• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರ ವಿಶ್ವಕನ್ನಡ ಸಮ್ಮೇಳನಕ್ಕೆ ಎರಡೇ ವಾರ

By * ಶಾಮ್
|

ಬೆಂಗಳೂರು, ನ. 12: ಸಿಂಗಪುರ ಕನ್ನಡ ಸಂಘದ ಆಶ್ರಯದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿದೆ. ಇದೇ ನವೆಂಬರ್ 27 ಮತ್ತು 28ರಂದು ಸಿಂಗಪುರದಲ್ಲಿ ಏರ್ಪಡಿಸಲಾಗಿರುವ ಮಹತ್ವಾಕಾಂಕ್ಷೆಯ ಸಮ್ಮಿಲನವು ಸ್ಥಳೀಯ ಕನ್ನಡ ಸಂಘ ಹಮ್ಮಿಕೊಳ್ಳುತ್ತಿರುವ 7ನೇ ಜಾಗತಿಕ ಕನ್ನಡ ಸಮ್ಮೇಳನವಾಗಿದೆ. ಸ್ಥಳೀಯ ಕನ್ನಡಿಗರ ಜತೆಗೆ ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ತವರು ಕನ್ನಡ ನಾಡಿನ ನೆಂಟರು ಬಂಟರು ಸಮ್ಮೇಳನದಲ್ಲಿ ಪಾಲ್ಗೊಂಡು ಸಿಂಗಪುರ ಕನ್ನಡಿಗರ ಕನ್ನಡ ಸಂತಸವನ್ನು ಹೆಚ್ಚಿಸಬೇಕೆಂದು ಸಿಂಗಪುರ ಕನ್ನಡ ಸಂಘದ ಅಧ್ಯಕ್ಷ ಡಾ. ವಿಜಯ್ ಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಚೀನಿಯರು, ಮಲೇಶಿಯದವರು, ತದನಂತರದಲ್ಲಿ ಭಾರತೀಯರೇ ಹೆಚ್ಚಾಗಿ ನೆಲೆಸಿರುವ ಸ್ವಚ್ಛ, ಸುಂದರ ಸಿಂಗಪುರದಲ್ಲಿ ಜರುಗುವ ಎರಡು ದಿವಸಗಳ ಕನ್ನಡ ಕಲರವದಲ್ಲಿ ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ, ಒಲವೆತ್ತಿ ತೋರುವ ದೀಪಾ.. ಇದೇ ಮುಂತಾದ ಕನ್ನಡ ಸಿರಿನುಡಿಯ ನಾದ ಝೇಕಾಂರಗಳು ಸಮ್ಮೇಳನದ ತಾಣ ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಿಂದ ಮಾರ್ದನಿಸಲಿವೆ. ಹಾಡು ಹಸೆ, ಭಾಷಣ ಉಪನ್ಯಾಸ, ಸಿನಿಮಾ ಗೀತೆ ನೃತ್ಯಗಳ ಜತೆಜತೆಗೆ ತಿಳಿವು ಮತ್ತು ನಲಿವನ್ನು ಹದವಾಗಿ ಬೆರೆಸುವ ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಜಾಗ ಇದೆ.

ಸಿಂಗಪುರ ಕನ್ನಡ ಸಂಘಕ್ಕೆ ಇದೀಗ 14ರ ಪ್ರಾಯ. ಇಲ್ಲಿಗೆ ವಲಸೆಬಂದ ಭಾರತೀಯ ಸಂಜಾತ ಪ್ರಜೆಗಳ ಪೈಕಿ ತಮಿಳರದ್ದೇ ಸಿಂಹಪಾಲು. ಈ ದೇಶದಲ್ಲಿ ಕನ್ನಡ ಜನರ ಇರುವಿನ ಅರಿವು ಇತ್ತಿತ್ತಲಾಗಿ ಹೆಚ್ಚಾಗುತ್ತಿದೆ. ಕನ್ನಡ ಕುಟುಂಬಗಳ ನಡುವಿನ ಒಡನಾಟ ದಿನೇದಿನೇ ವೃದ್ಧಿಸುತ್ತಿದೆ. ಸಿಂಗಪುರಕ್ಕೆ ವರ್ಕ್ ವೀಸಾ ಅಥವಾ ಸ್ಟೂಡೆಂಟ್ ವೀಸಾದ ಮೇಲೆ ತೆರಳುವ ಕನ್ನಡಿಗರು ಕಡಿಮೆ. ಅಕಾಡೆಮಿಕ್ ಜ್ಞಾನ ಮತ್ತು ತಾಂತ್ರಿಕ ಹಾಗೂ ವಾಣಿಜ್ಯ ಕೌಶಲ್ಯ ಬಲದ ವೀಸಾ ಆಧಾರದ ಮೇಲೆ ಸಿಂಗಪುರಕ್ಕೆ ಹಾರುವ ಕನ್ನಡಿಗರೇ ಹೆಚ್ಚು. ಒಟ್ಟಾರೆ, ರೆಡಿಮೇಡ್ ಬಿಳಿ ಕಾಲರು ಅಂಗಿ, ತಿಳಿನೀಲಿ ಚೂಡಿದಾರ್, ಗಿಣಿ ಹಸಿರು ರೇಷ್ಮೆ ಸೀರೆ ಮತ್ತು ಕನಕಾಂಬರದ ವಾಯ್ಲ್ ಸೀರೆ ಧರಿಸಿ ಸಿಂಗಪುರದ ಮುಖ್ಯವಾಹಿನಿಯಲ್ಲಿ ಬೆರೆಯುವ ಕನ್ನಡಿಗ ಕನ್ನಡತಿಯರೇ ಇಲ್ಲಿ ಹೆಚ್ಚಾಗಿ ಕಂಡುಬರುವರು. ಇವರನ್ನೆಲ್ಲ ಒಂದು ದಾರಕ್ಕೆ ಪೋಣಿಸಿ ಮಲ್ಲಿಗೆ ಹಾರ ಕಟ್ಟುವ ಮೂಲಕ ಭಾಷೆ ಮತ್ತು ಸಾಂಸ್ಕೃತಿಕ ಉತ್ಸಾಹಗಳನ್ನು ಕನ್ನಡ ಸಂಘ ಮಾಡುತ್ತದೆಂದು ಆಶಿಸಬೇಕು.

ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಿರುವ ಸಿಂಗಪುರ ಕನ್ನಡ ಸಂಘದ ವೆಬ್ ಸೈಟಿನಲ್ಲಿ ತಮ್ಮ ಬಗ್ಗೆ ತಾವೇ ಹೇಳಿಕೊಂಡ ಮಾತುಗಳನ್ನು ನೀವು ಓದಬೇಕು: ಅದು ಹೀಗಿದೆ:

ಯುಗಾದಿ ಹಾಗೂ ಕನ್ನಡ ನಾಟಕ ಕಾರ್ಯಕ್ರಮಗಳು 1988ರಿಂದಲೂ ಸಿಂಗಪುರದ ಕನ್ನಡಿಗರಿಗೆ ಮನೆಮಾತು. ಯುಗಾದಿ ಹಬ್ಬವನ್ನು ಕೆಲವರ ಮನೆಯಲ್ಲಿ ಆಚರಿಸಿದರೆ, ಕನ್ನಡ ನಾಟಕಗಳು 'ಕಸ್ತೂರಿ ಕಂಪು' ಎಂಬ ಹೆಸರಿನಲ್ಲಿ ವರುಷಕ್ಕೊಮ್ಮೆ ನಡೆಯುತ್ತಿತ್ತು. 70-80ರ ದಶಕದಲ್ಲಿ ಸುಮಾರು 20 ಕುಟುಂಬಗಳಿದ್ದರೆ 90ರ ದಶಕದಲ್ಲಿ ಬೆಳೆದ ಕನ್ನಡಿಗರ ಗಣನೀಯ ಸಂಖ್ಯೆ ಕನ್ನಡ ಸಂಘದ ಹುಟ್ಟಿಗೆ ಕಾರಣೀಭೂತವಾಯಿತು. 11 ಸೆಪ್ಟೆಂಬರ್ 1996ರಂದು ಇಲ್ಲಿಯ ರಿಜಿಸ್ಟ್ರಾರ್ ಆಫ್ ಸೊಸೈಟಿಯಲ್ಲಿ ನೊಂದಾಯಿಸುವ ಮೂಲಕ ಇಂದಿನ ಕನ್ನಡ ಸಂಘ ಉದಯವಾಯಿತು.

ಸಂಘದ ಮೂಲಭೂತ ಉದ್ದೇಶಗಳು:

* ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವಿನೋದ ಹಾಗೂ ಶುಭ ಕಾರ್ಯಕ್ರಮಗಳ ಪ್ರೋತ್ಸಾಹಿಸುವಿಕೆ ಹಾಗೂ ಕನ್ನಡಿಗರು ಭಾಗವಹಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು.

* ಜಗತ್ತಿನ ವಿವಿದೆಡೆಯಲ್ಲಿರುವ ಕನ್ನಡಿಗರೊಡನೆ ಸಾಂಸ್ಕೃತಿಕ ಸಂಬಂಧವನ್ನು ಕಲ್ಪಿಸುವುದು.

* ಸಿಂಗಪುರದ ಕನ್ನಡ ಸಮುದಾಯ ಹಾಗೂ ಇಲ್ಲಿನ ಇತರ ಸಮುದಾಯದ ಜೊತೆ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸುವುದು.

ಎರಡು ದಿವಸಗಳ ಕನ್ನಡ ಉತ್ಸವದಲ್ಲಿ ಬಗೆಬಗೆಯ ಕಾರ್ಯಕ್ರಮಗಳು ಇರ್ತವೆ. ಮುಖ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಶೋಭೆ ಬೀರುವುದಕ್ಕೆ ಸ್ಥಳೀಯ ಪ್ರತಿಭೆಗಳು ತುದಿಗಾಲಲ್ಲಿ ನಿಂತಿವೆ. ಜತೆಗೆ, ಕರ್ನಾಟಕದಿಂದ ಆಗಮಿಸುತ್ತಿರುವ ಕವಿ, ಗಾಯಕ, ಕಲಾವಿದ, ಹಾಸ್ಯ ಕಲಾವಿದ, ಸಿನಿಮಾ ತಾರೆ, ಮಂತ್ರಿ ಮಹೋದಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಕ್ತಾರರ ಬೃಹತ್ ಸೈನ್ಯವೇ ಇದೆ. ಇದರ ಪೂರ್ಣ ವಿವರಗಳು ಮತ್ತು ಸಮ್ಮೇಳನದ ಸಿದ್ಧತೆಗಳ ಬಗ್ಗೆ ಕ್ಷಣಕ್ಷಣದ ವರದಿಗಳಿಗೆ, ದಟ್ಸ್ ಕನ್ನಡಕ್ಕೆ ಲಾಗ್ ಇನ್ ಆಗುತ್ತಿರಿ. ನಮಸ್ತೆ.

ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
7th World Kannada Convention under the auspices of Singapore Kannada Sangha. Venue: Singapore Polytechnic Convention Center Dover Road, Singapore. Date : 27th (Saturday) and 28th(Sunday) November 2010 . The event is co-sponsored by United Land Bank. An introduction to Kannada community events by S.K. Shama Sundara, Editor, Oneindia-Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more