• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನಕ್ಕೆ ಆರಂಭಿಕ ದರದ ವಿಶೇಷ ಕೊಡುಗೆ

By Prasad
|

ಅಮೆರಿಕಾದ ಪಶ್ಚಿಮ ಕರಾವಳಿಯಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ನಡೆಯಲಿರುವ 8ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆಗಳು ಸಾಗುತ್ತಿರುವಂತೆ, ನೋಂದಾವಣಿಯೂ ಸಾಕಷ್ಟು ವೇಗದ ಗತಿಯಲ್ಲಿ ಸಾಗುತ್ತಿದೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಮೂರು ದಿನಗಳ ಜಾಗತಿಕ ಕನ್ನಡ ಸಮ್ಮೇಳನ ಜರುಗಲಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಈ ಸಮ್ಮೇಳನದ ಬ್ರಾಂಡ್ ಅಂಡಾಸಡರ್ ಆಗಿದ್ದು, ಸ್ಯಾನ್ ಹೋಸೆ ನಗರದ ಪ್ರತಿಷ್ಠಿತ ಮೆಕೆನ್ರಿ ಸಭಾಂಗಣದಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆಯಲಿರುವ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ನೋಂದಣಿ ಪ್ರಕ್ರಿಯೆಯನ್ನು ಸಂಕ್ರಾಂತಿಯ ಶುಭದಿನ ಜನವರಿ 14ರಿಂದ ಆರಂಭಿಸಲಾಯಿತು.

ಪ್ರತಿ ಸಮ್ಮೇಳನದಂತೆ ಮೊದಲು ನೋಂದಾವಣಿ ಮಾಡಿಕೊಂಡವರಿಗೆ ಭರ್ಜರಿ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಆರಂಭಿಕ ಆಹ್ವಾನದ ನೋಂದಾವಣಿ ಮಾರ್ಚ್ 1ನೇ ತಾರೀಖಿನಂದು ಕೊನೆಗೊಳ್ಳುತ್ತಿದ್ದು, ಈ ಅವಧಿಯೊಳು ನೋಂದಾಯಿಸಿಕೊಂಡರು ಇದರ ಲಾಭ ಪಡೆಯಬಹುದಾಗಿದೆ. ಕೇವಲ 159 ಡಾಲರ್ ನೀಡಿ ವಯಸ್ಕರು ಮತ್ತು ಕೇವಲ 99 ಡಾಲರ್ ನೀಡಿ ಮಕ್ಕಳು ನೋಂದಾಯಿಸಿಕೊಳ್ಳಬಹುದು.

ಆರಂಭಿಕ ಆಹ್ವಾನವನ್ನು ಪಡೆದವರು ಬಿಸಿನೆಸ್ ಫೋರಂನಂಥ ಕೆಲವೊಂದು ಕಾರ್ಯಕ್ರಮಗಳನ್ನು ಹೊರತುಪಡಿಸಿ, ಮೂರು ದಿನಗಳ ಕಾಲ ಎಲ್ಲ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಜೊತೆಗೆ ಸುಖ್ರಾಸ ಭೋಜನವನ್ನೂ ಸವಿಯಬಹುದು. ಇದರಲ್ಲಿ ವೈಯಕ್ತಿಕ, ಕೌಟುಂಬಿಕ, ಟಿಕೆಟ್ ಇರುವಂಥ ಕಾರ್ಯಕ್ರಮ ಮತ್ತು ದೇಣಿಗೆ ನೀಡುವವರ ಆಫರುಗಳು ಪ್ರತ್ಯೇಕವಾಗಿವೆ. [ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]

ಸಂಚಾಲಕ ಸುರೇಶ್ ಬಾಬು ಹೇಳುವಂತೆ, "ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಲು ಬಯಸುವ ಕನ್ನಡಿಗರೆಲ್ಲರಿಗೂ ನಮ್ಮ ಸಮಿತಿಯು ಅತ್ಯಂತ ಆಕರ್ಷಕ ಪ್ಯಾಕೇಜ್ ಗಳನ್ನು ತಯಾರಿಸುವಲ್ಲಿ ಬಹಳ ಮುತುವರ್ಜಿ ವಹಿಸಿ ಕೆಲಸ ಮಾಡಿ, ವಿಶೇಷ ಪಾರಿವಾರಿಕ ಹಾಗೂ ವೈಯಕ್ತಿಕ ದರಗಳನ್ನು ನಿಗದಿಪಡಿಸಿದ್ದಾರೆ. ಇವು ಅಮೇರಿಕದಲ್ಲಿರುವ ಹಾಗೂ ಹೊರನಾಡಿನ ಕನ್ನಡಿಗರೆಲ್ಲರನ್ನೂ ಆಕರ್ಷಿಸುವುದು ಖಂಡಿತ. ಅದರಲ್ಲೂ ನಮ್ಮ 'ಆರಂಭಿಕ ವಿಶೇಷ ದರ'ಗಳಂತೂ ಸಮ್ಮೇಳನ ಹಾಗೂ ವಸತಿ ಇವೆರಡರ ನೋಂದಣಿಗೂ ಬಹಳ ಆಕರ್ಷಕವಾಗಿವೆ.

ಇವುಗಳ ಜೊತೆಗೆ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಇಚ್ಛಿಸುವವರಿಗೋಸ್ಕರ ನಾವು ಹಲವಾರು ಅನುಕೂಲಕರ 'ಟ್ರಾವೆಲ್ ಪ್ಯಾಕೇಜ್'ಗಳನ್ನೂ ಸಹ ತಯಾರಿಸಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಈ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಮರೆಯಲಾಗದ ಮಧುರ ಅನುಭವವಾಗಿ ಕಟ್ಟಿಕೊಡಲು ಉತ್ಸುಕರಾಗಿದ್ದೇವೆ ಎಂದು ಸುರೇಶ್ ಬಾಬು ಅವರು ಒನ್ಇಂಡಿಯಾ ಕನ್ನಡಕ್ಕೆ ಹೇಳಿದರು.

English summary
Registration for AKKA WKC 2014 : 8th Kannada World Conference - San Francisco Bay Area has attractive individual, family and donor packages. Hurry up! The early bird registration will end on March 1st, 2014. Conference will be held from August 29 to 31. Actor Puneeth Rajkumar is the brand ambassador of the mega Kannada event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X