• search

ರೈತನಿಗೆ ನಮೋನಮಃ : ನ್ಯೂಜೆರ್ಸಿ ಕನ್ನಡಿಗರಿಂದ ಅನ್ನದಾತನ ಸ್ಮರಣೆ

By ರಾಘವೇಂದ್ರ ಕುಂದಲಗುರ್ಕಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ವಿಜೃಂಭಣೆಯಿಂದ ಜರುಗಿದ ಒಂಭತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಲವಾರು ಮನರಂಜನಾತ್ಮಕ, ಕ್ರೀಡಾತ್ಮಕ ಕಾರ್ಯಕ್ರಮಗಳ ಜೊತೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ರೈತನ ಸ್ಮರಣೆಯ ನೃತ್ಯರೂಪಕ 'ರೈತ ನಿನಗೆ ನಮೋನಮಃ'.

  ಇದು ರೈತನ ದೈನಂದಿನ ಜೀವನವನ್ನು ಸಹಸ್ರಾರು ಜನರಿಗೆ ಮನಮುಟ್ಟುವಂತೆ ಮಾಡಿ, ಅವನ ಜೀವನದ ಆಗುಹೋಗುಗಳನ್ನು ನಮ್ಮ ಜೀವನದ ಕನ್ನಡಿಯಲ್ಲಿ ನೋಡುವಂತೆ ಮಾಡಲು ಸಂಪೂರ್ಣ ಯಶಸ್ವಿಯಾಯಿತು. ಈ ನೃತ್ಯರೂಪಕವನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಲಾಯಿತು. ['ಕನ್ನಡಿಗರ ಸಹನೆ ಪರೀಕ್ಷೆ ಮಾಡಬೇಡಿ, ಎಚ್ಚರಿಕೆ']

  Raitha ninage Namo Namaha, Dance drama by Brindavana, New Jersey

  ನೂರಾರು ರೈತರ ಆತ್ಮಹತ್ಯೆಯ ಕಥೆಗಳನ್ನು ಕೇಳಿರುವ ನಮಗೆ, ಅವರ ದುಃಖ-ದುಮ್ಮಾನ ಹಂಚಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸುವ ಕಥಾಹಂದರ ಹೊಂದಿತ್ತು ಈ ರೂಪಕ.

  ವರ್ಷದ ವಿವಿಧ ಋತುಗಳಲ್ಲಿ ಸಂತೋಷ ಹಂಚುವ ರೀತಿ, ಜಾತ್ರೆಯ ಸಂಭ್ರಮ, ಬಾರದ ಮಳೆಯಿಂದ ಆಗುವ ಬರ, ಅದರಿಂದ ಬೆಳೆ ಹಾಳಾಗಿ ಆತ್ಮಹತ್ಯೆಗೆ ಶರಣಾಗುರುವ ರೈತ, ಕಷ್ಟ ಬಂದಾಗ ಯಾವ ರೀತಿ ಎದುರಿಸಬೇಕು ಎಂದು ತೋರುವ ರೈತಾಪಿ ಜನರ ಜೀವನವನ್ನು ಮನಮೋಹಕವಾಗಿ ದೃಶ್ಯರೂಪಕದಲ್ಲಿ ಬೃಂದಾವನ ಕನ್ನಡ ಕೂಟದವರು ಪ್ರದರ್ಶಿಸಿದರು. [ರಾಕ್ಷಸಿ ಅಂದರೆ ಜಯಲಲಿತಾ, ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ]

  Raitha ninage Namo Namaha, Dance drama by Brindavana, New Jersey

  ಶಿವ ಶರಣರ ವಚನದ ಪ್ರಾರ್ಥನೆಯ ನೃತ್ಯದೊಂದಿಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮ, ಮಾಯದಂಥಾ ಮಳೆ ಬಂತಣ್ಣ, ಘಲ್ಲು-ಘಲ್ಲೆನುತ ಕನ್ನಡದ ಜನಪದ ಹಾಡುಗಳಿಗೆ ಹಲವಾರು ನೃತ್ಯಗಾರರು ನೃತ್ಯ ಪ್ರದರ್ಶನ ಮಾಡಿದರು.

  ರೈತಾಪಿ ಜನರ ಸಂಭ್ರಮದ ಸುಗ್ಗಿ ಸಮಯದ ನಂತರ ಜಾತ್ರೆಯ ಸನ್ನಿವೇಶಗಳು ಗರತಿಯರ ಮನೋಜ್ಞ ಕಂಸಾಳೆ ನೃತ್ಯ.. ಬಾರದ ಮಳೆಗೆ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ" ಕವನಕ್ಕೆ ಮನಕರಗಿಸುವ ನೃತ್ಯ ಮುಂತಾದ ಹಲವು ನೃತ್ಯಗಳು ಬಹಳ ಕಾಲ ನೆನಪಿನಲ್ಲಿರುವಂತಹದು. [ಉಮಾಶ್ರೀ ಮೇಡಂ, ನೀವು ಕಲಾವಿದರಿಗೆ ಮಾಡಿದ ಅಪಮಾನ ಸರಿಯೆ?
  ]

  Raitha ninage Namo Namaha, Dance drama by Brindavana, New Jersey

  ಅಂತ್ಯದಲ್ಲಿ ವಿವಿಧ ರೀತಿಯ ವೃತ್ತಿಗಾರರು ಬಂದು ರೈತನಿಗೆ ತಮ್ಮ ಪ್ರಣಾಮಗಳ ಮೂಲಕ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುವ ದೃಶ್ಯ ಸಮಯೋಜಿತವಾಗಿತ್ತು.. "ಅಕ್ಕ"ದಲ್ಲಿ ಅನ್ನದಾತನ ಸ್ಮರಣೆ, ಸಮ್ಮೇಳನ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದಿತು.

  ನ್ಯೂ ಜೆರ್ಸಿ ಬೃಂದಾವನ ಕನ್ನಡ ಸಂಘದ ಸದಸ್ಯರಿಂದ ನಡೆದ ಈ ಕಾರ್ಯಕ್ರಮ ಯಾವುದೇ ವೃತ್ತಿಪರ ಕಲಾವಿದರಿಗೂ ಕಡಿಮೆಯಿಲ್ಲದೆ ಈ ರೂಪಕವನ್ನು ನಿರೂಪಿಸಿ, ನೆರೆದ ಅಭಿಮಾನಿಗಳ ಭಾರೀ ಕರತಾಡನಕ್ಕೆ ಭಾಜನರಾದರು. ವಿದ್ವಾನ್ ಕೃಷ್ಣ ಪ್ರಸಾದ್ ಮುಂತಾದವರ ಪ್ರಶಂಶೆಗೆ ಪಾತ್ರರಾದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Raitha ninage Namo Namaha. A unique dance drama was presented by Brindavana Kannada Koota of New Jersey at 9th AKKA World Kannada Conference, held in Atlantic City from September 2 to 4. The farmer was remembered in a well presented ballet.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more