ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಕನ್ನಡ ಸಾಹಿತ್ಯ ರಸದೌತಣಕ್ಕೆ ದಿನಗಣನೆ

By * ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

7th World Kannada Convention, Singapore 2010
ಸಿಂಗಪುರ ಕನ್ನಡ ಸಂಘದ ಆಶ್ರಯದಲ್ಲಿ ನಡೆಯುವ ಏಳನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಇನ್ನು ಕೇವಲ ಎರಡೇ ವಾರದಲ್ಲಿ, ಈ ಪ್ರತಿಷ್ಠಿತ ಕಾರ್ಯಕ್ರಮವು ಅದ್ದೂರಿಯಾಗಿ ಇಲ್ಲಿನ ಡೋವರ್ ಕನ್ವೆನ್ಷನ್ ಸಭಾಂಗಣದಲ್ಲಿ ನೆರವೇರಲಿದೆ.

ಸಿಂಗಪುರಿನಲ್ಲಿ ನೆಲಸಿರುವ ಕನ್ನಡಿಗರಿಗೆ ತಾಯ್ನಾಡಿನ ಕಲಾವಿದರನ್ನು ನೋಡುವ, ಅವರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉತ್ಸಾಹ ದಿನೇ ದಿನೇ ಹೆಚ್ಚುತ್ತಿದೆ. ಈ ಕಾರ್ಯಕ್ರಮವನ್ನು ಎಂದಿನಂತೆ ಅಚ್ಚುಕಟ್ಟಾಗಿ ನಡೆಸಲು ಸಿಂಗಪುರ ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಉತ್ಸಾಹಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕರ್ನಾಟಕದಿಂದ ಬರುತ್ತಿರುವ ನೂರಾರು ಕಲಾವಿದರನ್ನು ಒಂದುಗೂಡಿಸಿ, ಎರಡು ದಿನಗಳು ಸಾಂಸ್ಕೃತಿಕ ಮತ್ತು ಮನರಂಜಿಸುವ ಕಾರ್ಯಕ್ರಮಗಳನ್ನು ಲೋಪ ದೋಷವಿಲ್ಲದೆ ನಡೆಸುವುದು ಸುಲಭದ ಮಾತಲ್ಲವಲ್ಲ. ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಈ ಮೆಗಾ ಕಾರ್ಯಕ್ರಮಕ್ಕೆ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ. ಟಿಕೆಟ್ ಮಾರಾಟ ಬಿಸಿ ರೊಟ್ಟಿಯಂತೆ ಮಾರಾಟವಾಗುತ್ತಿದೆ. ಕಾರ್ಯಕ್ರಮವನ್ನು ನೋಡಲು ಸಿಂಗಪುರ ಅಲ್ಲದೆ ನೆರೆಯ ದೇಶವಾದ ಮಲೇಶಿಯದಿಂದಲೂ ಕನ್ನಡಿಗರು ಬರುತ್ತಿದ್ದಾರೆ. ಒಟ್ಟಿನಲ್ಲಿ ಸಿಂಗನ್ನಡಿಗರಿಗೆ ಭಾರಿ ರಸದೌತಣ ಕಾದಿದೆ!

ಎರಡು ದಿನ ಭರ್ಜರಿಯಾಗಿ ನಡೆಯುವ ಸಮ್ಮೇಳನದಲ್ಲಿ ಹೆಸರಾಂತ ಕಲಾವಿದರಿಂದ ಸುಶ್ರಾವ್ಯ ಸಂಗೀತ, ಹಾಸ್ಯ ಕಲಾವಿದರಿಂದ ಹಾಸ್ಯ ಮಂಜರಿ, ಯಕ್ಷಗಾನ, ಹಾಸ್ಯ ನಾಟಕಗಳು, ವೀರಗಾಸೆ, ಡೊಳ್ಳು ಕುಣಿತ, ಶಾಸ್ತ್ರೀಯ ನೃತ್ಯ, ಸ್ಯಾಂಡಲ್‌ವುಡ್‌ನಿಂದ ವಿಶೇಷವಾಗಿ ಆಗಮಿಸುವ ಪ್ರಖ್ಯಾತ ನಟ ನಟಿಯರಿಂದ ರಂಗುರಂಗಿನ ಕಾರ್ಯಕ್ರಮಗಳಿವೆ. "ನ ಭೂತೋ ನ ಭವಿಷ್ಯತಿ" ಆಗುವ ಎಲ್ಲಾ ಲಕ್ಷಣವಿರುವ ಈ ಕಾರ್ಯಕ್ರಮಕ್ಕೆ ಬರುವ ಕಲಾವಿದರ ಪಟ್ಟಿ ದಿನವೂ ಬೆಳೆಯುತ್ತಲಿದೆ. ಎಲ್ಲರೂ ಅವರವರ ಕ್ಷೇತ್ರದಲ್ಲಿ ದಿಗ್ಗಜರೆ! ಸಿಂಗಪುರಕ್ಕೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಗಣ್ಯರ ಪಟ್ಟಿ ದಟ್ಸ್ ಕನ್ನಡ ತಾಣದಲ್ಲಿ ಸದ್ಯದಲ್ಲೇ ಪ್ರಕಟವಾಗಲಿದೆ. ಯಾರ್‍ಯಾರು ಬರುತ್ತಿದ್ದಾರೆ ಎಂದು ತಿಳಿದುಕೊಳ್ಳಲು ದಟ್ಸ್ ಕನ್ನಡಕ್ಕೆ ಭೇಟಿ ನೀಡುತ್ತಿರಿ.

ಸಾಂಸ್ಕೃತಿಕ ಕಾರ್ಯಕ್ರಮವಲ್ಲದೆ ಕವಿಗೋಷ್ಠಿ, ವೈದ್ಯಕೀಯಗೋಷ್ಠಿ, ಮಾಧ್ಯಮಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ ಮುಂತಾದ ವಿಶೇಷ ಕಾರ್ಯಕ್ರಮಗಳು ಕೂಡ ಇವೆ. ಅಲ್ಲದೆ ಮೊದಲ ಬಾರಿಗೆ ಸಿಂಗಪುರದಲ್ಲಿ ಕನ್ನಡಿಗರನ್ನು ಒಂದುಗೂಡಿಸುವ (ನೆಟ್ವರ್ಕಿಂಗ್) ಹೊಸ ಪ್ರಯೋಗ ಕೂಡ ನಡೆಯಲಿದೆ.

Zee TV, HDFC, masti 96.3, Thatskannada, United land bank, Esteem group, Premier properties, ಹೃದಯ ವಾಹಿನಿ ಮತ್ತು ಇನ್ನು ಹಲವು ಸಂಸ್ಥೆಗಳು ಈ ವೈಭವದ ಕಾರ್ಯಕ್ರಮವನ್ನು ಪ್ರಾಯೋಜಿಸಲು ಉತ್ಸಾಹದಿಂದ ಮುಂದೆ ಬಂದಿವೆ.

ಒಟ್ಟಿನಲ್ಲಿ ಕನ್ನಡವನ್ನು ನಾಡಿನಾಚೆಯಲ್ಲೂ ಉಳಿಸಿ ಬೆಳಸುವ ಇಂತಹ ಮಹತ್ಕಾರ್ಯಗಳಿಗೆ ಕನ್ನಡಿಗರೆಲ್ಲರ ಬೆಂಬಲ, ಪ್ರೋತ್ಸಾಹ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಉತ್ಸಾಹದಿಂದ ಭಾಗವಹಿಸುವಿಕೆಯ ಅಗತ್ಯವಿದೆ. ಇನ್ನೂ ಹೆಚ್ಚಿನ ಮಾಹಿತಿಗಳಿಗೆ ದಟ್ಸ್ ಕನ್ನಡ ತಪ್ಪದೇ ಓದುತ್ತಿರಿ!

ಸದ್ಯದಲ್ಲೇ ನಿರೀಕ್ಷಿಸಿ - ಭಾಗವಹಿಸುವ ಸಂಗೀತಗಾರರು ಯಾರು? ಸಿನೆಮಾ ನಟ ನಟಿಯರು ಯಾರು? ಕವಿಗಳು ಯಾರು? ಜನಪದ ಕಲಾವಿದರು ಯಾರು?

ಉಚಿತ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X