ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರಕ್ಕೆ ಶಿವಣ್ಣ ಮತ್ತು ಪೂಜಾ ಗಾಂಧಿ

By * ಪರಿಣೀತ ಮಾಗೋಡು, ಸಿಂಗಾಪುರ
|
Google Oneindia Kannada News

Shivrajkumar
ಖ್ಯಾತ ಚಿತ್ರ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಸಿಂಗಾಪುರ ಕನ್ನಡ ಸಂಘ ನಡೆಸಿಕೊಡುತ್ತಿರುವ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಟುವ್ವಿ, ಟುವ್ವಿ ಎಂದು ಹಾಡಿ ಮತ್ತು ತಮ್ಮ ಮನಮೋಹಕ ಬ್ರೇಕ್ ಡ್ಯಾನ್ಸ್‌ನಿಂದ ಸಿಂಗನ್ನಿಡಗರನ್ನು ರಂಜಿಸಲಿದ್ದಾರೆ. ಅವರ ಜೊತೆ ಹೆಜ್ಜೆ ಹಾಕಲು ಬರುತ್ತಿದ್ದಾರೆ 'ಮುಂಗಾರು ಮಳೆ'ಯಲ್ಲಿ ಮಿಂದು ಬಂದ ಬೆಡಗಿ ಪೂಜಾ ಗಾಂಧಿ!

ಇಲ್ಲಿನ ಡೋವರ್ MRTಗೆ ಹೊಂದಿಕೊಂಡಂತೆ ಇರುವ, 1200ಕ್ಕೂ ಹೆಚ್ಚು ಸುಖಾಸನಗಳನ್ನು ಹೊಂದಿರುವ ಪ್ರತಿಷ್ಠಿತ ಸಮುದಾಯ ಕೇಂದ್ರದಲ್ಲಿ, ನವೆಂಬರ್ 27 ಮತ್ತು 28 ರಂದು ಸಮ್ಮೇಳನ ವಿಜೃಂಭಣೆಯಿಂದ ನಡೆಯಲಿದೆ. 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ, "ಸ್ಟಾರ್ ನೈಟ್" ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ನಕ್ಷತ್ರಗಳು ಮಿಂಚಲಿವೆ! ಎರಡು ದಿನಗಳ ಸಾಂಸ್ಕೃತಿಕ ಉತ್ಸವವು 28 ರ ಸಂಜೆ 6ರಿಂದ ಪ್ರಾರಂಭವಾಗುವ "ಸ್ಟಾರ್ ನೈಟ್" ಕಾರ್ಯಕ್ರಮದೊಂದಿಗೆ ಭರ್ಜರಿ ಮುಕ್ತಾಯ ಕಾಣಲಿದೆ.

ಅಭಿಮಾನಿಗಳ ನೆಚ್ಚಿನ "ಶಿವಣ್ಣ" ಅರ್ಥಾತ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪೂಜಾ ಗಾಂಧಿ ಜೊತೆ, ಹ್ಯಾಂಡ್ಸಮ್ ನಟ ಯಶ್, ಧೂದ್ ಪೇಡ ದಿಗಂತ್, ಲೂಸ್ ಮಾದ ಖ್ಯಾತಿಯ ಯೋಗೇಶ್, ಚಿರಂಜೀವಿ ಸರ್ಜಾ, ಸೃಜನ್ ಲೋಕೇಶ್, ಮೊಗ್ಗಿನ ಮನಸ್ಸು ಖ್ಯಾತಿಯ ರಾಧಿಕ ಪಂಡಿತ್, ಮುದ್ದು ಮುಖದ ಹುಡುಗಿ ಐಂದ್ರಿತ ರೇ, ಕನ್ನಡದ ಮಲ್ಲಿಕಾ ಶೆರಾವತ್ ಎಂದೇ ಖ್ಯಾತರಾದ ಸಂಜನಾ, "ಗಂಡೆದೆ" ಚಿತ್ರದ ತಾರೆ ರಾಗಿಣಿ, ತಬಲ ನಾಣಿ, ರಮೇಶ್ ಬಾಬು ಮತ್ತು ಇನ್ನು ಹಲವಾರು ಕಲಾವಿದರು ಭಾಗವಹಿಸುತ್ತಿದ್ದಾರೆ!

ಈ ಕಾರ್ಯಕ್ರಮದಲ್ಲಿ ಇನ್ನೂ ಒಂದು ವಿಶೇಷವಿದೆ! ಕನ್ನಡ ಚಿತ್ರರಂಗಕ್ಕೆ ದಶಕಗಳಿಂದ ಸೇವೆ ಸಲ್ಲಿಸಿ ಸದ್ಯದಲ್ಲೇ ತಮ್ಮ ನೂರನೇ ಚಿತ್ರವಾದ "ಜೋಗಯ್ಯ"ವನ್ನು ಕನ್ನಡ ಕುಲ ಕೋಟಿಗೆ ಅರ್ಪಿಸುತ್ತಿರುವ ಶಿವರಾಜಕುಮಾರ್ ಅವರಿಗೆ ವಿಶೇಷ ಬಿರುದು ನೀಡಿ ಆತ್ಮಿಯವಾಗಿ ಸನ್ಮಾನಿಸಲಾಗುವುದು.

ಇದಲ್ಲದೆ, ಸಮ್ಮೇಳನದ ಮೊದಲನೆ ದಿನವಾದ ನವೆಂಬರ್ 27 ರ ಸಂಜೆ ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಬದ್ರಿ ಪ್ರಸಾದ್ ಮತ್ತು ಗಾಯಕಿ ಅನುರಾಧ ಭಟ್ ಅವರಿಂದ ವಾದ್ಯಗೋಷ್ಠಿ ಕೂಡ ಇದೆ.

ತಮ್ಮ ನೆಚ್ಚಿನ ತಾರೆಗಳನ್ನು ನೋಡಲು, ಭೇಟಿಮಾಡಲು, ಅವರ ಜೊತೆ ಅವಕಾಶ ಸಿಕ್ಕರೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 80 ಮತ್ತು 90 ರ ದಶಕದಲ್ಲಿ ಸಿಂಗಾಪುರಕ್ಕೆ ವಲಸೆ ಬಂದ ಕನ್ನಡಿಗರು, ಆಗ ತೆರೆಕಂಡು ಮನೆಮಾತಾಗಿದ್ದ ಶಿವರಾಜ್‌ಕುಮಾರ್ ಅವರ ಚಿತ್ರಗಳನ್ನು ಮೆಲುಕು ಹಾಕಿ ಹಳೆಯ ದಿನಗಳನ್ನು ನೆನೆಯುತ್ತಿದ್ದಾರೆ! ಐಟಿ ಮತ್ತು ಇತರೆ ಕೆಲಸಗಳ ಮೇಲೆ ಇತ್ತೀಚೆಗೆ ಸಿಂಗಾಪುರಕ್ಕೆ ಬಂದಿರುವ ಯುವಕರು, ಅವರ ನಿದ್ದೆ ಕೆಡೆಸಿರುವ ಪೂಜಾ ಗಾಂಧಿ ಮತ್ತು ಐಂದ್ರಿತಾ ರೇ ಅವರನ್ನು ಕಾಣುವ ತವಕದಲ್ಲಿದ್ದಾರೆ!

ಗಮನಿಸಿ : ಈ ಸಮ್ಮೇಳನಕ್ಕೆ ಕನ್ನಡ ಮತ್ತು ಇತರ ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ಧ, ಹಿರಿಯ, ಮಧುರ ಕಂಠದ ಹಿನ್ನೆಲೆ ಗಾಯಕರೊಬ್ಬರು ಬರುತ್ತಿದ್ದಾರೆ! ಯಾರೆಂದು ಊಹಿಸಿ. ಸುಳಿವು, ಇವರು ಮೂಲತಃ ತೆಲುಗಿನವರು. ಬಹು ಭಾಷಾ ಪ್ರವೀಣರು, ಬರೀ ಹಾಡುಗಾರನಲ್ಲ, ಕವಿ ಕೂಡ! ಹೆಚ್ಚಿನ ಮಾಹಿತಿಗಾಗಿ ಕಾದು ನೋಡಿ!

ಸಮ್ಮೇಳನಕ್ಕೆ ಇನ್ನೂ ಯಾರು ಯಾರು ಬರುತ್ತಿದ್ದಾರೆ? ತಿಳಿದುಕೊಳ್ಳಲು ದಟ್ಸ್‌ಕನ್ನಡಕ್ಕೆ ಭೇಟಿ ನೀಡುತ್ತಿರಿ! ಸಮ್ಮೇಳನಕ್ಕೆ ನೀವು ಬರುತ್ತೀರಿ ತಾನೆ?

English summary
Hatric Hero Shivaraj Kumar and Pooja Gandhi among dozens ofartists to entertain in Starry night, Singapore. 27-28November. Event organizers : 7th world Kannada Sammelana,Singapore Kannada Sangha Singapore [ VKSS 2010]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X