• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಕ್ಕ' ಸಮ್ಮೇಳನ ನೋಂದಾವಣಿ ತಂಡದ ಜೊತೆ ಮಾತುಕತೆ

By ಸಂದರ್ಶನ - ಕೇಶವ ಪ್ರಶಾಂತ್
|

ಸೆಪ್ಟೆಂಬರ್ 2, 3 ಮತ್ತು 4ರಂದು ನ್ಯೂ ಜೆರ್ಸಿಯ ಅಟ್ಲಾಂಟಾ ಸಿಟಿಯಲ್ಲಿ ನಡೆಯಲಿರುವ 9ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ತಯಾರಿ ಭರದಿಂದ ಸಾಗುತ್ತಿದೆ. ಸಮ್ಮೇಳವನ್ನು ಅವಿಸ್ಮರಣೀಯವನ್ನಾಗಿ ಮಾಡಲು ಸಾಕಷ್ಟು ತಯಾರಿಗಳು ನಡೆದಿವೆ.

ನೂರಾರು ಸ್ವಯಂಸೇವಕರನ್ನೊಳಗೊಂಡ ವಿವಿಧ ತಂಡಗಳು ಕಾರ್ಯಕ್ರಮದ ಭರ್ಜರಿ ಸಿದ್ದತೆಯಲ್ಲಿ ತೊಡಗಿಸಿಕೊಂಡಿವೆ. ಈ ಸಂದರ್ಭದಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ನೋಂದಾವಣಿ ತಂಡದ ಪ್ರಮುಖರಾದ ಪದ್ಮಿನಿ ಹೇಮಂತ್ ಅವರು ನೋಂದಾವಣಿ ತಂಡದ ಪರವಾಗಿ ವಿಶ್ವ ಕನ್ನಡಿಗರೊಂದಿಗೆ ಹಂಚಿಕೊಂಡಿರುವ ಮನದಾಳದ ಮಾತುಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶ್ವಾದ್ಯಂತ ಕನ್ನಡಿಗರ ಪ್ರತಿಕ್ರಿಯೆ ಹೇಗಿದೆ?

ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶ್ವಾದ್ಯಂತ ಕನ್ನಡಿಗರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲೆಡೆಯಿಂದ ಉತ್ಸಾಹಿ ಕನ್ನಡಿಗರಿಂದ ಬಹಳಷ್ಟು ಕರೆಗಳು ಬರುತ್ತಿರುವುದು ಆನಂದದ ಸಂಗತಿ. ಈ ಸುಂದರ ಸಮ್ಮೇಳನಕ್ಕೆ ಕನ್ನಡಿಗರೆಲ್ಲರೂ ದೊಡ್ಡ ಗುಂಪುಗಳಲ್ಲಿ ಬರುವ ಆಸಕ್ತಿ ತೋರಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸಿ ಆನಂದಿಸುವ, ಎಲ್ಲರೊಡನೆ ಬೆರೆತು ಖುಶಿಪಡುವ ಉತ್ಸಾಹ ನೋಡಿದಾಗ ಬಹಳ ಸಂತೋಷವೆನಿಸುತ್ತಿದೆ. ಹೊಸ ಹೊಸ ಕನ್ನಡಿಗ ಗೆಳೆಯರನ್ನು ಭೇಟಿಯಾಗುವ ಅವಕಾಶಕ್ಕಾಗಿ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. ಈ ಅವಕಾಶವನ್ನೊದಗಿಸುವ 'ಅಕ್ಕ 2016' ಕಾರ್ಯಕ್ರಮಕ್ಕೆ ಧನ್ಯವಾದಗಳು. [ಅಕ್ಕ ಸಮ್ಮೇಳನದ ಸೂತ್ರಧಾರಿ ರಾಜ್ ಪಾಟೀಲ್ ಸಂದರ್ಶನ]

ನೋಂದಾವಣಿ ತಂಡದ ಪ್ರಮುಖರಾಗಿ, ಈ ಬಾರಿಯ ಅಕ್ಕ ಸಮ್ಮೇಳನದ ನೋಂದಾವಣೆ ಪ್ರಕ್ರಿಯೆಯ ಬಗ್ಗೆ ಹಾಗೂ ಅಳವಡಿಸಿಕೊಂಡಿರುವ ಕೆಲವು ವಿಭಿನ್ನ ನೋಂದಾವಣಿ ಕ್ರಮಗಳ ಬಗ್ಗೆ ಸ್ವಲ್ಪ ಮಾಹಿತಿ ನೀಡುವಿರಾ?

ನೋಂದಾವಣಿ ಎಂದ ತಕ್ಷಣ ಎಲ್ಲರ ಯೋಚನೆಗೆ ಸಹಜವಾಗಿ ಬರುವುದು ದೊಡ್ಡ ದೊಡ್ಡ ಸರತಿಯ ಸಾಲುಗಳು. '9ನೇ ಅಕ್ಕ ಕನ್ನಡ ಸಮ್ಮೇಳನ'ಕ್ಕೆ ನೋಂದಾಯಿಸುವವರಿಗೆ ಒಂದು ಸಿಹಿ ಸುದ್ದಿ ಏನೆಂದರೆ, ನೀವು ದೊಡ್ಡ ಸಾಲುಗಳಲ್ಲಿ ನಿಂತು ನೋಂದಾವಣೆ ಮಾಡಬೇಕಾಗಿಲ್ಲ. ಸಂಪೂರ್ಣ ನೋಂದಾವಣಿ ಪ್ರಕ್ರಿಯೆಯು ಆನ್ ಲೈನ್ ಆಗಿದೆ. ಎಷ್ಟು ಸುಲಭವೆಂದರೆ, ಗುರುತಿನ ಚೀಟಿ ಹಾಗೂ ಎಲ್ಲಾ 3 ದಿನಗಳ ಕಾರ್ಯಕ್ರಮಗಳ ಮಾಹಿತಿಯನ್ನೊಳಗೊಂಡ ಸ್ವಾಗತ ವಿವರಗಳು ಮನೆ ಬಾಗಿಲಿಗೆ ರವಾನೆಯಾಗುತ್ತವೆ. ಭಾಗವಹಿಸುವ ಎಲ್ಲರನ್ನೂ ಮುಂಚಿತವಾಗಿ ಸಂಪರ್ಕಿಸಿ ಅವರಿಗೆ ಪಾರ್ಕಿಂಗ್ ನಿಂದ ಹಿಡಿದು ದಾರಿಯ ವಿವರಗಳವರೆಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒದಗಿಸುವ ವ್ಯವಸ್ಥೆಗಳಿವೆ.

ಕಾರ್ಯಕ್ರಮದ ಸ್ಥಳ ತಲುಪಿದ ಕೂಡಲೇ ತಂಪಾದ ಪಾನೀಯಗಳೊಂದಿಗೆ ಮುಗುಳ್ನಗೆ ಭರಿತ ನೋಂದಾವಣೆ ತಂಡದ ಸ್ವಯಂಸೇವಕರ ಬಳಗ ನಿಮ್ಮನ್ನು ಆದರದಿಂದ ಸ್ವಾಗತಿಸಲಿದೆ. ಭಾಗವಹಿಸುವ ಮಿತ್ರರ ಎಲ್ಲಾ ಪ್ರಶ್ನೆ, ಸಂದೇಹಗಳನ್ನು ಪರಿಹರಿಸಲು ನಮ್ಮ ಸ್ವಯಂ ಸೇವಕರ ತಂಡ ಸಂಪೂರ್ಣವಾಗಿ ತಯಾರಾಗಿದೆ.

ನೋಂದಾವಣೆಗೆ ಬಹಳಷ್ಟು ಬೇಡಿಕೆಗಳು ಬರುತ್ತಿವೆ. ಇನ್ನೂ ನೋಂದಾಯಿಸದೆ ಇರುವ ಆಸಕ್ತರು ನಮ್ಮ ಆನ್ಲೈನ್ ನೋಂದಾವಣೆ ಪ್ರಕ್ರಿಯೆಯನ್ನು ಉಪಯೋಗಿಸಿ ಆದಷ್ಟು ಬೇಗ ನೋಂದಾಯಿಸಿ ಎಂದು ನಮ್ಮ ಕಳಕಳಿಯ ವಿನಂತಿ. ಬೇಗನೆ ನೋಂದಾವಣೆ ಮಾಡುವುದರಿಂದ ಕಾರ್ಯಕ್ರಮಕ್ಕೆ ಮುಂಚಿತವಾಗಿ 'ಸ್ವಾಗತ ಪ್ಯಾಕೇಜ್' ಅನ್ನು ಪ್ರತಿಯೊಬ್ಬರಿಗೆ ಕಳುಹಿಸಿಕೊಡಲು ಬಹಳ ಅನುಕೂಲವಾಗುತ್ತದೆ. ಆನ್ಲೈನ್ ನೋಂದಾವಣೆ ಬಹಳ ಸುಲಭ.

ಇಂದೇ ಅಕ್ಕ ಸಮ್ಮೇಳನ ನೋಂದಾವಣಿ ತಾಣಕ್ಕೆ ಭೇಟಿ ಕೊಡಿ. ಕೊನೆಯ ಕ್ಷಣದಲ್ಲಿ ನೋಂದಾಯಿಸುವವರಿಗೆ ಅನುಕೂಲವಾಗಲು ಕಾರ್ಯಕ್ರಮದ ಸ್ಥಳದಲ್ಲೇ ನೋಂದಾಯಿಸುವ ವ್ಯವಸ್ಥೆಗಳು ಸಹ ಇರುತ್ತವೆ.

ನೋಂದಾವಣೆಗೆ ಕೊನೆಯ ದಿನ ಎಂದೇನಾದರೂ ಇದೆಯೇ?

ಹಾಗೇನಿಲ್ಲ. ಸೆಪ್ಟೆಂಬರ್ 3ರ ತನಕ ಯಾವಾಗ ಬೇಕಾದರೂ ನೋಂದಾಯಿಸಿಕೊಳ್ಳಬಹುದು. ಆದರೆ ಮುಂಚಿತವಾಗಿ ನೋಂದಾವಣೆ ಮಾಡಿಕೊಳ್ಳುವುದು ಬಹಳ ಅನುಕೂಲಕರ.

An interview with Atlanta AKKA conference registration team

ಇನ್ನು ಮುಂದೆ ನೋಂದಾಯಿಸುವವರಿಗಾಗಿ ಏನಾದರೂ ವಿಶೇಷ ಯೋಜನೆಗಳಿವೆಯೇ?

20% ರಿಯಾಯಿತಿ ದರದಲ್ಲಿ ನೋಂದಾಯಿಸುವ ಯೋಜನೆ ಈಗ ನಡೆಯುತ್ತಿದೆ. ಹೊಸ ಆಸಕ್ತರಿಗೆ ಇದು ಅತಿ ಕಡಿಮೆ ಬೆಲೆ ಹಾಗೂ ಅತಿ ಸೂಕ್ತ ಸಮಯ. ನೋಂದಾವಣೆ ತಂಡ ಹಾಗೂ ಪ್ರಚಾರ ತಂಡಗಳು ವಿಶ್ವಾದ್ಯಂತ ಎಲ್ಲಾ ಕನ್ನಡಿಗರಿಗೆ ಹೊಸ ಹೊಸ ರಿಯಾಯಿತಿ ಯೋಜನೆಗಳ ಬಗ್ಗೆ ಕಾಲ ಕಾಲಕ್ಕೆ ಮೀಟಿಂಗ್, ಇಮೇಲ್, ಸಾಮಾಜಿಕ ತಾಣಗಳ ಮೂಲಕ ಮಾಹಿತಿ ನೀಡಲಿದೆ. ಹೊಸ ಯೋಜನೆಗಳ ಸಂಪೂರ್ಣ ಲಾಭ ಪಡೆದು ತಕ್ಷಣ ನೋಂದಾವಣೆ ಮಾಡಿಕೊಳ್ಳುವಂತೆ ಎಲ್ಲರಲ್ಲೂ ನಮ್ಮ ವಿನಂತಿ.

ನೋಂದಾವಣೆ ತಂಡದ ಸದಸ್ಯರ ಬಗ್ಗೆ ಒಂದಷ್ಟು ಮಾಹಿತಿ ನೀಡಿ.

ನಮ್ಮದು 13 ಜನ ಸ್ವಯಂಸೇವಕರನ್ನೊಳಗೊಂಡ ತಂಡ. ಪದ್ಮಿನಿ ಹೇಮಂತ್, ಮನೋಹರ ರಾವ್, ಸುಭಾಷಿಣಿ ರಾಮಪ್ಪ, ಬಾಬು ಸಂಜಿ, ಉಷಾ ಗಣಪತಿ, ಸರಯೂ ಘಟ್ಟು, ಸುರೇಶ್ ಗಡಿಗಿ, ಲಕ್ಷ್ಮಿ ರಾಮಚಂದ್ರಪ್ಪ, ನವೀನ್ ರಾಮಪ್ಪ, ಮಾನಸ, ಶಶಿಧರ್ ಮುದ್ದರಾಜ್, ಲತಾ ಮುದ್ದರಾಜ್ ಹಾಗೂ ಸಂಜಯ ನಾಗಭೂಷಣ್ ತಂಡದ ಸದಸ್ಯರು.

ತಂಡದ ಹೆಚ್ಚಿನ ಸದಸ್ಯರು ಬೇರೆ ಬೇರೆ ಸ್ಥಳಗಳಲ್ಲಿ ಇರುವ ಸಾಧ್ಯತೆ ಇರುವುದರಿಂದ, ನಿಮ್ಮ ತಂಡದ ಕಾರ್ಯಕ್ರಮ ಸಂಘಟನೆ ಹೇಗೆ ಮಾಡುವಿರಿ? ಇದರ ಬಗ್ಗೆ ಒಂದಷ್ಟು ವಿವರಗಳನ್ನು ನೀಡಿ.

ಸದಸ್ಯರು ವಿವಿಧೆಡೆಗಳಲ್ಲಿ ಇರುವುದು ನಮಗೆ ಬಹಳ ಅನುಕೂಲಕರ. ಅವರಿರುವ ಸ್ಥಳದ ಸುತ್ತಮುತ್ತ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಬ್ಬಿಸಲು ನಮಗೆ ಸಹಾಯವಾಗುತ್ತದೆ. ಮುಖ್ಯವಾಗಿ ನಾವು ಕಾನ್ಫರೆನ್ಸ್ ಕರೆಗಳ ಮೂಲಕ ನಿಗದಿತವಾಗಿ ಮಾತಾಡುತ್ತೇವೆ. ಕೆಲಸ ಕಾರ್ಯಗಳ ಮಧ್ಯೆಯೂ ಎಲ್ಲರ ಸಹಮತ ಪಡೆಯುವಲ್ಲಿ, ಹೊಸ ಹೊಸ ವಿಚಾರ ವಿಮರ್ಶೆ ನಡೆಸುವಲ್ಲಿ ವಾಟ್ಸ್ ಆಪ್ ಉಪಯೋಗಿಸುತ್ತೇವೆ. ನ್ಯೂ ಜೆರ್ಸಿಯ ಅಕ್ಕ ಪಕ್ಕ ಇರುವ ಕೆಲವು ಸದಸ್ಯರು ನಿಯಮಿತವಾಗಿ ಭೇಟಿಯಾಗಿ ರೂಪು ರೇಷೆಗಳ ಚರ್ಚೆ ನಡೆಸುತ್ತೇವೆ.

ನೋಂದಾವಣೆ ತಂಡದ ಪರವಾಗಿ ಎಲ್ಲರಿಗೂ ಏನಾದರೂ ಮಾಹಿತಿ ನೀಡಲು ಬಯಸುವಿರಾ?

ನೀವು ಈಗಾಗಲೇ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016'ಕ್ಕೆ ನೋಂದಾಯಿಸಿದ್ದಲ್ಲಿ ಈ ಭರ್ಜರಿ ಕಾರ್ಯಕ್ರಮದ ಅವಿಸ್ಮರಣೀಯ ಘಳಿಗೆಗಳ ಸಾಕ್ಷಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲವಾದಲ್ಲಿ ಇಂದೇ ನೋಂದಾಯಿಸುವಂತೆ ನಮ್ಮ ವಿನಂತಿ. ಆರೋಗ್ಯ, ಆಧ್ಯಾತ್ಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ, ವ್ಯವಹಾರ, ಹಳೆ ವಿದ್ಯಾರ್ಥಿ, ಸಾಹಿತ್ಯ, ಕ್ರೀಡೆ, ವೈದ್ಯ ಶಿಕ್ಷಣ, ಮಹಿಳಾ ಸಂಘ ಹಾಗೂ ಮನೋರಂಜನಾ ತಂಡಗಳ ಬಹಳಷ್ಟು ವಿಶ್ವದರ್ಜೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ಬಳಸಿಕೊಳ್ಳಿ.

ವಿವಿಧ ಭಕ್ಷ್ಯ ಭೋಜ್ಯಗಳ ಬಾಯಿ ನೀರೂರಿಸುವ ಆಹಾರ ಪಟ್ಟಿ ಆಗಲೇ ಬಿಡುಗಡೆಯಾಗಿ ಎಲ್ಲರ ಮನ ಸೆಳೆದಿದೆ.

ಈ ಕಾರ್ಯಕ್ರಮದ ಅತಿ ದೊಡ್ಡ ಅಂಶ - 3 ಘಂಟೆಗಳ ಭರಪೂರ ಮನೋರಂಜನಾ ಕಾರ್ಯಕ್ರಮ 'ಅಂಬಿ ನೈಟ್'. ಕನ್ನಡ ಚಿತ್ರರಂಗದ ಘಟಾನುಘಟಿ ತಾರೆಯರು, ಸದಸ್ಯರು ನಡೆಸಿಕೊಡುವ ಈ ಕಾರ್ಯಕ್ರಮ ಅಕ್ಕ ಕನ್ನಡ ಸಮೇಳನದ 'ಮುಕುಟ ಮಣಿ'. ಸುಂದರ ನಗರಿ ಅಟ್ಲಾಂಟಿಕ್ ಸಿಟಿಯಲ್ಲಿ ನಿಮ್ಮೆಲ್ಲರನ್ನೂ ಸ್ವಾಗತಿಸುವ ಸುಸಂದರ್ಭವನ್ನು ನಾವೆಲ್ಲಾ ಎದುರು ನೋಡುತ್ತಿದ್ದೇವೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ, ಕ್ಯಾಸಿನೊ, ಸುಂದರ ಕಡಲ ತೀರಗಳು ಹಾಗೂ ರಿಯಾಯಿತಿ ದರದ ಶಾಪಿಂಗ್ ಗಳನ್ನು ಮನಸಾರೆ ಆನಂದಿಸಿ.

Satyaprasad T S

Chair-AKKA Media coordinator

satyap@akkaonline.com

732 763 2363 Cell

Monroe NJ 08831 USA

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An interview with 9th AKKA World Kannada conference registration team. Atlanta City in New Jersey is hosting the AKKA conference. Padmini Hemanth on behalf of registration team briefs about the preparations, registrations and discounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more