• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಸ್ಟನ್ ಕನ್ನಡ ನುಡಿಹಬ್ಬದಲ್ಲಿ ಥೈಥೈಥೈಥೈಥೈ

By Prasad
|

ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1ರಂದು ಬೋಸ್ಟನ್ ನಲ್ಲಿ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ಹೊಯ್ಸಳ ಕನ್ನಡ ಕೂಟದ ಸಹಯೋಗದಲ್ಲಿ ನಡೆಯಲಿರುವ 2ನೇ 'ನಾವಿಕ' ವಿಶ್ವ ಕನ್ನಡ ಸಮಾವೇಶಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಸಮಾವೇಶಕ್ಕೆ ಸರ್ವರೀತಿಯ ಸಿದ್ಧತೆಗಳು ಭರದಿಂದ ಸಾಗಿವೆ. ನೀವು ಅಥವಾ ನಿಮ್ಮ ಸ್ನೇಹಿತರು ಇನ್ನೂ ನೋಂದಾಯಿಸದಿದ್ದರೆ, ಇಂದೇ ನಮ್ಮ ಅಂತರಜಾಲ ತಾಣಕ್ಕೆ ಭೇಟಿ ನೀಡಿ. ನೀವು ಒಂದು ದಿನದ ನೋಂದಾವಣಿ ಕೂಡ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ.

ಈ ಸಮಾವೇಶದಲ್ಲಿ ಅಮೋಘ ಕಾರ್ಯಕ್ರಮಗಳು ಮತ್ತು ವರ್ಣರಂಜಿತ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಉದಾಹರಣೆಗೆ, ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಭರ್ಜರಿ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಂಡದಕುಳಿ ರಾಮಚಂದ್ರ ಹೆಗಡೆ ಮತ್ತು ವಿದ್ಯಾ ಕೊಲ್ಯೂರ್ ಅವರು ತಮ್ಮ ತಮ್ಮ ತಂಡಗಳ ಜತೆಗೆ ಬಂದು ಪ್ರೇಕ್ಷಕರನ್ನು ತಮ್ಮ ಪ್ರತಿಭೆಯಿಂದ ಸೆಳೆಯಲು ಸಜ್ಜಾಗಿದ್ದಾರೆ. ನೀವು ಯಕ್ಷಗಾನದ ಅಭಿಮಾನಿ ಇರಬಹುದು ಅಥವಾ ಮೊದಲ ಬಾರಿ ಯಕ್ಷಗಾನ ನೋಡುತ್ತಿರಬಹುದು, ಇವರ ಕಾರ್ಯಕ್ರಮ ನಿಮಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ!

ಯಕ್ಷ ಮಂಜೂಷಾ : ಹಲವು ಪ್ರಥಮಗಳನ್ನು ಸಾಧಿಸಿರುವ ಮಂಗಳೂರಿನ ಯಕ್ಷ ಮಂಜೂಷಾ ಯಕ್ಷಗಾನ ಮಂಡಳಿ ಈ ಬಾರಿ ಕನ್ನಡ ನುಡಿಹಬ್ಬದ ಆಕರ್ಷಣೆಗಳಲ್ಲೊಂದಾಗಲಿದೆ. ಕನ್ನಡ ಮತ್ತು ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏಕೈಕ ತಂಡ ಇದು. ಓರ್ವ ಮಹಿಳೆ ನೇತೃತ್ವ ವಹಿಸಿರುವ ಈ ತಂಡ 19 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿದೆ. ವಿದ್ಯಾ ಕೊಯ್ಲೂರ್ ಅವರು ತಂಡದ ಮುಖ್ಯಸ್ಥೆ ಮಾತ್ರವಲ್ಲ, ಕ್ರಿಯೆಟೀವ್ ಡೈರೆಕ್ಟರ್ ಕೂಡ ಆಗಿದ್ದಾರೆ. ಅಮೆರಿಕಾದ ಯಕ್ಷಗಾನ ಪ್ರಿಯರನ್ನು ರಂಜಿಸಲು ತಂಡ ತುದಿಗಾಲಲ್ಲಿ ನಿಂತಿದೆ.

ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ : ಕುಂಭಾಶಿಯ ಕರ್ನಾಟಕದ ಪುರಾತನ ಕಲೆಯನ್ನು 2000ನೇ ವರ್ಷದಿಂದ ಪೋಷಿಸುತ್ತಿದೆ. ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಮುಖ್ಯಸ್ಥರಾಗಿರುವ ಈ ಯಕ್ಷಗಾನ ಮಂಡಳಿ ದೇಶದಲ್ಲಿ ಮಾತ್ರವಲ್ಲಿ ವಿದೇಶದಲ್ಲಿ ಕೂಡ ಹಲವಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ. ನಾವಿಕ ನಡೆಸುತ್ತಿರುವ 2ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ ಮೊದಲ ಬಾರಿಗೆ ಅಮೆರಿಕಾದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡುತ್ತಿದೆ.

ನೋಂದಾಯಿಸಿಕೊಳ್ಳಿ : ಜನಪ್ರಿಯ ಆಗ್ರಹದ ಮೇರೆಗೆ ಈ ಬಾರಿ ಕೇವಲ ಒಂದು ದಿನದ ವಿಶೇಷ ನೋಂದಣಿಯ ಅವಕಾಶವನ್ನು ಕನ್ನಡ ಉತ್ಸಾಹಿಗಳಿಗೆ ನೀಡಲಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕನ್ನಡ ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಬೇಕೆಂದು ಆಯೋಜಕರು ಆಗ್ರಹಿಸಿದ್ದಾರೆ. ಈ ಬಾರಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಭಾಗವಹಿಸುತ್ತಿರುವುದು ವಿಶೇಷ. ಗಿರೀಶ್ ಕಾರ್ನಾಡ್ ಮತ್ತು ಡಾ. ಚಂದ್ರಶೇಖರ ಕಂಬಾರ ಅವರು ಮುಖ್ಯ ಅತಿಥಿಗಳಾಗಿ ಸಮ್ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ಹಲವಾರು ಕನ್ನಡ ಸಿನೆಮಾರಂಗದ ತಾರೆಗಳು ರಂಜಿಸಲು ಅಮೆರಿಕಾಕ್ಕೆ ಹೋಗುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yaksha Manjusha of Mangalore and Poornachandra Yakshagana Pratishthana of Kumbhashi are performing Yakshagana, traditional theatre art of Karnataka at 2nd Navika World Kannada Conference to be held from Aug 30 - Sept 1, 2013 in Boston. Registration open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more