• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಕೆರೊಲಿನದಲ್ಲಿ ಈ ಬಾರಿಯ ನಾವಿಕ ಸಮ್ಮೇಳನ

By Shami
|

ಬೆಂಗಳೂರು, ಮೇ 08 : ಉತ್ತರ ಅಮೆರಿಕಾದ ವಿಶ್ವ ಕನ್ನಡಿಗರ ಸಂಸ್ಥೆ "ನಾವಿಕ"ದ (NAVIKA - ನಾರ್ತ್ ಅಮೆರಿಕ ವಿಶ್ವ ಕನ್ನಡ ಅಗರ) ಮೂರನೇ ದ್ವೈವಾರ್ಷಿಕ ಸಮ್ಮೇಳನ ಈ ಬಾರಿ ಅಮೆರಿಕಾದ ಅಗ್ನಿ ಮೂಲೆಯಲ್ಲಿರುವ ಉತ್ತರ ಕೆರೊಲಿನ ರಾಜ್ಯದಲ್ಲಿ ನಡೆಯುತ್ತದೆ. ಲೇಬರ್ ಡೇ ವಾರಾಂತ್ಯದ ದಿನಾಂಕಗಳು, ಸೆಪ್ಟೆಂಬರ್ 4-5-6, 2015. ಸಮ್ಮೇಳನದ ಊರು, ಕೆರೊಲಿನದ ರಾಜಧಾನಿ Raleigh.

Raleigh ಊರ ಹೆಸರನ್ನು ನಾವು ಇಂಗ್ಲಿಷ್ ನಲ್ಲೇ ಬರೆಯುವುವೆವು, ಯಾಕಂದ್ರೆ, ಯೂನಿಕೋಡ್ ನಲ್ಲಿ ಕೆಲವು ಕನ್ನಡ ಅಕ್ಷರಗಳು ಸರಿಯಾಗಿ ಮೂಡುವುದಿಲ್ಲ. ಇದು ಯೂನಿಕೋಡ್ ಶಿಷ್ಟಾಚಾರದ ಸಾರ್ವತ್ರಿಕ, ಲಿಪಿ, ಕೀಬೋರ್ಡ್ ಸಮಸ್ಯೆ. ಉದಾಹರಣೆಗೆ Rally, Raleigh, Rank. ರಾಗೆ ಎಲ್ಲೆಲ್ಲಿ ಯ-ವತ್ತು ಕೊಡಬೇಕೋ ಅಲ್ಲೆಲ್ಲ ಈ ಸಮಸ್ಯೆ ಇರುತ್ತೆ. ಇರ್ಲಿ.

ಅಮೆರಿಕಾದ ಇನ್ನೊಂದು ಫೇಮಸ್ ಕನ್ನಡ ಸಂಸ್ಥೆ ಅಕ್ಕದಿಂದ ಸಿಡಿದೆದ್ದು ರಚನೆಯಾದ ಸಂಸ್ಥೆ ನಾವಿಕ. ಅದಾಗಿದ್ದು 2009ನೇ ಇಸವಿಯಲ್ಲಿ. ಅಕ್ಕದ ಕೆಲವು ಸ್ಥಾಪಕ ಸದಸ್ಯರು ಮತ್ತಿತರ 25 ಮಂದಿ ಕನ್ನಡದ ಹುರಿಯಾಳುಗಳು ಸೇರಿಕೊಂಡು ನಾವಿಕ ಸಂಸ್ಥೆಯನ್ನು ರಚಿಸಿದರು. ಲಾಭ ರಹಿತ ಸಂಸ್ಥೆ ನಾವಿಕ ಫ್ಲಾರಿಡಾ ರಾಜ್ಯದಲ್ಲಿ ನೊಂದಾವಣೆಯಾಗಿರುವ ಕನ್ನಡಿಗರ ಸಂಘ. ಅಮೆರಿಕಾಗೆ ಎರಡೆರಡು ಕನ್ನಡ ಸಂಸ್ಥೆ ಯಾಕೆ? ಒಂದೇ ಸಾಕಲ್ವೇ, ಎಂಬ ಮಾತುಗಳು ಆಗಾಗ, ಅಲ್ಲಲ್ಲಿ ಕೇಳಿಬರುವುದುಂಟು.

ನಾವಿಕದ ಮೊದಲ ಸಮ್ಮೇಳನ ನಡೆದದ್ದು 2010ರ ಜುಲೈನಲ್ಲಿ. ಪೆಸಿಫಿಕ್ ಮಹಾಸಾಗರದ ದಂಡೆ ದಕ್ಷಿಣ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲಿಸ್ ನಗರದ ಪಸಡೀನ ಬಡಾವಣೆಯಲ್ಲಿ. ನಂತರದ ಸಮ್ಮೇಳನ ಮೆಸ್ಸಾಚುಟೆಸ್ ರಾಜ್ಯದ "ಕಿಂಗ್ ಡಮ್ ಆಫ್ ಇಂಗ್ಲೆಂಡ್" ಬಾಸ್ಟನ್ ನಗರದಲ್ಲಿ ಜರುಗಿತು. ಅದು 2013ರ ಆಗಸ್ಟ್, ಲೇಬರ್ ಡೇ ದೀರ್ಘ ವಾರಾಂತ್ಯದ ರಜಾದಿನಗಳು. ಈ ಸಲದ ಸಮಾವೇಶ ಅಟ್ಲಾಂಟಿಕ್ ಸಮುದ್ರ ಕಿನಾರೆ ಕೆರೊಲಿನಾಗೆ ಬಂದಿದೆ.

ಕನ್ನಡ ಸಮ್ಮೇಳನಗಳು ವಿಜೃಂಭಣೆ, ಸಂರ್ಭಮ ಮತ್ತು ಅರ್ಥಪೂರ್ಣವಾಗಿ ನಡೆಯಬೇಕೆನ್ನುವ ಆಕಾಂಕ್ಷೆ ನಮಗಿದ್ದೇ ಇದೆ. ಆದರೆ, ಅದ್ದೂರಿತನದ ಹುಚ್ಚಿನಲ್ಲಿ ಹಣ ನಷ್ಚ ಮಾಡಿಕೊಳ್ಳುವಷ್ಟು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ಸಮ್ಮೇಳನದ ಆಡಳಿತ ಮಂಡಳಿಯ ಸಲಹೆಗಾರ ವಲ್ಲೀಶ ಶಾಸ್ತ್ರಿ ಹೇಳಿದರು. ಅವರು, ಗುರುವಾರ ಬೆಂಗಳೂರಿನಲ್ಲಿ ಒನ್ಇಂಡಿಯಾ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದರು.

ಮೊದಲ ಸಮ್ಮೇಳನದಲ್ಲಿ ಖರ್ಚುವೆಚ್ಚ ಕಳೆದನಂತರ 6,000 ಡಾಲರ್ ಉಳಿತಾಯವಾಯಿತು, ಎರಡನೇ ಸಮ್ಮೇಳನದಲ್ಲಿ ಸುಮಾರು 12,000 ಡಾಲರು ಉಳಿಕೆ. ಹಾಗೇನೇ ನಾವಿಕ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಎರಡೂ ಅಮೆರಿಕನ್ನಡೋತ್ಸವದಿಂದ 10-12 ಲಕ್ಷ ರೂಪಾಯಿ ಸರ್ ಪ್ಲಸ್ ಬಜೆಟ್ ದಾಖಲಿಸಿತು. ಸಮ್ಮೇಳನದ ನಂತ್ರ ಹಣದ ಕೊರತೆಯಾದರೆ ಜವಾಬ್ದಾರಿ ಹೊತ್ತವರು ಜೇಬಿನಿಂದ ಕಕ್ಕಬೇಕಾಗುತ್ತದೆ. ಹಾಗಾಗಬಾರದು. ಹೆಚ್ಚು ಆನಂದ, ಮಿತವ್ಯಯ. ಇದೇ ನಮ್ಮ ತಂಡದ ಮಾರ್ಗದರ್ಶಿ ಸೂತ್ರಗಳು ಎಂದು ಅವರು ನುಡಿದರು.

Raleigh ಕನ್ವೆನ್ ಷನ್ ಸೆಂಟರ್ ನಲ್ಲಿ ನಡೆಯುವ 3 ದಿನಗಳ ಸಮ್ಮೇಳನಕ್ಕೆ ತಯ್ಯಾರಿಗಳು ಭರದಿಂದ ಸಾಗಿವೆ. ಸುಮಾರು 2,500 ರಿಂದ 3,000 ಪ್ರತಿನಿಧಿಗಳನ್ನು ನಿರೀಕ್ಷಿಸುತ್ತಿದ್ದೇವೆ. ಸ್ಥಳೀಯ ಕನ್ನಡ ಕೂಟ ಸಂಪಿಗೆ, ಕೆರೊಲಿನ ಕನ್ನಡ ಬಳಗ, ಸ್ಪ್ರಿಂಗ್ ಫೀಲ್ಡ್ ಕನ್ನಡಿಗರು ಮತ್ತು ವಾಷಿಂಗ್ಟನ್ ಡಿಸಿಯ ಕಾವೇರಿ ಕನ್ನಡಿಗರು, ಪಿಟ್ಸ್ ಬರ್ಗ್, ಸುತ್ತಮುತ್ತಲಿನ ನಗರಗಳಿಂದ ಕಾರು ಓಡಿಸಿಕೊಂಡು ಬರುವ ಪ್ರತಿನಿಧಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಲ್ಲೀಶ ತಿಳಿಸಿದರು.

ಶಾರ್ಜಾ, ಆಸ್ಟ್ರೇಲಿಯಾ, ಲಂಡನ್ ಮುಂತಾದ ದೇಶಗಳ ಕಲಾವಿದರು ನಾವಿಕ ಸಮ್ಮೇಳನಕ್ಕೆ ಬರ್ತಿದ್ದಾರೆ. ಕನ್ನಡನಾಡಿನಿಂದ ಆಗಮಿಸುವ ಕವಿ, ಕಲಾವಿದ, ರಾಜಕಾರಣಿ, ಸರಕಾರಿ ಅಧಿಕಾರಿಗಳ ಪಟ್ಟಿ ಅಂತಿಮವಾಗಬೇಕಿದೆ. ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ದಲಿತ ಕಲಾವಿದರ 2 ತಂಡಗಳು, ಸಚಿವ ಎಚ್ ಆಂಜನೇಯ ಬರುವುದು ಬಹುತೇಕ ನಿಶ್ಚಿತವಾಗಿದೆ.

ಅಂತೆಯೇ, ಶತಾವಧಾನಿ ಗಣೇಶ್, ಬಿ ಕೆ ಎಸ್ ವರ್ಮಾ, ಕವಿ ಸಿದ್ಧಲಿಂಗಯ್ಯ, ಸ್ಯಾಂಡಲ್ ವುಡ್ಡಿನ ಎ ಆರ್ ರೆಹಮಾನ್ ಎಂದೇ ಕರೆಯಲ್ಪಡುವ ಅರ್ಜುನ್ ಜನ್ಯ, ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್, ಮೈಸೂರು ಆನಂದ್, ಕಿರ್ಲೋಸ್ಕರ್ ಸತ್ಯ ಮುಂತಾದವರು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗುತ್ತಾರೆ ಎಂದು ವಲ್ಲೀಶ ಶಾಸ್ತ್ರಿ ವಿವರಿಸಿದರು. ಇನ್ನಿತರ ಆಹ್ವಾನಿತರ ಹೆಸರುಗಳು ಮತ್ತು ಸಮ್ಮೇಳನಕ್ಕೆ ಆನ್ ಲೈನ್ ನೊಂದಾವಣೆಯ ವಿವರಗಳು ಸಮಾವೇಶಕ್ಕೆಂದೇ ತೆರೆಯಲಾದ ಅಂತರ್ಜಾಲತಾಣದಲ್ಲಿ ಸಿಗುತ್ತದೆ. ನೋಡಿ.

ಪ್ರಾಯೋಜಕತ್ವ, ಸಮ್ಮೇಳನದ ಇನ್ನಿತರ ವಿವರಗಳನ್ನು ನಾವಿಕದ ಅಧಿಕೃತ ಇಂಡಿಯ ಪಾರ್ಟನರ್ Astreix ಅವರಿಂದ ಪಡೆಯಬಹುದು. ದೂರವಾಣಿ +91-98450 21409. navikabangalore2015@gmail.com. ವೆಬ್ ತಾಣ www.astreix.com

English summary
Raleigh, the Capital of North Carolina to host 3rd Navika World Kannada Convention during labor day week end 2015. Navika, a premier Kannada org propagating Kannada language, arts and culture in North America. Registration for convention now open, says Vallisha Shastry in LA, adviser to Executive Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X