ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ 9 ಮತ್ತು 10 ರಂದು ನೈರೋಬಿಯಲ್ಲಿ 6ನೇ ನಾವಿಕೋತ್ಸವ

By ಸಂಜೋತಾ ಪುರೋಹಿತ
|
Google Oneindia Kannada News

6ನೇ ನಾವಿಕ ನಾವಿಕೋತ್ಸವವು 2022 ರ ಸೆಪ್ಟೆಂಬರ್ 9 ಮತ್ತು 10 ರಂದು ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿದೆ. ಅಮೆರಿಕ ಮತ್ತು ಕೀನ್ಯಾದ ಕನ್ನಡ ಸಂಘಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಲದ ಸಮ್ಮೇಳನ ಅನೇಕ 'ಮೊದಲ ಸಲ' ವೈಶಿಷ್ಟ್ಯಗಳೊಂದಿಗೆ ಸಿದ್ಧವಾಗುತ್ತಿದೆ.

ಸಾಗರದಾಚೆ ಸಾವಿರಾರು ಮೈಲುಗಳ ದೂರದಲ್ಲಿದ್ದರೂ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡತನವನ್ನು ಗಟ್ಟಿಗೊಳಿಸಲು ಟೊಂಕ ಕಟ್ಟಿ ನಿಂತಿರುವ ಇಲ್ಲಿನ ಅನೇಕ ಉತ್ಸಾಹಿ ಕನ್ನಡಿಗರು, ಅಮೆರಿಕ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ 2 ವರ್ಷಗಳಿಗೊಮ್ಮೆ ಸಮ್ಮೇಳನವನ್ನು ಆಯೋಜಿಸುತ್ತಾರೆ.

ಈ ಸಲದ ಸಮ್ಮೇಳನದ ಅಧ್ಯಕ್ಷತೆಯನ್ನು ಮಂಜುನಾಥ ರಾವ್ ಅವರು ವಹಿಸಿಕೊಂಡಿದ್ದು ರವಿಕಿರಣ್ ಬೆಳವಾಡಿ ಸಂಚಾಲಕರಾಗಿದ್ದಾರೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಕಳೆದೆರಡು ವರ್ಷಗಳಿಂದ ವರ್ಚುವಲ್ ಆಗಿ ನಡೆಯುತ್ತಿದ್ದ ನಾವಿಕ ಸಮ್ಮೇಳನ ಈ ಸಲ ಮತ್ತೆ ಎಂದಿನಂತೆ ಸಮಾವೇಶಗೊಳ್ಳಲಿದೆ.

ಕಳೆದ ವರ್ಷ 3D ಲೈವ್ ನೇರಪ್ರಸಾರ ಮಾಡಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದ ನಾವಿಕ ವರ್ಚುವಲ್ ಸಮ್ಮೇಳನವು ಈ ವರ್ಷ ಮಗದೊಂದು ಯಶಸ್ವಿ ಕಾರ್ಯಕ್ರಮಕ್ಕೆ ಸಜ್ಜುಗೊಳ್ಳುತ್ತಿದೆ.

Navika 6th World Kannada Conference in Nairobi, preparation are in full swing

ಕರ್ನಾಟಕದಿಂದ ಖ್ಯಾತ ಕಲಾವಿದರು ಕೀನ್ಯಾಗೆ ಆಗಮಿಸಲಿದ್ದು ಸಮ್ಮೇಳನದಲ್ಲಿ ಲೈವ್ ಆರ್ಕೆಸ್ಟ್ರಾ ನೀಡಲಿದ್ದಾರೆ. ಇದರ ಜೊತೆಗೆ ಹಲವು ಚರ್ಚಾ ವೇದಿಕೆಗಳು, ಅಮೆರಿಕ ಮತ್ತು ಕೀನ್ಯಾ ಕನ್ನಡ ಕೂಟಗಳಿಂದ ವಿಧ ವಿಧವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಅಮೆರಿಕದಿಂದ ಕೀನ್ಯಾಕ್ಕೆ ಪ್ರಯಾಣಿಸಲಿರುವ ನಾವಿಕ ತಂಡ ಈಗಾಗಾಲೇ ಅದಕ್ಕೆ ಬೇಕಾದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಈ ಸಮ್ಮೇಳನಕ್ಕೆ ಸ್ಮರಣ ಸಂಚಿಕೆಯನ್ನು ತಯಾರಿಸುವ ನಿಟ್ಟಿನಲ್ಲಿ ನಾವಿಕ ಬಳಗ ಲೇಖನಗಳನ್ನು ಆಹ್ವಾನಿಸುತ್ತಿದೆ. ವಿಚಾರ, ವಿನೋದ ಮತ್ತು ವಿನಿಮಯ ಎಂಬ ವಿಷಯದ (motto) ಅಡಿಯಲ್ಲಿ ಈ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳು ರೂಪಗೊಳ್ಳುತ್ತಿವೆ.

Navika 6th World Kannada Conference in Nairobi, preparation are in full swing

ನಿಮ್ಮ ಲೇಖನಗಳನ್ನು ಕಳುಹಿಸಿ
ನೀವು ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರಾಗಿದ್ದರೆ, ಕತೆ ಕವನ ಲೇಖನಗಳನ್ನು ಬರೆಯುವವರಾಗಿದ್ದಲ್ಲಿ ದಯವಿಟ್ಟು ನಿಮ್ಮ ಲೇಖನಗಳನ್ನು ಕಳುಹಿಸಿ. ನೀವು ನೋಡಿದ ಪ್ರೇಕ್ಷಣೀಯ ಸ್ಥಳದ ಬಗ್ಗೆ, ನಿಮ್ಮ ನೆಚ್ಚಿನ ವಿಹಾರದ ಬಗ್ಗೆ ಅಥವಾ ನಿಮ್ಮ ಅನುಭವಗಳ ಬಗ್ಗೆ ಹೀಗೆ ಯಾವುದಾದರು ವಿಷಯದ ಮೇಲೆ ಬರೆದು ನಮಗೆ ಕಳುಹಿಸಿ.

ನಾವಿಕ ತಂಡ ಎಲ್ಲ ವಿಷಯಗಳನ್ನು ಪರಿಶೀಲಿಸಿ ಪ್ರಕಟಣೆಗೆ ಯೋಗ್ಯವಾದವುಗಳನ್ನು ಆಯ್ದುಕೊಳ್ಳುತ್ತದೆ. ಕನ್ನಡ ಸಾಹಿತ್ಯದ ಮೇಲೆ ಇನ್ನು ಹೆಚ್ಚು ಒಲವು ಮೂಡಲೆಂಬುದು ಇದರ ಸದುದ್ದೇಶ. ಮಕ್ಕಳ ಲೇಖನಗಳಿಗೂ ಅವಕಾಶವಿದೆ. ನಿಮ್ಮ ಸ್ನೇಹಿತರು, ಬಂಧುಗಳು ಅಥವಾ ಯಾರೇ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇದ್ದವರಿಗೆ ಈ ವಿಷಯವನ್ನು ತಿಳಿಸಿ.

ಹೇಗೆ, ಯಾರಿಗೆ, ಕೊನೆ ದಿನಾಂಕ ಇನ್ನು ಇತ್ಯಾದಿ ನಿಬಂಧನೆಗಳು ಈ ಕೆಳಗಿನಂತಿವೆ;

Navika 6th World Kannada Conference in Nairobi, preparation are in full swing

ಎಲ್ಲಿಯೂ ಪ್ರಕಟಣೆಗೊಳ್ಳದ ಸ್ವಂತ ಲೇಖನಗಳಾಗಿರಬೇಕು. ಬೇರೆಯವರ ಲೇಖನಗಳನ್ನು ಅಥವಾ ಕಥೆಗಳನ್ನು ಕಳುಹಿಸುತ್ತಿದ್ದಲ್ಲಿ ಮೂಲ ಲೇಖಕರ ಪರಿಚಯ ಮತ್ತು ಒಪ್ಪಿಗೆಯಿರಬೇಕು. ಲೇಖನಗಳನ್ನು ಕಳುಹಿಸಿದವರೇ ಎಲ್ಲ ಹಕ್ಕು ಚ್ಯುತಿಗಳಿಗೆ ಭಾಗೀದಾರರು.

ನುಡಿ ಅಥವಾ ಯೂನಿಕೋಡ್‌ನಲ್ಲಿ ಟೈಪ್ ಮಾಡಿ ವರ್ಡ್‌ನಲ್ಲಿ ಕಳುಹಿಸಿದ ಲೇಖನಗಳಷ್ಟನ್ನೇ ಸ್ವೀಕರಿಸಲಾಗುವುದು.

ಲೇಖನ ಮತ್ತು ಕಥೆ 2000 ಶಬ್ದಗಳಿಗೂ ಮೀರಿರಬಾರದು. ಕವಿತೆಗಳು ಒಂದು ಪೇಜಿನಲ್ಲಿ ಮಾತ್ರ ಇರಬೇಕು.

ನಿಮ್ಮ ಹೆಸರು, ಇಮೇಲ್, ವಿಳಾಸ ಮತ್ತು ಫೋನ್ ನಂಬರನ್ನು ಪಾಸ್‌ಪೋರ್ಟ್‌ ಅಳತೆಯ ಫೋಟೋ ಜೊತೆಗೆ [email protected] ಗೆ ಕಳುಹಿಸಿ.

ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ ಜುಲೈ 15, 2022.

English summary
Navika 6th World Kannada Conference, preparation are in full swing. The conference will be held from September 9 to September 10, 2021 in Naiobi city, Kenya. The Kannada convention will be held once in every two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X