ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತ ಕಲಾವಿದರ ಅಮೆರಿಕ ಪ್ರವಾಸಕ್ಕೆ ಗ್ರೀನ್ ಸಿಗ್ನಲ್

By Shami
|
Google Oneindia Kannada News

ಬೆಂಗಳೂರು, ಆ. 18 : ಆಗಸ್ಟ್ ಕೊನೆಯ ವಾರದಲ್ಲಿ ನಡೆಯುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಕನ್ನಡನಾಡಿನ 27 ಕಲಾವಿದರ ತಂಡದ ಅಮೆರಿಕಾ ಪ್ರವಾಸಕ್ಕೆ ಕರ್ನಾಟಕ ಸರಕಾರದ ಅನುಮತಿ ಸಿಕ್ಕಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯಿಂದ ಅನುಮತಿ ಪತ್ರ ಸೋಮವಾರ ಹೊರಬಿದ್ದಿದೆ. ಆದೇಶದ ಪ್ರಕಾರ 27 ಮಂದಿಯ ತಂಡ ವಿದೇಶ ಪ್ರವಾಸ ಮಾಡುವುದಕ್ಕೆ ಸಜ್ಜಾಗಿದ್ದು ತಂಡದಲ್ಲಿ ತಮಟೆ, ನಗಾರಿ, ಚೌಡಿಕೆ ಹಾಗೂ ಜಾನಪದ ಕಲಾವಿದರು ಇರುತ್ತಾರೆ.

ಈ ತಂಡವನ್ನು ಅಕ್ಕ ಸಮ್ಮೇಳನಕ್ಕೆ ಕಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸರಕಾರದ ಕಾರಿಡಾರುಗಳಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ನಡುವಿನ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. [ಅಕ್ಕನ ಮನೆಗೆ ಹೊರಟ ಪುಟ್ಟಮಲ್ಲಿ]

ಅಕ್ಕ ಸಮ್ಮೇಳನಕ್ಕೆ ತಮ್ಮ ಇಲಾಖೆ ಅನುದಾನ ಬಿಡುಗಡೆ ಮಾಡಿದೆ. ಸಮ್ಮೇಳನ ಆಯೋಜಕರು ತಮಗೆ ಅಭಿರುಚಿಗೆ ಮತ್ತು ಅಗತ್ಯಕ್ಕೆ ತಕ್ಕಂತೆ ಕವಿ, ಕಲಾವಿದ, ನೃತ್ಯ, ಸಂಗೀತ, ಸಿನಿ ಕಲಾವಿದರನ್ನು ಆಮಂತ್ರಿಸುತ್ತಾರೆ. ಹಾಗಾಗಿ ಸರಕಾರದ ವತಿಯಿಂದ ಮತ್ತೊಂದು ತಂಡವನ್ನು ಕಳಿಸುವ ಪ್ರಸ್ತಾವನೆ ಬೇಡ ಎನ್ನುವುದು ಉಮಾಶ್ರೀ ಚಿಂತನೆ ಆಗಿತ್ತು.

ಆದರೆ, ಸಚಿವ ಆಂಜನೇಯ ಅವರ ಯೋಚನಾಕ್ರಮ ಭಿನ್ನವಾಗಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಪ್ರತಿಭಾ ಸಂಪನ್ನ ಕಲಾವಿದರು ನಾಡಿನಲ್ಲಿ ಇದ್ದಾರೆ. ಜಾಗತಿಕ ವೇದಿಕೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡುವುದಕ್ಕೆ ಅವರಿಗೆ ಅವಕಾಶ ಕಲ್ಪಿಸಬೇಕು ಎನ್ನುವುದು ಆಂಜನೇಯಯವರ ಅಭಿಲಾಷೆ ಆಗಿತ್ತು. [ಅಕ್ಕ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು ]

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಧ್ಯಪ್ರವೇಶದಿಂದಾಗಿ ಸಮಸ್ಯೆ ಬಗೆಹರಿಯಿತು. 27 ಮಂದಿಯ ಕಲಾವಿದರ ತಂಡ ಇನ್ನೆರಡು ದಿನಗಳಲ್ಲಿ ವೀಸಾ ಪಡೆಯಬೇಕು. ವೀಸಾ ಸಿಕ್ಕರೆ ಕ್ಯಾಲಿಫೋರ್ನಿಯಾ ವಿಮಾನ ಹತ್ತುವುದು ನಿಶ್ಚಿತ. ತಂಡದ ಮುಖ್ಯಸ್ಥರಾಗಿ ಶ್ರೀನಿವಾಸ ಕಪ್ಪಣ್ಣ ಕಾರ್ಯ ನಿರ್ವಹಿಸುವರು.

ಅಮೆರಿಕಕ್ಕೆ ಹೊರಟ ಚೌಡಿಕೆ ಕಲಾವಿದೆ

ಅಮೆರಿಕಕ್ಕೆ ಹೊರಟ ಚೌಡಿಕೆ ಕಲಾವಿದೆ

ಮೊಟ್ಟಮೊದಲ ಬಾರಿಗೆ ಪ್ರತಿಭಾವಂತ ದಲಿತ ಕಲಾವಿದರಿಗೆ ಅಮೆರಿಕಕ್ಕೆ ಹೋಗುವ ಅವಕಾಶ ಲಭಿಸುತ್ತಿದೆ.

ಕಪ್ಪಣ್ಣ ಮುಂದಾಳತ್ವದಲ್ಲಿ ಅಮೆರಿಕ ಪ್ರವಾಸ

ಕಪ್ಪಣ್ಣ ಮುಂದಾಳತ್ವದಲ್ಲಿ ಅಮೆರಿಕ ಪ್ರವಾಸ

ಖ್ಯಾತ ಕಲಾವಿದ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಮುಂದಾಳತ್ವದಲ್ಲಿ 27 ಕಲಾವಿದರು ವಿಮಾನವೇರಲಿದ್ದಾರೆ.

ಈ ಕಲಾವಿದರಿಗೆ ಅವಕಾಶ ಸಿಗುವುದೆ?

ಈ ಕಲಾವಿದರಿಗೆ ಅವಕಾಶ ಸಿಗುವುದೆ?

ವೀಸಾ ಸಿಕ್ಕರೆ ಮಾತ್ರ ಅಕ್ಕ ಸಮ್ಮೇಳನಕ್ಕೆ ಹೋಗಲು ಈ ಕಲಾವಿದರಿಗೆ ಅವಕಾಶ ಸಿಗಲಿದೆ. ಸಿಗುತ್ತದಾ?

ತಮ್ಮಟೆ ಕಲಾವಿದರ ಒಂದು ತಂಡ

ತಮ್ಮಟೆ ಕಲಾವಿದರ ಒಂದು ತಂಡ

ಈ ಕಲಾವಿದರು ಸ್ಯಾನ್ ಹೋಸೆಯಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ತಮ್ಮಟೆ ಬಾರಿಸಲಿದ್ದಾರೆ.

ತಮ್ಮಟೆ ಕಲಾವಿದರ ಮತ್ತೊಂದು ತಂಡ

ತಮ್ಮಟೆ ಕಲಾವಿದರ ಮತ್ತೊಂದು ತಂಡ

ಅಕ್ಕ ಸಮ್ಮೇಳನಕ್ಕೆ ಬಂದ ವಿಶ್ವ ಕನ್ನಡಿಗರಿಗೆ ಈ ಬಾರಿ ಭರ್ಜರಿ ಮನರಂಜನೆ ಸಿಗುವುದಂತೂ ಗ್ಯಾರಂಟಿ.

ನಗಾರಿ ಬಾರಿಸುತ್ತಿರುವ ಕಲಾವಿದ

ನಗಾರಿ ಬಾರಿಸುತ್ತಿರುವ ಕಲಾವಿದ

ನಗಾರಿ ಬಾರಿಸುತ್ತಿರುವ ಕಲಾವಿದ.

ನಗಾರಿ ಕಲಾವಿದರ ಮತ್ತೊಂದು ತಂಡ

ನಗಾರಿ ಕಲಾವಿದರ ಮತ್ತೊಂದು ತಂಡ

ನಗಾರಿ ಕಲಾವಿದರ ಮತ್ತೊಂದು ತಂಡ

English summary
First time in the history of Karnataka a full fledged Dalit folk team is sent abroad to show-case talents in 8th AKKA World Kannada Convention -2014 in San Jose, North America. The trip is sponsored by govt of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X