ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನ ತುಂಬಾ ಎಂಜಾಯಬಲ್ ಆಗಿರುತ್ತದೆ : ರಘು

By Prasad
|
Google Oneindia Kannada News

ಪೂರ್ಣಿಮ ಮೋಹನ್ : ನೀವು ಹೇಳಿದ ಹಾಗೆ Bay Area, especially, Silicon Valley is where major innovations happen. In technology, the Bay Area has proved. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರಲ್ಲಿ KKNC has proved. ಇವೆರಡರ ಒಂದು ಸಮ್ಮಿಲನವನ್ನು ನೀವು 'ಅಕ್ಕ'ದಲ್ಲಿ ಅಳವಡಿಸಿಕೊಂಡಿದ್ದೀರಿ ಎಂದು ಕೇಳಿ ಸಂತೋಷವಾಯಿತು. ಬೇ ಏರಿಯಾದಲ್ಲಿನ ಪ್ರತಿಯೊಂದು ಪ್ರತಿಭೆಯನ್ನು ಗುರುತಿಸಿ ಅದರಿಂದ ಬರುವ ಕ್ರಿಯೇಟಿವಿಟಿಯಲ್ಲಿ ಏನೇನು ಸಾಧ್ಯವಾಗುತ್ತದೆ ಅದನ್ನೆಲ್ಲ ಚೆನ್ನಾಗಿ ಉಪಯೋಗಿಸಿಕೊಂಡು, ಇಲ್ಲಿಯ ಜನತೆಯನ್ನು involve ಮಾಡಿಕೊಂಡು ಈ ಪ್ರೋಗ್ರಾಮ್‍ ಅನ್ನು ಮಾಡ್ತಿದ್ದೀರ, ಆದ್ದರಿಂದ ಇದು ಬೇ ಏರಿಯಾದವರಿಗೆ ಬಹಳ ಹತ್ತಿರವಾಗಿರುವ ಸಮ್ಮೇಳನ. ಖಂಡಿತವಾಗಿ ಇಲ್ಲಿನ ಜನ ಅದಕ್ಕೆ ಇನ್ನೂ ಹೆಚ್ಚಿನ ಉತ್ತೇಜನವನ್ನು ಕೊಡುತ್ತಾರೆ ಅಂತ ನಾನು ನಂಬಿದೀನಿ.

ಇನ್ನು ಕಡೆಯ ಪ್ರಶ್ನೆ. 'ಅಕ್ಕ' ಅಂತ ಗೊತ್ತಾದರೆ ನಾ ಮುಂದು, ತಾ ಮುಂದು ಅಂತ ಬರದವರೇ ಇಲ್ಲ. ಆದರೂ ಅಳಿದುಳಿದವರು ಯಾವುದೇ ಕಾರಣಕ್ಕಾಗಿ, ಮಾಹಿತಿ ಲಭ್ಯವಿಲ್ಲ ಎಂಬಂಥ ಕಾರಣಕ್ಕಾಗಿ ರಿಜಿಸ್ಟರ್ ಮಾಡಿಕೊಂಡಿಲ್ಲವಾದರೆ ಅವರಿಗೆ ಏನಾದರೂ ಮೆಸೇಜ್ ಕೊಡುವುದಿದೆಯೇ ನಿಮಗೆ?

AKKA convention co-convenor Raghu Halur interview (part 2)

ರಘು ಹಾಲೂರು : ರಿಜಿಸ್ಟರ್ ಮಾಡಿಕೊಳ್ಳಿ ಅಂತ ಮೆಸೇಜ್ ಕೊಡ್ತೀನಿ. (ನಗು.) ಅದನ್ನು ಹೇಳುವುದಕ್ಕಿಂತ ಮುಂಚೆ ಒಂದು ಕಾಮೆಂಟ್. ಬೇ ಏರಿಯಾದವರು ಒಂದು ಡ್ರೈವಿಂಗ್ ಫೋರ್ಸ್ ಆದರೂ ಇದು ನಿಜವಾಗಿ ಒಂದು World Kannada Conference ಆಗಬೇಕು ಅಂತ ನಮ್ಮ ಉದ್ದೇಶ. ಅದಕ್ಕಾಗಿ 'ಅಕ್ಕ' ಸಂಸ್ಥೆಯವರ ಜೊತೆ ತುಂಬ ಕ್ಲೋಸ್ ಆಗಿ ಕೆಲಸ ಮಾಡ್ತಾ ಇದ್ದೀವಿ. ಅವರೂ ನಮ್ಮನ್ನು ತುಂಬ ಚೆನ್ನಾಗಿ ಸಪೋರ್ಟ್ ಮಾಡ್ತಾ ಇದ್ದಾರೆ. ಹಾಗೆಯೇ ನಮ್ಮ ನ್ಯಾಷನಲ್ ಕಮಿಟಿಗೆ ಇಲ್ಲಿನ ಬೇರೆ ಬೇರೆ ಊರುಗಳಿಂದ ಸದಸ್ಯರಾಗಿದ್ದಾರೆ, ಇಂಡಿಯಾದಿಂದ ಕೂಡ ಮೆಂಬರ್ಸ್ ಅನ್ನು ಹಾಕಿಕೊಂಡಿದ್ದೇವೆ.

ಎಲ್ಲ ಕಡೆ... ಪಬ್ಲಿಸಿಟಿಯಾಗಲಿ, ರಿಜಿಸ್ಟ್ರೇಶನ್ ಡ್ರೈವ್ ಆಗಲಿ, ಪ್ರೋಗ್ರಾಮ್ ಮತ್ತು ಡಿಗ್ನಿಟರೀಸ್‍ಗಳನ್ನು ಕರೆಸುವುದರಲ್ಲಾಗಲೀ , ಕಮಿಟಿ ಮತ್ತು ವಾಲಂಟಿಯರ್ ಫೋರ್ಸ್ ಇನ್ವಾಲ್ವ್ಮೆಂಟ್ ಆಗಲೀ, ಎಲ್ಲಾ ದಿಕ್ಕುಗಳಲ್ಲೂ ನಿಜವಾದ ವಿಶ್ವ ಕನ್ನಡ ಸಮ್ಮೇಳನ ಮಾಡಬೇಕು ಅಂತ ಪ್ರಯತ್ನವನ್ನು ನಡೆಸಿದ್ದೇವೆ ಮತ್ತು ಸಾಕಷ್ಟು ಮಟ್ಟಿಗೆ ಅದರಲ್ಲಿ ಯಶಸ್ವಿ ಕೂಡ ಆಗಿದ್ದೇವೆ. ದಶದಿಕ್ಕುಗಳಿಂದಲೂ ಕನ್ನಡಿಗರು ಬಂದು ಸೇರುವಂತಾಗಲಿ ಅಂತ ನಮ್ಮ ಆಸೆ. ಈಗ ಬಂದಿರುವ ರೆಜಿಸ್ಟ್ರೇಶನ್ ಡೇಟ ನೋಡಿದರೆ ಅದು ಹಾಗೇ ಆಗುತ್ತದೆ ಎನ್ನುವುದರಲ್ಲಿ ನಮಗೆ ಸಂಶಯ ಇಲ್ಲ. ಈಗ ನೀವು ಕೇಳಿದ ಪ್ರಶ್ನೆ- ಬೇ ಏರಿಯಾದಲ್ಲಿ ಕಾರಣಾಂತರಗಳಿಂದ ಯಾರಿಗಾದರೂ ಮಾಹಿತಿ ಸಿಕ್ಕಿಲ್ಲ ಅನ್ನುವ ಸಾಧ್ಯತೆಗಳು ಬಹಳ ಕಮ್ಮಿ. ನಮ್ಮ ಪಬ್ಲಿಸಿಟಿ ಟೀಮ್ ಅಷ್ಟು ಚೆನ್ನಾಗಿ ಕೆಲಸ ಮಾಡಿದೆ.

Ground levelನಲ್ಲಿ Word of mouth ಪಬ್ಲಿಸಿಟಿ ಇರಬಹುದು, personal networkನ ಪಬ್ಲಿಸಿಟಿ ಇರಬಹುದು, Indian establishments ಅಂದರೆ grocery stores, ಸಿನೆಮಾ ಥಿಯೇಟರ್ - ನಮ್ಮ ಕಮಿಟಿಯವರೇ ಒಬ್ಬರು ಸಿನೆಮಾ ಥಿಯೇಟರ್ ನಡೆಸುತ್ತಾರೆ-ಅಲ್ಲಿ ಸ್ಲೈಡ್ಸ್ ಹಾಕುವುದಾಗಲೀ, ವೆಬ್‍ಸೈಟ್, ಫೇಸ್‍ಬುಕ್ ಮತ್ತು ಎಲ್ಲ ರೀತಿಯ ಎಲೆಕ್ಟ್ರಾನಿಕ್ ಮೀಡಿಯ, ಹೀಗೆ ಎಲ್ಲ ಕಡೆಗಳಲ್ಲೂ ತುಂಬ ಚೆನ್ನಾಗಿ ಪಬ್ಲಿಸಿಟಿ ನಡೆದಿದೆ. ಕಾರಣಾಂತರಗಳಿಂದ ಯಾರನ್ನಾದರೂ ವಿಷಯ ತಲುಪಿಲ್ಲವಾದರೆ ಇರಲಿ ಎಂದು, ಟ್ರಡಿಶನಲ್ ಅಂಚೆ- 'ಸ್ನೇಲ್ ಮೇಲ್'ನ ಮೂಲಕವೂ ಮಾಹಿತಿ ಕಳುಹಿಸುವ ಪ್ರಯತ್ನ ಮಾಡಿದ್ದೇವೆ. ಅದ್ದರಿಂದ ಯಾರಿಗೂ ಈ ಸಮ್ಮೇಳನದ ಬಗ್ಗೆ ಸುದ್ದಿ ತಲುಪಿಲ್ಲ ಅಥವ ಇಲ್ಲಿ ಏನೇನು ಅಟ್ರ್ಯಾಕ್ಷನ್ ಇದೆ ಅಂತ ಗೊತ್ತಿಲ್ಲ ಅಂತ ಇರಬಾರದು.

ನಾವು 'Top 20 Reasons to Attend 8th AKKA WKC' ಅಂತಲೇ ಒಂದು ಪೋಸ್ಟರ್ ಮಾಡಿದೆವು. ಅದರಲ್ಲಿ ನಮ್ಮ ಸಮ್ಮೇಳನದಲ್ಲಿರುವ ಹೈಲೈಟ್ಸ್ ಎಲ್ಲವನ್ನೂ ಲಿಸ್ಟ್ ಮಾಡಿದ್ದೇವೆ. ಹೇಳುತ್ತಾ ಹೋದರೆ, ಇಪ್ಪತ್ತಲ್ಲ, ಸುಮಾರು ನಲವತ್ತು ಅಂಶಗಳನ್ನಾದರೂ ಪಟ್ಟಿ ಮಾಡಬಹುದು. ಸೆಲೆಬ್ರಿಟಿಗಳಿರಬಹುದು, ಡಿಗ್ನಿಟರಿಗಳಿರಬಹುದು, ಸ್ಪೆಷಲ್ ಪ್ರೋಗ್ರಾಮ್, ಲಿಟರರಿ ಪ್ರೋಗ್ರಾಮ್, ಸ್ಪೊರ್ಟ್ಸ್, ಸ್ಪಿರಿಚುಯಲ್ ಪ್ರೋಗ್ರಾಮ್, ವಿಮೆನ್ಸ್ ಫೋರಮ್ ಇರಬಹುದು, ಯೂತ್ ಆಕ್ಟಿವಿಟೀಸ್ ಇರಬಹುದು, ಅಂದ ಹಾಗೆ ಹೇಳಲು ಮರೆತೆ-Young Adults ಅಂತ ಒಂದು initiative ಶುರು ಮಾಡಿದ್ದೀವಿ.

ನೀವು ಗಮನಿಸಿರುವ ಹಾಗೆ ಈ ತರಹದ ಭಾರತೀಯ ಸಂಸ್ಕೃತಿಯ ಕಾರ್ಯಕ್ರಮಗಳು ಆಗ್ತಾ ಇರಬೇಕಾದರೆ, ಇಲ್ಲಿ ಹುಟ್ಟಿಬೆಳೆದ ಮಕ್ಕಳು, ಸಾಮಾನ್ಯ ಚಿಕ್ಕವರಾಗಿದ್ದಾಗ ಅಪ್ಪ ಅಮ್ಮನ ಕೈ ಹಿಡಿದುಕೊಂಡು ಬರ್ತಾರೆ, ಅಥವಾ ಅವರಿಗೆ ಮದುವೆಯಾಗಿ ಮಕ್ಕಳಾದಮೇಲೆ ಅವರ ಕೈ ಹಿಡಿದುಕೊಂಡು ಕರೆದುಕೊಂಡು ಬರುತ್ತಾರೆ. ಆದರೆ ಅವೆರಡರ ನಡುವೆ ಒಂದು ಏಜ್ ಬ್ರ್ಯಾಕೆಟ್ ಇದೆ. ಕಾಲೇಜ್ ಗೆ ಹೋದಮೇಲೆ, ಕಾಲೇಜಿನಿಂದ ಗ್ರ್ಯಾಜುಏಟ್ ಆದ ನಂತರ ಮದುವೆಯಾಗಿ ಮಕ್ಕಳಾಗುವವರೆಗೂ-roughly 16-25 ಅಂತ ಅಂದುಕೊಳ್ಳೋಣ. ಆ ಗ್ರೂಪ್ ನ ಬಗ್ಗೆ ನಾನು ಎಲ್ಲರಿಗೂ ಹೇಳುತ್ತಿರುತ್ತೇನೆ-they are conspicuous by their absence ಅಂತ. ಆ ಗ್ರೂಪ್ ಎಷ್ಟು ಮಿಸ್ಸಿಂಗ್ ಅಂತ ನೀವು ಯಾವುದೇ ಇಂಡಿಯನ್ ಫಂಕ್ಷನ್‍ಗೆ ಹೋದರೂ ಗೊತ್ತಾಗುತ್ತದೆ. ಅಂಥವರನ್ನ ಅಟ್ರ್ಯಾಕ್ಟ್ ಮಾಡಬೇಕು, ನಮ್ಮ roots ಗೆ ಹತ್ತಿರ ತರಬೇಕು, ಜಾಸ್ತಿ ಇನ್ವಾಲ್ವ್ ಮಾಡಿಕೊಳ್ಳಬೇಕು ಅಂತ Young Adults ಅಂತ ಒಂದು ಸೆಪರೇಟ್ ಟೀಮ್‍ ಮಾಡಿ, ಇಲ್ಲಿ ಹುಟ್ಟಿ ಬೆಳೆದವರನ್ನೇ ಮೆಂಬರ್ಸ್ ಆಗಿ ಮಾಡಿ ಅವರಿಂದಲೇ ಅನೇಕ initiatives ಅನ್ನು ಶುರು ಮಾಡಿಸಿ implement ಮಾಡಿಸುತ್ತಿದ್ದೇವೆ. That has also been tremendously successful.

ಐವತ್ತು ಜನ ಇಲ್ಲೇ ಹುಟ್ಟಿಬೆಳೆದ ಮಕ್ಕಳು, ಅಮೇರಿಕನ್ ನ್ಯಾಶನಲ್ ಆಂಥಮ್ ಅನ್ನು ಕನ್ನಡಕ್ಕೆ translate ಮಾಡಿ, ಇಂಡಿಯನ್ ಮತ್ತು ಅಮೇರಿಕನ್ ನ್ಯಾಶನಲ್ ಆಂಥಮ್‍ಗಳನ್ನು ಜುಗಲ್‍ಬಂದಿಯಾಗಿ ಹಾಡುತ್ತಿದ್ದಾರೆ. ಸೊ ಈ ಥರ ಅನೇಕ initiatives ತೆಗೆದುಕೊಂಡಿದ್ದೇವೆ. ಇವೆಲ್ಲದರ ಹಿಂದೆ ಇರುವ bottom line ಅಂದರೆ ಕನ್ನಡಿಗರಲ್ಲಿ ಆ ಒಂದು momentum... ಒಂದು ಉತ್ಸಾಹವನ್ನು ಜೆನರೇಟ್ ಮಾಡೋಣ ಅಂತ. ಕನ್ನಡಿಗರಿಗೆ ಅವರ ಬಗ್ಗೆ ಯಾವಾಗಲೂ ಹೆಮ್ಮೆ ಇರುತ್ತದೆ, ಆದರೆ ಅವರು ಅದನ್ನು ಓಪನ್ನಾಗಿ ಸೆಲೆಬ್ರೇಟ್ ಮಾಡೋದಕ್ಕೆ ಹೋಗೋದಿಲ್ಲ. ಇದೊಂದು ಅವಕಾಶವನ್ನು ನಾವು ತೆಗೆದುಕೊಂಡು ಆ ಒಂದು momentum ಅನ್ನು ಜೆನರೇಟ್ ಮಾಡಿ ಅಮೇರಿಕನ್ನಡಿಗರಲ್ಲಿ ಒಂದು ಸಂಘಟನಾ ಶಕ್ತಿಯನ್ನು, ಉತ್ಸಾಹವನ್ನು, ಸಂಭ್ರಮವನ್ನು ಇನ್ನೂ ಹೆಚ್ಚು ಮಾಡೋಣ ಎಂದು ಆಸೆ, ಉದ್ದೇಶ.

ಪೂರ್ಣಿಮ ಮೋಹನ್ : ಬಂದಿರುವ ಪ್ರತಿಯೊಬ್ಬರಿಗೂ ಕೂಡ ಏನಪ್ಪ ಅಂದ್ರೆ ಜೀವನದಲ್ಲಿ ಅವರು ನಡೆದ ಘಟನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಎಂಟನೇ ಅಕ್ಕ ಸಮ್ಮೇಳನಕ್ಕೆ ಹೋಗಿದ್ದೆವು ಅನ್ನುವುದು ಕೂಡ ಅವರ ನೆನಪಿನ ಪುಟಗಳಲ್ಲಿ ಮುದ್ರಿತ ಆಗುವ ಹಾಗೆ ವ್ಯವಸ್ಥೆಯನ್ನು ಮಾಡಿದ್ದೀರಿ. ಇಂಥ ಒಂದು ಸಮ್ಮೇಳನದಲ್ಲಿ ನಾವೆಲ್ಲ ಭಾಗಿಗಳಾಗುತ್ತಿರುವುದು ನಮಗೆ ಬಹಳ ಸಂಭ್ರಮದ ವಿಷಯ. ಈ ರೀತಿಯ ಒಂದು ಸಮ್ಮೇಳನವನ್ನು ನೀವು ಮಾಡಬೇಕು ಅನ್ನುವ ಸಂಕಲ್ಪವನ್ನು ಮಾಡಿ ಇಷ್ಟೆಲ್ಲ ಮುಂದುವರೆಸಿಕೊಂಡು ಹೋಗುತ್ತಿರುವುದು ಒಂದು ಸಾಧನೆ. ಥೀಮ್ ಸ್ಲೋಗನ್ 'ಸಾಧನೆ, ಸಂಭ್ರಮ, ಸಂಕಲ್ಪ'ಕ್ಕೆ ತಕ್ಕಂತೆ ತಯಾರಿಗಳಾಗ್ತಾಇವೆ, ಇದರಲ್ಲೆಲ್ಲವೂ ನಿಮ್ಮ ಪ್ರಯತ್ನ ಬಹಳ ಯಶಸ್ವಿಯಾಗಲಿ, successful ಆಗಲಿ ಅಂತ ಆಶಿಸುತ್ತಾ, ನಮ್ಮ ಜೊತೆ ಸಮಯವನ್ನು ಸ್ಪೆಂಡ್ ಮಾಡಿದಕ್ಕಾಗಿ ನಿಮಗೆ ಧನ್ಯವಾದಗಳು.

ರಘು ಹಾಲೂರು : Thank you very much! ಧನ್ಯವಾದಗಳು ಪೂರ್ಣಿಮ ಅವರೆ. In continuation of what I was saying, ದಟ್ಸ್ ಕನ್ನಡ ಆಗಲೀ, ನಮ್ಮ ಹಲವಾರು ಮೀಡಿಯ ಪಾರ್ಟ್‍ನರ್ಸ್ ಆಗಲೀ ನಮಗೆ ತುಂಬ ಸಪೋರ್ಟ್ ಮಾಡಿದ್ದಾರೆ. ಪ್ರತಿವಾರ ನಮ್ಮ ರೇಡಿಯೋ ಕಾರ್ಯಕ್ರಮಾನೂ ಬರುತ್ತೆ. ದಟ್ಸ್ ಕನ್ನಡದಲ್ಲಿ ಯಾವಾಗಲೂ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಸುದ್ದಿ ಇರುತ್ತದೆ. ಎಲ್ಲ ಶ್ರೋತೃಗಳೂ, ಎಲ್ಲ ಓದುಗರೂ ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ, ಬಂಧುಮಿತ್ರರಿಗೂ ಇದರ ಬಗ್ಗೆ ತಿಳಿಸುತ್ತಾರೆ ಅಂತ ಆಶಿಸುತ್ತೇನೆ. ಎಲ್ಲರೂ ಬನ್ನಿ, ಒಟ್ಟಿಗೆ ಸೆಲೆಬ್ರೇಟ್ ಮಾಡೋಣ. ಸಮ್ಮೇಳನ ತುಂಬ ಎಂಜಾಯಬಲ್ ಆಗಿ ಇರುತ್ತದೆ.

ಸ್ನೇಹಿತರೆ,
ನಡೆಯಲಿದೆ ನಿಮ್ಮಂಗಳದಲ್ಲಿ ವಿಶ್ವ ಕನ್ನಡ ಸಮ್ಮೇಳನ ಒಂದು,
ಸಾಗುತಿದೆ ತಯಾರಿ 'ಅಕ್ಕ' ಉತ್ಸವದ ವಿಜೃಂಭಣೆಗೆಂದು
ಕೆಕೆಎನ್‍ಸಿ ಕರೆಯುತಿದೆ ಕಣಿವೆಯ ಕನ್ನಡಿಗರಿಗಿಂದು
ಎಲ್ಲರೂ ಒಂದಾಗಿ ಒಂದುಗೂಡಿ ಬಂದು ನಮ್ಮ ಹರಸಿರೆಂದು
ಕನ್ನಡದ ಕಂಪನು ಪಸರಿಸಲು ಸಹಕರಿಸಿರೆಂದು
ಸಾಧನೆ ಸಂಭ್ರಮ ಸಂಕಲ್ಪದ ರಥವ ಮುನ್ನಡೆಸಲೆಂದು

ತಪ್ಪದೆ ಬನ್ನಿ, ಆಗಸ್ಟ್ 29, 30, 31. ಮೆಕೆನ್ರಿ ಕನ್ವೆನ್ಷನ್ ಸೆಂಟರ್, ಸ್ಯಾನ್ ಹೋಸೆ.

English summary
AKKA World Kannada convention 2014 co-convener Raghu Halur interview by Poornima Mohan. 8th AKKA WKC will be held in San Jose, USA from August 29 to 31, 2014 in association with Kannada Koota Northern Callifornia (KKNC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X