ್ಯಗಳನ್ನು ನಡೆಸುವುದಕ್ಕೆ ಪಾಕಿಸ್ತಾನ ಭಯೋತ್ಪಾದಕರು ಮತ್ತು ಉಗ್ರ ಸಂಘಟನೆಗಳ ಬದಲಿಗೆ ಈ ಸ್ಥಳೀಯರನ್ನೇ ಏಕೆ ಪ್ರತಿನಿಧಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೂ ಹಲವು ಕಾರಣಗಳಿವೆ.

* ದೊಡ್ಡ ದೊಡ್ಡ ಉಗ್ರ ಸಂಘಟನೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ
* ದೊಡ್ಡ ಸಂಘಟನೆಗಳಿಂದ ಉಗ್ರರನ್ನು ಕಳುಹಿಸಿ ಕೊಡುವ ಅಗತ್ಯವಿಲ್ಲ

* ಭಾರತದಲ್ಲಿ ಗಡಿ ನುಸುಳುವಿಕೆಯ ಅಪಾಯ ಮತ್ತು ಅನಿವಾರ್ಯತೆ ಎದುರಾಗುವುದಿಲ್ಲ

* ಭಾರತದ ಗಡಿ ನುಸುಳುವಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡುವ ಅಗತ್ಯವಿಲ್ಲ

* ಗಡಿ ನುಸುಳುವಿಕೆ ಸಂದರ್ಭದಲ್ಲಿ ಬೆಂಗಾವಲಾಗಿ ನಿಲ್ಲುವ ಅನಿವಾರ್ಯತೆ ಇಲ್ಲ

* ಭಯೋತ್ಪಾದಕರಿಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಅಗತ್ಯವಿಲ್ಲ

ಪಾಕಿಸ್ತಾನ ಪ್ರಾಯೋಜಿತ ಪ್ರತಿನಿಧಿಗಳ ಕಾರ್ಯವೈಖರಿ?

ಪಾಕಿಸ್ತಾನ ಪ್ರಾಯೋಜಿತ ಪ್ರತಿನಿಧಿಗಳ ಕಾರ್ಯವೈಖರಿ?

ಜಮ್ಮು ಕಾಶ್ಮೀರದಲ್ಲಿ ಯುವಕರೊಂದಿಗೆ ಸಂಪರ್ಕದಲ್ಲಿರುವ ಪಾಕಿಸ್ತಾನ ಪ್ರಾಯೋಜಿತ ಪ್ರತಿನಿಧಿಗಳು ಸ್ಥಳೀಯ ಪಿಸ್ತೂಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಬಳಸುತ್ತಾರೆ. ಗಡಿ ನುಸುಳುವಿಕೆ ಅಪಾಯವಿಲ್ಲದೇ ಜಿಲ್ಲಾ ಕಮಾಂಡರ್ ನೇತೃತ್ವದಲ್ಲಿ ಸ್ಥಳೀಯ ಯುವಕರಿಗೆ ದಾಳಿಗೆ ಸಜ್ಜುಗೊಳ್ಳುವ ರೀತಿಯಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಏಕೆಂದರೆ ಸ್ಥಳೀಯ ಯುವಕರು ತಮ್ಮ ಸುತ್ತಮುತ್ತಲಿನ ಹಾಗೂ ಊರುಗಳು ಮತ್ತು ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ.

ನಾಗರಿಕರ ಹತ್ಯೆಯ ಹಿಂದೆ ಪ್ರತಿನಿಧಿ ಸಂಘಟನೆ ಕೈವಾಡ

ನಾಗರಿಕರ ಹತ್ಯೆಯ ಹಿಂದೆ ಪ್ರತಿನಿಧಿ ಸಂಘಟನೆ ಕೈವಾಡ

ಶನಿವಾರ ಬಿಹಾರ ಮೂಲಕ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರನ್ನು ಉಗ್ರರು ಕೊಂದು ಹಾಕಿದ್ದಾರೆ. ಭಾನುವಾರ ಬಿಹಾರ ಮೂಲದ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರು ಕಾರ್ಮಿಕರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿ ಹೊಡೆದುರುಳಿಸಲಾಗಿತ್ತು. ಇಬ್ಬರು ಬಿಹಾರಿ ಕಾರ್ಮಿಕರ ಹತ್ಯೆಯ ಹಿಂದೆ ಯುನೈಟೆಡ್ ಲಿಬರೇಶನ್ ಫ್ರಂಟ್ (ಯುಎಲ್ಎಫ್) ಹಾಗೂ ಶ್ರೀನಗರದಲ್ಲಿ ಹೆಸರಾಂತ ಔಷಧಿಕಾರ ಮಖನ್ ಲಾಲ್ ಬಿಂದ್ರೂ ಕೊಲೆಯ ಹೊಣೆಯನ್ನು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ನಂತಹ ಪ್ರತಿನಿಧಿ ಸಂಘಟನೆಗಳು ವಹಿಸಿಕೊಂಡಿದ್ದವು. ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯವರನ್ನು ಕೊಲ್ಲುವ ಜವಾಬ್ದಾರಿಯನ್ನು ಪಿಎಎಫ್‌ಎಫ್ ವಹಿಸಿಕೊಂಡಿದ್ದು, ಇದನ್ನು ಇನ್ನೂ ಪರಿಶೀಲಿಸಬೇಕಿದೆ.

ಸ್ಥಳೀಯ ಗ್ರಾಮಗಳಿಂದ ಯುವಕರ ನೇಮಕಾತಿ

ಸ್ಥಳೀಯ ಗ್ರಾಮಗಳಿಂದ ಯುವಕರ ನೇಮಕಾತಿ

"ಪಾಕಿಸ್ತಾನವು ಈ ಪ್ರಾಕ್ಸಿಗಳ ಮೂಲಕ ಹೋರಾಡುವುದು ತುಂಬಾ ಸುಲಭ. ಭಯೋತ್ಪಾದಕರು ತಮ್ಮ ಉಡುಪಿನಲ್ಲಿ ಅಡಗಿಸಬಹುದಾದ ಒಂದು ಸಣ್ಣ ಪಿಸ್ತೂಲ್ ನೀಡಿ, ಆನ್‌ಲೈನ್ ತರಬೇತಿ ನೀಡಿ ಮತ್ತು ಅವರ ಸ್ಥಳೀಯ ಜ್ಞಾನ ಮತ್ತು ನೆಟ್‌ವರ್ಕ್ ಬಳಸಿ ದಾಳಿ ನಡೆಸಬಹುದು. ಇಂಥ ಕೃತ್ಯಗಳಿಗೆ ಎಲ್‌ಇಟಿ, ಜೆಇಎಂ, ಎಚ್‌ಎಂ ತರಬೇತಿ, ಆಯುಧಗಳು ಅಥವಾ ಏನನ್ನೂ ನೀಡುವ ಅಗತ್ಯವಿಲ್ಲ. ಸ್ಥಳೀಯ ಗ್ರಾಮಗಳಿಂದ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ಅವರನ್ನು ಸೇನೆ ಹೊಡೆದುರುಳಿಸಿದರೂ ಅದು ಸ್ಥಳೀಯ ಗ್ರಾಮಗಳಿಗೆ ನಷ್ಟವಾಗುತ್ತದೆ, "ಎಂದು ಮಾಜಿ ಐಜಿ (ಕೇಂದ್ರ ಮೀಸಲು ಪೊಲೀಸ್ ಪಡೆ) ಸಂಸದ ನಥಾನಾಯಲ್ ತಿಳಿಸಿದ್ದಾರೆ.

ಟಿಆರ್ಎಫ್ ಸಂಘಟನೆ ಬಗ್ಗೆ ತಿಳಿಯಿರಿ

ಟಿಆರ್ಎಫ್ ಸಂಘಟನೆ ಬಗ್ಗೆ ತಿಳಿಯಿರಿ

ಪಾಕಿಸ್ತಾನದಲ್ಲಿ ನೆಲೆಸಿರುವ ಮೊಹಮ್ಮದ್ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಇ-ತೊಯ್ಬಾದ ಮುಖ್ಯ ಪ್ರತಿನಿಧಿ ಸಂಘಟನೆಯಾಗಿ ಟಿಆರ್ಎಫ್ ಗುರುತಿಸಿಕೊಂಡಿದೆ. ಎಲ್ಲಾ 28 ಉನ್ನತ ಗುಪ್ತಚರ ಮತ್ತು ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಂಡ ಗುಪ್ತಚರ ಸಂಸ್ಥೆಗಳ ಮಾಹಿತಿಯ ಪ್ರಕಾರ, ಟಿಆರ್‌ಎಫ್ 2019 ರ ಸೆಪ್ಟೆಂಬರ್‌ನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. ಪಾಕಿಸ್ತಾನದ ಹಮ್ಜಾ ಈ ಸಂಘಟನೆ ಮುಖ್ಯಸ್ಥರಾಗಿನಾಗಿದ್ದಾನೆ. ಈ ಮೊದಲು, ಜಮ್ಮು ಮತ್ತು ಕಾಶ್ಮೀರದಲ್ಲಿ, ಕಾಕಪೋರಾದ ಇರ್ಷಾದ್ ಅಹ್ಮದ್ ದಾರ್ ಟಿಆರ್‌ಎಫ್‌ನ ಕಾಶ್ಮೀರ ಮುಖ್ಯಸ್ಥರಾಗಿದ್ದರು ಮತ್ತು ಅಬು ಅನಸ್ ಅವರು ಪುಲ್ವಾಮಾದ ಮೊದಲ ಜಿಲ್ಲಾ ಕಮಾಂಡರ್ ಆಗಿದ್ದನು.

ಇತರ ಭಯೋತ್ಪಾದಕರೊಂದಿಗೆ ಇಬ್ಬರು ಜೂನ್ 2019 ರಲ್ಲಿ ಎಲ್ಇಟಿಗೆ ಸೇರಿಕೊಂಡರು ಮತ್ತು ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಯಿತು. ಆದರೆ ಒಂದು ವರ್ಷದೊಳಗೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರನ್ನು ಹೊಡೆದುರುಳಿಸಲಾಗಿತ್ತು. ಮೂಲಗಳ ಪ್ರಕಾರ, ಅಬ್ಬಾಸ್ ಶೇಖ್, ಹಳೆಯ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದು, 1996 ರಲ್ಲಿ ಎಲ್‌ಇಟಿಗೆ ಸೇರಿಕೊಂಡರು. ಎರಡು ಬಾರಿ ಬಂಧನಕ್ಕೊಳಗಾದ ಅವನನ್ನು ಟಿಆರ್‌ಎಫ್ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಆದರೆ ಭದ್ರತಾ ಪಡೆಗಳು ಆತನನ್ನು ಆಗಸ್ಟ್ 23, 2021ರಂದು ತೆಗೆದುಹಾಕಿತು.

ಯುಎಲ್ಎಫ್ ಸಂಘಟನೆ ಬಗ್ಗೆ ತಿಳಿಯಿರಿ

ಯುಎಲ್ಎಫ್ ಸಂಘಟನೆ ಬಗ್ಗೆ ತಿಳಿಯಿರಿ

ಯುಎಲ್‌ಎಫ್ ಸಂಘಟನೆಯು ಅಲ್-ಬದರ್‌ನ ಪ್ರತಿನಿಧಿ ಸಂಘಟನೆಯಾಗಿದ್ದು ಪಾಕಿಸ್ತಾನದಲ್ಲಿ ನೆಲೆಸಿರುವ ಯೂಸುಫ್ ಬಲೂಚ್ ಇತರ ಎರಡು ಸಂಘಟನೆಗಳ ಮುಖ್ಯಸ್ಥ ಎನಿಸಿಕೊಂಡಿದ್ದಾನೆ. ಕಾಶ್ಮೀರದಲ್ಲಿ 11 ನಾಗರಿಕರನ್ನು ಕೊಲ್ಲುವ ಜವಾಬ್ದಾರಿ ತೆಗೆದುಕೊಂಡ ಯುಎಲ್‌ಎಫ್ ಅನ್ನು ಅಲ್ ಬದ್ರ್ ಕಮಾಂಡರ್ ಅಂಜುಮ್ ಗುಲ್ಜಾರ್ ಆರಂಭಿಸಿದ್ದನು. ಆದರೆ ಯುಎಲ್‌ಎಫ್‌ನ ಪಾಕಿಸ್ತಾನ ಮೂಲದ ಸ್ನಾತಕೋತ್ತರ ಪದವಿ ಪಡೆದ ಇನ್ನೊಬ್ಬನನ್ನು ಮುಖ್ಯಸ್ಥನಾಗಿ ನೇಮಿಸಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ತಿಳಿದುಕೊಂಡಿವೆ.

ಡಿಸೆಂಬರ್ 2020 ರಲ್ಲಿ ಸಂಸ್ಥೆಗೆ ಸೇರುವಂತೆ ಯುವಕರನ್ನು ಸೆಳೆಯಲು ಇದು ತನ್ನ ಟೆಲಿಗ್ರಾಂ ಚಾನೆಲ್ ಅನ್ನು ಆರಂಭಿಸಿತು. ಯುಎಲ್ಎಫ್ ಕಾಶ್ಮೀರದಿಂದ ಯುವಕರನ್ನು ನೇಮಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಲಷ್ಕರ್-ಇ-ಮುಸ್ತಫಾ ಸಂಘಟನೆ ಬಗ್ಗೆ ತಿಳಿಯಿರಿ

ಲಷ್ಕರ್-ಇ-ಮುಸ್ತಫಾ ಸಂಘಟನೆ ಬಗ್ಗೆ ತಿಳಿಯಿರಿ

ಲಷ್ಕರ್-ಇ-ಮುಸ್ತಫಾ ಎಂಬುದು ಜೈಶ್-ಎ-ಮೊಹಮ್ಮದ್ ನ ಪ್ರತಿನಿಧಿ ಸಂಘಟನೆ,ಯಾಗಿದ್ದು, ಅಬು ಇಸ್ಮಾಯಿಲ್ ಅಕ್ಟೋಬರ್ 2020ರಲ್ಲಿ ಇದನ್ನು ಆರಂಭಿಸಿದನು. ಶೋಪಿಯಾನ್‌ನ ಹಿದಾಯತುಲ್ಲಾ ಮಲಿಕ್ ಕಾಶ್ಮೀರದಲ್ಲಿ ಅದರ ಮೊದಲ ಕಮಾಂಡರ್ ಆಗಿದ್ದನು. ಜಮ್ಮು ಮತ್ತು ಕಾಶ್ಮೀರ ಪೊಲೀಸರು 2021ರ ಫೆಬ್ರವರಿಯಲ್ಲಿ ಮಲಿಕ್ ನನ್ನು ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಬಂಧಿಸಿದ್ದರು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಆತನ ಜೊತೆಗೆ ಇತರೆ ಒಂಬತ್ತು ಮಂದಿ ವಿರುದ್ಧ ಆಗಸ್ಟ್‌ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿತು.

ಪೀಪಲ್ಸ್ ಫ್ಯಾಸಿಸ್ಟ್ ವಿರೋಧಿ ಫ್ರಂಟ್ ಸಂಘಟನೆ

ಪೀಪಲ್ಸ್ ಫ್ಯಾಸಿಸ್ಟ್ ವಿರೋಧಿ ಫ್ರಂಟ್ ಸಂಘಟನೆ

ಭದ್ರತಾ ಪಡೆಗಳು ಪಿಎಎಫ್‌ಎಫ್‌ನ ಬಗ್ಗೆ ಸೀಮಿತ ಮಾಹಿತಿಯನ್ನು ಹೊಂದಿವೆ. ಇದು 2019 ರಲ್ಲಿ ಆರಂಭವಾಯಿತು ಮತ್ತು 2020 ರವರೆಗೆ ಇದು TRF ಮತ್ತು LeT ನ ಮಾಧ್ಯಮ ಚಾನೆಲ್ ಹೊರತುಪಡಿಸಿ ಬೇರೇನೂ ಆಗಿರಲಿಲ್ಲ. ಭದ್ರತಾ ಪಡೆಗಳನ್ನು ಗೊಂದಲಕ್ಕೀಡುಮಾಡಲು ಇದನ್ನು ರಚಿಸಲಾಗಿದೆ ಎಂದು ಹೇಳಿದರು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಟಿಆರ್‌ಎಫ್ ಮತ್ತು ಎಲ್‌ಇಟಿ ಭಯೋತ್ಪಾದಕರು ಹೇಳಿಕೆಗಳನ್ನು ಬಿಡುಗಡೆ ಮಾಡಲು ಮತ್ತು ಕಾಶ್ಮೀರದ ಯುವಕರಿಗೆ ಆನ್‌ಲೈನ್ ತರಬೇತಿ ನೀಡಲು ಈ ಸಂಘಟನೆ ಬಳಕೆ ಆಗುತ್ತಿದೆ. PAFF ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ ನಂತರ ಭಾರತದಲ್ಲಿ ನಾಗರಿಕರನ್ನು ಗುರಿಯಾಗಿಸಲು ತನ್ನ ಸಿಬ್ಬಂದಿಗೆ ಸಂದೇಶ ಕಳುಹಿಸುತ್ತಿದೆ.

ಕಾಶ್ಮೀರ ಟೈಗರ್ ಸಂಘಟನೆ ಬಗ್ಗೆ ತಿಳಿಯಿರಿ

ಕಾಶ್ಮೀರ ಟೈಗರ್ ಸಂಘಟನೆ ಬಗ್ಗೆ ತಿಳಿಯಿರಿ

ಕಾಶ್ಮೀರಿ ಟೈಗರ್ ಎಂಬುದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಯೀದ್ ಸಲಾವುದ್ದೀನ್ ನೇತೃತ್ವದ ಹಿಜ್ಬುಲ್ ಮುಜಾಹಿದ್ದೀನ್ ನ ಪ್ರತಿನಿಧಿ ಸಂಘಟನೆಯಾಗಿದೆ. ಈ ಭಯೋತ್ಪಾದಕ ಸಂಘಟನೆಯ ಬಗ್ಗೆ ಏಜೆನ್ಸಿಗಳು ಸೀಮಿತ ಮಾಹಿತಿಯನ್ನು ಹೊಂದಿದ್ದು, ಅದರ ಕಮಾಂಡರ್ ಅನ್ನು ಕೂಡ ಇತ್ತೀಚೆಗೆ ನೇಮಕ ಮಾಡಲಾಗಿದೆ. ಇದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಹೊಸ ಪ್ರತಿನಿಧಿ ಸಂಘಟನೆಯಾಗಿದೆ.

English summary
Pakistan-Sponsored Terror Proxies With Basic Weapons Emerge as Biggest Threat to Kashmir.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X