ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಸಾಂಸ್ಕೃತಿಕ ಹಬ್ಬಕ್ಕೆ ಅತಿಥಿಗಳ ಪಟ್ಟಿ!

By * ಪರಿಣೀತ ಮಾಗೋಡು, ಸಿಂಗಪುರ
|
Google Oneindia Kannada News

Baragur Ramachandrappa
ಕನ್ನಡ ಸಂಘ ಸಿಂಗಪುರ ಮತ್ತು ಹೃದಯವಾಹಿನಿ ಮಂಗಳೂರು ಅವರು ಜಂಟಿಯಾಗಿ ಆಯೋಜಿಸಿರುವ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಹಬ್ಬಕ್ಕೆ ಬರುವ ಅತಿಥಿಗಳ ಸಂಕ್ಷಿಪ್ತ ಪಟ್ಟಿ ಮತ್ತು ಕಾರ್ಯಕ್ರಮಗಳ ವಿವರಗಳು ಇಂತಿದೆ.

ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷತೆ : ಖ್ಯಾತ ಬರಹಗಾರ, ವಿಮರ್ಶಕ, ಗೀತಕಾರ, ಚಲನಚಿತ್ರ ನಿರ್ದೇಶಕ, ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ.

ಕರ್ನಾಟಕ ಸರ್ಕಾರ ಮತ್ತು ವಿವಿಧ ಇಲಾಖೆಗಳಿಂದ:

* ಗೋವಿಂದ ಕಾರಜೋಳ, ಸಚಿವರು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ
* ಆರ್.ಅಶೋಕ್, ಸಚಿವರು - ಗೃಹ ಮತ್ತು ಸಾರಿಗೆ ಖಾತೆ
* ಮುರುಗೇಶ್ ನಿರಾನಿ, ಸಚಿವರು - ಬೃಹತ್ ಕೈಗಾರಿಕೆ
* ಮುಖ್ಯ ಮಂತ್ರಿ ಚಂದ್ರು, ಅಧ್ಯಕ್ಷರು - ಕನ್ನಡ ಅಭಿವೃಧ್ಧಿ ಪ್ರಾಧಿಕಾರ
* ಮನು ಬಳಿಗರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು

ಸಂಗೀತ ಕಾರ್ಯಕ್ರಮಗಳು : ಸ್ಯಾಕ್ಸೋಫೋನ್ ಚಕ್ರವರ್ತಿ ಪದ್ಮಶ್ರಿ ಡಾ. ಕದ್ರಿ ಗೋಪಾಲನಾಥ್ ಅವರಿಂದ "ಸ್ವರ ಮಾಧುರ್ಯ", ಫ್ಲೂಟ್ ಸುರಮಣಿ ಪ್ರವೀಣ್ ಗೋಡ್ಕಿಂಡಿ ಅವರಿಂದ ಸಂಗೀತ ಕಾರ್ಯಕ್ರಮ, ಪುತ್ತೂರ್ ನರಸಿಂಹ ನಾಯಕ್ ಮತ್ತು ತಂಡದವರಿಂದ "ದಾಸ ಮಂಜರಿ", ಕಿಕ್ಕೇರಿ ಕೃಷ್ಣಮೂರ್ತಿ (ಸಿ ಅಶ್ವತ್ ಮ್ಯೂಸಿಕಲ್ ತಂಡ) ಅವರ ಮುಂದಾಳತ್ವದಲ್ಲಿ "ಸಿ ಅಶ್ವತ್ ನಮನ", ಸರಿಗಮಪ ವಿಜೇತ ಚಿನ್ಮಯ್ ಮತ್ತು ವೃಂದದವರಿಂದ "ರಾಗ ತರಂಗ", ಹಿನ್ನೆಲೆ ಗಾಯಕ ಬದ್ರಿ ಪ್ರಸಾದ್ ಮತ್ತು ಗಾಯಕಿ ಅನುರಾಧ ಭಟ್ ಅವರಿಂದ "ಚಿತ್ರ ಮಂಜರಿ".

ಹಾಸ್ಯ : ಪ್ರೊ. ಕೃಷ್ಣೇಗೌಡ ಮತ್ತು ತಂಡದವರಿಂದ ಹಾಸ್ಯಮಂಜರಿ, "ಸಿರಿಗಂಧ" ಮಹಿಳಾ ಮಂಡಳಿಯವರಿಂದ ಮನೆಮಾತಾಗಿರುವ ಹಾಸ್ಯ ನಾಟಕ "ಶ್ರೀಕೃಷ್ಣ ಸಂಧಾನ" ಮತ್ತು ಪ್ರಖ್ಯಾತ ಕಲಾವಿದರಾದ "ಪ್ರಯೋಗರಂಗ" ಅವರಿಂದ ಹಾಸ್ಯ ನಾಟಕ "ಸನ್ಮಾನ ಸುಖ".

ಜನಪದ, ಯಕ್ಷಗಾನ : ಯಕ್ಷ ಶಿಕ್ಷಣ ಟ್ರಸ್ಟ್, ಮಣಿಪಾಲ್, ಅವರಿಂದ "ಯಕ್ಷಗಾನ", ಪರಿಮಳ ಪ್ರಕಾಶ್ ಮತ್ತು ಅವರ ತಂಡದಿಂದ "ವೀರಗಾಸೆ", ಸ್ನೇಹ ಮಹಿಳಾ ಮಂಡಳಿ, ಸಾಗರ, ಇವರಿಂದ "ಡೊಳ್ಳು ಕುಣಿತ".

ನೃತ್ಯ : "ನಾಟ್ಯ ಶ್ರೀ ರಾಮನ್" ಅವರ "ಶ್ರೀ ರಾಜರಾಜೇಶ್ವರಿ ನೃತ್ಯ ಕಲಾಮಂದಿರ", ತುಮಕೂರು, ಅವರಿಂದ "ಗೀತಾ ನೃತ್ಯ" ಮತ್ತು "ಕನ್ನಡವೇ ಸತ್ಯ" ನೃತ್ಯ ರೂಪಕ, ಶ್ರೀ ಶಾರದ ಭರತನಾಟ್ಯ ಕೇಂದ್ರ, ಸಾಗರ ಅವರಿಂದ "ಕವಿ ನಮನ", "ಚಿರಂತನ" ದಾವಣಗೆರೆ ಮತ್ತು "ಭರತಾಂಜಲಿ" ಅವರಿಂದ ನೃತ್ಯ ರೂಪಕಗಳು.

ಸ್ಯಾಂಡಲ್‌ವುಡ್ ಕಲಾವಿದರಿಂದ ಸ್ಟಾರ್ ನೈಟ್ : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಪೂಜಾ ಗಾಂಧಿ, ಯಶ್, ದಿಗಂತ್, ಯೋಗೇಶ್, ಚಿರಂಜೀವಿ ಸರ್ಜ, ಸೃಜನ್ ಲೋಕೇಶ್, ರಾಧಿಕಾ ಪಂಡಿತ್, ಐಂದ್ರಿತಾ ರೇ, ಸಂಜನಾ, ರಾಗಿಣಿ, ತಬಲಾ ನಾಣಿ , ರಮೆಶ್ ಬಾಬು, ಮುಂತಾದವರಿಂದ.

ಜಾದೂ ಕಾರ್ಯಕ್ರಮ : ಕೌಶಿಕ್, ಹೆಗಡೆ, ಜಾದುಗಾರ್ ಶಿರ್ಶಿ ಅವರಿಂದ "ಕಗ್ಗ ಮ್ಯಾಜಿಕ್".

ವಿಶೇಷ ಆಹ್ವಾನಿತರು : ದಕ್ಷಿಣ ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕ, ಕವಿ, ಕನ್ನಡ ಘಜಲ್ ಪಿತಾಮಹ ಪಿ.ಬಿ.ಶ್ರೀನಿವಾಸ್.

ಕೃತಿ ಬಿಡುಗಡೆ : ಪ್ರೊ.ಸಿ.ರಾಮಸ್ವಾಮಿ ಬರೆದಿರುವ "ಕಡಲಾಚೆ ಕನ್ನಡದತೆಯರು" - ಮನು ಬಳಿಗರ್ ಅವರಿಂದ.

ಪ್ರಶಸ್ತಿ ಪ್ರದಾನ :
ಈ ಕಾರ್ಯಕ್ರಮದಲ್ಲಿ "ವಿಶ್ವಕನ್ನಡ ರಾಜ್ಯೊತ್ಸವ" ಮತ್ತು "ವಿಶ್ವ ಮಾನ್ಯ ಸುವರ್ಣ" ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಿ ಗೌರವಿಸಲಾಗುವುದು.

ಗೋಷ್ಠಿಗಳು : ಕವಿಗೋಷ್ಠಿ, ಹನಿಗವನ ಗೋಷ್ಠಿ, ಉದ್ಯಮ ಗೋಷ್ಠಿ, ಮಾಧ್ಯಮ ಗೋಷ್ಠಿ, ವೈದ್ಯಕೀಯ ಗೋಷ್ಠಿ ಮತ್ತು ಅನಿವಾಸಿ ಕನ್ನಡಿಗರ ಗೋಷ್ಠಿಗಳು.

ಇನ್ನು ಹೆಚ್ಚಿನ ಮಾಹಿತಿಗಳಿಗೆ ದಟ್ಸ್‌ಕನ್ನಡಕ್ಕೆ ಭೇಟಿ ನೀಡುತ್ತಿರಿ. ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನಕ್ಕೆ ನೀವೂ ಬನ್ನಿ!

English summary
7th Kannada literary Conference, Singapore. List of invitess from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X